Latest Updates
-
ದೆಹಲಿಯಲ್ಲಿ ಇಂದು ಮಳೆ ಎಚ್ಚರಿಕೆ: ನಿಮ್ಮ ಡಿನ್ನರ್ ಪ್ಲಾನ್ ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ ಭರ್ಜರಿ ಮಳೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ಈ 5 ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಪತ್ರಿಕೆಯಲ್ಲಿ ಆಹಾರ ಸುತ್ತಿ ತಿನ್ನುತ್ತಿದ್ದೀರಾ? ಇದು ನಿಮ್ಮ ಆರೋಗ್ಯಕ್ಕೆ 'ನಿಧಾನಗತಿಯ ವಿಷ' ಎಚ್ಚರ! -
ಬೆಂಗಳೂರಿನಲ್ಲಿ ಮತ್ತೆ ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ಸೇರಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಬಿಸಿಗಾಳಿ ಅಥವಾ ಭಾರಿ ಮಳೆ: ಮನೆಯಲ್ಲೇ ಫಿಟ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಜೂನ್ 11-12ರಂದು ಭಾರಿ ಮಳೆ: ಮದುವೆ ಸಮಾರಂಭಗಳಿಗೆ ಆತಂಕ, ಈ ಮುನ್ನೆಚ್ಚರಿಕೆಗಳನ್ನು ಮರೆಯದಿರಿ! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸಗಳನ್ನು ಮಾಡಿ! -
ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಕ್ರಮ ಪಾಲಿಸಿ: ರೋಗಗಳಿಂದ ದೂರವಿರಲು ಸರಳ ಟಿಪ್ಸ್ -
ದೆಹಲಿ ಮೆಟ್ರೋದಲ್ಲಿ ಬಟ್ಟೆಯ ವಿಚಾರಕ್ಕೆ ಕಿರುಕುಳ: ವೈರಲ್ ವಿಡಿಯೋದಿಂದ ಶುರುವಾಯ್ತು ಭಾರೀ ವಿವಾದ! -
ಸುಡುವ ಬಿಸಿಲಿನಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಮರೆಯದಿರಿ!
ಈ ಅಭ್ಯಾಸಗಳು ವೀರ್ಯಾಣು ಸಂಖ್ಯೆ ಕಮ್ಮಿ ಮಾಡುವುದು!
ಹೆಚ್ಚಿನ ಪುರುಷರಲ್ಲಿ ನಪುಂಸಕತ್ವ, ನಿಷ್ಕ್ರಿಯತೆ , ವೀರ್ಯಾಣುಗಳಲ್ಲಿ ಅಲರ್ಜಿ, ಲೈಂಗಿಕ ನಿಶ್ಯಕ್ತಿ ಹೆಚ್ಚಾಗಿ ಕಂಡು ಬರುತ್ತಿದೆ. ಈ ರೀತಿಯೆಲ್ಲಾ ಉಂಟಾಗಲು ಪ್ರಮುಖ ಕಾರಣ ಜೀವನ ಶೈಲಿ. ವೀರ್ಯಾಣುಗಳ ಸಂಖ್ಯೆ ಕಮ್ಮಿಯಿದ್ದರೆ ಮಕ್ಕಳಾಗುವುದಿಲ್ಲ ಮಾತ್ರವಲ್ಲ ದಾಂಪತ್ಯದಲ್ಲಿ ಕೂಡ ವೈಮನಸ್ಸು ಉಂಟಾಗುವುದು.
ಸಾಕಷ್ಟು ಬಾರಿ ನಮ್ಮ ನಿರ್ಲಕ್ಷ್ಯ ಮನೋಪ್ರವೃತ್ತಿಯೇ ಈ ರೀತಿಯ ಸಮಸ್ಯೆ ಬರಲು ಪ್ರಮುಖ ಕಾರಣ. ಉದಾಹರಣೆಗೆ ಪುರುಷರು ಲ್ಯಾಪ್ ಟಾಪ್ ಅನ್ನು ತೊಡೆ ಮೇಲೆ ಇಟ್ಟು ಕೆಲಸ ಮಾಡಬಾರದು, ಆದರೂ ಅದರ ಬಗ್ಗೆ ನಿರ್ಲಕ್ಷ್ಯ ಮಾಡಿ, ಕೊನೆಗೆ ವೀರ್ಯಾಣುಗಳ ಸಂಖ್ಯೆ ಕಮ್ಮಿಯಾದಾಗ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಆಹಾರಕ್ರಮ, ಅಭ್ಯಾಸಗಳು, ಜೀವನ ಶೈಲಿ ಇವುಗಳು ಚೆನ್ನಾಗಿದ್ದರೆ ವೀರ್ಯಾಣುಗಳ ಸಂಖ್ಯೆ ವೃದ್ಧಿಸುವುದು, ಇಲ್ಲದಿದ್ದರೆ ಕುಗ್ಗಿಸುವುದು. ಅದರಲ್ಲಂತೂ ಈ ಕೆಳಗಿನ ಅಭ್ಯಾಸಗಳು ವೀರ್ಯಾಣುಗಳ ಸಂಖ್ಯೆಯನ್ನು ಕಮ್ಮಿ ಮಾಡುವುದು:

ಬಿಸಿ ನೀರಿನಲ್ಲಿ ಸ್ನಾನ ಮಾಡುವುದು
ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ದೇಹಕ್ಕೆ ಹಿತಾನುಭವಾದರೂ ಈ ರೀತಿ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಮ್ಮಿ ಮಾಡುವುದು.

ಬಿಗಿಯಾದ ಒಳ ಉಡುಪು
ತುಂಬಾ ಬಿಗಿಯಾದ ಒಳ ಉಡುಪುಗಳು ಕೂಡ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಮ್ಮಿ ಮಾಡುವುದು. ಆದ್ದರಿಂದ ಬಿಗಿಯಾದ ಒಳ ಉಡುಪು ಧರಿಸಬೇಡಿ.

ಮೊಬೈಲ್ ಫೋನ್
ಮೊಬೈಲ್ ಫೋನ್ ಗಳು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಮ್ಮಿ ಮಾಡುವಂತೆ ಮಾಡುವುದು. ಮೊಬೈಲ್ ಫೋನ್ ಅನ್ನು ಜೇಬಿನಲ್ಲಿ ಇಡದಿರುವುದು ಒಳ್ಳೆಯದು.

ಮಾನಸಿಕ ಒತ್ತಡ
ಮಾನಸಿಕ ಒತ್ತಡ ಕೂಡ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಮ್ಮಿ ಮಾಡುವುದು. ಮಾನಸಿಕ ಒತ್ತಡ ಒಂದಲ್ಲಾ ಒಂದು ಕಾರಣದಿಂದ ಉಂಟಾಗುವುದು, ಆದರೆ ಅವುಗಳನ್ನು ದೂರ ಮಾಡುವ ಮಾರ್ಗವನ್ನು ನಾವೇ ಕಂಡು ಹಿಡಿಯಬೇಕಷ್ಟೇ.

ಲೈಂಗಿಕ ವಿಷಯದಲ್ಲಿ ನಿರಾಸಕ್ತಿ
ಲೈಂಗಿಕ ಕ್ರಿಯೆ ಮಾನಸಿಕ ಒತ್ತಡವನ್ನು ಹೊರದೂಡುವುದು, ಮತ್ತು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಕಡಿಮೆ ಲೈಂಗಿಕ ಕ್ರಿಯೆ ನಡೆಸುವವರಿಗೆ ವೀರ್ಯಾಣುಗಳ ಸಂಖ್ಯೆ ಕಮ್ಮಿಯಾಗುವುದು.

ಮದ್ಯಪಾನ
ಮದ್ಯಪಾನ ಕೂಡ ಪುರುಷರಲ್ಲಿ ಟೆಸ್ಟೋಸ್ಟಿರೋನೆ ಕಮ್ಮಿ ಮಾಡಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು.

ಧೂಮಪಾನ
ಧೂಮಪಾನ ಕೂಡ ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡಿ, ಮಕ್ಕಳಾಗದೇ ಇರಬಹುದು. ಧೂಮಪಾನ ದೈಹಿಕ ಆರೋಗ್ಯ ಕೂಡ ಹಾಳು ಮಾಡುವುದು.

ಸೋಯಾ ಉತ್ಪನ್ನಗಳು
ಸೋಯಾ ಉತ್ಪನ್ನಗಳು ಮಹಿಳೆಯರಿಗೆ ಒಳ್ಳೆಯದು, ಆದರೆ ಪುರುಷರಿಗೆ ಅಷ್ಟು ಒಳ್ಳೆಯದಲ್ಲ, ಇದು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಮ್ಮಿ ಮಾಡುವುದು.

ಟಿವಿ ನೋಡಿದರೆ
ಮಿತಿ ಮೀರಿ ಟಿವಿ ನೋಡುವುದು, ವ್ಯಾಯಾಮ ಮಾಡದಿರುವುದು ಮಾಡುವವರಿಗೆ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಎಂದು ಸಂಶೋಧನೆಯಿಂದ ದೃಢ ಪಟ್ಟಿದೆ.

ಲ್ಯಾಫ್ ಟಾಪ್
ಲ್ಯಾಪ್ ಟಾಪ್ ಅನ್ನು ತೊಡೆಯ ಮೇಲೆ ಇಟ್ಟು ಕೆಲಸ ಮಾಡಬೇಡಿ. ಒಂದು ಟೇಬಲ್ ಮೇಲೆ ಮಾಡಿ, ಇಲ್ಲದಿದ್ದರೆ ವೀರ್ಯಾಣುಗಳ ಸಂಖ್ಯೆ ಕಮ್ಮಿಯಾಗುವುದು.



Click it and Unblock the Notifications