Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಾವೇರಿ ಸಂಕ್ರಮಣ ಯಾವಾಗ? ಎಷ್ಟೊತ್ತಿಗೆ ತೀರ್ಥೋದ್ಭವ?
ತುಲಾ ಸಂಕ್ರಮಣಕ್ಕೆ ಹಿಂದೂ ಧರ್ಮದಲ್ಲಿ ತುಂಬಾನೇ ಮಹತ್ವವಿದೆ. ಸೂರ್ಯ ಪ್ರತಿ ತಿಂಗಳು ತನ್ನ ರಶಿ ಬದಲಾಯಿಸುತ್ತಲೇ ಇರುತ್ತಾನೆ, ಆದರೆ ಸೂರ್ಯ ಕೆಲವೊಂದು ರಾಶಿಗೆ ಸಂಚರಿಸಿದಾಗ ಅದಕ್ಕೆ ತುಂಬಾನೇ ಮಹತ್ವವಿದೆ, ಉದಾಹರಣೆಗೆ ಮಕರ ಸಂಕ್ರಾಂತಿ, ತುಲಾ ಸಂಕ್ರಾಂತಿ. ಈ ಅಕ್ಟೋಬರ್ 18ಕ್ಕೆ ಸೂರ್ಯ ತುಲಾ ರಾಶಿಗೆ ಸಂಚರಿಸಲಿದೆ. ಈ ದಿನ ತುಂಬಾ ವಿಶೇಷವಾದದ್ದು ಏಕೆಂದರೆ ಈ ದಿನ ಕಾವೇರಿಯು ತನ್ನ ಉಗಮಸ್ಥಾನದಲ್ಲಿ ತೀರ್ಥರೂಪಿಣಿಯಾಗಿ ಕ್ತರಿಗೆ ದರ್ಶನ ನೀಡುವ ದಿನವಾಗಿದೆ. ಇದನ್ನು ಕಾವೇರಿ ಸಂಕ್ರಮಣ ಎಂದು ಕರೆಯಲಾಗುವುದು.

ಕಾವೇರಿಯ ತೀರ್ಥೋದ್ಭವ
ಕಾವೇರಿಯ ತೀರ್ಥೋದ್ಭವ ವಿಜ್ಞಾನವನ್ನು ಮೀರಿದ ವಿಸ್ಮಯಗಳಲ್ಲಿ ಒಂದಾಗಿದೆ. ಕಾವೇರಿಯ ಉಗಮಸ್ಥಳವಾದ ಭಾಗಮಂಡಲದಲ್ಲಿ ಈ ದಿನದಂದೇ ಕಾವೇರಿಯಲ್ಲಿ ತೀರ್ಥ ಉಕ್ಕಿ ಬರುತ್ತದೆ, ವರ್ಷದ ಇತರ ಯಾವುದೇ ದಿನದಲ್ಲಿ ಕಂಡು ಬರದ ವಿಸ್ಮಯ ತುಲಾ ಸಂಕ್ರಮಣದಂದು ಸಂಭವಿಸುತ್ತದೆ.
ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿ ಹರಿಯುವುದನ್ನು ನೋಡಲು ಬರುವ ಲಕ್ಷಾಂತರ ಭಕ್ತರು'
ತುಲಾ ಸಂಕ್ರಾಂತಿಯಂದು ಕಾವೇರಿ ತೀರ್ಥ ರೂಪದಲ್ಲಿ ಉಕ್ಕಿ ಬರುವುದನ್ನು ನೋಡಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಲ್ಲಿಂದ ತೀರ್ಥ ಪಡೆದು ತಮ್ಮ ಮನೆಗಳಿಗೆ ಕೊಂಡೊಯ್ಯುವ ಆಚರಣೆ ಕೊಡಗಿನಲ್ಲಿದೆ. ಗಂಗೆಯಷ್ಟೇ ಪವಿತ್ರವಾದದ್ದು ಈ ತೀರ್ಥ. ಈ ತೀರ್ಥವನ್ನು ಸ್ನಾನದ ನೀರಿನಲ್ಲಿ ಹಾಕಿ ಸ್ನಾನ ಮಾಡಿದರೆ ಪುಣ್ಯಸ್ಥಾನದ ಫಲ ಸಿಗುವುದು.
ಹುಟ್ಟು-ಸಾವಿನಲ್ಲಿಯೂ ಈ ತೀರ್ಥ ಬಳಕೆ ಮಾಡುತ್ತಾರೆ
ಕಾವೇರಿ ಸಂಕ್ರಮಣದಂದು ಉಕ್ಕಿ ಬರುವ ತೀರ್ಥವನ್ನು ಸಂಗ್ರಹಿಸಿ ಅದನ್ನು ಬಾಟಲಿಗಳಲ್ಲಿ ತುಂಬಿ ಮನೆ-ಮನೆಗಳಲ್ಲಿ ಇಟ್ಟಿರುತ್ತಾರೆ. ಮಗು ಜನಿಸಿದಾಗ ಈ ತೀರ್ಥ ನೀರನ್ನು ಕುಡಿಸುತ್ತಾರೆ. ವ್ಯಕ್ತಿ ಸಾಯುವಾಗಲೂ ಸ್ವರ್ಗಪ್ರಾಪ್ತಿಯಾಗಲೆಂದು ಈ ತೀರ್ಥ ನೀರನ್ನು ಬಿಡುತ್ತಾರೆ. ಮನೆಯನ್ನು ಶುದ್ಧ ಮಾಡಿದ ಈ ತೀರ್ಥವನ್ನು ಚಿಮುಕಿಸುತ್ತಾರೆ.
ತುಲಾ ಸಂಕ್ರಮಣದಂದು ಈ ಆಚರಣೆಯನ್ನು ಮಾಡಲಾಗುವುದು
ತುಲಾ ಸಂಕ್ರಮಣದಂದು ಕಾವೇರಿ ತಾಯಿಯ ಕಣಿ ಪೂಜೆ ಮಾಡುವುದು ತುಂಬಾನೇ ವಿಶೇಷ. ಈ ದಿನ ಮನೆ-ಮನೆಗಳಲ್ಲಿ ದೋಸೆ ಹಾಗೂ ಸಿಹಿ ಕುಂಬಳಕಾಯಿ ಪಲ್ಯ ಮಾಡುತ್ತಾರೆ. ಗದ್ದೆಗೆ ಸಂಕ್ರಮಣಕ್ಕೆಂದೇ ವಿಶೇಷ ಬಳ್ಳಿ ಸಿಗುತ್ತದೆ ಅದನ್ನು ತಂದು ಕೋಲಿನಲ್ಲಿ ಚುಚ್ಚಿ ಅದಕ್ಕೆ ಕೆಂಪು ಹೂಗಳನ್ನು ಇಟ್ಟು ಅದರ ಕೆಳಗಡೆ ಕುಡಿ ಬಾಳೆಯ ಎಲೆಯನ್ನು ಇಟ್ಟು ಅದರಲ್ಲಿ ತುಪ್ಪ, ದೋಸೆ, ಸಿಹಿ ಕುಂಬಳಕಾಯಿ ಪಲ್ಯ, ದೀಪ ಹಚ್ಚಿ ಕಾವೇರಿ ಮಾತೆಗೆ ವಂದಿಸಿ ಬರುತ್ತಾರೆ.
ಮನೆಯ ಬಾವಿಗಳಿಗೆ ಕೂಡ ಪೂಜೆ ಸಲ್ಲಿಸುತ್ತಾರೆ. ಈ ದಿನ ಎಲ್ಲಾ ಬಾವಿಗಳಲ್ಲಿ ನೀರು ತೀರ್ಥ ರೂಪದಲ್ಲಿ ಗುಳ್ಳೆ-ಗುಳ್ಳೆಯಾಗಿ ಉಕ್ಕಿ ಬರುವುದು ಮತ್ತೊಂದು ವಿಶೇಷ.
ತೀರ್ಥೋದ್ಭವ ಯಾವಾಗ?
ಕಾವೇರಿ ಸಂಕ್ರಮಣ ದಿನಾಂಕ : ಅಕ್ಟೋಬರ್ 17 ಮಧ್ಯರಾತ್ರಿ 1:41ಕ್ಕೆ
ಕಾವೇರಿ ಸಂಕ್ರಮಣ ಪುಣ್ಯಕಾಲ ಸಮಯ: ಬೆಳಗ್ಗೆ 06:17ರಿಂದ ಮಧ್ಯಾಹ್ನ 12:12ರವೆರೆಗ
ಕಾವೇರಿ ಸಂಕ್ರಮಣ ತರ್ಪಣ ಮಹಾ ಪುಣ್ಯಕಾಲ ಸಮಯ: ಬೆಳಗ್ಗೆ 6:17ರಿಂದ 8:16ರವರೆಗೆ
ಕಾವೇರಿ ಸಂಕ್ರಮಣ ಪುಣ್ಯಕಾಲ ವಾರ: ಬುಧವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications