Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಪ್ಲಾಸ್ಟಿಕ್ ಸರ್ಜರಿಯ ಕೆಟ್ಟ ಪರಿಣಾಮ ಎದುರಿಸಿದ ತಾರೆಗಳು
ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ಸಿನಿಮಾ ನಟಿಯರಿಗೆ ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಇವರನ್ನು ನೋಡಿ ಶ್ರೀಮಂತ ಮಹಿಳೆಯರು ತಾವೂ ಕೂಡ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ತಮ್ಮ ಚೆಲುವನ್ನು ದುಪ್ಪಟ್ಟು ಪಡಿಸಿಕೊಳ್ಳಬೇಕೆಂದು ಬಯಸುತ್ತಾರೆ. ಆದರೆ ಈ ರೀತಿಯ ಪ್ಲಾಸ್ಟಿಕ್ ಸರ್ಜರಿ ಅಂದವನ್ನು ಹೆಚ್ಚಿಸುವ ಬದಲು ಮುಖವನ್ನು ಮತ್ತಷ್ಟು ವಿಕಾರವಾಗಿಸಿದ ಉದಾಹರಣೆಗಳಿವೆ. ಲಕ್ಷಗಟ್ಟಲೆ ದುಡ್ಡು ಸುರಿದು ಮಾಡಿಸುವ ಸರ್ಜರಿ ಹೇಗೆ ನಮ್ಮನ್ನು ಮತ್ತಷ್ಟು ವಿಕಾರವಾಗಿಸುತ್ತದೆ ಅನ್ನುವುದಕ್ಕೆ ಈ ಕೆಳಗಿನ ತಾರಾಮಣಿಗಳೆ ಸಾಕ್ಷಿ.

1. ರಾಖಿ ಸಾವಂತ್: ಸದಾ ವಿವಾದಗಳಿಂದ ಸುದ್ಧಿಯಲ್ಲಿರುವ ಐಟಂ ಸಾಂಗ್ ರಾಣಿ ರಾಖಿ ಸಾವಂತ್ ತನ್ನ ಅಂದವನ್ನು ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಮೇಲೆ ಅವರನ್ನು ಗುರುತು ಹಿಡಿಯದಷ್ಟು ಭಿನ್ನವಾಗಿ ಕಾಣುತ್ತಿದ್ದರು. ಇವರನ್ನು ನೋಡಿದವರು ರಾಖಿ ಸಾವಂತ್ ಅವರ ಮೊದಲಿದ್ದ ಮುಖವನ್ನು ಸ್ವಲ್ಪವಾದರೂ ನೋಡಬಹುದಾಗಿತ್ತು ಎಂದು ಆಡಿಕೊಳ್ಳುತ್ತಾರೆ.
2. ಪಮೀಲಾ ಆಂಡ್ರೋಸನ್: ಪಡ್ಡೆ ಹುಡುಗರ ಕಣ್ಮಣೆಯಾಗಿರುವ ಪಮೀಲಾ ಆಂಡ್ರೋಸನ್ ಸ್ತನ ಸರ್ಜರಿ ಮಾಡಿಸಿರುವುದು ಎಲ್ಲರಿಗೆ ತಿಳಿದಿರುವ ವಿಷಯ. ಆದರೆ ಸ್ತನಗಳ ಗಾತ್ರ ದೊಡ್ಡದಾಗಿ ಬೆನ್ನಿಗೆ ಹೆಚ್ಚಿನ ಭಾರ ಬಿದ್ದು ಬೆನ್ನುನೋವು ಕಾಣಿಸಿಕೊಂಡಿರುವುದರಿಂದ ಸ್ತನದ ಗಾತ್ರ ಕಡಿಮೆ ಮಾಡಲು ಪುನಃ ಸರ್ಜರಿ ಮಾಡಿಸುವ ಪರಿಸ್ಥಿತಿ ಉಂಟಾಯಿತು.
3. ಕೊಹಿನಾ ಮಿತ್ರ: ಕೊಹಿನಾ ಮಿತ್ರಾ ಮುಖ ಪ್ಲಾಸ್ಟಿಕ್ ಸರ್ಜರಿ ಮಾಡಿಸುವ ಮೊದಲೇ ಆಕರ್ಷಕವಾಗಿತ್ತು. ಆದರೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ ನಂತರ ಇರುವ ಸೌಂದರ್ಯವೂ ಇಲ್ಲದಂತಾಗಿದೆ.
4. ಶಿಲ್ಪಾ ಶೆಟ್ಟಿ: ಶಿಲ್ಪಾ ಶೆಟ್ಟಿ ಆಕರ್ಷಕ ಮೂಗನ್ನು ಪಡೆಯಲು 90ರ ದಶಕದಲ್ಲಿ ಮಾಡಿಸಿಕೊಂಡಿದ್ದರು. ಆದರೆ ಅದು ಅವರ ಮೂಗನ್ನು ಮತ್ತಷ್ಟು ವಿಕಾರವಾಗಿಸಿತ್ತು. ವಿಕಾರಗೊಂಡ ಮೂಗಿಗೆ ಆಕರ್ಷಕ ರೂಪ ಕೊಡಲು ಮತ್ತೊಮ್ಮೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಬೇಕಾಯಿತು.
ಸಲಹೆ: ಅಪಘಾತದಿಂದ ಮುಖ ವಿಕಾರಗೊಂಡಿದ್ದರೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ಒಳ್ಳೆಯದು, ಆದರೆ ಇನ್ನೂ ಹೆಚ್ಚಿನ ಸೌಂದರ್ಯ ಬೇಕೆಂದು ಮಾಡಿಸಲು ಹೊರಟರೆ ಇದ್ದ ಸೌಂದರ್ಯ ಇಲ್ಲದಂತಾಗುವುದು. ಆದ್ದರಿಂದ ಸೌಂದರ್ಯ ಹೆಚ್ಚಿಸಲು ಈ ರೀತಿಯ ಮಾರ್ಗವನ್ನು ಅನುಸರಿಸದಿರುವುದು ಒಳ್ಳೆಯದು.



Click it and Unblock the Notifications