Navapancham Rajyog: 84 ವರ್ಷದ ಬಳಿಕ ನವಪಂಚಮ ರಾಜಯೋಗ, ಸಾಲದ ಹೊರೆ ಕಡಿಮೆ..ಹಣದ ಹರಿವು ಹೆಚ್ಚಳ

Navapancham Rajyog: ವೈದಿಕ ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳಲ್ಲಿ ಪ್ರತಿಯೊಂದೂ ಗ್ರಹದ ಚಲನೆಯು ಬಹಳ ಮುಖ್ಯ ಎಂದು ಬಿಂಬಿಸಲಾಗುತ್ತದೆ. ಹಾಗೆ ಈ ಸಮಯದಲ್ಲಿ ನಿರ್ದಿಷ್ಟ ರಾಶಿಗಳ ಮೇಲೆ ಅದರ ಪರಿಣಾಮ ಬೀರುವುದು ನೋಡಬಹುದು, ಹಾಗೆ ಗ್ರಹಗಳ ಸಂಚಾರದಿಂದ ಉಂಟಾಗುವ ಯೋಗವು ಹಲವು ರಾಶಿಗಳ ಜೀವನದಲ್ಲಿಯೂ ಬದಲಾವಣೆಗಳ ತರುವುದು ನೋಡಬಹುದು.

ಗ್ರಹಗಳ ನಡುವಿನ ಸಂಯೋಗವು ಸಹ ಹಲವು ರಾಶಿಗಳಿಗೆ ಅದೃಷ್ಟಗಳನ್ನು ತರುವುದು ನೋಡಬಹುದು. ಹಾಗೆ ಶುಕ್ರನನ್ನು ಗ್ರಹಗಳಲ್ಲಿ ರಾಕ್ಷಸರ ಗುರು ಎಂದು ಪರಿಗಣಿಸಲಾಗುತ್ತದೆ. ಶುಕ್ರನು ಒಂದೇ ರಾಶಿಯಲ್ಲಿ 26 ದಿನಗಳ ಕಾಲ ನೆಲೆಸಲಿದೆ. ಶುಕ್ರನನ್ನು ಸೌಂದರ್ಯ, ಐಷಾರಾಮಿ, ಪ್ರೀತಿ, ಸಂಪತ್ತು, ಸಮೃದ್ಧಿಯ ಅಂಶವಾಗಿದೆ.

Navapancham Rajyog

ಶುಕ್ರನ ಸ್ಥಾನ ಬದಲಾಗಲೆಲ್ಲ ಹಲವು ರಾಶಿಗಳ ಮೇಲೆ ಅದು ನೇರ ಪರಿಣಾಮ ಉಂಟು ಮಾಡುವುದು ನೋಡಬಹುದು. ಸದ್ಯ ಈಗ ಶುಕ್ರನು ಕನ್ಯಾ ರಾಶಿ ಪ್ರವೇಶಿಸುತ್ತಿದ್ದಾನೆ. ಶುಕ್ರನು ಅಕ್ಟೋಬರ್ 09 ರಂದು ಕನ್ಯಾ ರಾಶಿ ಪ್ರವೇಶಿಸಲಿದ್ದಾನೆ. ಹಾಗೆ ಅಕ್ಟೋಬರ್ 14ರಂದು ನವಪಂಚಮ ಯೋಗ ರೂಪಿಸುತ್ತಿದೆ. ಇದು ಬರೋಬ್ಬರಿ 84 ವರ್ಷದ ಬಳಿಕ ಸಂಭವಿಸುವ ಯೋಗವಾಗಿದೆ.

ಶುಕ್ರನಿಂದ ಉಂಟಾಗುತ್ತಿರುವ ಈ ಯೋಗದಿಂದ ಹಲವು ರಾಶಿಗಳಿಗೆ ಶುಭವಾಗುತ್ತಿದೆ. ಹಾಗಾದ್ರೆ ನವಪಂಚಮ ಯೋಗದಿಂದ ಯಾರಿಗೆಲ್ಲಾ ಶುಭವಾಗಲಿದೆ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ವೃಷಭ ರಾಶಿ

ನವಪಂಚ ಯೋಗದಿಂದಾಗಿ ವೃಷಭ ರಾಶಿಯವರಿಗೆ ಶುಭವಾಗುತ್ತಿದೆ. ಹಲವು ಮೂಲದಿಂದ ನೀವು ಹಣ ಪಡೆಯುವ ಸಾಧ್ಯತೆ ಇದೆ. ಹೊಸ ಆದಾಯ ಮೂಲಗಳು ನಿಮ್ಮ ಹುಡುಕಿ ಬರಲಿವೆ. ಅನಿರೀಕ್ಷಿತ ಲಾಭಗಳು ಎದುರಾಗುವುದು ನಿಮ್ಮಲ್ಲಿದ್ದ ಒತ್ತಡ ಕಡಿಮೆ ಮಾಡಲು ಕಾರಣವಾಗುತ್ತಿದೆ. ದೀರ್ಘಾವಧಿಯ ಸಮಸ್ಯೆಗಳು ಕಡಿಮೆಯಾಗಲಿದೆ. ವಾಹನ ಸಂಬಂಧವಾಗಿ ನೀವು ಬಹಳ ಸಮಯದಿಂದ ಬಯಸಿದಂತಹ ವಿಚಾರವು ಕೈಗೂಡಲಿದೆ. ಆಪ್ತರಿಂದ ಬರಬೇಕಿದ್ದ ಬಾಕಿ ಹಣ ನಿಮ್ಮ ಕೈ ಸೇರುವ ಹಂತ ತಲುಪಲಿವೆ. ವೈವಾಹಿಕ ಜೀವನದಲ್ಲಿ ಒತ್ತಡ ಕಡಿಮೆ ಮಾಡುವ ಕೆಲಸ ಮಾಡುವಿರಿ, ಇದು ಕುಟುಂಬದಲ್ಲಿನ ಸಣ್ಣಪುಟ್ಟ ಮನಸ್ತಾಪಗಳ ನಿವಾರಣೆಗೆ ಕಾರಣ‍ವಾಗುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಶುಕ್ರ ಮತ್ ರಾಹುವಿನ ಕಾರಣದಿಂದಾಗಿ ಉಂಟಾಗಿರುವ ಈ ಯೋಗವು ಹಲವು ರೀತಿಯ ಲಾಭಕ್ಕೆ ಕಾರಣವಾಗಲಿದೆ. ನೀವು ಐಷಾರಾಮಿ ವಸ್ತುಗಳ ಖರೀದಿಗೆ ಮುಂದಾಗುತ್ತೀರಿ. ಅದರಲ್ಲೂ ವಿಶೇಷವಾಗಿ ಬಹಳ ಸಮಯದಿಂದ ಕನಸು ಕಂಡಿದ್ದಂತಹ ವಸ್ತುವನ್ನು ಖರೀದಿಸಬಹುದು. ಹಾಗೆ ಹಲವು ಬಗೆಯ ವ್ಯವಹಾರಗಳು, ವ್ಯಾಪಾರಗಳ ಮಾಡುವ ಉದ್ದೇಶದಿಂದ ಮಾಡಿರುವ ಸಾಲವು ಪ್ರಮುಖ ಉದ್ದೇಶಕ್ಕೆ ಬಳಕೆಯಾಗುತ್ತದೆ. ಆರ್ಥಿಕವಾಗಿ ನೀವು ಸದೃಢರಾಗುತ್ತೀರಿ. ಆಸ್ತಿ ಗಳಿಕೆಯಲ್ಲಿ ಮುಂದೆ ಸಾಗುತ್ತೀರಿ. ಆಪ್ತರಿಂದ ಬರಬೇಕಿದ್ದ ಸಾಲ ಮರುಪಾವತಿಯಾಗಲಿದೆ. ಆರೋಗ್ಯ ಸುಧಾರಣೆ ಆಗುವುದು ನೋಡಬಹುದು.

ಮಕರ ರಾಶಿ

ಮಕರ ರಾಶಿಯವರಿಗೆ ಶುಕ್ರನ ಕಾರಣದಿಂದ ರೂಪುಗೊಂಡ ನವಪಂಚಮ ರಾಜಯೋಗವು ಹಲವು ರೀತಿಯಲ್ಲಿ ಶುಭವಾಗುತ್ತಿದೆ. ಬಾಕಿ ಉಳಿದಿದ್ದ ಕೆಲಸಗಳು ಪೂರ್ಣವಾಗಲಿದೆ, ಅದ್ರಲ್ಲೂ ಹಣಕಾಸಿನ ವಿಚಾರವಾಗಿ ನೀವು ಅರ್ಧಕ್ಕೆ ನಿಲ್ಲಿಸಿದ್ದ ಕೆಲಸವನ್ನು ಪೂರ್ಣ ಮಾಡುವಿರಿ. ಅವಿವಾಹಿತರಲ್ಲಿ ಹೊಸ ಆದಾಯ ಬರುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಕಠಿಣ ಪರಿಶ್ರಮದ ಪ್ರತಿಫಲ ನಿಮಗೆ ಸಿಗುತ್ತದೆ. ಆಧ್ಯಾತ್ಮಿಕತೆಯತ್ತ ನಿಮ್ಮ ಒಲವು ಹೆಚ್ಚಾಗುತ್ತದೆ. ಕುಟುಂಬದಲ್ಲಿ ಶುಭ ಘಟನೆಗಳು ಸಂಭವಿಸುವ ಸಾಧ್ಯತೆಯಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Navapancham Rajyog: Will Deliver Financial Benefits To These Zodiac Signs

Venus is entering Virgo. Venus will enter Virgo on October 09. Thus, Navapanchama Yoga is forming on October 14.
Story first published: Friday, October 3, 2025, 12:47 [IST]
X
Desktop Bottom Promotion