Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
12 ವರ್ಷದ ಬಳಿಕ ಲಕ್ಷ್ಮೀ ನಾರಾಯಣ ಯೋಗ: 3 ರಾಶಿಯವರಲ್ಲಿ ಹಣ ಲಾಭ..!
ಗ್ರಹಗಳ ಸ್ಥಾನಪಲ್ಲಟವು ಹಲವು ರಾಶಿಗಳ ಮೇಲೆ ಪರೋಕ್ಷವಾಗಿ ಪ್ರತ್ಯಕ್ಷವಾಗಿ ಪ್ರಭಾವ ಬೀರುತ್ತವೆ. ಇದು ಒಬ್ಬ ವ್ಯಕ್ತಿಯ ನಿತ್ಯದ ಬದುಕಿನ ಮೇಲೆಯೂ ಪ್ರಭಾವ ಉಂಟು ಮಾಡುತ್ತದೆ. ಹಾಗೆ ನಿಮ್ಮ ರಾಶಿಯಲ್ಲಿನ ಗ್ರಹಗತಿಗಳ ಬದಲಾವಣೆ ಕೂಡ ನಿಮ್ಮಲ್ಲಿ ಹಲವು ರೀತಿ ಲಾಭ ನಷ್ಟಕ್ಕೆ ಕಾರಣವಾಗುತ್ತದೆ. ಈಗ ಲಕ್ಷ್ಮೀ ನಾರಾಯಣ ರಾಜಯೋಗದ ಕುರಿತಂತೆ ನಾವು ತಿಳಿದುಕೊಳ್ಳುವ ಸಮಯ.
2025ರಲ್ಲಿ ಉಂಟಾಗುತ್ತಿರುವ ಮತ್ತೊಂದು ಯೋಗವೆಂದರೆ ಅದು ಲಕ್ಷ್ಮೀ ನಾರಾಯಣ ರಾಜಯೋಗ ಇದು ಸುಮಾರು 12 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಉಳಿದ 12 ರಾಶಿಗಳ ಮೇಲೂ ಇದರ ಪ್ರಭಾವ ಉಂಟಾಗುತ್ತಿದೆ. ಗ್ರಹಗಳ ರಾಜ ಬುಧ, ಅಸುರರ ಅಧಿಪತಿ ಶುಕ್ರನ ಸಂಯೋಗವು ಈ ಲಕ್ಷ್ಮೀ ನಾರಾಯಣ ರಾಜಯೋಗ ಉಂಟುಮಾಡಲು ಕಾರಣವಾಗುತ್ತಿದೆ.

ಹಾಗಾದ್ರೆ ಈ ಯೋಗದಿಂದಾಗಿ ಯಾರಿಗೆಲ್ಲಾ ಲಾಭವಿದೆ ಎಂಬುದನ್ನು ತಿಳಿದುಕೊಳ್ಳೋಣ. ಈ ಯೋಗ 2025ರ ಫೆಬ್ರವರಿ 27ರಂದು ರೂಪುಗೊಳ್ಳುತ್ತಿದೆ. ಈ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ ಕೆಲವು ರಾಶಿಯವರು ಈ ರಾಜಯೋಗದಿಂದ ಲಕ್ಷ್ಮಿ ದೇವಿಯ ಆಶೀರ್ವಾಕ್ಕೆ ಒಳಗಾಗುವುದು ಇದರ ವಿಶೇಷ ಎನ್ನಬಹುದು. ಈಗ ಮೀನ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗದಿಂದ ಯಾರಿಗೆ ಅದೃಷ್ಟ ಒಲಿಯಲಿದೆ ಎಂದು ನೋಡೋಣ.
ಮೀನ ರಾಶಿ
ಮೀನ ರಾಶಿಯ 1ನೇ ಮನೆಯಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗವು ರೂಪುಗೊಳ್ಳುತ್ತದೆ. ಇದು ಈ ರಾಶಿಯ ಜನರಲ್ಲಿ ಹಣದ ಹರಿವಿಗೆ ಕಾರಣವಾಗಲಿದೆ. ಕುಟುಂಬದ ಸದಸ್ಯರಲ್ಲೂ ಹಣಕಾಸು ಸಮಸ್ಯೆಗಳಿಗೆ ನೀವು ಪರಿಹಾರವಾಗುತ್ತೀರಿ. ನಿಮ್ಮ ಕೆಲಸಗಳು ಸುಲಭವಾಗಿ ನೆರವೇರಲಿದೆ. ಸ್ನೇಹಿತರಿಂದ ನಿಮಗೆ ಶುಭವಿದೆ. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳ ಇತ್ಯಾದಿಗಳು ದೊರೆಯುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಕುಟುಂಬ ಮತ್ತು ಸ್ನೇಹಿತರ ಸಂಪೂರ್ಣ ಬೆಂಬಲದೊಂದಿಗೆ ನೀವು ನಿಮ್ಮ ಗುರಿಯನ್ನು ಸುಲಭವಾಗಿ ಸಾಧಿಸುವಿರಿ.
ಕುಂಭ ರಾಶಿ
ಕುಂಭ ರಾಶಿಯ 2ನೇ ಮನೆಯಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗ ಉಂಟಾಗಲಿದೆ. ಆದ್ದರಿಂದ ಕುಂಭ ರಾಶಿಯವರಲ್ಲಿ ಎಲ್ಲಾ ರೀತಿಯ ವ್ಯವಹಾರಗಳು ಉತ್ತಮವಾಗಿ ನೆರವೇರಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಇದು ಶುಭಕರವಾಗಲಿದೆ. ನಿಮ್ಮ ನಾಯಕತ್ವದ ಗುಣದಿಂದಾಗಿ ನಿಮ್ಮ ಜವಾಬ್ದಾರಿ ಹೆಚ್ಚಾಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ನೀವು ಭಾಗಿಯಾಗಿದ್ದರೆ ಲಾಭಗಳಿಸುವ ಸಾಧ್ಯತೆ ಹೆಚ್ಚಾಗಿದೆ.
ಮಿಥುನ ರಾಶಿ
ಮಿಥುನ ರಾಶಿಯ 10ನೇ ಮನೆಯಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗ ರೂಪುಗೊಳ್ಳುತ್ತಿದೆ. ಈ ರಾಶಿ ಜನರು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲ ಪಡೆಯಲಿದ್ದಾರೆ. ಆರೋಗ್ಯದ ದೃಷ್ಟಿಯಲ್ಲಿ ನಿಮಗೆ ಉತ್ತಮವಾಗಲಿದೆ. ಹೊಸ ಹೊಸ ಆದಾಯ ನಿಮ್ಮನ್ನು ಹುಡುಕಿ ಬರಲಿದೆ. ಹಾಗೆ ನಿಮಗೆ ಅಗತ್ಯವಾದ ಆರ್ಥಿಕ ಸಹಾಯಗಳು ಯಾವುದೇ ಅಡ್ಡಿಯಿಲ್ಲದೆ ಸಿಗಲಿದೆ. ಬ್ಯಾಂಕ್‌ನಿಂದ ನೀವು ಸಾಲದ ಮೊರೆ ಹೋಗುವ ಆಲೋಚನೆಯಲ್ಲಿದ್ದರೆ ಶುಭವಾಗಲಿದೆ. ವಾಹನ ಲಾಭದ ನಿರೀಕ್ಷೆಯೂ ಇದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಬೋಲ್ಡ್ ಸ್ಕೈ ಕನ್ನಡ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











