Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಡಿಸೆಂಬರ್ 27ಕ್ಕೆ ಮಂಡಲಪೂಜೆ: 41 ದಿನದ ಕಠಿಣ ವ್ರತದ ಬಳಿಕ ಮಾಡುವ ಈ ಪೂಜೆಯ ಮಹತ್ವವೇನು?
ಡಿಸೆಂಬರ್ 27ಕ್ಕೆ ಮಂಡಲ ಪೂಜೆ, ಈ ಮಂಡಲ ಪೂಜೆಯನ್ನು ಶಬರಿಮಲೆ ಸೇರಿದಂತೆ ಅನೇಕ ದೇವಾಲಯಗಳಲ್ಲಿ ಮಾಡಲಾಗುವುದು. ಮಂಡಲಪೂಜೆಯ ಮಹತ್ವವೇನು? ಈ ಪೂಜೆ ಮಾಡುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:
ಮಂಡಲಪೂಜೆ ಎಂದರೇನು?
ಮಂಡಲ ಪೂಜೆಗೆ ಮುನ್ನ 41 ದಿನಗಳ ಕಠಿಣ ವ್ರತ ನಿಯಮಗಳನ್ನು ಪಾಲಿಸಿ ಮಾಡುವ ಪೂಜೆ ಇದಾಗಿದೆ. ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಬೇಕು. ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು, ಈ 41 ದಿನ ವ್ರತ ಪಾಲಿಸುವವರು ಮಾಂಸ, ಮದ್ಯಗಳಿಂದ ದೂರ ಇರಬೇಕು, ಸ್ತ್ರೀಯರನ್ನು ದೈಹಿಕವಾಗಿ ಸಂಪರ್ಕ ಮಾಡುವಂತಿಲ್ಲ.
ಹೀಗೆ ಕಠಿಣ ನಿಮಯವನ್ನು ಪಾಲಿಸಿ ಮಾಡುವ ಪೂಜೆ ಇದಾಗಿದೆ. ಮಂಡಲಪೂಜೆ ಅಯ್ಯಪ್ಪಸ್ವಾಮಿ ಭಕ್ತರಿಗೆ ತುಂಬಾ ವಿಶೇಷವಾದದ್ದು. ಈ ದಿನದಂದು ಶಬರಿಮಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು, ಈ ದಿನ ದೇವರ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಮಂಡಲ ಪೂಜೆಯ ನಿಯಮಗಳೇನು?
ಮಂಡಲಪೂಜೆ ಮಾಡುವ ಭಕ್ತನು 41 ದಿನಗಳ ಕಾಲ ಮಾಲಾಧಾರಿಯಾಗಿರುತ್ತಾನೆ, ಗುರುಸ್ವಾಮಿ ಮಾಲೆ ತೊಡಿಸುತ್ತಾರೆ, ಈ ಮಾಲೆಯನ್ನು 41 ದಿನಳ ವ್ರತ ನಿಯಮ ಪಾಲಿಸಿ ದೇವಾಲಯಕ್ಕೆ ಹೋಗಿ ಬಂದ ಬಳಿಕವಷ್ಟೇ ಬಿಚ್ಚಬೇಕು.
* ಮಂಡಲಪೂಜೆ ವ್ರತವನ್ನು ಮಾಡುವವರು ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಬೇಕು, ಸಂಜೆಯೂ ಸ್ನಾನ ಮಾಡಿ ದೀಪವನ್ನು ಬೆಳಗಬೇಕು.
* ಈ ಸಮಯದಲ್ಲಿ ಯಾವುದೇ ಕೆಟ್ಟ ಕೃತ್ಯ ಮಾಡಬಾರದು, ಸುಳ್ಳು ಹೇಳಬಾರದು, ಯಾರನ್ನೂ ಬೈಯ್ಯಬಾರದು.
* ದೇವರಿಗೆ ಪ್ರತಿನಿತ್ಯ ಪಂಚಗವ್ಯ ಅಭಿಷೇಕ ಮಾಡಬೇಕು.
* ಮಂಡಲ ಪೂಜೆಯಂದು ಭಕ್ತನು ತಾನು ಇಚ್ಛಿಸಿದ ಅಥವಾ ಸಮೀಪದ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ಬರಬೇಕು.
ನದಿ ಸ್ನಾನ
ಮಂಡಲಪೂಜೆ ವ್ರತ ನಿಯಮವನ್ನು ಪಾಲಿಸುವವರು ನದಿಸ್ನಾನ ಮಾಡಬೇಕು ಎಂದು ಹೇಳಲಾಗುವುದು. ನದಿಸ್ನಾನ ಮಾಡುವುದರಿಂದ ಪುಣ್ಯ ಲಭಿಸುವುದು ಅಲ್ಲದೆ ಈ ಸಮಯದಲ್ಲಿ ನದಿ ಸ್ನಾನ ಮಾಡಿದರೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂದು ಹೇಳಲಾಗುವುದು.
* ವ್ರತ ನಿಯಮ ಪಾಲಿಸುವವರು ಕಪ್ಪು ಅಥವಾ ಖಾವಿ ಬಟ್ಟೆಯನ್ನು ಮಾತ್ರ ಧರಿಸಬೇಕು.
* ವ್ರತ ಪಾಲಿಸುವವರು ಬೆಡ್‌ನಲ್ಲಿ ಮಲಗಬಾರದು, ನೆಲದಲ್ಲಿಯೇ ಮಲಗಬೇಕು.
ಶಬರಿಮಲೆಯಲ್ಲಿ ವಿಶೇಷ ಪೂಜೆ
ಮಂಡಲಪೂಜೆ ಸಮಯದಲ್ಲಿ ಶಬರಿಮಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. 41 ದಿನಗಳ ಕಠಿಣ ವ್ರತ ನಿಯಮ ಪಾಲಿಸಿ ಅಯ್ಯಪ್ಪ ಭಕ್ತರು ಈ ಕ್ಷೇತ್ರಕ್ಕೆ ಬರುತ್ತಾರೆ. ಈ ದಿನ ಗುರುವಾಯುರ್‌ನಲ್ಲಿಯೂ ವಿಶೇಷ ಪೂಜೆ ಇರಲಿದೆ, ಇನ್ನು ಅನೇಕ ದೇವಾಲಯಗಳಲ್ಲಿ ಈ ದಿನ ವಿಶೇಷ ಪೂಜೆ ಸಲ್ಲಿಸಲಾಗುವುದು. ಭಕ್ತರು ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸದ ಬಳಿಕವಷ್ಟೇ ಮಂಡಲ ಪೂಜೆ ವ್ರತ ಸಂಪೂರ್ಣವಾಗುವುದು.
ಮಂಡಲಕಾಲ
ಮಂಡಲಕಾಲ ನವೆಂಬರ್ 17ರಿಂದ ಶುರುವಾಗಿದೆ, ಡಿಸೆಂಬರ್ 27ಕ್ಕೆ ಮಂಡಲಪೂಜೆ.
ಮಂಡಲಪೂಜೆ
ಸೂರ್ಯೋದಯ: ಡಿಸೆಂಬರ್ 27, ಬೆಳಗ್ಗೆ 07:10ಕ್ಕೆ
ಸೂರ್ಯಾಸ್ತ: ಡಿಸೆಂಬರ್ 27 ಸಂಜೆ 05:44ಕ್ಕೆ
ಮಂಡಲ ಪೂಜೆಯ ಪ್ರಯೋಜನಗಳು
* ಮಂಡಲಪೂಜೆ ಮಾಡುವುದರಿಂದ ಆತ್ಮಶುದ್ಧಿಯಾಗುವುದು.
* ಭಕ್ತಿಯಿಂದ ಬೇಡಿಕೊಂಡ ಆಸೆಗಳು ಈಡೇರುವುದು
* ಕಷ್ಟಗಳು ದೂರಾಗುವುದು.
* 1-9 ವರ್ಷದ ಹೆಣ್ಮಕ್ಕಳು, ಮುಟ್ಟಿನ ಚಕ್ರ ನಿಂತ ಹೆಣ್ಮಕ್ಕಳು ವ್ರತವನ್ನು ಮಾಡಬಹುದು.
ಅಯ್ಯಪ್ಪ ಸ್ವಾಮಿ ಗಾಯತ್ರಿ ಮಂತ್ರ
ಓಂ ಭೂತಾದಿಪಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ಶಾಸ್ತಾ ಪ್ರಚೋದಯಾತ್||
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
