Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ಅಕ್ಟೋಬರ್ 27ರ ದಿನ ಭವಿಷ್ಯ: ನಿಮ್ಮ ರಾಶಿಯಲ್ಲಿ ಈ ದಿನ ಏನೆಲ್ಲಾ ಫಲವಿದೆ ನೋಡಿ..!
ಜ್ಯೋತಿಷ್ಯಶಾಸ್ತ್ರ ಪ್ರಕಾರ ಅಕ್ಟೋಬರ್ 27ರಂದು ನಿಮ್ಮ ರಾಶಿಫಲದಲ್ಲಿ ಏನಿದೆ ಎಂಬುದನ್ನು ನೋಡೋಣ.
ಮೇಷ ರಾಶಿ
ಕೆಲಸಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಯಾಣವು ಯಶಸ್ವಿಯಾಗಲಿದೆ. ನೀವು ಕುಟುಂಬದ ಕಡೆಗೆ ಗಮನಹರಿಸಬೆಕು, ಸಂಗಾತಿಯ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸಿ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಈ ದಿನ ಉತ್ತಮವಾಗಿದೆ. ಎಲ್ಲಾ ಕಾರ್ಯಗಳಲ್ಲಿ ಮನಸ್ಸಿಟ್ಟು ಮಾಡುವುದು ಉತ್ತಮ. ದೇವಾಲಯಗಳ ಭೇಟಿಯ ಯೋಚನೆಗಳ ಮುಂದೂಡಬೇಡಿ.

ವೃಷಭ ರಾಶಿ
ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ನಿಮ್ಮ ಉಳಿತಾಯ ಹೆಚ್ಚಾಗಬಹುದು. ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ದಿನವು ಅನುಕೂಲಕರವಾಗಿರುತ್ತದೆ. ಸಂಬಂಧದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಭವಿಷ್ಯದಲ್ಲಿ ಸರಿಯಾಗಲಿದೆ.
ಮಿಥುನ ರಾಶಿ
ಉದ್ಯೋಗಸ್ಥರಿಗೆ ದಿನ ಉತ್ತಮವಾಗಿರಲಿದೆ. ಹಣಕಾಸಿನ ಪರಿಸ್ಥಿತಿಯು ಕೂಡ ಸುಧಾರಿಸಲಿದೆ. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತಿದ್ದರೆ ನಿಮ್ಮ ಪ್ರಯತ್ನಗಳನ್ನು ನೀವು ವೇಗಗೊಳಿಸಬೇಕು. ನೀವು ನಿಮ್ಮ ಆಪ್ತರು ಮತ್ತು ಕೆಲವು ಅನುಭವಿಗಳಿಂದ ಪಡೆದ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ.
ಕರ್ಕ ರಾಶಿ
ಕೆಲಸದ ಜೊತೆಗೆ, ನೀವು ನಿಮ್ಮ ಬಗ್ಗೆಯೂ ಗಮನ ಹರಿಸಬೇಕು, ಅಜಾಗರೂಕತೆಯು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರಲಿದೆ. . ನಿಮ್ಮ ಸಂಬಳ ಹೆಚ್ಚಾಗುವ ಬಲವಾದ ಸಾಧ್ಯತೆಯೂ ಇದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ಸಂಗಾತಿ ಕೋಪಗೊಂಡಿದ್ದರೆ ಅಹಂ ದೂರವಿಟ್ಟು ಅವರನ್ನು ಮನವೊಲಿಸಲು ಪ್ರಯತ್ನಿಸಿ. ದಿನದ ಅಂತ್ಯದಲ್ಲಿ ನಿಮ್ಮ ಗೊಂದಲಗಳು ದೂರಾಗಲಿದೆ.
ಸಿಂಹ ರಾಶಿ
ಕೆಲಸದ ಸ್ಥಳದಲ್ಲಿ ಸವಾಲುಗಳು ಉಳಿಯುತ್ತವೆ. ನೀವು ತುಂಬಾ ತಾಳ್ಮೆಯಿಂದಿರಬೇಕು. ಹಣಕಾಸಿನ ಸಮಸ್ಯೆ ಇರಲ್ಲ. ನೀವು ಹೊಸ ಆಸ್ತಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ ಸದ್ಯದಲ್ಲಿಯೇ ಸಾಧ್ಯವಾಗುವುದು. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿದೆ. ಅದರಲ್ಲೂ ಚಿಲ್ಲರೆ ವ್ಯಪಾರಿಗಳಿಗೆ ಈ ದಿನ ಅತ್ಯುತ್ತಮವಾಗಿರಲಿದೆ. ಹಣದ ಕ್ರೂಢಿಕರಣ ಆಗಲಿದೆ .
ಕನ್ಯಾ ರಾಶಿ
ಉದ್ಯೋಗಸ್ಥರಿಗೆ ತೊಂದರೆಗಳು ಹೆಚ್ಚಾಗಬಹುದು. ವಿಶೇಷವಾಗಿ ನಿಮ್ಮ ಕೆಲಸ ತಾತ್ಕಾಲಿಕವಾಗಿದ್ದರೆ ಅದು ಸಮಸ್ಯೆಯಾಗಬಹುದು. ದೂರ ಪ್ರಯಾಣ ಸಂಭವವಿದೆ. ಒತ್ತಡ ಹೆಚ್ಚಾಗಲಿದೆ. ದೊಡ್ಡ ಹಣಕಾಸಿನ ವಹಿವಾಟುಗಳನ್ನು ಮಾಡಲು ಹೋಗಬೇಡಿ. ವ್ಯಾಪಾರಿಗಳು ಸ್ವಲ್ಪ ನಿರ್ಲಕ್ಷ್ಯ ತೋರಿದರು ನಷ್ಟ ಉಂಟಾಗಬಹುದು. ನಿಮ್ಮ ಖರ್ಚುಗಳನ್ನು ಸುಲಭವಾಗಿ ಪೂರೈಸಬಹುದು ಮತ್ತು ನೀವು ಉಳಿಸಲು ಸಹ ಸಾಧ್ಯವಾಗುತ್ತದೆ.
ತುಲಾ ರಾಶಿ
ಕೆಲಸದ ವಿಷಯದಲ್ಲಿ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ವ್ಯಾಪಾರಸ್ಥರು ಇಂದು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. ಈ ದಿನ ಬಹಳ ತಾಳ್ಮೆಯಿಂದ ಇರಿ, ಸಾಲ ನೀಡುವುದು, ಭರವಸೆ ನೀಡುವುದು, ಮಾತು ನೀಡುವ ಮುನ್ನ ಆಲೋಚಿಸಿ. ಹಿರಿಯರೊಂದಿಗೆ, ಮನೆಯಲ್ಲಿ ಮನಸ್ಥಾಪವಿದ್ದರೆ ಮುಕ್ತವಾಗಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ.
ವೃಶ್ಚಿಕ ರಾಶಿ
ಬೇರೆಯವರ ಮಾತಿನ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಡಿ. ವಾಹನ ಮಾಲೀಕರಿಗೆ ಲಾಭದ ದಿನವಾಗಲಿದೆ. ಹಳೆಯ ಬಾಕಿ ಉಳಿದ ಕೆಲಸಗಳು ಪೂರ್ಣ ಆಗಲಿದೆ. ನಿಮ್ಮ ಪ್ರೀತಿಪಾತ್ರರಿಗೆ ಸರಿಯಾದ ಆರೈಕೆಯ ಅಗತ್ಯವಿರುತ್ತದೆ ಮತ್ತು ನಿಮ್ಮ ಭಾವನಾತ್ಮಕ ಬೆಂಬಲವೂ ಬೇಕಾಗುತ್ತದೆ. ಹವಾಮಾನ ಬದಲಾವಣೆಯಿಂದ ಕೆಲವು ಆರೋಗ್ಯ ಸಮಸ್ಯೆಗಳು ಕಾಡಬಹುದು ಎಚ್ಚರಿಕೆ ಅಗತ್ಯ.
ಧನು ರಾಶಿ
ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಇರುತ್ತದೆ. ಸಂಬಂಧಿಕರಿಂದ ಶುಭ ಸುದ್ದಿ ಕೇಳುವಿರಿ. ಯಾವುದಾದರು ಹೊಸ ಕಾರ್ಯ ಮಾಡುವ ಆಲೋಚನೆಗೆ ದಾರಿ ಸಿಗಲಿದೆ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಿ. ಮಾತಿಗೆ ಮರುಳಾಗುವ ಮುನ್ನ ಎಚ್ಚರವಿರಲಿ.
ಮಕರ ರಾಶಿ
ಈ ರಾಶಿಯವರಲ್ಲಿ ಖರ್ಚು ಹೆಚ್ಚಾಗಲಿದೆ. ಅಂದರೆ ಅಗತ್ಯ ಕಾರ್ಯಕ್ಕೆಂದು ಮೀಸಲಿಟ್ಟ ಹಣ ಬೇರೆ ಕೆಲಸಗಳಿಗೆ ಖಾಲಿಯಾಗಬಹುದು. ವಾಹನ ಕೊಳ್ಳುವುದು ನಿಮ್ಮ ಕನಸಾದರೆ ಇಂದು ಅದಕ್ಕಾಗಿ ಯಾವುದಾದರು ಕೆಲಸ ಮಾಡಿ. ಅವಿವಾಹಿತರು ಶುಭ ಸುದ್ದಿ ಕೇಳುವ ಸಂಭವವಿದೆ.
ಕುಂಭ ರಾಶಿ
ತಲೆಯಲ್ಲಿ ಸುಳಿದಾಡುತ್ತಿದ್ದ ಬಹುದಿನದ ಆಲೋಚನೆ, ಚಿಂತೆ ದೂರಾಗಲಿದೆ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚು ಆತುರಪಡಬೇಡಿ ಹಲವು ಭಾರಿ ಯೋಚಿಸಿ ನಿರ್ಧಾರಕ್ಕೆ ಬನ್ನಿ. ಹೂವು, ತರಕಾರಿ, ಬಟ್ಟೆ ವ್ಯಾಪಾರಿಗಳಿಗೆ ಶುಭ ಸೂಚಕವಿದೆ.
ಮೀನ ರಾಶಿ
ಉದ್ಯೋಗಿಗಳ ಶ್ರಮಕ್ಕೆ ಫಲಸಿಗುವ ದಿನವಾಗಲಿದೆ. ಹಣದ ವಿಚಾರವಾಗಿ ನಿಮ್ಮ ನಿರ್ಧಾರ ಗಟ್ಟುಯಾಗಿರಲಿ. ಕುಟುಂಬದ ಕಡೆಯಿಂದ ಹಲವು ವಿಚಾರಕ್ಕೆ ಒತ್ತಡ ಬರಬಹುದು. ಆರೋಗ್ಯ ಸ್ಥಿತಿಯಲ್ಲಿ ಪ್ರಗತಿ ಕಾಣಲಿದ್ದೀರಿ. ಗೃಹಿಣಿಯರಲ್ಲಿ ಹೊಸ ನಿರ್ಧಾರಕ್ಕೆ ಸೂಕ್ತ ಸಮಯವಿದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











