Latest Updates
-
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್!
ಚಂದ್ರ ಗೋಚರ 2025: ಮಹಾನವಮಿಯಂದು ಮಕರ ರಾಶಿಗೆ ಚಂದ್ರ ಸಂಚಾರ..ಯಾರಿಗಿದೆ ಅದೃಷ್ಟದ ದಿನಗಳು!
ನವರಾತ್ರಿಯ ಸಮಯದಲ್ಲಿ ಎಲ್ಲಾ ಕಡೆಗೂ ದುರ್ಗೆಯು ಆರಾಧನೆ ನಡೆಯುತ್ತಿದೆ. ಹಾಗೆ ಈ ಸಮಯದಲ್ಲಿ ಹಲವು ಗ್ರಹಗಳ ಸಂಚಾರದಿಂದ ಹಲವು ರೀತಿಯ ಶುಭ ಹಾಗೂ ಲಾಭಗಳಿಗೆ ಕಾರಣವಾಗುವ ವಿದ್ಯಮಾನಗಳು ನಡೆಯುತ್ತಿವೆ. ಮಹಾನವಮಿಯ ದಿನದಂದು ಅದ್ಭುತ ಯೋಗ ಹಾಗೂ ಗ್ರಹಗಳಲ್ಲಿನ ಬದಲಾವಣೆಯು ನಿಮಗೆ ಅಚ್ಚರಿಯ ಫಲಿತಾಂಶ ತರಲಿದೆ.
ಅಕ್ಟೋಬರ್ ಮಾಸದ ಮೊದಲ ದಿನವೇ ಚಂದ್ರನ ಸ್ಥಾನ ಬದಲಾವಣೆಯಿಂದಾಗಿ ಹಲವರಲ್ಲಿ ಶುಭಯೋಗ ಬರಲಿದೆ. ಅಕ್ಟೋಬರ್ 1 ರಂದು ಚಂದ್ರನು ತನ್ನ ರಾಶಿ ಚಿಹ್ನೆಯನ್ನು ಬದಲಾಯಿಸುತ್ತಾನೆ. ಚಂದ್ರನನ್ನು ಜ್ಯೋತಿಷ್ಯದಲ್ಲಿ ಶುಭ ತರುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಯಾರ ಜಾತಕದಲ್ಲಿ ಚಂದ್ರನ ಮನೆ ಉತ್ತಮವಾಗಿರಲಿದ್ಯೋ ಅವರಿಗೆ ಅತ್ಯುತ್ತಮ ಲಾಭಗಳಿರಲಿವೆ.

ಚಂದ್ರನು ಅಕ್ಟೋಬರ್ 1 ರಂದು ಮಧ್ಯಾಹ್ನ 2:27 ಕ್ಕೆ ಧನು ರಾಶಿಯಿಂದ ಮಕರ ರಾಶಿಗೆ ಸಾಗುತ್ತಾನೆ. ಅದೇ ರಾಶಿಯಲ್ಲಿ ಚಂದ್ರನು ಮುಂದಿನ ಎರಡು ದಿನಗಳ ಕಾಲ ಚಲಿಸಲಿದ್ದಾನೆ. ಅನಂತರ ಚಂದ್ರನು ಮೀನ ರಾಶಿಗೆ ಚಲಿಸಲಿದ್ದಾನೆ. ಚಂದ್ರನನ್ನು ಶಾಂತಿ, ಸಂಪತ್ತು, ಹಣ, ವೈವಾಹಿಕ ಸಂತೋಷದಂತಹ ವಿಚಾರದಲ್ಲಿ ಶುಭ ತರುವಂತಹ ವಿಚಾರ ಎನ್ನಬಹುದು. ಹಾಗಾದ್ರೆ ಚಂದ್ರ ಗೋಚರದಿಂದಾಗಿ ಯಾರಿಗೆ ಶುಭವಾಗುತ್ತಿದೆ. ಯಾರಲ್ಲಿ ಲಾಭಕರ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಧನು ರಾಶಿ
ವಿಷ್ಣುವಿನ ಅಧಿಪತಿ ಗುರುವು ಧನು ರಾಶಿಯನ್ನು ಆಳುತ್ತಾನೆ. ಆದ್ರೆ ಚಂದ್ರನ ಸಂಚಾರದಿಂದಾಗಿ ಧನು ರಾಶಿಯ ಜನರಲ್ಲಿ ಪ್ರಯೋಜನಗಳಿವೆ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಅತಿಥಿಗಳು ಮನೆಗೆ ಆಗಮಿಸುತ್ತಾರೆ. ಸೇವಾ ಕ್ಷೇತ್ರದಲ್ಲಿ ನಿಮ್ಮ ಪ್ರಯತ್ನಗಳು ಮೆಚ್ಚುಗೆ ಪಡೆಯುತ್ತವೆ. ಕೆಲವು ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸುವುದರಿಂದ ಮನೆಯಲ್ಲಿ ಸಂತೋಷದ ವಾತಾವರಣ ಉಂಟಾಗುತ್ತದೆ. ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಬಹುದು. ನೀವು ಚಿಂತೆ ಮತ್ತು ಒತ್ತಡದಿಂದ ಮುಕ್ತರಾಗುತ್ತೀರಿ.
ಮಕರ ರಾಶಿ
ಮಕರ ರಾಶಿಯವರಿಗೆ ಚಂದ್ರನ ಗೋಚರದಿಂದಾಗಿ ವೈವಾಹಿಕ ಜೀವನ ವಿಚಾರದಲ್ಲಿ ಉತ್ತಮ ದಿನಗಳಿವೆ. ಈ ಎರಡು ದಿನಗಳಲ್ಲಿ ನಿಮ್ಮ ಬಾಳ ಸಂಗಾತಿ ಅಥವಾ ಪ್ರೀತಿ ಪಾತ್ರರಿಂದ ನಿಮಗೆ ಮಧುರ ಅನುಭವಗಳಿವೆ. ಅನೇಕರಲ್ಲಿ ಈ ಸಮಯ ಕೆಲಸದಲ್ಲಿನ ಒತ್ತಡ ಕಡಿಮೆಯಾಗಲಿದೆ. ಪ್ರಯಾಣದಲ್ಲಿ ನಿಮಗೆ ಸುಖಕರ ಫಲಿತಾಂಶ ಇರಲಿದೆ. ಬಹಳ ಸಮಯದಿಂದ ನಿಮಗೆ ಕಾಡಿದಂತಹ ಅನಾರೋಗ್ಯ ಸಮಸ್ಯೆಯೊಂದರಿಂದ ಪರಿಹಾರ ಪಡೆಯಲಿದ್ದೀರಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ಮನೆಯ ವಾತಾವರಣದಲ್ಲಿ ಖುಷಿ ಇರಲಿದೆ.
ಮೀನ ರಾಶಿ
ಮೀನ ರಾಶಿಯ ಅಧಿಪತಿ ಗುರು, ಮತ್ತು ಅವರ ದೇವತೆ ವಿಷ್ಣು. ಈ ರಾಶಿಯಡಿಯಲ್ಲಿ ಜನಿಸಿದ ಜನರು ವಿಷ್ಣುವಿನ ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ. ನೀವು ಮಾನಸಿಕ ಒತ್ತಡದಿಂದ ಮುಕ್ತರಾಗುತ್ತೀರಿ. ಮನೆಯಲ್ಲಿ ಶುಭ ಘಟನೆಗಳು ನಡೆಯುತ್ತವೆ. ಅತಿಥಿಗಳು ಆಗಮಿಸುತ್ತಾರೆ. ನೀವು ಪ್ರೀತಿಪಾತ್ರರನ್ನು ಭೇಟಿಯಾಗುತ್ತೀರಿ. ನಿಮ್ಮ ಹಣ ಎಲ್ಲಿಯಾದರು ಸಿಲುಕಿದ್ದರೆ ಈ ಸಮಯದಲ್ಲಿ ಬಗೆಹರಿಯಲಿದೆ. ಬಹಳ ಸಮಯದಿಂದ ನಿಮ್ಮ ಮನಸ್ಸಿನಲ್ಲಿ ಕಾಡುತ್ತಿದ್ದ ಒತ್ತಡ ವಿಚಾರವೊಂದು ಬಗೆಹರಿಯಲಿದೆ.
(ಹಕ್ಕು ನಿರಾಕರಣೆ: ಈ ಲೇಖನದಲ್ಲಿ ಉಲ್ಲೇಖಿಸಲಾದ ಪರಿಹಾರಗಳು, ಪ್ರಯೋಜನಗಳು, ಸಲಹೆಗಳು ಮತ್ತು ಹೇಳಿಕೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ.
ಕನ್ನಡ ಬೋಲ್ಡ್ ಸ್ಕೈ ಹಾಗೂ ಲೇಖಕರು ಈ ಮಾಹಿತಿಯನ್ನು ಖಾತ್ರಿ ಪಡಿಸುವುದಿಲ್ಲ. ಈ ಲೇಖನದಲ್ಲಿರುವ ಮಾಹಿತಿಯನ್ನು ವಿವಿಧ ಮೂಲಗಳು, ಜ್ಯೋತಿಷಿಗಳು, ಪಂಚಾಂಗಗಳು, ಧರ್ಮೋಪದೇಶಗಳು, ನಂಬಿಕೆಗಳು, ಧಾರ್ಮಿಕ ಗ್ರಂಥಗಳು ಮತ್ತು ದಂತಕಥೆಗಳಿಂದ ಸಂಗ್ರಹಿಸಲಾಗಿದೆ. ಹಾಗೆ ಇದನ್ನು ಅನುಸರಿಸುವ ಮೊದಲು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗಿದೆ. ಹಾಗೆ ಈ ಲೇಖನದ ಮುಖ್ಯ ಉದ್ದೇಶ ಮಾಹಿತಿ ನೀಡುವುದಾಗಿದೆ)



Click it and Unblock the Notifications