Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬದುಕಿನ ಗುಟ್ಟನ್ನು ಬಿಚ್ಚಿಡುವ ಇಸ್ಲಾಂ ಧರ್ಮದ ಸತ್ಯಾಸತ್ಯತೆ
ಮಾನವ ಸ್ವಭಾವತಃ ಒಬ್ಬ ಸಂಘ ಜೀವಿ. ಆತನಿಗೆ ಬದುಕಲು ಒಂದು ಗುಂಪು ಬೇಕು, ಆ ಗುಂಪು ಗುಂಪಾಗಿ ಇರಲು ಕೆಲವು ನಂಬಿಕೆಗಳು ಮತ್ತು ಗುರುತುಗಳು ಬೇಕು. ಹೀಗೆ ಅವನ ನಂಬಿಕೆ ಮತ್ತು ಗುರುತುಗಳು ಬೆಳೆದು ಮುಂದೆ ನಾಗರೀಕನಾದಾಗ ಅವುಗಳನ್ನು ಧರ್ಮಗಳೆಂದು ಕರೆಯಲಾಯಿತು. ಅಂತಹ ಧರ್ಮಗಳು ಮಾನವರನ್ನು ಒಂದು ಗುಂಪಾಗಿ ಗುರುತಿಸುತ್ತವೆ. ಇಂತಹ ಧರ್ಮಗಳು ಶ್ರದ್ಧೆ, ಶಿಸ್ತು ಮತ್ತು ಭಕ್ತಿಗಳನ್ನು ಮೈಗೂಡಿಸಿಕೊಂಡು ಬೆಳೆದದ್ದು, ಇತಿಹಾಸ. ಇಸ್ಲಾಂ ಸಹ ಅಂತಹ ಶ್ರದ್ಧೆ ಮತ್ತು ಶಿಸ್ತನ್ನು ಹೊಂದಿರುವ ಧರ್ಮಗಳಲ್ಲಿ ಒಂದಾಗಿದೆ.
ಶಿಸ್ತಿಲ್ಲದೆ ಇರುವ ಮನುಷ್ಯ ಸಂತೋಷಕರವಾದ ಮತ್ತು ಸುಖವಾದ ಜೀವನವನ್ನು ಬಾಳಲು ಸಾಧ್ಯವಿಲ್ಲ. ಶಿಸ್ತಿಲ್ಲದೆ ಬದುಕುವ ವ್ಯಕ್ತಿಯು ಸಂತೋಷವಾಗಿ ಬದುಕುವುದನ್ನು ನೀವು ಎಲ್ಲಾದರು ನೋಡಿದ್ದೀರಾ? ಇಲ್ಲ ಎಂಬುದು ನಿಮ್ಮ ಉತ್ತರವಾಗಿರುತ್ತದೆಯಲ್ಲವೇ, ಆ ವ್ಯಕ್ತಿ ಸಂತೋಷವಾಗಿರುವುದಿಲ್ಲ ಏಕೆಂದರೆ ಆತ ಪ್ರಕೃತಿಯ ಸರಳ ನಿಯಮವನ್ನು ಅನುಸರಿಸಿರುವುದಿಲ್ಲ. ಇಸ್ಲಾಂ ಎಂಬುದು ಸಾಮಾನ್ಯ ಪ್ರಜ್ಞೆಯನ್ನು ಹೊಂದಿರುವ ಒಂದು ಧರ್ಮವಾಗಿದೆ. ಇದರಲ್ಲಿ ಪರಿಸ್ಥಿತಿಗಳೀಗೆ ಸರಿಯಾಗಿ ವರ್ತಿಸುವುದು, ಇತರರನ್ನು ಪ್ರೀತಿಸುವುದು, ಗೌರವಿಸುವುದು ಮತ್ತು ಇತರರಿಗೆ ಪರಸ್ಪರ ಸಹಾಯ ಮಾಡುವ ಅಂಶಗಳು ಇವೆ. ಸ್ವಾರ್ಥಿ ಮತ್ತು ಮುಂಗೋಪಿಯನ್ನು ಒಳ್ಳೆಯ ಮುಸಲ್ಮಾನ್ ಎಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಆತ ಒಳ್ಳೆಯ ಮುಸಲ್ಮಾನ್ ಆಗಲು ಬೇಕಾದ ಗುಣಗಳನ್ನು ತ್ಯಜಿಸಿರುತ್ತಾನೆ.
ಕೋಪಾವೇಶವನ್ನು ಹೊಂದುವುದು, ಇತರರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನೋಯಿಸುವುದು ಇಸ್ಲಾಂನಲ್ಲಿ ನಿಷೇದ್ಧ. ಹೆಂಗಸರಿಗೆ ಅತ್ಯುನ್ನತವಾದ ಗೌರವವನ್ನು ನೀಡಿ, ಏಕೆಂದರೆ ಹೆಣ್ಣು ಮನೆಯ ಕಣ್ಣು, ಇದೇ ಮಾತು ಪತ್ನಿಗೂ ಸಹ ಅನ್ವಯವಾಗುತ್ತದೆ ಎಂದು ಇಸ್ಲಾಂ ತಿಳಿಸುತ್ತದೆ. ಹಾಗೆಯೇ ಪತ್ನಿಯರು ಸಹ ತಮ್ಮ ಗಂಡಂದಿರಿಗೆ ಕೃತಜ್ಞರಾಗಿರಬೇಕು ಮತ್ತು ಪ್ರೀತಿಯನ್ನು ಹೊಂದಿರಬೇಕು ಎಂದು ತಿಳಿಸುತ್ತದೆ. ನಿಂದಿಸುವುದು, ಮಾನಸಿಕವಾಗಿ ಹಿಂಸೆ ನೀಡುವುದು ಅಥವಾ ದೈಹಿಕ ಹಿಂಸೆಯನ್ನು ನೀಡುವುದು ಇಸ್ಲಾಂನಲ್ಲಿ ಪಾಪವೆಂದು ಘೋಷಿಸಲಾಗಿದೆ. ಬನ್ನಿ ಮುಸಲ್ಮಾನರ ಕುರಿತು ಕೆಲವೊಂದು ಕುತೂಹಲ ಮೂಡಿಸುವ ವಿಚಾರಗಳನ್ನು ತಿಳಿದುಕೊಂಡು ಬರೋಣ.....

ಜೋರಾಗಿ ನಗುವುದು
ಒಬ್ಬ ನಿಜವಾದ ಮುಸಲ್ಮಾನನು ಸುಖ ಮತ್ತು ದುಃಖವನ್ನು ನಗುತ್ತಾ ಸ್ವೀಕರಿಸುತ್ತಾನೆ. ದುಃಖದಲ್ಲಿ ನಗುವ ಗುಣ ಅವನಲ್ಲಿ ಇರುತ್ತದೆ. ತನ್ನ ಸುತ್ತಲೂ ಇರುವವರು ಸಂತೋಷವಾಗಿಲ್ಲದೆ ಇದ್ದಲ್ಲಿ, ಒಬ್ಬ ನಿಜವಾದ ಮುಸಲ್ಮಾನನು ಸಂತೋಷವನ್ನು ಕಾಣಲಾರ. ಆತ ತಾನು ನಗುವ ಮೊದಲು, ತನ್ನ ಸುತ್ತಲಿನವರ ಮುಖದಲ್ಲಿ ನಗುವನ್ನು ತರುತ್ತಾನೆ.. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬೆನ್ನಿಗೆ ಚೂರಿ ಹಾಕುವ ವರ್ತನೆ
ಇಸ್ಲಾಂನಲ್ಲಿ ಬೆನ್ನಿಗೆ ಚೂರಿ ಹಾಕುವ ವರ್ತನೆಗೆ ಮನ್ನಣೆಯಿಲ್ಲ. ಇಸ್ಲಾಂನಲ್ಲಿ ಇದನ್ನು " ನಿಮ್ಮ ಸಹೋದರನ ಮಾಂಸವನ್ನು ನೀವು ತಿಂದಂತೆ" ಎಂದು ಪರಿಗಣಿಸಿ, ಬೆನ್ನಿಗೆ ಚೂರಿ ಹಾಕುವುದನ್ನು ಖಂಡಿಸಲಾಗಿದೆ. ಮುಂದಿನ ಬಾರಿ ನೀವು ಅಥವಾ ನಿಮಗೆ ಯಾರಾದರೂ ಬೆನ್ನಿಗೆ ಚೂರಿ ಹಾಕಿದಂತೆ ನಡೆದುಕೊಂಡರೆ ಈ ಮೇಲಿನ ಸಾಲನ್ನು ನೆನಪಿಸಿಕೊಳ್ಳಿ. ಗಾಳಿ ಮಾತುಗಳಿಂದ ಮತ್ತು ನಂಬಿಕೆ ದ್ರೋಹದಿಂದ ದೂರವಿರಿ. ಆರೋಗ್ಯಕರವಾದ ಮತ್ತು ಅರ್ಥಪೂರ್ಣವಾದ ಜೀವನವನ್ನು ಸಾಗಿಸಿ.

ಕಿವಿಯಲ್ಲಿ ಪಿಸುಗುಟ್ಟುವುದು
ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಕಿವಿಯಲ್ಲಿ ಪಿಸುಗುಟ್ಟುವುದು. ಸುತ್ತ ಮುತ್ತ ಎಲ್ಲರೂ ಇರುವಾಗ ಕಿವಿಯಲ್ಲಿ ಪಿಸುಗುಟ್ಟುವುದು ಇಸ್ಲಾಂನಲ್ಲಿ ನಿಷಿದ್ಧ. ಇದು ಇತರರ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಜೊತೆಗೆ ನಿಮ್ಮ ಮೇಲೆ ಸಹ ಅಪನಂಬಿಕೆಯನ್ನು ಹುಟ್ಟು ಹಾಕುತ್ತದೆ. ಶಿಷ್ಟಾಚಾರದ ಪ್ರಕಾರ ಸಹ ಇದು ತಪ್ಪು.

ಇತರರು ಮಾತನಾಡುವುದನ್ನು ಕದ್ದು ಕೇಳುವುದು
ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಇತರರು ಮಾತನಾಡುವುದನ್ನು ಕದ್ದು ಕೇಳುವುದು ಸಹ ಇಸ್ಲಾಂ ರೀತಿ ತಪ್ಪು. ಇದನ್ನು ಇಸ್ಲಾಂನಲ್ಲಿ ನಿಷೇಧಿಸಲಾಗಿದೆ. ಉದಾಹರಣೆಗೆ ಪೋಷಕರು ಮಾತನಾಡುವಾಗ ಅವರಿಗೆ ತಿಳಿಯದಂತೆ ಕದ್ದು ಕೇಳುವುದು ತಪ್ಪು. ಆ ವಿಚಾರ ಎಷ್ಟು ಮುಖ್ಯವೋ ಎಂಬುದು ಇಲ್ಲಿ ವಿಚಾರವಲ್ಲ. ಆದರೆ ಅದನ್ನು ಕದ್ದು ಕೇಳಬಾರದು ಅಷ್ಟೇ... ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇತರರು ಮಾತನಾಡುವುದನ್ನು ಕದ್ದು ಕೇಳುವುದು
ನಿಮಗೆ ಆ ಮಾಹಿತಿ ಗೊತ್ತಾಗಬೇಕಾದರೆ, ಅದನ್ನು ನಿಮ್ಮ ಮುಂದೆ ಅವರು ಮಾತನಾಡುತ್ತಾರೆ, ಅವರು ಮಾತ್ರ ಇದರ ಕುರಿತು ಮಾತನಾಡುತ್ತಿದ್ದಾರೆ ಎಂದಲ್ಲಿ, ಆ ವಿಚಾರ ನಿಮಗೆ ಬೇಕಾಗಿಲ್ಲ ಎಂದೇ ಅರ್ಥ. ಒಂದು ವೇಳೆ ಆ ವಿಚಾರದಲ್ಲಿ ನಿಮ್ಮ ಸಹಾಯ ಅಗತ್ಯ ಅಥವಾ ಅದಕ್ಕೆ ನೀವು ಸಹಾಯ ಮಾಡುತ್ತೀರಿ ಎಂದಾದಲ್ಲಿ ಮೊದಲು ಅನುಮತಿ ಕೇಳಿ. ಆ ಮಾತುಕತೆಯಲ್ಲಿ ಪಾಲ್ಗೊಳ್ಳಿ.

ಅಹಂ
ಅಹಃ ಅನ್ನು ಸಹ ಇಸ್ಲಾಂ ನಿಷೇಧಿಸಿದೆ. ಇದನ್ನು ಸೈತಾನನ ಗುಣವೆಂದು ಇಸ್ಲಾಂನಲ್ಲಿ ಪರಿಗಣಿಸಲಾಗಿದೆ. ಹೆಮ್ಮೆ ಪಡಬೇಡಿ, ಹೆಮ್ಮೆ ಪಟ್ಟು ಅದರಿಂದ ನಾಶವಾಗಬೇಡಿ ಎಂದು ಇಸ್ಲಾಂ ಸಾರುತ್ತದೆ. ಹೆಮ್ಮೆಯು ನಿಮ್ಮ ಮಾನವೀಯತೆಯನ್ನು ಹಾಳು ಮಾಡುತ್ತದೆ, ನೀವೇ ಹೆಚ್ಚು ಎಂದು ತಿಳಿಸುತ್ತದೆ. ಹೆಮ್ಮ ಪಡಲು ನಾವು ಹುಲು ಮಾನವರು ಮಾತ್ರ ಎಂಬುದನ್ನು ಮರೆಯಬೇಡಿ ಎಂದು ಇಸ್ಲಾಂ ತಿಳಿಸುತ್ತದೆ. ನಾವು ಸಹ ಎಲ್ಲರಂತೆ ಮಾನವರು ಎಂಬುದನ್ನು ಮರೆಯಬೇಡಿ. ಯಾರಿಗೆ ಗೊತ್ತು ನೀವು ಕ್ಷುಲ್ಲಕವೆಂದು ಪರಿಗಣಿಸಿರುವ ವ್ಯಕ್ತಿ ನಿಮ್ಮ ಆಪತ್ಭಾಂದವನಾಗಬಹುದು.



Click it and Unblock the Notifications