Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೌನಿ ಅಮವಾಸ್ಯೆಯಂದು ರೂಪುಗೊಂಡಿದೆ ಅತ್ಯಂತ ಶುಭಯೋಗ: ಈ 3 ರಾಶಿಯವರಿಗೆ ಧನಲಾಭದ ಯೋಗವಿದೆ
ಈ ಮಾಘ ಮಾಸದ ಅಮವಾಸ್ಯೆಯನ್ನು ಮೌನಿ ಅಮವಾಸ್ಯೆಯಂದು ಕರೆಯಲಾಗುವುದು, ಮೌನಿ ಅಮವಾಸ್ಯೆಗೆ ತುಂಬಾನೇ ಮಹತ್ವವಿದೆ, ಹಾಗಾಗಿ ಕುಂಭಸ್ನಾನಕ್ಕೆ ಅಷ್ಟೊಂದು ಮಹತ್ವವಿರುವುದು, ಈ ದಿನ ಗಂಗೆಯ ನೀರು ಅಮೃತಕ್ಕೆ ಸಮ ಎಂದು ಹೇಳಲಾಗುವುದು.
ಇನ್ನು ಈ ದಿನದ ವಿಶೇಷವೆಂದರೆ ಮಕರ ರಾಶಿಯಲ್ಲಿ ತ್ರಿಗ್ರಹಗಳ ಯೋಗ ಕೂಡ ಉಂಟಾಗಿದೆ. ಮಕರ ರಾಶಿಯಲ್ಲಿ ಬುಧ, ಸೂರ್ಯ ಮತ್ತು ಚಂದ್ರ ಗ್ರಹಗಳ ಸಂಯೋಗವಾಗಿದೆ. ಅಲ್ಲದೆ ಗುರುವಿನ 9ನೇ ದೃಷ್ಟಿ ಕೂಡ ಈ ಗ್ರಹಗಳ ಮೇಲಿದೆ, ಹೀಗಾಗಿ ಈ ದಿನ ನವಪಂಚಮ ಯೋಗ ಸೃಷ್ಟಿಸಿದೆ. ಈ ಯೋಗದಿಂದಾಗಿ ಈ ರಾಶಿಗಳಿಗೆ ಧನ ಲಾಭವಾಗಲಿದೆ:

ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ಯೋಗ ಆರ್ಥಿಕ ಲಾಭವನ್ನು ತರಲಿದೆ, ಇದರಿಂದ ಆಸ್ತಿಯಲ್ಲಿ ಉತ್ತಮ ಲಾಭ ಗಳಿಸಬಹುದು. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವವರು ಉತ್ತಮ ಲಾಭ ಪಡೆಯುತ್ತೀರಿ. ಕುಟುಂಬ ಜೀವನ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಕೂಡ ಕೂಡ ಚೆನ್ನಾಗಿರಲಿದೆ. ವ್ಯಾಪಾರಿಗಳು ಹೊಸ ವ್ಯಾಪಾರ ಶುರು ಮಾಡಿದರೆ ಅಥವಾ ತಮ್ಮ ವ್ಯಾಪಾರವನ್ನು ವಿಸ್ತರಣೆ ಮಾಡಿದರೆ ಪ್ರಗತಿ ಕಾಣಲು ಸಾಧ್ಯವಾಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಬೆಳವಣಿಗೆ ಕಾಣಲು ಸಾಧ್ಯವಾಗುವುದು ಎಂದು ಶಾಸ್ತ್ರವು ಹೇಳುತ್ತದೆ.
ಕರ್ಕ ರಾಶಿ
ಕರ್ಕ ರಾಶಿಯವರು ಕೂಡ ಈ ಶುಭ ಯೋಗದಿಂದಾಗಿ ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಧಾರ್ಮಿಕ ಕ್ಷೇತ್ರದಲ್ಲಿ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ. ಈ ಯೋಗ ನಿಮಗೆ ಲಾಭ ತಂದು ಕೊಡಲಿದೆ. ವ್ಯಾಪಾರಿಗಳು ಈ ಲಾಭದಿಂದಾಗಿ ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದೆ. ಮದುವೆಗೆ ಸಿದ್ಧವಾಗಿರುವ ಸದಸ್ಯರು ಮನೆಯಲ್ಲಿದ್ದರೆ ಅವರಿಗೆ ಮದುವೆ ಗೊತ್ತಾಗಲಿದೆ. ನಿಮ್ಮ ಆರ್ಥಿಕ ಪ್ರಯತ್ನಗಳಿಗೆ ಉತ್ತಮ ಪ್ರಯೋಜನ ಬರಲಿದೆ.
ಮಕರ ರಾಶಿ
ಮಕರ ರಾಶಿಯವರು ಈ ಯೋಗದಿಂದಾಗಿ ಪ್ರಯೋಜನ ಪಡೆಯುತ್ತೀರಿ. ವ್ಯಾಪಾರಿಗಳು ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ಮಕರ ರಾಶಿಯಲ್ಲಿಯೇ ಈ ಮೂರು ಗ್ರಹಗಳ ಸಂಯೋಗ ಉಂಟಾಗಿದೆ. ಈ ಗ್ರಹಗಳ ಪ್ರಭಾದಿಂದ ಮಕರ ರಾಶಿಯವರು ಆರ್ಥಿಕ ಪ್ರಯೋಜನ ಪಡೆಯುತ್ತೀರಿ, ಹೂಡಿಕೆಗೆ ಈ ಅವಧಿ ಅನುಕೂಲಕರವಾಗಿದೆ. ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡವರು ಉತ್ತಮ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ.
ಪಿತೃದೋಷ ನಿವಾರಣೆಗೆ ತುಂಬಾನೇ ಮಹತ್ವವಾದ ದಿನ:
ಮೌನಿ ಅಮವಾಸ್ಯೆ ತುಂಬಾ ವಿಶೇಷವಾದ ದಿನವಾಗಿದೆ, ಈ ದಿನಕ್ಕಾಗಿ ಸಂನ್ಯಾಸಿಗಳು, ಯೋಗಿಗಳು, ಅಘೋರಿಗಳು ಕಾಯುತ್ತಿರುತ್ತಾರೆ. ಈ ದಿನ ಮಾಡುವ ಪೂಜಾ ಕಾರ್ಯಕ್ಕೆ ಅಷ್ಟೊಂದು ಫಲವಿದೆ. ಅಲ್ಲದೆ ಜನ ಸಾಮಾನ್ಯರು ಈ ದಿನ ಪಿತೃದೋಷ ನಿವಾರಣೆ ಮಾಡಿಕೊಳ್ಳಬಹುದು. ಈ ದಿನದಂದು ಪಿತೃತರ್ಪಣ ಮಾಡಿದರೆ ಪಿತೃದೋಷ ನಿವಾರಣೆಯಾಗುವುದು. ಪಿತೃದೋಷವಿದ್ದರೆ ಆರ್ಥಿಕ ಸಮಸ್ಯೆ, ಮನೆಯಲ್ಲಿ ನೆಮ್ಮದಿ ಇರಲ್ಲ ಹೀಗೆ ನೇಕ ತೊಂದರೆಗಳನ್ನು ಅನುಭವಿಸುವಂತಾಗುವುದು, ಈ ದಿನ ಪಿತೃತರ್ಪಣ ನೀಡುವುದರಿಂದ ಅದೆಲ್ಲಾ ದೋಷದಿಂದ ಮುಕ್ತರಾಗಬಹುದು.
ಈ ದಿನ ಮಾಡುವ ಸಂಗಮ ಸ್ನಾನಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ: ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಅಷ್ಟೊಂದು ಪುಣ್ಯ ಸಿಗುತ್ತದೆ ಎಂಬ ನಂಬಿಕೆ, ಆದರೆ ದುರಾದೃಷ್ಟವಶಾತ್ ಈ ಬಾರಿ ಮಹಾಕುಂಭಮೇಳದಲ್ಲಿ ಸಂಗಮ ಸ್ನಾನಕ್ಕೆ ಹೋಗುವ ಭಕ್ತರ ನಡುವೆ ನೂಕು ನುಗ್ಗಲು ಉಂಟಾಗಿ ಸಾವು ನೋವು ಉಂಟಾಗಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications