Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ವೈವಾಹಿಕ ಬದುಕಿನ ಸಮಸ್ಯೆ ಬಗೆಹರಿಯಲು ನವರಾತ್ರಿ ಈ ಪರಿಹಾರ ಕ್ರಮ ಒಳ್ಳೆಯದು
ಒಂದು ಮನೆ ಮನೆಯಾಗಿರಬೇಕು ಎಂದರೆ ಆ ಮನೆಯಲ್ಲಿ ನೆಮ್ಮದಿ ಇರಬೇಕು, ಗಂಡ-ಹೆಂಡತಿ ನಡುವೆ ಒಳ್ಳೆಯ ಬಾಂಧವ್ಯ ಇರಬೇಕು. ಇದನ್ನು ನೋಡಿ ಬೆಳೆಯುವ ಮಕ್ಕಳು ತಾವು ಕೂಡ ತಮ್ಮ ಪೋಷಕರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ.
ಗಂಡ-ಹೆಂಡತಿ ನಡುವೆ ಏನಾದರು ಭಿನ್ನಾಭಿಪ್ರಾಯವಿದ್ದರೆ ಆ ಮನೆಯ ವಾತಾರಣ ಹಾಳಾಗುವುದು, ವೈವಾಹಿಕ ಬದುಕಿನಲ್ಲಿನ ಸಮಸ್ಯೆ ಬಗೆಹರಿಯಲು ನವರಾತ್ರಿ ಸಮಯದಲ್ಲಿ ದುರ್ಗೆಯನ್ನು ಆರಾಧಿಸಿದರೆ ಒಳ್ಳೆಯದು. ನವರಾತ್ರಿಯಲ್ಲಿ ಈ ರೀತಿ ಮಾಡಿದರೆ ಮನೆಯ ವಾತಾವರಣ ಉತ್ತಮವಾಗುವುದು ಎಂದು ಹೇಳಲಾಗುವುದು.

ದುರ್ಗೆಯನ್ನು ಆರಾಧಿಸಿ
ದುರ್ಗಾ ಮಂತ್ರ ಪಠಣೆ ಮಾಡುತ್ತಾ ದುರ್ಗೆಯನ್ನು ಆರಾಧಿಸಿ, ಅಲ್ಲದೆ ಶ್ರೀವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ, ಶ್ರೀ ವಿಷ್ಣು ಮತ್ತು ಲಕ್ಷ್ಮಿಯನ್ನು ಪೂಜಿಸಿ.
ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ
ಪತಿ-ಪತ್ನಿ ಜೊತೆಯಾಗಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ, ಕುಟುಂಬದ ಜೊತೆಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದರಿಂದ ನಿಮ್ಮಲ್ಲಿ ಧನಾತ್ಮಕ ಆಲೋಚನೆ ಹೆಚ್ಚುವುದು, ಅಲ್ಲದೆ ಕುಟುಂಬ ಜೊತೆಗೆ ಹೀಗೆ ಧಾರ್ಮಿಕ ಕ್ಷೇತ್ರಗಳಿಗೆ ಬೇಟಿ ನೀಡುವುದರಿಂದ ವೈವಾಹಿಕ ಬದುಕಿನಲ್ಲಿನ ಸಮಸ್ಯೆ ಬಗೆಹರಿಯಲಿದೆ.
ಗಾಯತ್ರಿ ಮಂತ್ರ ಪಠಿಸಿ
ದಿನಾ ಬೆಳಗ್ಗೆ ಗಾಯತ್ರಿ ಮಂತ್ರ ಪಠಿಸಿ, ಈ ಮಂತ್ರಕ್ಕೆ ನಿಮ್ಮ ಮನೆಯಲ್ಲಿ ನೆಮ್ಮದಿ, ಸಂತೋಷ ಹೆಚ್ಚಿಸುವ ಶಕ್ತಿಯಿದೆ. ಆದಷ್ಟು ಮನೆಯಲ್ಲಿ ಖುಷಿ-ಖುಷಿಯಾಗಿ ಓಡಾಡಿ, ಚಿಕ್ಕ ಪುಟ್ಟ ವಿಷಯಗಳನ್ನು ನಿರ್ಲಕ್ಷ್ಯ ಮಾಡಬೇಡಿ.
ದುರ್ಗಾ ಗಾಯತ್ರಿ ಮಂತ್ರ
ಓಂ ಕಾತ್ಯಾಯನಾಯ ವಿದ್ಮಹೇ
ಕನ್ಯಾಕುಮಾರೀ ಚ ಧೀಮಹೀ
ತನ್ನೋ ದುರ್ಗಾ ಪ್ರಚೋದಯಾತ್ ||
ಬೇರೆಯವರ ವಕ್ರದೃಷ್ಟಿ ನಿಮ್ಮ ಕುಟುಂಬದ ಮೇಲೆ ಬೀಳದಿರಲು
ಅಷ್ಟಮಿಯಂದು ಸ್ವಲ್ಪ ಸಾಸಿವೆ ತೆಗೆದು ನಿಮ್ಮ ಹಾಗೂ ಸಂಗಾತಿಯ ತಲೆಗೆ ಸುತ್ತಿ ಹೊರಗಡೆ ಎಸೆಯಿರಿ, ಅಲ್ಲದೆ ಮನೆಯ ಎದುರುಗಡೆ ದೃಷ್ಟಿಬೊಂಬೆ ಇಡಿ.
ಮಂಗಳ ಗ್ರಹ ದೋಷವಿದ್ದರೆ
ಮಂಗಳ ಗ್ರಹದ ದೋಷವಿದ್ದರೆ ಶನಿವಾರ ಮತ್ತು ಮಂಗಳವಾರದ ದಿನ ದುರ್ಗೆ ಹಾಗೂ ಹನುಮಂತನಿಗೆ ಪೂಜೆ ಸಲ್ಲಿಸಿ, ಇದರಿಂದ ವೈವಾಹಿಕ ಬದುಕಿನಲ್ಲಿನ ಸಮಸ್ಯೆ ಕಡಿಮೆಯಾಗಲಿದೆ.
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚಿ
ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು, ಮನೆಯನ್ನು ಶುದ್ಧವಾಗಿಟ್ಟುಕೊಳ್ಳಿ, ಮನೆಯ ಅಲಂಕಾರಕ್ಕೆ ಗಮನ ನೀಡಿ, ಮನೆ ಎಷ್ಟು ಆಕರ್ಷಕವಾಗ ಇಡುತ್ತೀರೋ ನಿಮ್ಮ ಮನಸ್ಸಿನ ಒತ್ತಡ ಕೂಡ ಕಡಿಮೆಯಾಗಲಿದೆ.
ಶಂಖ ಊದಿ
ಪ್ರತಿದಿನ ಪೂಜೆ ಬಳಿಕ ಶಂಖ ಊದಿ, ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುವುದು. ಮನೆಯೊಳಗಿನ ಎಲ್ಲಾ ನಕರಾತ್ಮಕ ಹೊರ ಹೋಗುತ್ತೆ, ಇದರಿಂದ ನಿಮ್ಮಿಬ್ಬರ ನಡುವಿನ ಸಂಬಂಧ ಚೆನ್ನಾಗಿರಲಿದೆ.
ಅಲ್ಲದೆ ನವರಾತ್ರಿಯ ಸಮಯದಲ್ಲಿ ಈ ಕಾರ್ಯಗಳನ್ನು ಮಾಡುವುದು ಕೂಡ ಶುಭ ಎಂದು ಪರಿಗಣಿಸಲಾಗಿದೆ:
ನವರಾತ್ರಿಗೆ ಚಿನ್ನ ಅಥವಾ ಬೆಳ್ಳಿ ನಾಣ್ಯ ಖರೀದಿ ಮಾಡುವುದು ಒಳ್ಳೆಯದು
ತುಳಸಿ ಗಿಡವಿಲ್ಲ ಎಂದಾದರೆ ನೆಟ್ಟು ಅರೈಕೆ ಮಾಡಿ
ಮನೆಗೆ ದೇವರ ಫೋಟೋ ತನ್ನಿ
ಇರುವೆಗಳಿಗೆ ಧಾನ್ಯಗಳನ್ನು ಹಾಕಿ ಇದರಿಂದ ಸಮಸ್ಯೆ ದೂರಾಗಲಿದೆ.
ಕೊನೆಯದಾಗಿ: ಎಲ್ಲವೂ ನಂಬಿಕೆ, ನಾವು ನಂಬಿಕೆಯಿಂದ ಒಂದ ಕಾರ್ಯ ಮಾಡಿದರೆ ಖಂಡಿತ ನೆರವೇರುವುದು. ಇಂಥ ಧಾರ್ಮಿಕ ಸಂದರ್ಭಗಳಲ್ಲಿ ನಾವು ಏನಾದರೂ ಮಾಡುವಾಗ ದೇವರು ನನ್ನ ಜೊತೆ ಇದ್ದಾರೆ ಎಂಬ ನಂಬಿಕೆ ಬರುವುದು, ಎಲ್ಲಾ ಸವಾಲು ಎದುರಿಸಬಲ್ಲೆ ಎಂಬ ಧೈರ್ಯ ಮೂಡುವುದು. ನಮ್ಮ ಸಂಸಾರ ಚೆನ್ನಾಗಿರಬೇಕು ಎಂದು ನಾವು ಮಾಡುವ ಪ್ರತಿಯೊಂದು ಕಾರ್ಯದಿಂದಾಗಿ ಬದುಕಿನಲ್ಲಿ ಒಳಿತಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
