Latest Updates
-
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಮೇ 21 ದಿನ ಭವಿಷ್ಯ : ಮಂಗಳವಾರದ ಈ ದಿನ 12 ರಾಶಿಗಳಿಗೆ ಹೇಗಿರಲಿದೆ?
ಮೇ 21, ಸೋಮವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ
ಮೇಷ
ಇಂದು ನಿಮ್ಮ ಹಳೆಯ ಕೆಲಸಗಳು ಮುಕ್ತಾಯವಾಗಬಹುದು. ಅಂದರೆ ಯಾವುದಾದರು ಅಡಚಣೆಯಿಂದ ಅರ್ಧಕ್ಕೆ ನಿಲ್ಲಿಸಿದ್ದರೆ ಅದು ಸಂಪೂರ್ಣವಾಗಲಿದೆ. ನ್ಯಾಯಾಲಯ ವ್ಯವಹಾರಕ್ಕೆ ಸಂಬಂಧಿಸಿದ ಯಾವುದಾದರು ಪ್ರಕರಣವಿದ್ದರೆ ಶುಭ ಸುದ್ದಿ ಕೇಳುವಿರಿ. ಹಳೆಯ ಸಾಲ ವಾಪಸಾತಿಯಾಗುವ ಸಂಭವವಿದೆ.
ವೃಷಭ
ಇಂದು ನೀವು ಪ್ರಯಾಣ ಬೆಳೆಸುವ ಸಂಭವವಿದೆ. ಅದರಲ್ಲಿ ಶುಭ ಫಲವು ನಿಮ್ಮದಾಗಲಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ಹಿರಿಯರ ಬಗ್ಗೆ ಸ್ವಲ್ಪ ಕಾಳಜಿ ಇಡಿ. ಅನಾರೋಗ್ಯಕ್ಕೆ ತುತ್ತಾಗುವ ಸಂಭವ ಹೆಚ್ಚು, ಹಣ ವ್ಯಯವಾಗುವ ಸಾಧ್ಯತೆ ಇದೆ.

ಮಿಥುನ
ಕುಟುಂಬಸ್ಥರೊಂದಿಗೆ ದೇವಾಲಯ ಭೇಟಿಗೆ ದಿನ ನಿಗದಿ ಮಾಡುವ ಸಂಭವ. ಅವಿವಾಹಿತರಿಗೆ ಒಳ್ಳೆಯ ದಿನ. ಚಿಲ್ಲರೆ ವ್ಯಾಪಾರಸ್ಥರು, ದಿನಗೂಲಿ ನೌಕರರಿಗೆ ಲಾಭದಾಯಕ ದಿನವಾಗಲಿದೆ. ಪ್ರಗತಿಗಾಗಿ ನೀವು ಹಾಕಿದ ಶ್ರಮಕ್ಕೆ ಫಲ ಸಿಗಲು ಇಂದಿನ ಪ್ರಯತ್ನ ಒಳ್ಳೆಯ ಫಲಿತಾಂಶ ನೀಡಲಿದೆ.
ಕರ್ಕಾಟಕ
ಕುಟುಂಬದಲ್ಲಿ ಕಲಹದ ವಾತಾವರಣ ಸೃಷ್ಟಿಯಾಗಬಹುದು. ಮನಸ್ಸಿಗೆ ನೋವು ಉಂಟಾಗುವ ಸನ್ನಿವೇಶಗಳು ಎದುರಾಗಬಹುದು. ದೂರ ಪ್ರಯಾಣಕ್ಕೆ ಹೊರಡುವ ಮುನ್ನ ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ಆಪ್ತರಿಂದಾಗಿ ಹಣಕಾಸು ವ್ಯವಹಾರದಲ್ಲಿ ನಷ್ಟ ಅನುಭವಿಸಬಹುದು. ಕೆಲಸಗಳನ್ನು ವಿವೇಚನೆಯಿಂದ ಮಾಡುವುದು ನಿಮ್ಮ ಬೆಳವಣಿಗೆಯ ದೃಷ್ಟಿಯಿಂದ ಒಳಿತು.
ಸಿಂಹ
ನಿಮ್ಮ ಬಹುಕಾಲದ ಆಸೆಗಳು ಈಡೇರಬಹುದು, ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮನಸ್ಸು ತುಂಬಾ ಸಂತೋಷವಾಗುತ್ತದೆ ಮತ್ತು ನೀವು ಸಹ ಧನಾತ್ಮಕತೆಯನ್ನು ಅನುಭವಿಸುವಿರಿ. ವ್ಯಾಪಾರ ವಿಸ್ತರಣೆಗಾಗಿ ನಿಮ್ಮ ಯೋಜನೆ ಯಶಸ್ವಿಯಾಗುತ್ತದೆ. ಹಣಕಾಸು ಸಮಸ್ಯೆಯಿಂದ ಹೊರಬರುವ ಸೂಚನೆಗಳಿವೆ. ಅನಾರೋಗ್ಯ ಕಾಡುವ ಸಂಭವವಿದ್ದು, ಹೊರಗಿನ ಊಟ, ತಿಂಡಿಯಿಂದ ಆದಷ್ಟು ದೂರವಿರಿ.
ಕನ್ಯಾ
ದಿನದ ಆರಂಭದಲ್ಲಿ ಗೊಂದಲ, ಒತ್ತಡ ನಿಮ್ಮನ್ನು ಕಾಡಬಹುದು. ಆದರೆ ದಿನದ ಅಂತ್ಯಕ್ಕೆ ಎಲ್ಲವು ಸುಖಾಂತ್ಯವಾಗುತ್ತದೆ. ಕಚೇರಿ ಕೆಲಸಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಅಧಿಕಾರಿ ವರ್ಗದವರಿಗೆ ಶುಭ ಸುದ್ದಿ ಇದೆ. ವ್ಯಾಪಾರ ವಹಿವಾಟು, ಕ್ರೀಡಾಪಟುಗಳು, ವಿದ್ಯಾರ್ಥಿಗಳಿಗೆ ಇಂದು ಶುಭವಾಗುವ ನಿರೀಕ್ಷೆ ಇದೆ.
ತುಲಾ
ಉದ್ಯೋಗಸ್ಥರಿಗೆ ಇಂದು ಒಳ್ಳೆಯ ದಿನ. ಮಹಿಳೆಯರ ಆರೋಗ್ಯದಲ್ಲಿ ಏರುಪೇರಾಗಬಹುದು. ದಿನದ ಅಂತ್ಯದಲ್ಲಿ ಕಹಿ ಸುದ್ದಿ ಕೇಳುವ ಸಂಭವವಿದೆ. ಹಣಕಾಸು ವ್ಯವಹಾರದಲ್ಲಿ ದುಡುಕಿನ ನಿರ್ಧಾರ ಮಾಡಬೇಡಿ. ಕುಟುಂಬ ಜೀವನದಲ್ಲಿ ಶಾಂತಿ ನೆಲೆಸಲಿದೆ. ಇಂದು ನಿಮ್ಮಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು.
ವೃಶ್ಚಿಕ
ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ. ವ್ಯಾಪಾರಕ್ಕೆ ಸಂಬಂಧಿಸಿದ ಜನರು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ಆದಾಯವನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಿ. ಬಹುಕಾಲದ ಅನಾರೋಗ್ಯ ಸಮಸ್ಯೆ ದೂರಾಗಲಿದೆ. ವಾಹನ ಖರೀದಿಗೆ ಹಾಗು ಸ್ವಂತ ಉದ್ಯಮಕ್ಕೆ ಕೈ ಹಾಕಲು ಒಳ್ಳೆಯ ದಿನ.
ಧನು
ಉದ್ದೇಶ ಪೂರ್ವಕವಾಗಿ ಸುಳ್ಳು ಹೇಳುವುದು, ತಪ್ಪು ಮಾಡುವ ಕಾರ್ಯ ಇಂದು ಮಾಡಲೇಬೇಡಿ. ಅನಿರೀಕ್ಷಿತ ಬೆಳವಣಿಗೆಯಿಂದ ಸಮಸ್ಯೆಗೆ ಒಳಗಾಗುವ ಸಂಭವವಿದೆ. ಪ್ರೀತಿ ಪಾತ್ರರಿಂದ ನಿಮಗೆ ಕಿರಿಕಿರಿ ಉಂಟಾಗಬಹುದು. ಎಲ್ಲಾ ದಿನಕ್ಕಿಂತ ಇಂದು ನಿಮ್ಮಲ್ಲಿ ಹೆಚ್ಚು ಶಾಂತತೆ ನೆಲಸಲಿದೆ. ಸಾಲ ನೀಡುವುದರಿಂದ ಇಂದು ತಪ್ಪಿಸಿಕೊಳ್ಳಿ. ಅಜಾಗರುಕತೆಯ ವಾಹನ ಚಾಲನೆ, ಕೆಲಸ ಬೇಡ.
ಮಕರ
ಇಂದು ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ನೀವು ಕೆಲವು ಕಾಲೋಚಿತ ಕಾಯಿಲೆಗಳಿಂದ ಬಳಲಬಹುದು. ಇಂದು ಹೆಚ್ಚಿನ ಸಮಯ ಮನೆಯಿಂದ ಹೊರಗೆ ಕಳೆಯಬೇಕಾದ ಪರಿಸ್ಥಿತಿ ಎದುರಾಗಲಿದೆ. ಕೆಟ್ಟ ಜನರು ಯಾರು ಎಂಬುದನ್ನು ನೀವೆ ನಿರ್ಧರಿಸಿ ವ್ಯವಹರಿಸಿ.
ಕುಂಭ
ಹಣಕಾಸಿನ ಬಿಕ್ಕಟ್ಟನ್ನು ನಿವಾರಿಸಲು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕೆಲಸದ ದೃಷ್ಟಿಯಿಂದ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿದೆ. ನಮ್ಮ ಗುರಿ ತಲುಪುವ ದಾರಿಯಲ್ಲಿ ಹಲವು ಅಡ್ಡಿಗಳು ಕಾದಿರಲಿವೆ. ಆರ್ಥಿಕ ಸಮಸ್ಯೆ ಹೆಚ್ಚಾಗುವ ಸಂಭವವಿದೆ ಎಚ್ಚರಿಕೆಯಿಂದ ವ್ಯವಹಾರ ಮಾಡಿ.
ಮೀನ
ಯಾವುದೇ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳು ನಡೆಯುತ್ತಿದ್ದರೆ ನೀವು ಹೆಚ್ಚು ಜಾಗರೂಕರಾಗಿರಿ. ವ್ಯಾಪಾರಕ್ಕೆ ಸಂಬಂಧಿಸಿದ ಜನರು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯುತ್ತಾರೆ. ನಿಮ್ಮ ಕೋಪವನ್ನು ನೀವು ನಿಯಂತ್ರಿಸಿದರೆ ಉತ್ತಮ. ಆಹಾರ ಪದ್ಧತಿಯಲ್ಲಿನ ಅಜಾಗರೂಕತೆಯಿಂದ ನಿಮ್ಮ ಆರೋಗ್ಯ ಇಂದು ಹದಗೆಡಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











