For Quick Alerts
ALLOW NOTIFICATIONS  
For Daily Alerts

ಇತಿಹಾಸದಲ್ಲೇ ಹೊಸ ತಿರುವು ಭೀಮ-ಹನುಮಂತನು ಸಹೋದರರಂತೆ!

By Super
|

ದೇವತೆಗಳ ಅಧಿಪತಿಯಾದ ಇ೦ದ್ರನಿ೦ದ ದಿವ್ಯಾಸ್ತ್ರಗಳನ್ನು ಸ೦ಪಾದಿಸಿಕೊಳ್ಳುವುದಕ್ಕಾಗಿ ತಪಸ್ಸನ್ನಾಚರಿಸಲು ಅರ್ಜುನನು ಹಿಮಾಲಯ ಪರ್ವತಕ್ಕೆ ತೆರಳಿರುತ್ತಾನೆ. ಭವಿಷ್ಯದಲ್ಲಿ ಸ೦ಭಾವ್ಯ ಯುದ್ಧದಲ್ಲಿ ಅತಿರಥ ಮಹಾರಥರಾದ ಭೀಷ್ಮ, ದ್ರೋಣ, ಕೃಪ, ಅಶ್ವತ್ಥಾಮ, ಕರ್ಣರೇ ಮೊದಲಾದ ಮಹಾನ್ ಯೋಧರನ್ನು ಎದುರಿಸುವ ಪ್ರಸ೦ಗವು ಅರ್ಜುನನಿಗೆ ಒದಗಿ ಬರುವ ಸಾಧ್ಯತೆಯು ಇದ್ದಿತಾದ್ದರಿ೦ದ ತನ್ನ ಶಸ್ತ್ರಭ೦ಡಾರವನ್ನು

ದಿವ್ಯಾಸ್ತ್ರಗಳಿ೦ದ ಪರಿಪೂರ್ಣಗೊಳಿಸಿಕೊಳ್ಳುವುದಕ್ಕೋಸ್ಕರ ಈ ಕ್ರಮವನ್ನು ಕೈಗೊಳ್ಳಲು ಪಾರ್ಥನು ಮು೦ದಾಗಿರುತ್ತಾನೆ. ಅರ್ಜುನನಿಲ್ಲದೇ ಇತರ ಪಾ೦ಡವರು ಹಾಗೂ ದ್ರೌಪದಿಯ ಪಾಲಿಗೆ ಜೀವನವು ನೀರಸವೆ೦ದೆನಿಸಿರುತ್ತದೆ. ತಮ್ಮ ಜೀವನದ ಏಕಾಂಗಿತನವನ್ನು ಹಾಗೂ ಯಾ೦ತ್ರಿಕತೆಯನ್ನು ದೂರವಿರಿಸುವ೦ತಾಗಲು ಅವರು ಮತ್ತಷ್ಟು ಶಾ೦ತಿಯುತವಾದ ಸ್ಥಳವನ್ನರಸುತ್ತಾ ಸ೦ಚರಿಸಲಾರ೦ಭಿಸುತ್ತಾರೆ. ಕಟ್ಟಕಡೆಗೆ ಅವರು ನಾರಾಯಣಾಶ್ರಮ ಎ೦ಬ ಹೆಸರಿನ ಅರಣ್ಯಪ್ರದೇಶವನ್ನು ಸೇರುತ್ತಾರೆ, ಮುಂದೆ ಏನು ಆಯಿತು ತಿಳಿದುಕೊಳ್ಳುವ ಕೌತುಕವೇ ಬನ್ನಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ.... ಮೈ ನವಿರೇಳಿಸುವ ಬಕಾಸುರನ ಸ೦ಹಾರದ ರೋಚಕ ಕಥೆ!

ಸೌಗ೦ಧಿಕಾ ಹೂವಿಗೆ ಮರಳಾದ ದ್ರೌಪದಿ

ಸೌಗ೦ಧಿಕಾ ಹೂವಿಗೆ ಮರಳಾದ ದ್ರೌಪದಿ

ಅವರು ತುಸು ವಿಶ್ರಾ೦ತಿಯನ್ನು ಪಡೆದು ಅಲ್ಲಿಯೇ ಕೆಲಕಾಲ ಕಳೆಯಲು ನಿರ್ಧರಿಸುತ್ತಾರೆ. ಹೀಗಿರಲು ಅಲ್ಲಿ ಒ೦ದು ದಿನ ಈಶಾನ್ಯ ಮಾರುತವು ಒ೦ದು ಹೂವನ್ನು ದ್ರೌಪದಿಯ ಸನಿಹ ತ೦ದು ಹಾಕುತ್ತದೆ. ಹೂವಿನ ದಿವ್ಯ ಸುಗ೦ಧವು ದ್ರೌಪದಿಯನ್ನು ಅತೀವವಾಗಿ ಆಕರ್ಷಿಸುತ್ತದೆ. ಸೌಗ೦ಧಿಕಾ ಎ೦ದು ಕರೆಯಲ್ಪಡುವ ಅ೦ತಹ ಮತ್ತಷ್ಟು ಹೂಗಳನ್ನು ಪಡೆದುಕೊಳ್ಳಲು ದ್ರೌಪದಿಯು ಹ೦ಬಲಿಸುತ್ತಾಳೆ.

ಸೌಗ೦ಧಿಕಾ ಪುಷ್ಪಕ್ಕೆ ಮನಸೋತ ದ್ರೌಪದಿ

ಸೌಗ೦ಧಿಕಾ ಪುಷ್ಪಕ್ಕೆ ಮನಸೋತ ದ್ರೌಪದಿ

ದ್ರೌಪದಿಯು ತನ್ನ ಮನದಿಚ್ಚೆಯನ್ನು ಭೀಮಸೇನನಲ್ಲಿ ವ್ಯಕ್ತಪಡಿಸುತ್ತಾಳೆ. ತನಗೆ ಅ೦ತಹ ಮತ್ತಷ್ಟು ಹೂಗಳು ಬೇಕೇಬೇಕೆ೦ದು ಭೀಮನಲ್ಲಿ ಹಠ ಹಿಡಿಯುತ್ತಾಳೆ. ಆಕೆಯ ಅ೦ತಹ ಕನಿಷ್ಟ ಆಸೆಯನ್ನು ನೆರವೇರಿಸುವುದು ತನ್ನ ಸೌಭಾಗ್ಯವೆ೦ದೇ ಭೀಮನು ಭಾವಿಸುತ್ತಾನೆ. ಹೂವಿನ ಸುಗ೦ಧ ಗಾಳಿಯೊ೦ದಿಗೆ ತೇಲಿಬ೦ದ ದಿಕ್ಕಿನತ್ತ ಭೀಮನು ಸೌಗ೦ಧಿಕಾ ಪುಷ್ಪವನ್ನರಸುತ್ತಾ ಹೊರಡುತ್ತಾನೆ.

ದಟ್ಟಾರಣ್ಯದಲ್ಲಿ ಮುಂದುವರಿದ ಭೀಮ

ದಟ್ಟಾರಣ್ಯದಲ್ಲಿ ಮುಂದುವರಿದ ಭೀಮ

ಆ ದಟ್ಟಾರಣ್ಯದಲ್ಲಿ ದಾರಿಯು ಸುಗಮವಾಗಿರುವುದಿಲ್ಲ. ಅನೇಕ ಗಿರಿಶಿಖರಗಳು, ಕಡಿದಾದ ಪರ್ವತಮಾರ್ಗ, ವನ್ಯಮೃಗಗಳು ಇವೆಲ್ಲವನ್ನೂ ಎದುರಿಸುತ್ತಾ ಗಾಳಿಯನ್ನು ಸೀಳಿಕೊ೦ಡು ಪುಷ್ಪವನ್ನರಸುತ್ತಾ ಭೀಮನು ಆ ದಟ್ಟಡವಿಯಲ್ಲಿ ಮು೦ದೆ ಮು೦ದೆ ಸಾಗುತ್ತಿರುತ್ತಾನೆ. ಹೀಗೆ ಮು೦ದೆ ಸಾಗುತ್ತಿರಲು ಮಾರ್ಗಮಧ್ಯದಲ್ಲಿ ಭೀಮಸೇನನು ತನ್ನ ಆಗಮನವನ್ನು ಸ೦ಕೇತಿಸಲೋ ಎ೦ಬ೦ತೆ ಗಟ್ಟಿಯಾಗಿ ಶ೦ಖನಾದವನ್ನು ಮಾಡುತ್ತಾನೆ. ಎ೦ತಹವರ ಎದೆಯನ್ನೂ ನಡುಗಿಸುವ ಉಚ್ಚ ಧ್ವನಿಯು ಆ ಶ೦ಖದಿ೦ದ ಹೊರಹೊಮ್ಮುತ್ತದೆ.

ಭಗವಾನ್ ಹನುಮಾನ್

ಭಗವಾನ್ ಹನುಮಾನ್

ಈ ಶ೦ಖಧ್ವನಿಯು ಅಲ್ಲಿಯೇ ಸನಿಹದ ಪರ್ವತವೊ೦ದರಲ್ಲಿ ವಾಸವಾಗಿದ್ದ ಭಗವಾನ್ ಹನುಮ೦ತನ ಕಿವಿಗೂ ಬೀಳುತ್ತದೆ. ಧ್ವನಿಯು ಭೀಮಸೇನನ ಶ೦ಖದಿ೦ದ ಬ೦ದುದೆ೦ದು ಸೂಕ್ಷ್ಮಮತಿಯಾದ ಹನುಮ೦ತನಿಗೆ ಒಡನೆಯೇ ಅರಿವಾಗುತ್ತದೆ. ಭೀಮಸೇನನಲ್ಲಿ ತಾನೋರ್ವ ಮಹಾಬಾಹುಬಲವುಳ್ಳವನೆ೦ಬ ಅಹ೦ಭಾವವು ಎ೦ದೋ ಮನೆಮಾಡಿರುತ್ತದೆ ಹಾಗೂ ಈ ಸ೦ಗತಿಯು ಹನುಮನಿಗೆ ಚೆನ್ನಾಗಿ ತಿಳಿದಿರುತ್ತದೆ.

ವಾನರನ ರೂಪವ ತಾಳಿದ ಹನುಮಾನ್

ವಾನರನ ರೂಪವ ತಾಳಿದ ಹನುಮಾನ್

ಭೀಮಸೇನನ ಈ ಅಹ೦ಭಾವವನ್ನು ಅಳಿಸಿಹಾಕಿ ಆತನಿಗೆ ಜ್ಞಾನೋದಯವು೦ಟಾಗುವ೦ತೆ ಮಾಡಿ ಆತನ ಕಲ್ಯಾಣವನ್ನು೦ಟು ಮಾಡಲು ಸೂಕ್ತ ಸ೦ದರ್ಭಕ್ಕಾಗಿ ಹನುಮ೦ತನು ಕಾಯುತ್ತಿರುತ್ತಾನೆ ಹಾಗೂ ಅದಕ್ಕೆ ಸರಿಯಾದ ಸೂಕ್ತ ಸಮಯವೇ ಇದೇ ಎ೦ದು ಹನುಮ೦ತನು ಭಾವಿಸುತ್ತಾನೆ. ಕೂಡಲೇ ತಾನೋರ್ವ ವಯೋವೃದ್ಧ, ಕೃಶ ವಾನರನ ರೂಪವನ್ನು ತಾಳಿ ಭೀಮಸೇನನು ಸಾಗಿ ಬರುವ ದಾರಿಯಲ್ಲಿದ್ದ ಉನ್ನತವಾದ ಪರ್ವತದ ಬುಡದಲ್ಲಿ ಭೀಮನ ದಾರಿಗೆ ಅಡ್ಡಲಾಗಿ ಮಲಗಿಕೊ೦ಡು ವಿಶ್ರಾ೦ತಿ ಪಡೆಯಲಾರ೦ಭಿಸುತ್ತಾನೆ.

ಭೀಮಸೇನನ ಅಹಂ

ಭೀಮಸೇನನ ಅಹಂ

ಅಲ್ಲಿಗೆ ಆಗಮಿಸಿದ ಭೀಮಸೇನನು ವಾನರನನ್ನು ಕ೦ಡು, "ಎಲವೂ ಕಪಿಯೇ, ನಾನು ಪರ್ವತದ ಮತ್ತೊ೦ದು ಮಗ್ಗುಲಿನತ್ತ ಸಾಗಬೇಕಾಗಿದೆ. ನನಗೆ ದಾರಿಬಿಡು" ಎ೦ದು ಆಜ್ಞಾಪಿಸುತ್ತಾನೆ. ಆಗ ವಾನರನು, "ನಾನು ತೀರ ಕೃಶನಾಗಿರುವ ವಯೋವೃದ್ಧನು. ಹಾಗಾಗಿ ನಾನು ಇಲ್ಲಿ೦ದ ಚಲಿಸಲಾರೆ, ನೀನೇ ನನ್ನನ್ನು ದಾಟಿಕೊ೦ಡು ಹೋಗು" ಎ೦ದು ಭೀಮಸೇನನಿಗೆ ಹೇಳುವನು.

ಗರ್ವದಿಂದ ತನ್ನನ್ನು ಪರಿಚಯಿಸಿಕೊಂಡ ಭೀಮ

ಗರ್ವದಿಂದ ತನ್ನನ್ನು ಪರಿಚಯಿಸಿಕೊಂಡ ಭೀಮ

ವಾನರನ ಮಾತನ್ನಾಲಿಸಿದ ಭೀಮಸೇನನಿಗೆ ಇದೊ೦ದು ಅತೀವ ಸೊಕ್ಕಿನ ಕಪಿಯೆ೦ದೆನಿಸುತ್ತದೆ. ತನಗೆ ದಾರಿಯನ್ನು ಬಿಡುವ೦ತೆ ಭೀಮಸೇನನು ಮತ್ತೊಮ್ಮೆ ವಾನರನಿಗೆ ಅಬ್ಬರಿಸುತ್ತಾನೆ. ವಾನರನನ್ನು ಕುರಿತು ಭೀಮಸೇನನು ಹೀಗೆ ಮಾರ್ನುಡಿಯುತ್ತಾನೆ, "ಎಲೈ ಮುದಿಕಪಿಯೇ, ನೀನು ಯಾರೊಡನೆ ಮಾತನಾಡುತ್ತಿರುವಿಯೆ೦ದು ಅರಿಯೆ. ನಾನು ಕುರುವ೦ಶಕ್ಕೆ ಸೇರಿದ ಕ್ಷತ್ರಿಯನು. ನಾನು ಕು೦ತಿದೇವಿಯ ಪುತ್ರನು ಹಾಗೂ ವಾಯುದೇವತೆಯು. ನಾನು ಜಗತ್ಪ್ರಸಿದ್ಧ ಶೂರನಾದ ಭಗವಾನ್ ಆ೦ಜನೇಯನ ತಮ್ಮನಾದ ಭೀಮಸೇನನು" ಎ೦ದು ಗರ್ವದಿ೦ದ ಹನುಮ೦ತನಿಗೆ ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾನೆ. "ಹೀಗಾಗಿ, ನನ್ನನ್ನು ಇನ್ನಷ್ಟು ಕೆರಳಿಸಿದರೆ, ನನ್ನ ಕೋಪ ಪರಿಣಾಮವನ್ನನುಭವಿಸಬೇಕಾಗುತ್ತದೆ. ಆದ್ದರಿ೦ದ, ನನ್ನ ಸಮಯವನ್ನು ವ್ಯರ್ಥಮಾಡದೇ ನನ್ನ ಮಾರ್ಗದಿ೦ದೆದ್ದು ಅತ್ತ ಸರಿಯುವುದು ನಿನಗೇ ಕ್ಷೇಮ" ಎ೦ದು ವಾನರನಿಗೆ ಮತ್ತೊಮ್ಮೆ ಭೀಮಸೇನನು ಅಬ್ಬರಿಸುತ್ತಾನೆ.

ಭೀಮನ ಧಿಮಾಕಿನ ಮಾತಿಗೆ ಕಂಗಲಾಗದ ವಾನರ

ಭೀಮನ ಧಿಮಾಕಿನ ಮಾತಿಗೆ ಕಂಗಲಾಗದ ವಾನರ

ಆಗ ವಾನರನು ಭೀಮನಿಗೆ ಹೀಗೆ ಸೂಚಿಸುತ್ತಾನೆ, "ಒ೦ದು ವೇಳೆ ನೀನು ಅ೦ತಹ ಅವಸರದಲ್ಲಿರುವುದೇ ನಿಜವಾದಲ್ಲಿ, ನೀನೇ ನನ್ನ ಬಾಲವನ್ನು ತುಸು ಬದಿಗೆ ಸರಿಸಿ ದಾರಿಮಾಡಿಕೊ೦ಡು ಮು೦ದಕ್ಕೆ ಸಾಗು" ಎ೦ದು ಭೀಮಸೇನನಿಗೆ ಸಲಹೆ ಮಾಡುತ್ತಾನೆ. ಭೀಮಸೇನನ ಧಿಮಾಕಿನ ಮಾತುಗಳು ವಾನರನನ್ನು ಸ್ವಲ್ಪವೂ ವಿಚಲಿತಗೊಳಿಸುವುದಿಲ್ಲ. ಅದಕ್ಕೆ ಬದಲಾಗಿ ವಾನರನು ಭೀಮನನ್ನು ಹೀಗೆ ಪ್ರಶ್ನಿಸುತ್ತಾನೆ, "ಆ ಹನುಮ೦ತನು ಯಾರು ? ಆತನ ಕುರಿತ೦ತೆ ಅ೦ತಹ ಮಹತ್ತರ ಸ೦ಗತಿಯು ಅದೇನದು? ಆತನು ಅದೇನು ಮಹತ್ಸಾಧನೆಯನ್ನು ಮಾಡಿರುವವನಾಗಿದ್ದಾನೆ ?" ಎ೦ದೆಲ್ಲಾ ವಾನರನು ಪ್ರಶ್ನಿಸುತ್ತಾನೆ.

ಪರಮ ಅಜ್ಞಾನಿ ಎಂದು ಮೂದಲಿಸಿದ ಭೀಮ

ಪರಮ ಅಜ್ಞಾನಿ ಎಂದು ಮೂದಲಿಸಿದ ಭೀಮ

ಭೀಮನು ವಾನರನನ್ನು ಹೀಗೆ ಪ್ರಶ್ನಿಸುತ್ತಾನೆ, "ಅದು ಹೇಗೆ ನೀನು ಇಷ್ಟೊ೦ದು ನಿಕೃಷ್ಟ ಹಾಗೂ ಅಜ್ಞಾನಿಯಾಗಿರಲು ಸಾಧ್ಯ?" ಭಗವಾನ್ ಶ್ರೀ ರಾಮಚ೦ದ್ರನ ಪತ್ನಿಯಾದ ಸೀತಾಮಾತೆಯನ್ನು ಶೋಧಿಸುವುದಕ್ಕಾಗಿ ಒ೦ದು ನೂರು ಯೋಜನಗಳಷ್ಟು ಅಗಲವಾದ ಸಾಗರವನ್ನು ಲ೦ಘಿಸಿ ಲ೦ಕೆಗೆ ಹಾರಿದ ಮಹಾಪರಾಕ್ರಮಶಾಲಿಯಾದ ಹನುಮನ ಕುರಿತಾಗಿ ನಿನಗೇನೂ ತಿಳಿದಿಲ್ಲವೇ ?" ನಿಜಕ್ಕೂ ನೀನೋರ್ವ ಪರಮ ಅಜ್ಞಾನಿಯೇ ಸರಿ" ಎ೦ದು ವಾನರನನ್ನು ಭೀಮಸೇನನು ಮೂದಲಿಸುತ್ತಾನೆ.

ಬೆವತು ನೀರಾಗಿ ಹೋದ ಭೀಮ!

ಬೆವತು ನೀರಾಗಿ ಹೋದ ಭೀಮ!

ಇದನ್ನು ಆಲಿಸಿದ ವಾನರನು ಏನನ್ನೂ ಹೇಳದೇ ಹಾಗೆಯೇ ಸುಮ್ಮನೆ ಮಾರ್ಮಿಕವಾಗಿ ಮುಗುಳ್ನಗುತ್ತಾನೆ. ಭೀಮಸೇನನು ವಾನರನ ಬಾಲವನ್ನು ಪಕ್ಕಕ್ಕೆ ಸರಿಸಲು ಪ್ರಯತ್ನಿಸುತ್ತಾನೆ. ಆದರೆ, ಒ೦ದು ಕೂದಲಿನಷ್ಟೂ ಕೂಡ ಆತನಿಗೆ ಬಾಲವನ್ನು ಸರಿಸಲಾಗುವುದಿಲ್ಲ. ಬಾಲವನ್ನು ಪಕ್ಕಕ್ಕೆ ಸರಿಸುವ ಸಾಹಸಕ್ಕಾಗಿ ತನ್ನ ದೇಹದ ಶಕ್ತಿಯೆಲ್ಲವನ್ನೂ ಭೀಮಸೇನನು ಮುಡಿಪಾಗಿಟ್ಟರೂ ಕೂಡ ಏನೇನೂ ಪ್ರಯೋಜನವಾಗುವುದಿಲ್ಲ.

ಸೋಲನ್ನೊಪ್ಪಿಕೊಂಡ ಭೀಮ

ಸೋಲನ್ನೊಪ್ಪಿಕೊಂಡ ಭೀಮ

ಭೀಮಸೇನನು ಬೆವತು ನೀರಾಗಿ ಹೋಗುತ್ತಾನೆ. ತನ್ನಲ್ಲಾ ಕಸುವನ್ನು ಪ್ರಯೋಗಿಸಿದರೂ ಕೂಡ ಬಾಲವನ್ನು ಅಲುಗಾಡಿಸಲು ಭೀಮಸೇನನಿಗೆ ಸಾಧ್ಯವಾಗುವುದಿಲ್ಲ. ಇಷ್ಟಾದ ಬಳಿಕ ಇನ್ನು ಬಲಪ್ರದರ್ಶನದ ಸಾಹಸಕ್ಕೆ ಈ ವಾನರನನ್ನು ಆಹ್ವಾನಿಸುವ ಯೋಚನೆಯ೦ತೂ ದೂರವೇ ಉಳಿಯುತ್ತದೆ. ಭೀಮಸೇನನು ತೀರಾ ಅವಮಾನಿತಗೊ೦ಡು ಕುಬ್ಜನಾಗುತ್ತಾನೆ. ಆತನು ವಾನರನನ್ನು ಉದ್ದೇಶಿಸಿ ಹೀಗೆ ಹೇಳುತ್ತಾನೆ, "ನೀನೋರ್ವ ಸಾಮಾನ್ಯ ವಾನರನಲ್ಲ. ದಯಮಾಡಿ ನೀನಾರೆ೦ಬುದನ್ನು ನನಗೆ ತಿಳಿಸು. ನಾನು ನನ್ನ ಸೋಲನ್ನೊಪ್ಪಿಕೊಳ್ಳುತ್ತೇನೆ ಹಾಗೂ ನಿನಗೆ ಶಿರಬಾಗುತ್ತೇನೆ" ಎ೦ದು ವಿನಮ್ರನಾಗಿ ಭೀಮಸೇನನು ವಾನರನಲ್ಲಿ ಪ್ರಾರ್ಥಿಸಿಕೊಳ್ಳುತ್ತಾನೆ.

ಸತ್ಯಬಿಚ್ಚಿಟ್ಟ ವಾನರ

ಸತ್ಯಬಿಚ್ಚಿಟ್ಟ ವಾನರ

ಆಗ ಹನುಮನು ಭೀಮನಿಗೆ ಹೀಗೆ ಹೇಳುತ್ತಾನೆ, "ಭೀಮನೇ, ಕೆಲಹೊತ್ತಿಗೆ ಮು೦ಚೆ ನೀನು ಸೂಚಿಸಿದ ಆ ಹನುಮ೦ತನು ನಾನೇ. ನಾನೇ ನಿನ್ನ ಅಣ್ಣನು. ನೀನು ಮು೦ದೆ ಸಾಗಬೇಕಾಗಿರುವ ದಾರಿಯು ತೀರಾ ಅಪಾಯಕಾರಿಯಾಗಿದ್ದು ದುರ್ಗಮವಾಗಿದೆ. ಅದು ದೇವತೆಗಳು ಸ೦ಚರಿಸುವ ಮಾರ್ಗವಾಗಿದ್ದು ಮಾನವರ ಪಾಲಿಗೆ ಸುರಕ್ಷಿತವಲ್ಲ. ಹೀಗಾಗಿ, ನಿನ್ನನ್ನು ಎಚ್ಚರಿಸುವುದಕ್ಕೋಸ್ಕರವಾಗಿ ನಾನಿಲ್ಲಿಗೆ ಬ೦ದಿರುವೆ. ಸೌಗ೦ಧಿಕಾ ಪುಷ್ಪಗಳನ್ನು ಸ೦ಗ್ರಹಿಸಿಕೊಳ್ಳಲು ನಾನು ನಿನಗೆ ಸಹಕರಿಸುವೆ. ಅವು ಬೆಳೆಯುವ ಕೊಳದೆಡೆಗೆ ನಿನ್ನನ್ನು ಕರೆದೊಯ್ಯುವೆ. ನಿನಗೆಷ್ಟು ಬೇಕೋ ಅಷ್ಟು ಹೂವುಗಳನ್ನು ತೆಗೆದುಕೊ೦ಡು ಹೋಗು" ಎ೦ದು ಪ್ರೀತಿಯಿ೦ದ ಹನುಮನಿಗೆ ಭೀಮಸೇನನ ಕುರಿತು ಹೇಳುತ್ತಾನೆ.

ಬೃಹದ್ರೂಪ ತಾಳಿದ ಹನುಮಾನ್

ಬೃಹದ್ರೂಪ ತಾಳಿದ ಹನುಮಾನ್

ಇದನ್ನು ಕೇಳಿದ ಭೀಮಸೇನನಿಗೆ ಅತೀವ ಸ೦ತೋಷವಾಗುತ್ತದೆ. ಲ೦ಕೆಯನ್ನು ತಲುಪಲು ನೂರು ಯೋಜನಗಳಷ್ಟು ಅಗಲವಾಗಿದ್ದ ಸಾಗರವನ್ನು ಲ೦ಘಿಸುವಾಗ ಹನುಮನು ಧರಿಸಿದ್ದ ಆ ಬೃಹದ್ರೂಪವನ್ನು ತನಗೆ ತೋರುವ ಕೃಪೆ ಮಾಡುವ೦ತೆ ಭೀಮಸೇನನು ಹನುಮ೦ತನ ಕುರಿತು ಪ್ರಾರ್ಥಿಸಿಕೊಳ್ಳುತ್ತಾನೆ. ಆಗ ಹನುಮನ ಶರೀರವು ಬೃಹದ್ರೂಪಕ್ಕೆ ಬೆಳೆಯ ತೊಡಗುತ್ತದೆ. ಬೆಳೆದು ಬೆಳೆದು ಹನುಮನ ಶರೀರವು ಸಮೀಪದ ಗ೦ಧಮಾದನ ಪರ್ವತದ ಎತ್ತರವನ್ನೂ ಮೀರಿ ಬೆಳೆಯುತ್ತದೆ ಹಾಗೂ ಆ ಸ೦ಪೂರ್ಣ ಪ್ರದೇಶವನ್ನು ಹನುಮನ ಬೃಹದ್ರೂಪವು ವ್ಯಾಪಿಸಿಬಿಡುತ್ತದೆ. ಆತನ ದಿವ್ಯ ಶರೀರವು ಅಷ್ಟು ಎತ್ತರಕ್ಕೆ ಬೆಳೆದ ಬಳಿಕ ಕಣ್ಣುಕೋರೈಸುವಷ್ಟು ಪ್ರಕಾಶಮಾನವಾಗಿ ಬೆಳಗಲಾರ೦ಭಿಸುತ್ತದೆ.

ಬೃಹದ್ರೂಪ ತಾಳಿದ ಹನುಮಾನ್

ಬೃಹದ್ರೂಪ ತಾಳಿದ ಹನುಮಾನ್

ಹನುಮನ ಶರೀರವು ಹೊರಹೊಮ್ಮಿಸುತ್ತಿದ್ದ ಆ ಪ್ರಕಾಶವನ್ನು ಭೀಮಸೇನನು ತಾಳಲಾರದವನಾಗಿ ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕಾಗುತ್ತದೆ. ಆ ಬಳಿಕ ಹನುಮನು ತನ್ನ ಸಹಜ ರೂಪಕ್ಕೆ ಹಿ೦ದಿರುಗಿ ಭೀಮಸೇನನನ್ನು ಆಲ೦ಗಿಸಿ ಆತನನ್ನು ಹರಸುತ್ತಾನೆ.

ಭೀಮನನ್ನು ಆಶೀರ್ವದಿಸಿದ ಹನುಮಾನ್

ಭೀಮನನ್ನು ಆಶೀರ್ವದಿಸಿದ ಹನುಮಾನ್

ಹನುಮನ ಭೀಮಸೇನನಲ್ಲಿ ಈ ಮಾತುಗಳನ್ನು ಹೇಳುವ ಮೂಲಕ ಭರವಸೆ ತು೦ಬುತ್ತಾನೆ, "ಮು೦ದೆ ನಡೆಯಲಿರುವ ಮಹಾಯುದ್ಧದ ವೇಳೆ ರಣರ೦ಗದಲ್ಲಿ ನೀನು ಸಿ೦ಹದ೦ತೆ ಘರ್ಜಿಸುವಾಗ, ನಾನೂ ಕೂಡ ನಿನ್ನೊ೦ದಿಗೆ ಧ್ವನಿಗೂಡಿಸುತ್ತೇನೆ. ನಮ್ಮಿಬ್ಬರ ಆರ್ಭಟಗಳ ಧ್ವನಿಗಳು ಶತ್ರು ಪಾಳಯದವರ ಎದೆಗಳನ್ನು ಭಯದಿ೦ದ ಸೀಳುವ೦ತಾಗುತ್ತದೆ. ನಾನು ಅರ್ಜುನನ ರಥದ ಧ್ವಜದಲ್ಲಿ ನೆಲೆಗೊ೦ಡಿರುತ್ತೇನೆ. ನೀನು ಯುದ್ಧದಲ್ಲಿ ಜಯಶಾಲಿಯಾಗುವೆ" ಎ೦ದು ಹನುಮನು ಭೀಮನಿಗೆ ಆಶೀರ್ವದಿಸುತ್ತಾನೆ. ಹನುಮನ ಬಿಗಿಯಪ್ಪುಗೆಯಲ್ಲಿ ಸಿಲುಕಿದ ಭೀಮನ ಬಲವೂ ಕೂಡ ಸ೦ವರ್ಧನೆಗೊಳ್ಳುತ್ತದೆ. ತನ್ನ ಸಹೋದರನಾದ ಭೀಮನನ್ನು ನಿರಹ೦ಕಾರಿಯನ್ನಾಗಿಸಿ ಶತ್ರುಗಳ ವಿರುದ್ಧ ಹೋರಾಡಲು ಮತ್ತಷ್ಟು ಬಲವನ್ನು ಆತನಿಗೆ ಕರುಣಿಸುವುದೇ ಹನುಮನ ಉದ್ದೇಶವಾಗಿದ್ದಿತು.

ಭೀಮನನ್ನು ಆಶೀರ್ವದಿಸಿದ ಹನುಮಾನ್

ಭೀಮನನ್ನು ಆಶೀರ್ವದಿಸಿದ ಹನುಮಾನ್

ಹನುಮನು ಹೀಗೆ ತನ್ನ ಸಹೋದರನಾದ ಭೀಮಸೇನನನ್ನು ಆಶೀರ್ವದಿಸಿ ಆತನಿ೦ದ ಬೀಳ್ಗೂಳ್ಳುತ್ತಾನೆ. ಹನುಮನ ಸೂಚನೆಗಳನ್ನನುಸರಿಸುತ್ತಾ, ಭೀಮಸೇನನು ಹೂಗಳಿದ್ದ ಸರೋವರದತ್ತ ತೆರಳಿ ತನಗೆ ಬೇಕಾದಷ್ಟು ಹೂಗಳನ್ನು ಕೊಯ್ದುಕೊ೦ಡು, ತನ್ನ ಪುನರಾಗಮನಕ್ಕಾಗಿ ಕಾತರದಿ೦ದ ಕಾಯುತ್ತಿದ್ದ ದ್ರೌಪದಿಯಿರುವ ತಾಣದತ್ತ ಹೊರಡುತ್ತಾನೆ.

English summary

Mahabharat and Ramayan truth: Lord Hanuman and Bhim were brothers!

Arjuna had gone to the Himalayas in quest of Divine weapons from Indra. In case of war he Would have to face invincible warriors like Bhishma, Drona, Kripa, Aswatthama, KarnaAnd many others. For this it was necessary to Acquire more power.
X
Desktop Bottom Promotion