Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
ಗುರು-ಸೂರ್ಯನ ಸಂಯೋಗದಿಂದ ವಿಶೇಷ ನವಪಂಚಮ ಯೋಗ: ಈ ಮೂರು ರಾಶಿಯವರ ಸ್ಥಿತಿ ಸುಧಾರಣೆ, ಆರ್ಥಿಕ ಲಾಭ!
ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರವನ್ನು ಪ್ರಮುಖ ವಿದ್ಯಮಾನವಾಗಿ ನೋಡಲಾಗಿದೆ. ಅದ್ರಲ್ಲೂ 9 ಗ್ರಹಗಳಲ್ಲಿ ಬುಧ ಮತ್ತು ಗುರು ಗ್ರಹಗಳನ್ನು ಪ್ರಮುಖ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಸೂರ್ಯನನ್ನು ಆತ್ಮ, ತಂದೆ, ಆತ್ಮವಿಶ್ವಾಸ, ಆರೋಗ್ಯ, ಸರ್ಕಾರಿ ಉದ್ಯೋಗ, ನಾಯಕತ್ವ ಮತ್ತು ಖ್ಯಾತಿಯ ಅಂಶವೆಂದು ಪರಿಗಣಿಸಲಾಗುತ್ತದೆ, ಆದರೆ ಗುರುವನ್ನು ಜ್ಞಾನ, ಶಿಕ್ಷಣ, ಅದೃಷ್ಟ, ಸಂಪತ್ತು, ಮದುವೆ, ಧರ್ಮ ಮತ್ತು ಮಕ್ಕಳ ಸಂತೋಷದ ಅಂಶವೆಂದು ಪರಿಗಣಿಸಲಾಗುತ್ತದೆ.
ಈ ಎರಡು ಗ್ರಹಗಳ ಸ್ಥಾನಗಳಲ್ಲಿನ ಬದಲಾವಣೆಗಳು 12 ರಾಶಿ ಜನರ ಜೀವನದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತವೆ. ಗುರು ಪ್ರಸ್ತುತ ಮಿಥುನ ರಾಶಿಯಲ್ಲಿ ಮತ್ತು ಸೂರ್ಯ ಕುಂಭ ರಾಶಿಯಲ್ಲಿ ಚಲಿಸುತ್ತಿದ್ದಾರೆ. ಆದರೆ ಈ ಎರಡೂ ಗ್ರಹಗಳು ವಿಶೇಷ ಯೋಗಕ್ಕೆ ಕಾರಣವಾಗುತ್ತವೆ. ವೈದಿಕ ಜ್ಯೋತಿಷ್ಯದ ಪ್ರಕಾರ ಮಾರ್ಚ್ 5 ರಂದು ರಾತ್ರಿ 10:41 ರಿಂದ ಪ್ರಾರಂಭವಾಗಿ, ಗುರು ಮತ್ತು ಸೂರ್ಯ ಪರಸ್ಪರ 120 ಡಿಗ್ರಿಗಳಲ್ಲಿರುತ್ತಾರೆ, ಇದು ನವ ಪಂಚಮ ರಾಜ ಯೋಗವನ್ನು ಸೃಷ್ಟಿಸುತ್ತದೆ.

ಜ್ಯೋತಿಷ್ಯದಲ್ಲಿ ನವ ಪಂಚಮ ರಾಜ ಯೋಗವನ್ನು ಬಹಳ ಪ್ರಭಾವಶಾಲಿ ಯೋಗವೆಂದು ಪರಿಗಣಿಸಲಾಗುತ್ತದೆ. ಈ ರಾಜಯೋಗದ ರಚನೆಯು ವೃತ್ತಿ ಮತ್ತು ವ್ಯವಹಾರದಲ್ಲಿ ಅಪಾರ ಯಶಸ್ಸು ಮತ್ತು ಪ್ರಗತಿಯನ್ನು ತರಬಹುದು. ಹಠಾತ್ ಆರ್ಥಿಕ ಲಾಭಗಳು ಮತ್ತು ಹೆಚ್ಚಿದ ಗೌರವ ಮತ್ತು ಘನತೆಯನ್ನು ನಿಮಗೆ ತರಬಹುದು. ಉದ್ಯೋಗಗಳು ಮತ್ತು ವ್ಯವಹಾರಗಳಲ್ಲಿ ಅಪಾರ ಯಶಸ್ಸನ್ನು ಅನುಭವಿಸಬಹುದು. ಜೊತೆಗೆ ಆರ್ಥಿಕ ಲಾಭವನ್ನು ಪಡೆಯಬಹುದು. ಈ ವಿಶ್ಲೇಷಣೆಯು ಚಂದ್ರನ ಚಿಹ್ನೆಯನ್ನು ಆಧರಿಸಿದೆ. ಹಾಗಾದ್ರೆ ಈ ಅಪರೂಪದ ಯೋಗದಿಂದಾಗಿ ಯಾವ ರಾಶಿಯವರಿಗೆ ಅನುಕೂಲಕರ ದಿನಗಳಿವೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೀನ ರಾಶಿ
ಸೂರ್ಯ ಮತ್ತು ಗುರುವಿನ ಸಂಚಾರದಿಂದ ರೂಪುಗೊಂಡ ನವ ಪಂಚಮ ರಾಜ ಯೋಗವು ಈ ರಾಶಿ ಜನರಿಗೆ ಮಹತ್ವದ ಬದಲಾವಣೆಗಳ ತರಲಿದೆ. ಈ ರಾಶಿಯ 12ನೇ ಮನೆಯಲ್ಲಿ ಸೂರ್ಯನು ಹಾಗೆ 4ನೇ ಮನೆಯಲ್ಲಿ ಗುರುವಿನ ಸಂಚಾರವನ್ನು ನೋಡಬಹುದು. ಇದು ನಿಮ್ಮ ಆದಾಯ ಸಂಬಂಧಿತ ಶಕ್ತಿಕೇಂದ್ರ. ಹೀಗಾಗಿ ಈ ಸಮಯದಲ್ಲಿ ನೀವು ಹೊಸ ಆದಾಯಗಳು, ಆರ್ಥಿಕ ಲಾಭಗಳ ನೋಡಬಹುದು. ಜೀವನದ ಪ್ರಮುಖ ಸಂತೋಷದ ಕ್ಷಣಗಳನ್ನು ಕಳೆಯಬಹುದು. ಪೂರ್ವಜರ ಆಸ್ತಿಯಿಂದ ಗಮನಾರ್ಹ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ವೃತ್ತಿಜೀವನದಲ್ಲಿ ಲಾಭದ ಸಾಧ್ಯತೆಗಳಿವೆ, ನೀವು ಕೆಲಸದ ನಿಮಿತ್ತ ಸಾಕಷ್ಟು ಪ್ರಯಾಣಿಸಬೇಕಾಗಬಹುದು.
ಸಿಂಹ ರಾಶಿ
ಗುರು ಮತ್ತು ಸೂರ್ಯನ ನವ ಪಂಚಮ ರಾಜಯೋಗವು ಈ ರಾಶಿ ಜನರಿಗೆ ಹೊಸ ರೀತಿಯ ಜೀವನ ಕಟ್ಟಿಕೊಡಲಿದೆ. ಗುರು 11ನೇ ಮನೆಯಲ್ಲಿ ಮತ್ತು ಸೂರ್ಯನು 7ನೇ ಮನೆಯಲ್ಲಿ ಇರಿಸಲ್ಪಟ್ಟಿದ್ದಾನೆ. ಇದು ನಿಮ್ಮ ವ್ಯಕ್ತಿತ್ವವನ್ನು ಗಮನಾರ್ಹವಾಗಿ ಉತ್ತಮ ಸ್ಥಿತಿಗೆ ತರಲಿದೆ. ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳ ನೋಡಬಹುದು. ವಿದೇಶ ಪ್ರಯಾಣಗಳು, ಪಾಲುದಾರಿಕೆಯಲ್ಲಿ ಸಂತಸ ನೋಡಬಹುದು. ಗುರು ಹನ್ನೊಂದನೇ ಮನೆಯಲ್ಲಿದ್ದು ಮೂರನೇ ಐದನೇ ಮತ್ತು ಏಳನೇ ಮನೆಗಳನ್ನು ನೋಡುತ್ತಾನೆ. ಈ ಸಮಯದಲ್ಲಿ ನೀವು ಆರ್ಥಿಕವಾಗಿ ಸದೃಢರಾಗುತ್ತೀರಿ.
ಮಿಥುನ ರಾಶಿ
ನವ ಪಂಚಮ ರಾಜಯೋಗವು ಕರ್ಕ ರಾಶಿ ಜನರಿಗೆ ಅನುಕೂಲಕರವಾಗಿರಬಹುದು. ಗುರುವು ಈ ರಾಶಿಯ ಲಗ್ನ ಮನೆಯಲ್ಲಿ ಮತ್ತು ಗುರು ಒಂಬತ್ತನೇ ಮನೆಯಲ್ಲಿ ಇರಿಸಲ್ಪಟ್ಟಿದ್ದಾನೆ. ಪರಿಣಾಮವಾಗಿ ಈ ಚಿಹ್ನೆಯು ಅನೇಕ ಕ್ಷೇತ್ರಗಳಲ್ಲಿ ಪ್ರಯೋಜನವನ್ನು ಪಡೆಯುವ ಸಾಧ್ಯತೆಯಿದೆ. ಅದೃಷ್ಟವು ಈ ರಾಶಿಯವರಿಗೆ ಅನುಕೂಲಕರವಾಗಿರಬಹುದು. ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಪ್ರಗತಿ ವೇಗವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ಆರ್ಥಿಕ ಜೀವನದಲ್ಲಿ ನೀವು ಹಣ ಗಳಿಸಲು ಅನೇಕ ಅವಕಾಶಗಳನ್ನು ಕಾಣಬಹುದು. ನಿಮ್ಮ ಉದ್ಯೋಗ ಅಥವಾ ವ್ಯವಹಾರದ ಮೂಲಕ ನೀವು ಹಣ ಗಳಿಸಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. )



Click it and Unblock the Notifications