Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೋಡಿಗಳು ಪರಸ್ಪರ ಹೇಳಿಕೊಳ್ಳುವ 15 ಸುಳ್ಳುಗಳ ಬಗ್ಗೆ ಗೊತ್ತೇ?
ಸಂಬಂಧ ಎಂದೆಂದಿಗೂ ಹೊಳಪು ಮತ್ತು ಆಕರ್ಷಕವಾಗಿರುವುದಿಲ್ಲ. ಜೋಡಿಗಳ ನಡುವಿನ ಸಂಘರ್ಷ, ತಪ್ಪು ತಿಳುವಳಿಕೆಗಳು ಸುಳ್ಳು ಹೇಳುವಂತೆ ಪ್ರಚೋದಿಸುತ್ತವೆ. ಕೆಲವೊಂದು ಸಾಮಾನ್ಯವಾಗಿ ಜೋಡಿಗಳು ಪರಸ್ಪರ ಹೇಳಿಕೊಳ್ಳುವ ಸುಳ್ಳುಗಳನ್ನು ಈ ಲೇಖನದಲ್ಲಿ ನಾವು ಆಯ್ದುಕೊಂಡಿದ್ದೇವೆ. ಈ ಸುಳ್ಳುಗಳು ಜೋಡಿಗಳ ಮಧ್ಯೆ ಸಾಮಾನ್ಯವಾಗಿ ವಿನಿಮಯಗೊಳ್ಳುತ್ತಲೇ ಇರುತ್ತದೆ.
ಕೆಲವೊಂದು ಸಂಕಷ್ಟ ಪರಿಸ್ಥಿತಿಗಳಿಂದ ಬಿಡುಗಡೆ ಹೊಂದಲು ಜೋಡಿಗಳು ಸುಳ್ಳು ಹೇಳುತ್ತಾರೆ. ಆದರೆ ಈ ಸುಳ್ಳುಗಳೇ ಮುಂದೆ ಯುದ್ಧಕ್ಕೆ ಕಾರಣವಾಗುವುದು ಮತ್ತು ಒಂದು ಮಧುರವಾದ ದಾಂಪತ್ಯ ಜೀವನ ಕೊನೆಗೊಳ್ಳಲು ಕಾರಣವಾಗುವುದು. ಮದುವೆಯ ನಂತರ ಕೆಲವೊಂದು ಪುರುಷರು ಪರಿಸ್ಥಿತಿಗಳನ್ನು ತಮ್ಮ ಪತ್ನಿಯರಿಗೆ ಸುಳ್ಳು ಹೇಳುತ್ತಾರೆ. ಆದರೆ ಇದು ನಿಜವಾಗಿ ಪ್ರಭಾವಶಾಲಿಯೆಂದು ನೀವು ನಂಬುತ್ತೀರಾ?
ಇನ್ನೊಂದು ಬದಿಯಲ್ಲಿ, ಪತ್ನಿ ಕೂಡ ತನ್ನ ಪತಿಗೆ ಮಧ್ಯಾಹ್ನದೂಟದ ವೇಳೆ ಬಂದಾಗ ಸುಳ್ಳು ಹೇಳುತ್ತಾಳೆ. ಸಾಮಾನ್ಯವಾಗಿ ಒಬ್ಬಳೇ ಕುಳಿತು ಊಟ ಮಾಡುವುದೆಂದರೆ ಆಕೆಗೆ ಹಿಡಿಸದು. ಆಕೆ ತನ್ನ ಪುರುಷನನ್ನು ಊಟಕ್ಕೆ ತನ್ನೊಂದಿಗಿರಲು ಬಯಸುತ್ತಾಳೆ. ಆಕೆ ಇದು ಸುರಕ್ಷಿತ ಎಂದು ಭಾವಿಸುತ್ತಾಳೆ. ಇಂತಹ ಪರಿಸ್ಥಿತಿಗಳಲ್ಲಿ, ತಾನು ಏಕಾಂಗಿ ಎಂಬುದನ್ನು ತೋರಿಸಿಕೊಳ್ಳಲು ಮಾತ್ರ ಆಕೆ ಸುಳ್ಳನ್ನು ಹೇಳುತ್ತಾಳೆ.
ಇದರಂತೆಯೇ, ಸಂಬಂಧದಲ್ಲಿ ಒಬ್ಬರಿಗೊಬ್ಬರು ಹೇಳುವ ಸಾಮಾನ್ಯ ಸುಳ್ಳು ಕೂಡ ಸಾಕಷ್ಟಿದ್ದು, ಇಂದಿನ ಲೇಖನದಲ್ಲಿ ವಿಶಿಷ್ಟವಾಗಿರುವ 15 ಸುಳ್ಳುಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಹಾಗಿದ್ದರೆ ಆ ಸುಳ್ಳುಗಳು ಯಾವುವು ಎಂಬುದನ್ನು ನೋಡಲು ಈ ಲೇಖನವನ್ನು ಓದಿ.
ನಿಮ್ಮವರಿಗೆ ನಿಮ್ಮ ಮನದ ಭಾವನೆಗಳನ್ನು ತಿಳಿಸುವ 10 ವಿಧಾನಗಳು

ನಾನು ಹುಡುಗಿಯನ್ನು ನೋಡಿಲ್ಲ
ಅಂಗಡಿಗಳಲ್ಲಿ, ಹೋಟೆಲ್‌ಗಳಲ್ಲಿ, ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪುರುಷರು ಮೊದಲು ನೋಡುವುದೇ ಇತರ ಸ್ತ್ರೀಯರನ್ನು, ನಿಮ್ಮ ಕೈಯನ್ನು ಆತ ಗಟ್ಟಿಯಾಗಿ ಹಿಡಿದುಕೊಂಡಿದ್ದರೂ ಈ ಬಗೆಯ ಆಕರ್ಷಣೆಗಳಿಗೆ ಆತ ಮನಸೋಲದೇ ಇರುವುದಿಲ್ಲ.

ತಾಯಿಯೊಂದಿಗೆ ಮಾತನಾಡುತ್ತಿದ್ದೆ
ಎಲ್ಲಾ ಸಮಯದಲ್ಲಿ ಆತನ ಫೋನ್ ಬ್ಯುಸಿ ಬರುತ್ತಿರುತ್ತದೆ. ತುಂಬಾ ಅವಸರವೆಂಬ ಸಂದರ್ಭದಲ್ಲಿ ಈ ಪರಿಸ್ಥಿತಿ ನಿಮಗೆ ಇರಿಸು ಮುರಿಸನ್ನು ಉಂಟುಮಾಡುತ್ತದೆ. ನೀವು ಈ ಕುರಿತು ಪ್ರಶ್ನಿಸಿದಾಗ ತಾನು ತನ್ನ ತಾಯಿಯೊಂದಿಗೆ ಮಾತನಾಡುತ್ತಿದ್ದೆ ಎಂದು ಸುಳ್ಳು ಹೇಳುತ್ತಾನೆ. ಹೀಗೆ ತನ್ನ ಹುಡುಗಿಗೆ ಹುಡಗರು ಹೇಳುವ ಸಾಮಾನ್ಯ ಸುಳ್ಳುಗಳಲ್ಲಿ ಇದೂ ಒಂದು.

ನಾನು ಮೂರು ಸಿಗರೇಟು ಮಾತ್ರ ಎಳೆದೆ
ಇಡೀ ಪ್ಯಾಕೆಟನ್ನು ಖಾಲಿ ಮಾಡಿ ನಿಮ್ಮೆದುರಿಗೆ ಬರುವ ಪತಿರಾಯ ಅಥವಾ ನಿಮ್ಮ ಸ್ನೇಹಿತ ನೀವು ಕೇಳಿದಾಗ ಕೇವಲ ಮೂರು ಸಿಗರೇಟನ್ನು ಮಾತ್ರ ನಾನು ಎಳೆದಿದ್ದೇನೆ ಎಂದು ಹೇಳುತ್ತಾರೆ.

ಇದು ನನ್ನ ಮೊದಲ ಹಂತ
ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುಲು ನಿರ್ಧರಿಸಿರುವ ಜೋಡಿಗಳು ಹೇಳುವ ಸಾಮಾನ್ಯ ಸುಳ್ಳು ಇದಾಗಿದೆ.

ನಾನು ನಿಜವಾಗಿಯೂ ಕೆಲಸ ಮಾಡುತ್ತಿದ್ದೆ
ನೀವು ನಿಜವಾಗಿಯೂ ಕೆಲಸ ಮಾಡುತ್ತಿದ್ದೀರಾ ಎಂದು ಯಾರೂ ನಿಮ್ಮನ್ನು ಕೇಳುವುದಿಲ್ಲ. ಆದರೆ ಈ ವಿಷಯದಲ್ಲಿ ಮಾತ್ರ ಏಕೆ ನೀವು ಕೋಪಗೊಳ್ಳುತ್ತೀರಾ ಮತ್ತು ಬ್ಯುಸಿ ಇರುವಂತೆ ತೋರಿಸಿಕೊಳ್ಳುತ್ತೀರಾ

ನಾವು ಕೇವಲ ಸ್ನೇಹಿತರು
ಗಂಡು ಹೆಣ್ಣು ಮುಖಾಮುಖಿಯಾಗಬೇಕಾದ ಸಂದರ್ಭ ಬಂದಾಗ ಈ ಸುಳ್ಳನ್ನು ಹೇಳುತ್ತಾರೆ.

ನನ್ನ ತಾಯಿ ಚೆನ್ನಾಗಿ ಅಡುಗೆ ಮಾಡುತ್ತಾರೆ
ಮದುವೆಯ ನಂತರ ಈ ಸಂದರ್ಭ ಎದುರಾಗುತ್ತದೆ. ದುರಾದೃಷ್ಟವಶಾತ್ ಚೆನ್ನಾಗಿ ತಯಾರಿಸದ ಯಾವುದೇ ತಿನಿಸನ್ನೂ ಕೂಡ ಪುರುಷರು ತಿನ್ನುತ್ತಾರೆ, ಆದರೆ ಮನಸ್ಸಿನಲ್ಲಿ ತನ್ನ ತಾಯಿಯ ಅಡುಗೆಯ ಮುಂದೆ ಇದು ಯಾವುದೂ ಅಲ್ಲ ಎಂದು ಅಂದುಕೊಳ್ಳುತ್ತಾರೆ.

ನಾನು ಒಬ್ಬಳೇ ತಿಂದೆ
ಸಂಬಂಧದಲ್ಲಿ ಮಹಿಳೆ ಹೇಳುವ ಸಾಮಾನ್ಯ ಸುಳ್ಳು ಇದಾಗಿದೆ. ಮುಂಚೆ ಹೇಳಿದಂತೆ, ಮಹಿಳೆ ಏಕಾಂಗಿಯಾಗಿ ಊಟ ಮಾಡುವ ವಿಚಾರವನ್ನು ಎಂದಿಗೂ ಒಪ್ಪಲಾರಳು.

ನಾನು ನಿನ್ನನ್ನು ಮದುವೆಯಾಗಲು ಬಯಸಿರುವೆ
ಮದುವೆಯ ನಂತರದ ಜೀವನವನ್ನು ಮಹಿಳೆ ಬಯಸುತ್ತಾಳೆ. ಸಂಬಂಧದಲ್ಲಿ ಬಂದೊದಗುವ ಸಾಮಾನ್ಯ ಸುಳ್ಳುಗಳಲ್ಲಿ ಇದೂ ಒಂದು.

ಮಕ್ಕಳನ್ನು ಹೊಂದಿ ಸುಖವಾಗಿ ಬಾಳೋಣ
ಮದುವೆಯ ವಿಷಯ ಬಂದಾಗ, ಪುರುಷರು ತಮ್ಮ ಪತ್ನಿಗೆ ಹೇಳುವ ಸಾಮಾನ್ಯ ಸುಳ್ಳುಗಳಲ್ಲಿ ಇದೂ ಒಂದು.

ಇಲ್ಲ ನೀನು ದಪ್ಪವಾಗಿ ಕಾಣುತ್ತಿಲ್ಲ
ಮಹಿಳೆಯರಿಗೆ ಹೊಗಳಿಕೆ ಎಂದರೆ ತುಂಬಾ ಇಷ್ಟ. ಪುರುಷರೂ ಕೂಡ ಈ ವಿಷಯದಲ್ಲಿ ಆಕೆಗೆ ಇಷ್ಟವಾಗುವಂತಹ ಸುಳ್ಳನ್ನೇ ಹೇಳುತ್ತಾರೆ.

ನಾನು ಬೆಳಗ್ಗೆ ಅಷ್ಟೇ ಸ್ನಾನ ಮುಗಿಸಿದೆ
ಯಾರಿಗೆ ತಾನೇ ಸ್ನಾನ ಮತ್ತು ನೀರು ಎಂದರೆ ಇಷ್ಟವಿಲ್ಲ ಹೇಳಿ? ಆದರೆ ಪುರುಷರು ಈ ವಿಷಯದಲ್ಲಿ ಮಾತ್ರ ಆಸಕ್ತಿ ವಹಿಸುವುದಿಲ್ಲ. ಸ್ನಾನ ಎಂದರೆ ಅವರಿಗೆ ಹೊರೆ ಮತ್ತು ಬೋರಿಂಗ್ ಆದ ಕೆಲಸವಾಗಿದೆ.

ನಾನು ಇನ್ನೆರಡು ನಿಮಿಷದಲ್ಲಿ ಮನೆಯಲ್ಲಿರುತ್ತೇನೆ
ಹುಡುಗರ ಡಿಕ್ಷನರಿಯಲ್ಲಿ ಎರಡು ನಿಮಿಷ ಎಂಬುದಕ್ಕೆ ಜಾಗವೇ ಇರುವುದಿಲ್ಲ. ಆದರೂ ತಾವು ಬರುವುದು ತಡವಾಗುತ್ತದೆ ಎಂದು ಗೊತ್ತಿದ್ದರೂ ಪುರುಷರು ಈ ಸುಳ್ಳನ್ನು ಹೇಳುತ್ತಾರೆ.

ನನಗೆ ಮೇಕಪ್ ಇಷ್ಟವಿಲ್ಲ
ಮಹಿಳೆಯರಿಗೆ ಮೇಕಪ್ ಎಂದರೆ ಇಷ್ಟ ತಾನೇ? ಮೇಕಪ್ ಇಲ್ಲದೆ ಅವರು ಹೊರಗೆ ಕಾಲಿಡಲಾರರು. ಆದರೂ ಈ ಸಾಮಾನ್ಯ ಸುಳ್ಳನ್ನು ಆಕೆ ಹೇಳಿಯೇ ಹೇಳುತ್ತಾಳೆ.

ಮಧ್ಯಪಾನವೇ? ನಾನು ಕಚೇರಿಯಲ್ಲಿದ್ದೇನೆ
ಮದ್ಯ ಸೇವಿಸುತ್ತಿರುವಾಗ ಸಿಕ್ಕಿ ಬಿದ್ದ ಜೋಡಿಗಳು ಹೇಳುವ ಸಾಮಾನ್ಯ ಸುಳ್ಳು ಇದಾಗಿದೆ.



Click it and Unblock the Notifications