ಮಿಥುನ ರಾಶಿಗೆ ಗುರು ಸಂಚಾರ: ಈ ರಾಶಿಯವರಲ್ಲಿ ಕಷ್ಟಗಳ ಸರಮಾಲೆ..!!

ಜ್ಯೋತಿಷ್ಯಶಾಸ್ತ್ರದಲ್ಲಿ ಗುರುವಿನ ಸಂಚಾರವನ್ನು ಬಹಳ ಪ್ರಮುಖ ವಿದ್ಯಮಾನ ಎಂದು ಗುರುತಿಸಲಾಗಿದೆ. ಈfಗ ಮೇ 15ರಂದು ಮಿಥುನ ರಾಶಿಗೆ ಗುರು ಸಂಚರಿಸುತ್ತಿರುವುದು ಎಲ್ಲಾ 12 ರಾಶಿಯವರಿಗೂ ಲಾಭದಾಯಕವಾಗುತ್ತಿದೆ. ಹಾಗೆ ಕೆಲವು ರಾಿಯವರಲ್ಲಿ ಅನಾನುಕೂಲತೆ ಕೂಡ ನೋಡಬಹುದು. ಮೇಷ, ಕನ್ಯಾ, ವೃಶ್ಚಿಕ, ಮಕರ ಮತ್ತು ಮೀನ ರಾಶಿಯ ಜನರಲ್ಲಿ ಏರಿಳಿತಗಳ ಉಂಟು ಮಾಡಬಹುದು.

ಆದರೆ ಮತ್ತೆ ಹಲವು ರಾಶಿಯವರಿಗೆ ಇದು ಲಾಭದಾಯಕವಾಗುತ್ತಿದೆ. ಗುರು ಸಂಚಾರದಿಂದ ನಷ್ಟವಾಗುವುದ ಹೆಚ್ಚು ಎನ್ನಬಹುದು. ಹಾಗಾದ್ರೆ ಯಾವೆಲ್ಲಾ ರಾಶಿವರಿಗೆ ಇದು ಅಶುಭ ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

Jupiter Transit In Gemini Will Leads Bad Luck For These 3 Signs

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಗುರುವಿನ ಈ ಸಂಚಾರವು ಅನೇಕ ಬದಲಾವಣೆಗಳ ಜೊತೆಗೆ ಅಶುಭ ತರಬಹುದು. ಅವರ ಜೀವನದಲ್ಲಿ ಸಮಸ್ಯೆಗಳು ಒಂದರ ನಂತರ ಒಂದರಂತೆ ಹೆಚ್ಚಾಗುತ್ತವೆ. ಕುಟುಂಬದಲ್ಲಿ ಅಶಾಂತಿಗೆ ಇದು ಕಾರಣಾಗಬಹುದು. ಹಾಗೆ ನಿಮ್ಮ ಅಗತ್ಯಕ್ಕಿಂತ ಬೇರೆಯವರ ಅಗತ್ಯಕ್ಕೆ ನೀವು ಖರ್ಚು ಮಾಡಬೇಕಾಗಬಹುದು. ಇದರಿಂದ ಆರ್ಥಿಕ ಅಸಮತೋಲನ ಕಂಡುಬರಲಿದೆ. ಉದ್ಯೋಗದಲ್ಲಿನ ಸಮಸ್ಯೆಗಳು ಈ ಸಮಯದಲ್ಲಿ ಹೆಚ್ಚಾಗಬಹುದು. ಹಾಗೆ ನೀವು ಭೂಮಿ, ಆಸ್ತಿ ಸಂಬಂಧಿಸಿದ ಯಾವುದಾದರು ವ್ಯವಹಾರದಲ್ಲಿ ತೊಡಗಿದ್ದರೆ ಅದರಿಂದ ಸಮಸ್ಯೆಗಳ ಎದುರಿಸಬೇಕಾಗಬಹುದು. ನಿಮ್ಮ ಕೆಲವು ನಿರ್ಧಾರಗಳು ನಿಮಗೆ ಸಮಸ್ಯೆಗಳ ತರಬಹುದು. ಆರೋಗ್ಯದಲ್ಲೂ ಏರುಪೇರು ನೋಡಬಹುದು.

ಮಕರ ರಾಶಿ

ಗುರು ಮಿಥುನ ರಾಶಿಗೆ ಚಲಿಸುವುದು ಮಕರ ರಾಶಿಯವರಲ್ಲಿ ಹಲವು ರೀತಿ ಸಮಸ್ಯೆಗಳಿಗೆ ದಾರಿಯಾಗಬಹುದು. ಈ ಅವಧಿಯಲ್ಲಿ ನೀವು ತೆಗೆದುಕೊಳ್ಳುವ ಎಲ್ ನಿರ್ಧಾರಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯುವ ಬದಲಾಗಿ ಹೆಚ್ಚಾಗಬಹುದು, ಅದರಲ್ಲೂ ಯಾವುದಾದರು ದೊಡ್ಡ ವ್ಯವಹಾರಕ್ಕಾಗಿ ನೀವು ಸಾಲ ಮಾಡಿದ್ದರೆ ಅದರಿಂದ ನಷ್ಟ ಅನುಭವಿಸಬಹುದು. ವ್ಯಾಪಾರಿಗಳಲ್ಲಿ ಶತ್ರುಗಳ ಸಮಸ್ಯೆ ಅಧಿಕವಾಗಬಹುದು. ಹೆಚ್ಚಿನ ಆರೋಗ್ಯ ಸಮಸ್ಯೆಗಳು, ಸವಾಲುಗಳ ನೀವು ಎದುರಿಸಬೇಕಾಗಬಹುದು. ಬಹಳ ಸಮಯದಿಂದ ನಿಮ್ಮಲ್ಲಿ ಯಾವುದಾದರು ಪಂಚೇಂದ್ರಿಯ ಸಂಬಂಧಿ ಸಮಸ್ಯೆ ಇದ್ದರೆ ಅದು ದೊಡ್ಡದಾಬಹುದು.

ಮೀನ ರಾಶಿ

ಗುರುವಿನ ಈ ಸಂಚಾರದಿಂದಾಗಿ ಮೀನ ರಾಶಿಯವರು ತಮ್ಮ ಜೀವನದಲ್ಲಿ ಅನೇಕ ಅಸಾಮಾನ್ಯ ಬದಲಾವಣೆಗಳ ಅನುಭವಿಸಲಿದ್ದಾರೆ. ನೀವು ಈ ಹಿಂದೆ ಉಳಿತಾಯ ಮಾಡಿದ್ದ ಹಣವನ್ನು ಅನಗತ್ಯ ವಿಚಾರಗಳಿಗೆ ಬಳಸಬೇಕಾಗುತ್ತದೆ. ನಿಮ್ಮ ವಾಹನ ಸಂಬಂಧಿ ಖರ್ಚುಗಳು ಹೆಚ್ಚಾಗುತ್ತವೆ. ಉದ್ಯೋಗದ ಸ್ಥಳದಲ್ಲಿದ್ದ ಒತ್ತಡ ಹಾಗೂ ಸವಾಲುಗಳು ಹೆಚ್ಚಾಗಲಿದೆ. ವ್ಯಾಪಾರಿಗಳ ತಮ್ಮ ಪ್ರಗತಿಗಾಗಿ ವ್ಯವಹಾರ ವಿಸ್ತರಣೆಗೆ ಮುಂದಾದರೆ ಅದರಿಂದ ಸಮಸ್ಯೆಗಳ ಎದುರಿಸುತ್ತೀರಿ. ಅವಿವಾಹಿತರಲ್ಲಿ ಅನಾರೋಗ್ಯ ಸಮಸ್ಯೆಗಳ ಹೆಚ್ಚಾಗಬಹುದು. ಜಾಗೆ ಆರ್ಥಿಕವಾಗಿ ನೀವು ಸವಾಲಾತ್ಮಕ ದಿನಗಳ ನೋಡುವಿರಿ. ಚಿನ್ನ ಬೆಳ್ಳಿ ಖರೀದಿಗೆ ಇದು ಸೂಕ್ತ ಸಮಯವಲ್ಲ.

ಗುರುವಿನ ಶಾಪದಿಂದ ಪಾರಾಗುವುದು ಹೇಗೆ?

ಗುರು ಗ್ರಹದ ಈ ಸಂಚಾರದಿಂದ ಮೂರು ರಾಶಿವರಲ್ಲಿ ಒಂದಿಷ್ಟು ಬದಲಾವಣೆ ನೋಡಬಹುದು, ಆದ್ರೆ ಇದರಿಂದ ಹೊರಬರುವುದು ಕೂಡ ಬಹಳ ಸುಲಭ. ಈ ಸಮಯದಲ್ಲಿ ನೀವು ಗುರುವಿನ ಆಶೀರ್ವಾದ ಪಡೆಯಬೇಕಾಗುತ್ತದೆ. ಗುರುವಾರ ವಿಷ್ಣು ಸಹಸ್ರನಾಮವನ್ನು ಪಠಿಸಬೇಕು. ಅಚ್ಚುಕಟ್ಟಾದ ಉಡುಗೆಯನ್ನು ತೊಟ್ಟು ವಿಷ್ಣು ದೇವರಿಗೆ ಹಾಗೂ ಸರಸ್ವತಿ ದೇವರಿಗೆ ತುಪ್ಪದ ದೀಪ ಹಚ್ಚಬೇಕು. ಇದರಿಂದ ಗುರುವಿನ ಶಾಪ ವಿಮೋಚನೆ ಮಾಡಿಕೊಳ್ಳಬಹುದು)

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Jupiter Transit In Gemini Will Leads Bad Luck For These 3 Signs

It can be said that the losses due to Jupiter's transit are high. So, let's find out today which zodiac signs it will bring inauspiciousness to.
X
Desktop Bottom Promotion