Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಅಕ್ಟೋಬರ್ 22ಕ್ಕೆ ದುರ್ಗಾಷ್ಟಮಿ: ಶನಿ ದೋಷಕ್ಕೆ ದುರ್ಗಾಷ್ಟಮಿಯಂದು ಈ ಪರಿಹಾರ ಮಾಡಿ
ಅಕ್ಟೋಬರ್ 22ಕ್ಕೆ ದುರ್ಗಾಷ್ಟಮಿ, ಶುಕ್ಲ ಪಕ್ಷದ ಅಷ್ಟಮಿಯಮದು ದುರ್ಗಾಷ್ಟಮಿ ಆಚರಿಸಲಾಗುವುದು, ನವರಾತ್ರಿಯಲ್ಲಿ 8ನೇ ದಿನದಂದು ದುರ್ಗಾಷ್ಟಮಿಯನ್ನು ಆಚರಿಸಲಾಗುವುದು. ಈ ದಿನ ಮಹಾಗೌರಿಯನ್ನು ಪೂಜಿಸಲಾಗುತ್ತದೆ.
ಈ ದಿನದಂದು ಆದಿಶಕ್ತಿಯು ಅವತರಿಸಿದಳು ಎಂದು ನಂಬಲಾಗಿದೆ, ಈ ದಿನ ಮಾತೆ ದುರ್ಗೆ ದುರ್ಗೆಯ ಅವತಾರವನ್ನು ಎತ್ತಿ ದುಷ್ಟರನ್ನು ಸಂಹಾರ ಮಾಡಿದಳು ಎಂದು ಹೇಳಲಾಗುವುದು. ಮಾಸಿಕ ಅಷ್ಟಮಿಯ ಆರಾಧನೆಯಿಂದ ದುರ್ಗಾ ದೇವಿಯು ಪ್ರಸನ್ನಳಾಗುತ್ತಾಳೆ, ಭಕ್ತನ ಎಲ್ಲಾ ಸಮಸ್ಯೆಗಳನ್ನು ದೂರಮಾಡುತ್ತಾಳೆ. ಅಲ್ಲದೆ ಶನಿದೋಷದಿಂದ ಕಷ್ಟ ಪಡುತ್ತಿರುವವರು ಈ ದಿನ ಪರಿಹಾರ ಮಾಡಿದರೆ ಶನಿ ದೋಷ ಕಡಿಮೆಯಾಗುವುದು.

ಶನಿದೋಷಕ್ಕೆ ದುರ್ಗಾಷ್ಟಮಿಯಂದು ಪರಿಹಾರ
ಜ್ಯೋತಿಷ್ಯದ ಪ್ರಕಾರ, ಶನಿಯು ಅಷ್ಟಮಿ ಮತ್ತು ನವಮಿ ತಿಥಿಗಳ ಮೇಲೆ ಪ್ರಭಾವ ಬೀರುತ್ತದೆ. ಶನಿಯ ದುಷ್ಪರಿಣಾಮಗಳು ನಿಮ್ಮನ್ನು ಬಾಧಿಸುತ್ತಿದ್ದರೆ ನೀವು ದುರ್ಗಾ ಅಷ್ಟಮಿ ದಿನದಂದು ದೇವಿಯನ್ನು ಪೂಜಿಸಬೇಕು. ದೇವಿಯನ್ನು ಭಕ್ತಿಯಿಂದ ಪೂಜಿಸಿದರೆ ದೇವಿ ಶನಿ ನೀಡುವ ಕಷ್ಟಗಳಿಂದ ನಿಮ್ಮನ್ನು ರಕ್ಷಣೆ ಮಾಡುತ್ತಾಳೆ.
ತುಳಸಿ ಬಳಿ ಒಂಬತ್ತು ದೀಪಗಳನ್ನು ಹಚ್ಚಿ
ಚೈತ್ರ ನವರಾತ್ರಿಯಲ್ಲಿ ಮಹಾ ಅಷ್ಟಮಿಯ ದಿನದಂದು ತುಳಸಿ ಗಿಡದ ಬಳಿ ಒಂಬತ್ತು ದೀಪಗಳನ್ನು ಹಚ್ಚಿ. ನಂತರ ತುಳಸಿಯ ಸುತ್ತ ಒಂಭತ್ತು ಸುತ್ತು ಬನ್ನಿ. ಜ್ಯೋತಿಷ್ಯದ ಪ್ರಕಾರ, ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ಎಲ್ಲಾ ರೋಗಗಳು, ದೋಷಗಳು ನಿವಾರಣೆಯಾಗುವುದು.
ದುರ್ಗೆಗೆ ಈ ವಸ್ತುಗಳನ್ನು ಅರ್ಪಿಸಿ
ಚೈತ್ರ ನವರಾತ್ರಿಯ ಅಷ್ಟಮಿ ದಿನಾಂಕದಂದು, ತಾಯಿಗೆ ಕೆಂಪು ವಸ್ತ್ರದಲ್ಲಿ ನಾಣ್ಯಗಳನ್ನು ಇಟ್ಟು ಅರ್ಪಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಬದುಕಿನಲ್ಲಿರುವ ಅಡೆತಡೆಗಳು ದೂರಾಗುವುದು. ದೇವಿಗೆ ಕೆಂಪು ಹೂವುಗಳನ್ನು ಅರ್ಪಿಸಿ, ತಾವರೆ ಹೂ ಅರ್ಪಿಸಿ.
ಆರ್ಥಿಕ ಸಂಕಷ್ಟ ದೂರ ಮಾಡಲು ಹೀಗೆ ಮಾಡಿ
ಅಷ್ಟಮಿಯ ರಾತ್ರಿ ಹಾಲು ತುಂಬಿದ ಬಟ್ಟಲಿನಲ್ಲಿ ಮಹಾಗೌರಿಯ ರೂಪವನ್ನು ಇಟ್ಟು ಬೆಳ್ಳಿಯ ನಾಣ್ಯವನ್ನು ಅರ್ಪಿಸಿ. ಎರಡನೇ ದಿನದಿಂದು ಆ ನಾಣ್ಯವನ್ನು ಸದಾ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಆರ್ಥಿಕ ಸಮಸ್ಯೆ ದೂರಾಗುವುದು.
ಉಡುಗೊರೆ
ದುರ್ಗಾ ಅಷ್ಟಮಿಯಂದು ಸೂರ್ಯಾಸ್ತದ ನಂತರ ಹನ್ನೊಂದು ವಿವಾಹಿತ ಮಹಿಳೆಯರಿಗೆ ಕೆಂಪು ಬಳೆಗಳು ಮತ್ತು ಸಿಂಧೂರವನ್ನು ಅರ್ಪಿಸುವುದು ವ್ಯಾಪಾರದಲ್ಲಿರುವ ಅಡೆತಡೆಗಳು ದೂರಾಗುವುದು.
ದುರ್ಗಾಷ್ಟಮಿ ಪಠಿಸಿ
ಅಷ್ಟಮಿಯ ರಾತ್ರಿ ನಿಮ್ಮ ಮನೆಯಲ್ಲಿ ಅಥವಾ ದುರ್ಗಾ ದೇವಸ್ಥಾನದಲ್ಲಿ ದುರ್ಗಾ ಮಂತ್ರ ಪಠಿಸಿ.
ಸಂಧ್ಯ ಸಮಯದಲ್ಲಿ ದೇವಿಗೆ ಕುಂಬಳಕಾಯಿ, ಸೌತೆಕಾಯಿ, ಬಾಳೆಹಣ್ಣು, ಹಣ್ಣುಗಳು, ತರಕಾರಿಗಳು ಇತ್ಯಾದಿಗಳನ್ನು ಅರ್ಪಿಸಿ, 108 ದೀಪಗಳನ್ನು ಬೆಳಗಿಸುವುದರಿಂದ ತಾಯಿಯು ಜೀವನದ ಅಂಧಕಾರವನ್ನು ಹೋಗಲಾಡುತ್ತಾಳೆ.
ದುರ್ಗಾ ಅಷ್ಟಮಿಯ ರಾತ್ರಿ ನಿಮ್ಮ ಮನೆಯ ಮುಖ್ಯ ಬಾಗಿಲಿಗೆ ತುಪ್ಪದ ದೀಪವನ್ನು ಹಚ್ಚುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
