For Quick Alerts
ALLOW NOTIFICATIONS  
For Daily Alerts

ಬೆಳ್ಳುಳ್ಳಿ, ಮಕ್ಕಳ ಆರೋಗ್ಯದ ಪಾಲಿಗೆ ಸಂಜೀವಿನಿ

By Deepu
|

ವರ್ಷಾಂತರಗಳಿಂದ ಬೆಳ್ಳುಳ್ಳಿ ನಮ್ಮ ಅಡುಗೆಗಳಲ್ಲಿ ಪ್ರಮುಖ ಸಾಂಬಾರ ಪದಾರ್ಥವಾಗಿ ಉಪಯೋಗಿಸಲ್ಪಡುತ್ತಿದೆ. ಅಜ್ಜಿ ತಲೆ ಮೇಲೆ ಗುದ್ದಿದರೆ ನೂರು ಮೊಮ್ಮಕ್ಕಳು ಎಂಬ ಒಗ್ಗಟ್ಟಿಗೆ ಉತ್ತರ ನೀಡುವ ಈ ಪುಟ್ಟ ಬಿಳಿಯ ಎಸಳಿನಲ್ಲಿ ಆರೋಗ್ಯಕರ ಅಂಶಗಳ ಭಂಡಾರವೇ ಇದೆ. ಸಾವಿರಾರು ವರ್ಷಗಳಿಂದಲೂ ಭಾರತೀಯರು ಈ ಬೆಳ್ಳುಳ್ಳಿಯನ್ನು ತಮ್ಮ ಆಹಾರದ ಒಂದು ಅಂಗವಾಗಿ ಉಪಯೋಗಿಸುತ್ತಾ ಬಂದಿದ್ದಾರೆ. ಆದರೆ

ಕೆಲವರು ಮಾತ್ರ ಬೆಳ್ಳುಳ್ಳಿಗಳನ್ನು ನಾನಾ ಕಾರಣದಿಂದ ದೂರವಿಡುತ್ತಾರೆ. ಆದರೆ ನಾವು ಇಂದು ಹೇಳಲು ಹೋಗುತ್ತಿರುವುದು ಬೆಳ್ಳುಳ್ಳಿಯಿಂದ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳ ಕುರಿತು. ಅದರಲ್ಲೂ ವಿಶೇಷವಾಗಿ ಬೆಳ್ಳುಳ್ಳಿಗಳಿಂದ ಎಳೆ ಮಕ್ಕಳಿಗೆ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಬೆಳ್ಳುಳ್ಳಿಗಳನ್ನು ಮಕ್ಕಳಿಗೆ ತಿನ್ನಿಸುವುದರಿಂದ ಮಗುವಿನ ದೇಹದಲ್ಲಿರುವ ಇನ್‌ಫೆಕ್ಷನ್‌ಗಳನ್ನು ಹೋಗಲಾಡಿಸಬಹುದು. ಏಕೆಂದರೆ ಎಳೆ ಮಕ್ಕಳು ಆಗಾಗ ಶೀತ ಮುಂತಾದ ರೋಗಗಳಿಂದ ಬಳಲುತ್ತಾ ಇರುತ್ತಾರೆ. ಈ ನಿಟ್ಟಿನಲ್ಲಿ ನಿಮಗೆ ಬೆಳ್ಳುಳ್ಳಿಯು ಉಪಯೋಗಕ್ಕೆ ಬರುತ್ತದೆ ಮತ್ತು ಮಗುವಿನ ಶೀತವನ್ನು ನಿವಾರಿಸುತ್ತದೆ. ಬೆಳ್ಳುಳ್ಳಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಬಿ ಮತ್ತು ವಿಟಮಿನ್ ಬಿ6 ಇರುವುದರ ಜೊತೆಗೆ, ಮ್ಯಾಂಗನೀಸ್, ಸೆಲೆನಿಯಂ, ಪೊಟಾಶಿಯಂ ಮತ್ತು ಕಬ್ಬಿಣಾಂಶ ಸಹ ಹೆಚ್ಚಾಗಿರುತ್ತದೆ. ಬೆಳ್ಳುಳ್ಳಿಯು ಮಗುವಿನ ಆರೋಗ್ಯವನ್ನು ವೃದ್ಧಿಸುತ್ತದೆ ಮತ್ತು ಆಹಾರವನ್ನು ಮತ್ತಷ್ಟು ರುಚಿಕರವನ್ನಾಗಿ ಮಾಡುತ್ತದೆ. ಅಲ್ಲದೆ ಮಕ್ಕಳಿಗೆ ಬೆಳ್ಳುಳ್ಳಿಯನ್ನು ನೀಡುವುದು ಒಳ್ಳೆಯದರ ಜೊತೆಗೆ ಸುರಕ್ಷಿತವು ಸಹ ಹೌದು ಎಂಬುದು ವಿಶೇಷ. ಶೀತ, ಕೆಮ್ಮು ದೂರವಿಡುವ ಬೆಳ್ಳುಳ್ಳಿ ರಸಂ

ಬೆಳ್ಳುಳ್ಳಿಯಲ್ಲಿ ಹಲವಾರು ಪೋಷಕಾಂಶಗಳು ಇದ್ದು, ಇವು ಎಲ್ಲಾ ವಯಸ್ಸಿನ ಜನರಿಗೆ ಅನುಕೂಲವನ್ನು ಉಂಟು ಮಾಡುತ್ತದೆ. ಇದನ್ನು ಮಗುವು ಆರು ತಿಂಗಳ ವಯಸ್ಸಿಗೆ ಬಂದಾಗ ಪರಿಚಯಿಸಬಹುದು. ಇದು ಮಗುವಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಹಾಲು ಕುಡಿಸುವ ತಾಯಿಗೂ ಸಹ ಬೆಳ್ಳುಳ್ಳಿಗಳನ್ನು ನೀಡುತ್ತಾರೆ. ಆ ಹಾಲಿನ ಮೂಲಕ ಸಹ ಬೆಳ್ಳುಳ್ಳಿಯ ಪೋಷಕಾಂಶಗಳು ಮಗುವಿಗೆ ತಲುಪಲಿ ಎಂಬ ಸದುದ್ದೇಶ ಇದರಲ್ಲಿರುತ್ತದೆ. ಹಾಗಾಗಿ ಇಂದು ಬೋಲ್ಡ್‌ಸ್ಕೈ ನಿಮಗಾಗಿ ಅಂದರೆ ನಿಮ್ಮ ಮಗುವಿಗಾಗಿ ಬೆಳ್ಳುಳ್ಳಿಯಿಂದ ದೊರೆಯುವ ಇನ್ನಿತರ ಪ್ರಯೋಜನಗಳ ಕುರಿತು ತಿಳಿಸಿಕೊಡಲು ಈ ಲೇಖನವನ್ನು ತಂದಿದೆ, ಬನ್ನಿ ಮುಂದೆ ಓದಿ...

ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಿಸುತ್ತದೆ

ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಿಸುತ್ತದೆ

ಮಗುವಿಗೆ ರೋಗ ನಿರೋಧಕ ಶಕ್ತಿಯು ಸಂಪೂರ್ಣವಾಗಿ ಬೆಳವಣಿಗೆಯನ್ನು ಹೊಂದಿರುವುದಿಲ್ಲ. ಆಗಾಗಿ ಮಗು ಆಗಾಗ ಶೀತ, ಜ್ವರ ಮತ್ತು ಫ್ಲೂ ನಿಂದ ನರಳುತ್ತದೆ. ಬೆಳ್ಳುಳ್ಳಿ ಸೂಪ್ ಮಗುವಿಗೆ ಬರುವ ಶೀತವನ್ನು ನಿವಾರಿಸುವುದರ ಜೊತೆಗೆ ಮಗುವಿನ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಹೊರ ಹಾಕುತ್ತದೆ.

ಹೊಟ್ಟೆ ನೋವನ್ನು ನಿವಾರಿಸುತ್ತದೆ

ಹೊಟ್ಟೆ ನೋವನ್ನು ನಿವಾರಿಸುತ್ತದೆ

ಬೆಳ್ಳುಳ್ಳಿಯು ಹೊಟ್ಟೆ ನೋವನ್ನು ನಿವಾರಿಸುವ ಅತ್ಯುತ್ತಮ ಮನೆ ಮದ್ದಾಗಿದೆ. ಇದು ಜಠರ ಸಂಬಂಧಿತ ಸಮಸ್ಯೆಗಳನ್ನು ಹತೋಟಿಯಲ್ಲಿಡುತ್ತದೆ. ಬೆಳ್ಳುಳ್ಳಿಯನ್ನು ಜೇನು ತುಪ್ಪದ ಜೊತೆಗೆ ಬೆರೆಸಿ ಮಗುವಿಗೆ ಸೇವಿಸಲು ನೀಡಿದರೆ, ಹೊಟ್ಟೆ ನೋವಿನ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಸಹ ನಿವಾರಿಸುತ್ತದೆ.

ಇನ್‌ಫೆಕ್ಷನ್‌ಗಳನ್ನು ನಿವಾರಿಸುತ್ತದೆ

ಇನ್‌ಫೆಕ್ಷನ್‌ಗಳನ್ನು ನಿವಾರಿಸುತ್ತದೆ

ಬೆಳ್ಳುಳ್ಳಿಗಳಲ್ಲಿರುವ ಸೂಕ್ಷ್ಮಾಣು ಜೀವಿ ನಿವಾರಕ ಅಂಶಗಳು ಬ್ಯಾಕ್ಟೀರಿಯಾಗಳನ್ನು ನಿವಾರಿಸಿ, ನಿಮ್ಮ ಮಗುವನ್ನು ಇನ್‌ಫೆಕ್ಷನ್‌ನಿಂದ ಮುಕ್ತಗೊಳಿಸುತ್ತವೆ. ಆಗ ಮಗು ಬ್ಯಾಕ್ಟೀರಿಯಾಗಳಿಂದ ಸಂಪೂರ್ಣವಾಗಿ ಗುಣಮುಖವಾಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಫೈಟೋಕೆಮಿಕಲ್ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣವನ್ನು ಹೊಂದಿದ್ದು, ಇದು ಸಣ್ಣ ಕರುಳು ಮತ್ತು ಕೋಲನ್ ಭಾಗದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.

 ಜಂತುಹುಳುಗಳನ್ನು ನಿವಾರಿಸುತ್ತದೆ

ಜಂತುಹುಳುಗಳನ್ನು ನಿವಾರಿಸುತ್ತದೆ

ಮಗುವಿನ ಹೊಟ್ಟೆಯಲ್ಲಿ ಜಂತು ಹುಳುಗಳು ಬೆಳೆಯುವ ಸಾಧ್ಯತೆ ಇರುತ್ತದೆ. ಇದು ಮಗು ಸೇವಿಸುವ ಆಹಾರವನ್ನು ಸೇವಿಸಿಕೊಂಡು, ಚೆನ್ನಾಗಿ ಬೆಳೆಯುತ್ತದೆ. ಬೆಳ್ಳುಳ್ಳಿಯು ಜಂತು ಹುಳುಗಳನ್ನು ಸಹ ನಿವಾರಿಸುವ ಸಾಮರ್ಥ್ಯವನ್ನು ಪಡೆದಿರುತ್ತದೆ. ಬೆಳ್ಳುಳ್ಳಿಯು ಮಗುವಿನ ಕರುಳಿನಲ್ಲಿರುವ ಜಂತು ಹುಳುಗಳನ್ನು ನಿವಾರಿಸುತ್ತದೆ.

ಮಾಯುವ ಗುಣಗಳನ್ನು ಹೆಚ್ಚಿಸುತ್ತದೆ

ಮಾಯುವ ಗುಣಗಳನ್ನು ಹೆಚ್ಚಿಸುತ್ತದೆ

ಬೆಳ್ಳುಳ್ಳಿಯು ಒಂದು ಉತ್ತಮವಾದ ಸೂಕ್ಷ್ಮಾಣು ಜೀವಿ ನಿರೋಧಕ ಗುಣಗಳನ್ನು ಹೊಂದಿರುತ್ತದೆ. ಆದ್ದರಿಂದ ಇದು ಗಾಯಗಳನ್ನು ಶೀಘ್ರವಾಗಿ ಮಾಯುವಂತೆ ಮಾಡುತ್ತದೆ. ಆದ್ದರಿಂದ ನಿಮ್ಮ ಮಗುವಿನ ಆಹಾರದಲ್ಲಿ ತಪ್ಪದೆ ಬೆಳ್ಳುಳ್ಳಿಯನ್ನು ಸೇರಿಸಲು ಮರೆಯಬೇಡಿ.

English summary

Health Benefits Of Garlic For Babies

Garlic is one of the foods that has to be included in a baby's diet. Garlic has numerous benefits for a baby. It helps to cure various respiratory disorders in babies. There are several benefits of including garlic to a baby's diet. Therefore, in this article, we at Boldsky will be listing out some of the benefits of including garlic in your baby's diet. Read on to know more about it.
Story first published: Wednesday, February 10, 2016, 10:18 [IST]
X
Desktop Bottom Promotion