Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಾಪಾಂಕುಶ ಏಕಾದಶಿ: ಇದರ ಮಹತ್ವ, ಪಾರಣ ಸಮಯ, ಮಂತ್ರಗಳು ಹಾಗೂ ಈ ದಿನ ರವಿಯೋಗವೂ ಇದೆ
ವಿಜಯ ದಶಮಿ ಕಳೆದ ಮೇಲೆ ಪಾಪಾಂಕುಶ ಏಕಾದಶಿ ಬಂದಿದೆ. ಇಂದು ಬೆಳಗ್ಗೆ 9:26ರಿಂದ ಏಕಾದಶಿ ತಿಥಿ ಪ್ರಾರಂಭ. ವರ್ಷದಲ್ಲಿ ಒಟ್ಟು 24 ಏಕಾದಶಿ ಬರುತ್ತದೆ, ಪ್ರತಿಯೊಂದು ಏಕಾದಶಿಗೂ ಅದರದ್ದೇ ಆದ ಮಹತ್ವವಿದೆ. ಈ ಪಾಪಾಂಕುಶ ಏಕಾದಶಿಯೂ ಅಷ್ಟೇ, ಈ ಏಕಾದಶಿ ಆಚರಣೆ ಮಾಡುವುದರಿಂದ ನಮಗೆ ಗೊತ್ತಿಲ್ಲದೆ ಮಾಡಿದ ಪಾಪ ಕೂಡ ಬಗೆಹರಿಯಲಿದೆ ಎಂದು ಹೇಳಲಾಗುವುದು.
ಪಾಪಾಂಕುಶ ಏಕಾದಶಿಯಂದು ಇದರ ವ್ರತ ಕತೆ ಓದಬೇಕು, ಅಲ್ಲದೆ ಈ ದಿನದ ಉಪವಾಸ ನಿಯಮಗಳೇನು? ಪಾರಣ ಸಮಯ ಅಂದರೆ ಉಪವಾಸ ಮುರಿಯುವ ಸಮಯ ಯಾವಾಗ ಎಂದು ನೋಡೋಣ ಬನ್ನಿ:

ಪಾಪಾಂಕುಶ ಏಕಾದಶಿಯಂದು ಈ ವ್ರತ ಕತೆ ಓದಬೇಕು
ವಿಂಧ್ಯ ಪರ್ವತದ ಮೇಲೆ ಕ್ರೋಧನ ಎಂಬ ದುಷ್ಟನಿದ್ದ, ಅವನು ತುಂಬಾ ಕ್ರೂರವಾಗಿ ಪ್ರಾಣಿಗಳನ್ನು, ಜನರನ್ನು ಸಾಯಿಸುತ್ತಿದ್ದ, ಅವನು ಮಾಡಿದ ಪಾಪದ ಕೊಡ ತುಂಬುತ್ತದೆ, ಯಮದೂತರು ಬಂದು ನಿನ್ನ ಆಯುಸ್ಸು ಮುಗಿದಿದೆ, ನಾಳೆ ನಿನ್ನ ಕರೆದುಕೊಂಡು ಹೋಗಲು ಬರುತ್ತೇವೆ ಎಂದು ಹೇಳುತ್ತಾರೆ, ಇದನ್ನು ಕೇಳಿದಾಗ ಕ್ರೋಧನನಿಗೆ ಸಾವಿನ ಭಯದ ಜೊತೆಗೆ ಇಷ್ಟು ವರ್ಷ ಮಾಡಿದ ಪಾಪದ ಭಯವೂ ಕಾಡುತ್ತೆ. ಅಯ್ಯೋ ನಾನು ಇಷ್ಟೆಲ್ಲಾ ಪಾಪ ಮಾಡಿರುವೆ ನನಗೆ ನರಕ ಸಿಗಲಿದೆ. ನಾನು ಪಾಪ ಮುಕ್ತನಾಗಬೇಕು ಎಂದು ಬಯಸಿದಾಗ ಅಲ್ಲಿಗೆ ಬರುವ ಋಷಿ ಪಾಪಾಂಕುಶ ಏಕಾಶಿ ಮಹತ್ವದ ಬಗ್ಗೆ ತಿಳಿಸುತ್ತಾರೆ. ಅದರಂತೆ ಆತ ಶ್ರದ್ಧೆಯಿಂದ ವ್ರತವನ್ನು ಮಾಡುತ್ತಾನೆ, ಆತನ ಪಾಪಾವೆಲ್ಲಾ ಕಳೆದು ಹೋಗುವುದು, ಆತ ನೆಮ್ಮದಿಯ ಸಾವು ಕಾಣುತ್ತಾನೆ.
ಏಕಾದಶಿ ತಿಥಿ ಪ್ರಾರಂಭ: ಅಕ್ಟೋಬರ್ 13, 9:26ಕ್ಕೆ ಪ್ರಾರಂಭ
ಏಕಾದಶಿ ತಿಥಿ ಮುಕ್ತಾಯ: ಅಕ್ಟೋಬರ್ 14 ಬೆಳಗ್ಗೆ 6 ಗಂಟೆ 41 ನಿಮಿಷಕ್ಕೆ ಮುಕ್ತಾಯ
ಪಾರಣ ಸಮಯ: ಅಕ್ಟೋಬರ್ 14 ಮಧ್ಯಾಹ್ನ ಒಂದು ಗಂಟೆಯಿಂದ ಮಧ್ಯಾಹ್ನ 03:34ರವರೆಗೆ ಇದೆ
ಪಾಪಾಂಕುಶ ಏಕಾದಶಿಯ ಪೂಜಾ ವಿಧಾನ
ಏಕಾದಶಿಯಂದು ಉಪವಾಸವಿದ್ದು ವ್ರತ ನಿಯಮ ಪಾಲಿಸಬೇಕು. ಬೆಳಗ್ಗೆ ಎದ್ದ ಬಳಿಕ ಪೂಜೆ ಮಾಡಿ, ಶ್ರೀ ವಿಷ್ಣುವಿನ ಮೂರ್ತಿ ಅಥವಾ ಫೋಟೋಗೆ ಹೂವುಗಳಿಂದ ಅಲಂಕರಿಸಿ ತುಪ್ಪದ ದೀಪ ಹಚ್ಚಿ ಪೂಜೆಯನ್ನು ಸಲ್ಲಿಸಿ, ಈ ದಿನ ಶ್ರೀ ವಿಷ್ಣುವಿನ ಮಂತ್ರ ಪಠಣೆ ಮಾಡಿ. ರಾತ್ರಿ ಪೂರ್ತಿ ಎಚ್ಚರವಾಗಿದ್ದು ಶ್ರೀ ವಿಷ್ಣುವಿನ ಮಂತ್ರ ಪಠಣೆ ಮಾಡಿ ಕಾಲ ಕಳೆಯಿರಿ.
ಪಾಪಾಂಕುಶ ಏಕಾದಶಿಯಂದು ಈ ಮಂತ್ರ ಪಠಿಸಿ
ಶಾಂತಾಕಾರಂ ಭುಜಂಗಶಯನಂ ಪದ್ಮನಾಭಂ ಸುರೇಶಂ|
ವಿಶ್ವಧರಂ ಗಗನ ಸದೃಶಂ ಮೇಘವರ್ಣ ಶುಭಾಂಗಂ|
ಲಕ್ಷ್ಮೀಕಾಂತ ಕಮಲನಯನಂ ಯೋಗಿಭಿರ್ಧ್ಯಾನಗಮ್ಯಂ ವಂದೇ ವಿಷ್ಣು ಭವಭಯಹರಂ ಸರ್ವ ಲೋಕೈಕನಾಥಂ||
ಯಂ ಬ್ರಹ್ಮ ವರುಣೈಂದ್ರು ರುದ್ರಮೃತಃ ಸ್ತುನ್ವಾನಿ ದಿವ್ಯೈ ಸ್ತವೈವೇದೇಃ|
ಸಾಂಗ ಪದಕ್ರಮೋಪನಿಷದೈ ಗಾರ್ಯಂತಿ ಯಂ ಸಾಮಗಾಃ||
ಧ್ಯಾನಾವಸ್ಥಿತ ತದ್ಗತೇನ್ ಮನಸಾ ಪಶ್ಯತಿ ಯಂ ಯೋಗಿನೋ|
ವಿಷ್ಣು ಮಂತ್ರಗಳು:
1. ವಿಷ್ಣು ಮೂಲ ಮಂತ್ರ:
ಓಂ ನಮೋ ನಾರಾಯಣಾಯ
ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಯೇ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್
ಮುಕ್ತಿ ಮಂತ್ರ:
ಓಂ ಭಗವತೇ ವಾಸುದೇವಾಯ ನಮಃ ಈ ಮಂತ್ರ ಪಠಣೆ ಮಾಡುವುದರಿಂದ ಒಬ್ಬರ ಜೀವನದ ಅಡೆತಡೆಗಳು ದೂರಾಗುತ್ತದೆ.
ಪಾಪಾಂಕುಶ ಏಕಾದಶಿ ಆಚರಣೆಯಿಂದ ಸಿಗುವ ಪ್ರಯೋಜನಗಳು
ಪಾಪ ಕರ್ಮಗಳಿಂದ ಅದರ ಕರ್ಮ ಫಲ ಅನುಭವಿಸಬೇಕಾಗುತ್ತದೆ, ಕೆಲವೊಂದು ಪಾಪ ಗೊತ್ತಿಲ್ಲದೆ ಆಗಿರುತ್ತದೆ ಅಥವಾ ನಮ್ಮ ಹಿರಿಯರು ಮಾಡಿರುವ ಪಾಪ ನಮ್ಮನ್ನು ಬಾಧಿಸುತ್ತಿರಬಹುದು, ಈ ಏಕಾದಶಿ ಆಚರಣೆ ಮಾಡುವುದರಿಂದ ಪಾಪಗಳು ನಿವಾರಣೆಯಾಗುವುದು, ಅನುಭವಿಸುತ್ತಿರುವ ಕಷ್ಟಗಳು ದೂರಾಗುವುದು.
ಇಡೀ ದಿನ ರವಿಯೋಗವಿದೆ
ಈ ದಿನ ರವಿಯೋಗವಿದೆ, ಹಾಗಾಗಿ ಏನಾದರು ಹೊಸ ಕಾರ್ಯ ಶುರು ಮಾಡುವುದಾದರೆ ನೀವು ಬಯಸಿದ ವಸ್ತು ಖರೀದಿಸಲು ಬಯಸಿದರೆ ಈ ದಿನ ಅನುಕೂಲಕರವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications









