For Quick Alerts
ALLOW NOTIFICATIONS  
For Daily Alerts

ರೆಸಿಪಿ: ಸ್ವೀಟ್‌ ಕಾರ್ನ್‌ ಹೀಗೆ ಮಾಡಿದರೆ ಸ್ವೀಟ್‌ ಸೂಪರ್ ಆಗಿರುತ್ತೆ

Posted By:
|

ಸ್ವೀಟ್‌ಕಾರ್ನ್‌ ಚಾಟ್ಸ್‌ ಹಲವು ರುಚಿಯಲ್ಲಿ ಮಾಡಬಹುದು, ನಾವಿಲ್ಲಿ ಸ್ವೀಟ್‌ಕಾರ್ನ್‌ ಚಾಟ್ಸ್‌ನ ಎರಡು ರೆಸಿಪಿ ನೀಡಿದ್ದೇವೆ, ಟೇಸ್ಟ್ ಸೂಪರ್ ಎಂಜಾಯ್ ಮಾಡಿ...

ಸ್ವೀಟ್‌ ಕಾರ್ನ್‌ ಆರೋಗ್ಯಕರವಾದ ಸ್ನ್ಯಾಕ್ಸ್, ಇದನ್ನು ರುಚಿ ರುಚಿಯಾಗಿ ಮಾಡಿ ಸವಿಯಬಹುದು, ನಾವು ಸ್ವೀಟ್‌ಕಾರ್ನ್‌ ಚಾಟ್ಸ್‌ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ, :

Here is sweet corn Chaats recipe

ಬೇಕಾಗುವ ಸಾಮಗ್ರಿ

2 ಸ್ವೀಟ್‌ಕಾರ್ನ್‌
1 ಚಿಕ್ಕ ಈರುಳ್ಳಿ
ಸ್ವಲ್ಪ ಕೊತ್ತಂಬರಿ ಸೊಪ್ಪು
1 ಚಮಚ ನಿಂಬೆರಸ
ಕೋಷರ್‌ ಉಪ್ಪು
ಸ್ವಲ್ಪ ಸೇವ್
ಟೊಮೆಟೊ
ಹಸಿಮೆಣಸು 1-2

ಕಾರ್ನ್‌ ಚಾಟ್‌ ಮಾಡುವ ವಿಧಾನ

  • ಮೊದಲಿಗೆ ಸ್ವೀಟ್‌ ಕಾರ್ನ್‌ಗೆ ಸ್ವಲ್ಪ ಕಲ್ಲುಪ್ಪು ಹಾಕಿ ಬೇಯಿಸಿ. (ಬೇಯಿಸುವಾಗ ಸುಲಿದು ನಂತರ ಮಾಡಿ)
  • ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ
  • ಹಸಿಮೆಣಸು ಚಿಕ್ಕದಾಗಿ ಕತ್ತರಿಸಿ, ಟೊಮೆಟೊವನ್ನು ಕತ್ತರಿಸಿ ಹಾಕಿ
  • ಒಂದು ಬೌಲ್‌ಗೆ ಸ್ವೀಟ್‌ ಕಾರ್ನ್‌ ಹಾಕಿ, ನಂತರ ಈರುಳ್ಳಿ, ಹಸಿಮೆಣಸು, ಟೊಮೆಟೊ ಹಾಕಿ, ನಂತರ ಕೋಷರ್ ಉಪ್ಪಿ ತಿರುಗಿಸಿ
  • ನಂತರ ಚೆನ್ನಾಗಿ ಮಿಕ್ಸ್ ಮಾಡಿ, ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ
  • ನಂತರ ಕೊತ್ತಂಬರಿ ಸೊಪ್ಪು ಹಾಕಿ, ಮೇಲೆ ಸೇವ್ ಉದುರಿಸಿ.
  • ರೆಸಿಪಿ 2
  • ಬೇಕಾಗುವ ಸಾಮಗ್ರಿ
    3 ಕಪ್ ಸ್ವೀಟ್‌ ಕಾರ್ನ್‌
    ಅರ್ಧ ಚಮಚ ನಿಂಬೆರಸ
    1 ಚಮಚ ಮಸಾಲೆ ಪುಡಿ
    1/2 ಚಮಚ ಖಾರದ ಪುಡಿ
    2 ಚಮಚ ಬೆಣ್ಣೆ
    2 ಚಮಚ ಕಾಳುಮೆಣಸಿನ ಪುಡಿ
    ರುಚಿಗೆ ತಕ್ಕ ಉಪ್ಪು
    ಅಲಂಕಾರಕ್ಕೆ
    ಸ್ವಲ್ಪ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:

ಸ್ವೀಟ್‌ ಕಾರ್ನ್‌ ಬೇಯಿಸಿ
ಅಸು ಸ್ವಲ್ಪ ಬಿಸಿ ಇರುವಾಗ ಅರ್ಧ ಚಮಚ ಬೆಣ್ಣೆ ಹಾಕಿ
, ಬೆಣ್ಣೆ ಕರಗಿದಾಗ ಮೆಣಸಿನ ಪುಡಿ, ಚಾಟ್ಸ್ ಪುಡಿ, ಗರಂ ಮಸಾಲ, ಪೆಪ್ಪರ್ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಇತರ ಟಿಪ್ಸ್
ಇದಕ್ಕೆ ಬೇಕಾದರೆ ಚಿಕ್ಕದಾಗಿ ಕತ್ತರಿಸಿದ ಸ್ಪ್ರಿಂಗ್ ಆನಿಯನ್ ಸೇರಿಸಬಹುದು
* ಸೌತೆಕಾಯಿ, ಲೆಟ್ಯೂಸೆ ಹೀಗೆ ನಿಮಗೆ ಬೇಕಾದ ಆಹಾರ ವಸ್ತುಗಳನ್ನು ಸೇರಿಸಿ ಸವಿಯಬಹುದು.

ಸ್ವೀಟ್‌ ಕಾರ್ನ್‌ ಪ್ರಯೋಜನಗಳು

ಮಧುಮೇಹಿಗಳಿಗೆ ತುಂಬಾ ಒಳ್ಳೆಯದು

ಈ ಸ್ನ್ಯಾಕ್ಸ್ ತುಂಬಾ ಒಳ್ಳೆಯದು, ಅದರಲ್ಲೂ ಮಧುಮೇಹಿಗಳೂ ಎಲ್ಲಾ ಬಗೆಯ ಸ್ನ್ಯಾಕ್ಸ್ ಸವಿಯಲು ಸಾಧ್ಯವಿರಲ್ಲ, ಆದರೆ ಇದನ್ನು ಧೈರ್ಯವಾಗಿ ಸವಿಯಬಹುದು. ಅಲ್ಲದೆ ಸ್ವೀಟ್‌ಕಾರ್ನ್‌ನಲ್ಲಿ ನಾರಿನಂಶ ಅಧಿಕವಿರುವುದರಿಂದ ಸಕ್ಕರೆಯಂಶ ನಿಯಂತ್ರಣದಲ್ಲಿಡಲೂ ಸಹಕಾರಿ. ಕೆಲವರು ಸ್ವೀಟ್‌ಕಾರ್ನ್‌ ಅಂದರೆ ಹೆಸರು ಕೇಳಿ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು ಎಂದು ಭಾವಿಸುತ್ತಾರೆ, ಆದರೆ ಅದು ತಪ್ಪು ಕಲ್ಪನೆ, ಮಧುಮೇಹಿಗಳು ಯಾವುದೇ ಹಿಂಜರಿಕೆಯಿಲ್ಲದೆ ಇದನ್ನು ಸವಿಯಬಹುದು.

ಜೀರ್ಣಕ್ರಿಯೆಗೆ ಒಳ್ಳೆಯದು

ಸ್ವೀಟ್‌ಕಾರ್ನ್‌ನಲ್ಲಿ ನಾರಿನಂಶ ಉತ್ತಮವಾಗಿರುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು. ಮಲಬದ್ಧತೆ ಸಮಸ್ಯೆ ಇರುವವರಿಗೆ ಈ ಸ್ನ್ಯಾಕ್ಸ್ ತುಂಬಾ ಒಳ್ಳೆಯದು. ಗರ್ಭಾವಸ್ಥೆಯಲ್ಲಿ ಹಾಗೂ ಥೈರಾಯ್ಡ್ ಸಮಸ್ಯೆ ಇರುವವರಿಗೆ ಮಲಬದ್ಧತೆ ಸಮಸ್ಯೆ ಕಾಡುವುದು, ಅಂಥವರು ಇದನ್ನು ತಿಂದರೆ ಮಲಬದ್ಧತೆ ಸಮಸ್ಯೆ ತಡೆಗಟ್ಟಬಹುದು.

ತೂಕ ನಿಯಂತ್ರಣಕ್ಕೆ ಸಹಕಾರಿ

ಈ ಚಾಟ್‌ ನೀವು ಹೊಟ್ಟೆ ತುಂಬಾ ತಿಂದರೂ ತೂಕ ಹೆಚ್ಚಾಗುವುದಿಲ್ಲ, ಆದ್ದರಿಂದ ಈ ಚಾಟ್ಸ್‌ ತೂಕ ನಿಯಂತ್ರಣಕ್ಕೆ ಸಹಕಾರಿ. ನೀವು ತೂಕ ನಿಯಂತ್ರಣದ ನಿಯಂತ್ರಣದಲ್ಲಿದ್ದರೆ ಈ ಚಾಟ್ಸ್ ಮಾಡಿ ಸವಿಯಬಹುದು. ಇದರಲ್ಲಿರುವ ಪ್ರತಿಯೊಂದು ಅಂಶವೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

ತ್ವಚೆಗೆ ತುಂಬಾ ಒಳ್ಳೆಯದು

ಸ್ವೀಟ್‌ಕಾರ್ನ್‌ ತ್ವಚೆಗೆ ತುಂಬಾ ಒಳ್ಳೆಯದು, ಆದ್ದರಿಂದ ಪ್ರತಿದಿನ ಸ್ವಲ್ಪ ಸ್ವೀಟ್‌ ಕಾರ್ನ್‌ ತಿನ್ನುವುದರಿಂದ ನಿಮ್ಮ ಸೌಂದರ್ಯದ ದೃಷ್ಟಿಯಿಂದಲೂ ಒಳ್ಳೆಯದು.

ಸ್ವೀಟ್‌ಕಾರ್ನ್‌ ಅಡ್ಡಪರಿಣಾಮವಿದೆಯೇ?

ಸಾಮಾನ್ಯವಾಗಿ ಸ್ವೀಟ್‌ ಕಾರ್ನ್‌ನಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ, ನೀವು ಧೈರ್ಯವಾಗಿ ತಿನ್ನಬಹುದು, ಅಲ್ಲದೆ ಇದರ ಸೇವನೆಯಿಂದ ನೀವು ತುಂಬಾನೇ ಪ್ರಯೋಜನ ಪಡೆಯಬಹುದು.

[ of 5 - Users]
X
Desktop Bottom Promotion