For Quick Alerts
ALLOW NOTIFICATIONS  
For Daily Alerts

ಕೆಮ್ಮಿನ ಔಷಧಿಗೂ-ಗರ್ಭ ಧರಿಸುವುದಕ್ಕೂ ಎಲ್ಲಿಯ ಸಂಬಂಧ?

By Arshad
|

ಕೆಮ್ಮಿನ ಔಷಧ ಅಥವಾ ಕಫ್ ಸಿರಪ್ ಸೇವನೆಯಿಂದ ಗರ್ಭ ಧರಿಸುವ ಸಾಧ್ಯತೆ ಹೆಚ್ಚುತ್ತದೆ ಎಂಬ ವಿಷಯ ನಮಗೆ ವಿಚಿತ್ರವೆಂದು ಅನ್ನಿಸಿದರೂ ಕೆಲವು ವ್ಯಕ್ತಿಗಳು ಈ ವಿಧಾನ ಸರಿ ಎಂದು ನಂಬುತ್ತಿದ್ದಾರೆ. ಆದರೆ ತಾಳಿ, ಈ ವಿಷಯವನ್ನು ಪುರಸ್ಕರಿಸಲು ಕೆಲವು ವೈಜ್ಞಾನ ಪುರಾವೆಗಳಿಲ್ಲ. ಆದರೂ ಈ ವಿಧಾನವನ್ನು ಅನುಸರಿಸಿ ಯಶಸ್ವಿಯದ ಕೆಲವು ವ್ಯಕ್ತಿಗಳು ಮಾತ್ರ ಈ ವಿಧಾನ ಸರಿ ಎಂದೇ ವಾದಿಸುತ್ತಿದ್ದಾರೆ.

ಅಷ್ಟಕ್ಕೂ ಈ ವಿಧಾನ ಎಲ್ಲರಲ್ಲಿಯೂ ಸರಿಸಮನಾಗಿ ಕೆಲಸ ಮಾಡದು. ಪತಿ ಪತ್ನಿಯರಲ್ಲಿ ಎಲ್ಲವೂ ಸರಿ ಇದ್ದು ವೀರ್ಯಾಣುಗಳು ಅಂಡಾಣುಗಳೊಂದಿಗೆ ಫಲಿತಗೊಳ್ಳಲು ಯಾವುದಾದರೂ ಅಡ್ಡಿ ಇರುವ ದಂಪತಿಗಳಿಗೆ ಈ ವಿಧಾನ ಸೂಕ್ತ ಎಂದು ಕಂಡುಕೊಳ್ಳಲಾಗಿದೆ, ಬನ್ನಿ, ಈ ವಿಧಾನದ ಸಾಧಕ ಬಾಧಕಗಳ ಬಗ್ಗೆ ಚರ್ಚಿಸೋಣ.

ಮಕ್ಕಳಾಗದಿರಲು ಪ್ರಮುಖ ಕಾರಣಗಳು

ಎಚ್ಚರಿಕೆ: ನಿಮ್ಮ ಕುಟುಂಬ ವೈದ್ಯರ ಅನುಮತಿ ಮತ್ತು ಸಲಹೆ ಇಲ್ಲದೇ ಈ ವಿಧಾನವನ್ನು ಪ್ರಯತ್ನಿಸಬೇಡಿ.......

#1

#1

ಕಫ್ ಸಿರಪ್ ನಲ್ಲಿ ಏನಿರುತ್ತದೆ? ಕೆಲವು ಸಿರಪ್ ಗಳಲ್ಲಿ ಪ್ರಮುಖವಾಗಿ guaifenesin ಎಂಬ ಔಷಧೀಯ ಘಟಕ ಇರುತ್ತದೆ. ಶ್ವಾಸಕೋಶ ಮತ್ತು ಶ್ವಾಸನಾಳಗಳ ಒಳಭಾಗದಲ್ಲಿ ಅಂಟಿಕೊಂಡಿರುವ ಸಿಂಬಳ ಮತ್ತು ಕಫವನ್ನು ಸಡಿಲಗೊಳಿಸಿ ನಿವಾರಿಸಲು ಇದು ನೆರವಾಗುತ್ತದೆ. ಇದೇ ಗುಣ ಮಹಿಳೆಯರ ಗರ್ಭಾಶಯ ಹಾಗೂ ಅಂಡನಾಳಗಳ ಒಳಭಾಗದಲ್ಲಿರುವ ಕಫ ಅಥವಾ ಅಂಟುವಂತಿರುವ ದ್ರವವನ್ನು ನಿವಾರಿಸಲೂ ನೆರವಾಗುತ್ತದೆ.

#2

#2

ಯಾವಾಗ ಈ ಭಾಗದಲ್ಲಿನ ಕಫ ಸಡಿಲವಾಯಿತೋ, ಆಗ ವೀರ್ಯಾಣುಗಳು ಈ ಭಾಗಕ್ಕೆ ಅಂಟಿಕೊಳ್ಳದೇ ನೇರವಾಗಿ ಅಂಡಾಶವನ್ನು ಸರಾಗವಾಗಿ ಪ್ರವೇಶಿಸುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಅಂದರೆ ಇದಕ್ಕೂ ಮುಂಚೆ ಈ ಭಾಗದಲ್ಲಿದ್ದ ಕಫ ವೀರ್‍ಯಾಣುಗಳನ್ನು ತನ್ನಲ್ಲಿ ಅಂಟಿಸಿಕೊಂಡು ಮುಂದೆ ಹೋಗಲು ಬಿಡದ ಕಾರಣ ಫಲವಂತಿಕೆ ಕಾಣುತ್ತಿರಲಿಲ್ಲ. ಈಗ ಈ ಕಫ ಸಡಿಲವಾಗಿರುವ ಕಾರಣ ಹೆಚ್ಚಿನ ಸಂಖ್ಯೆಯ ವೀರ್‍ಯಾಣುಗಳು ಮುಂದೆ ಸಾಗುತ್ತವೆ.

#3

#3

ಇನ್ನೂ ಕೆಲವು ಮೂಲಗಳ ಪ್ರಕಾರ ಕಫ್ ಸಿರಪ್ ಸೇವನೆಯಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚುತ್ತದೆ ಹಾಗೂ ಹೆಚ್ಚಿನ ಸಂಖ್ಯೆ ವೀರ್ಯಾಣುಗಳು ಜೀವಂತವಾಗಿರುತ್ತವೆ. ಆದರೆ ಈ ವಾದಕ್ಕೆ ಇದುವರೆಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಸಿಕ್ಕಿಲ್ಲ.

ಪುರುಷರ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಒಂದಿಷ್ಟು ಸಲಹೆಗಳು

#4

#4

ಈ ಸಿರಪ್ ಅನ್ನು ಯಾವಾಗ ಸೇವಿಸಬೇಕು? ಅನುಭವಸ್ಥರ ಪ್ರಕಾರ ಯಾವ ದಿನಗಳಲ್ಲಿ ಮಹಿಳೆಯ ಅಂಡಾಶಯ ಬಿಡುಗಡೆಗೊಂಡು ಫಲಕ್ಕಾಗಿ ಕಾಯುತ್ತಿರುತ್ತದೆಯೋ ಆ ದಿನಗಳಲ್ಲಿ ಇದನ್ನು ಸೇವಿಸಬೇಕು. ಪುರುಷರೂ ಇದೇ ಅವಧಿಯಲ್ಲಿ ಕಫ್ ಸಿರಪ್ ಸೇವಿಸುವುದರಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚುತ್ತದೆ ಹಾಗೂ ಫಲ ಪಡೆಯುವ ಸಾಧ್ಯತೆ ಹೆಚ್ಚುತ್ತದೆ.

ಮಹಿಳೆಯರ ಬಂಜೆತನ ಸಮಸ್ಯೆಗೆ ಕೆಲವೊಂದು ಮನೆ ಔಷಧಿ!

#5

#5

ಇದಕ್ಕಾಗಿ ಯಾವುದೇ ಸಿರಪ್ ಸೇವಿಸಬಹುದು? ಇಲ್ಲ. ಯಾವ ಸಿರಪ್ ನಲ್ಲಿ guaifenesin ಎಂಬ ಅಂಶವಿದೆಯೋ ಆ ಸಿರಪ್ ಗೆ ಮಾತ್ರ ಈ ಕ್ಷಮತೆ ಇರುವ ಕಾರಣ ಬೇರಾವುದೇ ಸಿರಪ್ ಸೂಕ್ತವಲ್ಲ. ಈ ಸಿರಪ್ ಗಳು ಕಫವನ್ನು ಒಣಗಿಸಿ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತವೆ.

ಎಚ್ಚರಿಕೆ

ಎಚ್ಚರಿಕೆ

ನಿಮ್ಮ ಕುಟುಂಬ ವೈದ್ಯರು ಅಥವಾ ಸ್ತ್ರೀರೋಗ ತಜ್ಞರ ಸಲಹೆ ಪಡೆಯದೇ ಈ ವಿಧಾನವನ್ನು ಅನುಸರಿಸದಿರಿ. ಏಕೆಂದರೆ ಯಾವುದೇ ಕಫ್ ಸಿರಪ್ ನಲ್ಲಿ ತಮ್ಮದೇ ಆದ ಅಡ್ಡಪರಿಣಾಮಗಳಿವೆ.

English summary

Can Cough Syrup Help You Get Pregnant?

Though it sounds very strange, there are some people who use cough syrup to increase the chances of getting pregnant! But wait! There is not enough scientific evidence to prove this point. But still, some people who used it claim that it worked for them! It doesn't work in all the cases but it may work if there are issues with the sperm cell reaching the egg cell. How does it work? Let us discuss that...
X
Desktop Bottom Promotion