For Quick Alerts
ALLOW NOTIFICATIONS  
For Daily Alerts

ತಂತ್ರ ವಿದ್ಯೆ: ಅದೇನು ಮಾಯೆ, ಅದೇನು ಜಾದೂ!

By Arshad
|

ಅತ್ಯಂತ ಪ್ರಾಚೀನ ಸಂಪ್ರದಾಯ ಮತ್ತು ಚಿತ್ರ ವಿಚಿತ್ರ ಆಚರಣೆಗಳಿಂದಾಗಿ ಭಾರತ ಶತಮಾನಗಳಿಂದ ವಿದೇಶೀಯರ ಗಮನವನ್ನು ಸೆಳೆದಿದೆ. ಕುಂಭಮೇಳದ ಸಾಧುಗಳು, ಅಘೋರಿಗಳು, ಬಾಬಾಗಳು, ತಂತ್ರ ಮಂತ್ರ ಮಾಟ ಮಾಡುವವರು, ತಾಯತ ಕಟ್ಟುವವರು, ಒಂದೊಂದು ಕಾಯಿಲೆಗೂ ಒಂದೊಂದು ದೇವರನ್ನು ಗುರಿಯಾಗಿಸಿ ಆ ದೇವರಿಗೆ ವಿಶೇಷ ಪೂಜೆ ಸಲ್ಲಿಸುವವರು (ಉದಾಹರಣೆಗೆ ಪ್ಲೇಗ್ ಮಾರಿ) ಮೊದಲಾದವುಗಳನ್ನು ವಿದೇಶೀಯರಿಗೆ ಇಂದಿಗೂ ಒಂದು ರಹಸ್ಯವಾಗಿಯೇ ಉಳಿದಿದ್ದಾರೆ.

ಆದರೆ ಈ ಎಲ್ಲಾ ವಿದ್ಯೆಗಳು ಎಲ್ಲಾ ಊರುಗಳಲ್ಲಿ ಲಭ್ಯವಿಲ್ಲ. ಕೆಲವು ಊರುಗಳು ಅಥವಾ ಕೆಲವು ಸ್ಥಳಗಳು ಕೆಲವು ಪ್ರಕಾರದ ತಂತ್ರಗಳಿಗೆ ಪ್ರಸಿದ್ಧವಾಗಿದೆ. ಉದಾಹರಣೆಗೆ ಮಧ್ಯಪ್ರದೇಶದ ಪ್ರಾಚೀನ ನಗರವಾದ ಉಜ್ಜಯಿನಿ. ಇದು ತಂತ್ರ ಕ್ರಿಯೆ ಮತ್ತು ತಂತ್ರಜ್ಞಾನದ ಕೇಂದ್ರ ಎಂದು ಭಾವಿಸಲಾಗಿದೆ. ಉಜ್ಜಯಿನಿಯ ಹೆಸರು ಭಾರತೀಯ ಪುರಾಣಗಳಲ್ಲಿ ಬಹಳಷ್ಟು ಕಡೆ ಕೇಳಿಬರುತ್ತದೆ. ಉದಾಹರಣೆಗೆ ಜಗತ್ತಿನಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳಿವೆ.

The famous tantrik hot spots of India

Image courtesy - Dally bhaskar

ಉಜ್ಜಯನಿಯಲ್ಲಿರುವ ಮಹಾಕಾಳೇಶ್ವರ ದಕ್ಷಿಣಾಭಿಮುಖವಾಗಿದೆ. ಇದರ ಹೊರತಾಗಿ ಉಜ್ಜಯಿನಿಯಲ್ಲಿರುವ ಕಾಲಭೈರವ, ವಿಕ್ರಾಂತ ಭೈರವ, ಚೌಬೀಸ್ ಖಂಬಾ ಮಾತಾ, ಭೂಖಿ ಮಾತಾ, ಗಧಕಾಲಿಕಾ ಮಾತಾ ಮೊದಲಾದ ಸ್ಥಳಗಳು ತಂತ್ರವಿದ್ಯೆಗೆ ಪ್ರಸಿದ್ಧವಾಗಿವೆ. ಅಲ್ಲದೇ ಶಿರ್ಪಾ ನದಿತಟದಲ್ಲಿರುವ ಚಕ್ರತೀರ್ಥ ಎಂಬ ಮಸಣದಲ್ಲಿ ಹಲವಾರು ತಾಂತ್ರಿಕರು ದೇಶದ ಮೂಲೆಮೂಲೆಗಳಿಂದ ಇಲ್ಲಿ ಆಗಮಿಸಿ ತಾಂತ್ರಿಕವಿದ್ಯೆಯನ್ನು ಅಭ್ಯಸಿಸುತ್ತಾರೆ.

ಜಗತ್ತಿನಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಕೇವಲ ಮಹಾಕಾಳೇಶ್ವರ ಲಿಂಗ ಮಾತ್ರ ದಕ್ಷಿಣಾಭಿಮುಖವಾಗಿದೆ. ಉಜ್ಜಯಿನಿಯ ಜನರು ಮಾಹಾಕಾಳೇಶ್ವರನನ್ನು ತಾಂತ್ರಿಕ ವಿದ್ಯೆಯ ಮಹಾರಾಜನೆಂದು ಪರಿಗಣಿಸುತ್ತಾರೆ. ಉಜ್ಜಯಿನಿಯಲ್ಲಿ ಹರಸಿದ್ಧಿದೇವಿಯ ಶಕ್ತಿಪೀಠವೂ ಇದೆ. ಹರಸಿದ್ಧಿದೇವಿಯು ರಾಜ ವಿಕ್ರಮಾದಿತ್ಯನ ಕುಲದೇವತೆ ಎಂದೂ ನಂಬಲಾಗುತ್ತದೆ.


Image courtesy- Daily bhaskar

ಕುಲದೇವತೆಯ ಆಶೀರ್ವಾದದಿಂದಲೇ ವಿಕ್ರಮಾದಿತ್ಯನು ದೀರ್ಘಕಾಲ ರಾಜ್ಯವಾಳಲು ಸಾಧ್ಯವಾಯಿತು ಎಂದು ಹೇಳಲಾಗುತ್ತದೆ. ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ ಸತಿದೇವಿಯ ಮೊಣಕೈ ಬಿದ್ದ ಸ್ಥಳವೂ ಉಜ್ಜಯಿನಿಯೇ ಆಗಿದೆ. ಇದು ಕಾಲಭೈರವನ ಸ್ಥಳವಾಗಿದೆ.

ಈ ಸ್ಥಳದ ಮಹಾತ್ಮೆಯೆಂದರೆ ಬೇರೆ ಮೂರ್ತಿಗಳಿಗೆ ವ್ಯತಿರಿಕ್ತವಾಗಿ ಕೇವಲ ಈ ಮೂರ್ತಿ ಮಾತ್ರ ಮದ್ಯವನ್ನು ಸೇವಿಸುತ್ತದೆ. ತಂತ್ರಕ್ರಿಯೆಗಾಗಿ ವಿಕ್ರಾಂತ ಭೈರವನ ಈ ಸ್ಥಳ ಅತ್ಯಂತ ಪ್ರಶಸ್ತವೆಂದು ತಾಂತ್ರಿಕರು ನಂಬುತ್ತಾರೆ. ಈ ಮಂದಿರದ ಬಳಿಯೇ ಒಂದು ಸ್ಮಶಾನವಿದ್ದು ದೇಶದ ಮೂಲೆ ಮೂಲೆಗಳಿಂದ ತಾಂತ್ರಿಕರು, ಬಾಬಾಗಳು ಈ ಸ್ಮಶಾನಕ್ಕೆ ಆಗಮಿಸಿ ತಾಂತ್ರಿಕ ವಿದ್ಯೆಯನ್ನು ಅಭ್ಯಸಿಸುತ್ತಾರೆ. ರಾಜ ವಿಕ್ರಮಾದಿತ್ಯನ ಸಹೋದರ ಈ ಸ್ಥಳದಲ್ಲಿ ಹಲವಾರು ವರ್ಷಗಳವೆರೆಗೆ ತಪಸ್ಸು ಮಾಡಿದ್ದನೆಂದು ಹೇಳಲಾಗುತ್ತದೆ.


Image courtesy - Daily bhaskar

ಉಜ್ಜಯಿನಿ ನಗರದ ಕೇಂದ್ರಭಾಗದಲ್ಲಿರುವ ಈ ಮಂದಿರವನ್ನು ಚೌಬೀಸ್ ಖಂಬಾ ಮಾತಾ ಮಂದಿರವೆಂದು ಕರೆಯಲಾಗುತ್ತದೆ. ಶಾರ್ದೀಯ ನವರಾತ್ರಿಯ ಅಷ್ಟಮಿಯ ರಾತ್ರಿ ಈ ದೇವಿಗೆ ಪೂಜೆ ಸಲ್ಲಿಸಿ ಮದ್ಯವನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಇದರಿಂದ ನಗರವನ್ನು ಯಾವುದೇ ನೈಸರ್ಗಿಕ ವಿಕೋಪಗಳಿಂದ ದೇವಿ ರಕ್ಷಿಸುತ್ತಾಳೆ ಎಂಬ ನಂಬಿಕೆಯಿದೆ. ಶಿರ್ಪಾ ನದಿಯ ತಟದಲ್ಲಿರುವ ಭೂಖಿ ಮಾತಾ ಮಂದಿರವು ಪ್ರಾಣಿಬಲಿಗೆ ಪ್ರಸಿದ್ಧವಾಗಿದೆ.

English summary

The famous tantrik hot spots of India

The Tantra Kriya in our country has always been a topic of curiosity among people for centuries. There are many places in India, which are famous for Tantra Gyan. One such place is the city of Ujjain in Madhya Pradesh, which is believed to be the main place for Tantra Kriya and Tantra Gyan. Ujjain is an ancient city.
X
Desktop Bottom Promotion