For Quick Alerts
ALLOW NOTIFICATIONS  
For Daily Alerts

ಬೆಡ್ ಕೊಳ್ಳುವಾಗ ಗಮನಿಸಲೇಬೇಕಾದ 6 ಅಂಶಗಳು

By Super
|

ರಾತ್ರಿಯ ಆರಾಮದಾಯಕ ನಿದ್ದೆಗೆ ನಿಮ್ಮ ದೈಹಿಕ ಮಾನಸಿಕ ಸ್ಥಿತಿ, ಮಲಗುವ ಕೋಣೆಯ ರಚನೆ, ತಾಪಮಾನದ ಜೊತೆಗೆ ನೀವು ಮಲಗುವ ಹಾಸಿಗೆಯೂ ಕಾರಣವಾಗಬಹುದು. ನಿದ್ದೇ ಬಾರದೇ ಇರುವುದು ಅಥವಾ ನಿದ್ದೆ ಮಾಡಿದರೂ ದಣಿವಾದ ಅನುಭವ ಆಗುತ್ತಿದ್ದಲ್ಲಿ ಇದಕ್ಕೆ ಕಾರಣ ನಿಮ್ಮ ಆರೋಗ್ಯ ಅಲ್ಲದೇ ಇರಬಹುದು ಬದಲಾಗಿ ಬೇರೇನೋ ಆಗಿರಬಹುದು.

ರಾತ್ರಿ ಸರಿಯಾಗಿ ನಿದ್ದೆ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯ. ಇದು ಕೇವಲ ನೀವು ಎಷ್ಟು ಗಂಟೆಗಳು ನಿದ್ದೆ ಮಾಡುತ್ತೀರಿ ಎನ್ನುವುದನ್ನು ಅವಲಂಬಿಸಿಲ್ಲ. ಜೊತೆಗೆ ಎಷ್ಟು ಆರಾಮವಾಗಿ ನಿದ್ದೆ ಮಾಡಿದ್ದೀರಿ ಎನ್ನುವುದೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹೀಗೆ ಆರಾಮವಾಗಿ ಮಲಗುವುದು ಎನ್ನುವಾಗ ನಿಮ್ಮ ಹಾಸಿಗೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ.

ಹಾಸಿಗೆ ಎಲ್ಲರಿಗೂ ಒಂದೇ ಸರಿಯಾಗುವುದಿಲ್ಲ. ಕೆಲವು ನಿಮ್ಮ ಬೆನ್ನಿಗೆ ಸರಿಯಾಗಿ ಮೃದು ಅನುಭವವನ್ನು ನೀಡಲು ರೂಪಿಸಲಾಗಿರುತ್ತದೆ ಹಾಗೂ ಇನ್ನೂ ಕೆಲವನ್ನು ನಿಮ್ಮ ಎತ್ತರ, ವಯಸ್ಸು ಹಾಗೂ ತೂಕಕ್ಕೆ ತಕ್ಕಂತೆ ನಿಮಗೆ ಆರಾಮ ನೀಡಲು ವಿನ್ಯಾಸ ಮಾಡಲಾಗಿರುತ್ತದೆ. ಆದರೆ ನಾವು ಸಾಮಾನ್ಯವಾಗಿ ಹಾಸಿಗೆಯನ್ನು ಕೊಳ್ಳುವ ಮುನ್ನ ಇಷ್ಟೆಲ್ಲ ಯೋಚನೆ ಮಾಡಿ ಹಾಸಿಗೆ ಕೊಳ್ಳುವುದಿಲ್ಲ. ಆದರೆ ಇದನ್ನು ನಿರ್ಲಕ್ಷ ಮಾಡುವುದು ನಿಮ್ಮ ನಿದ್ದೆಯನ್ನು ಕೆಡಿಸುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಇಲ್ಲಿ ಹಾಸಿಗೆಯನ್ನು ಕೊಳ್ಳುವ ಮುನ್ನ ನೀವು ನೋಡಬೇಕಾದ ಕೆಲವು ಅಂಶಗಳನ್ನು ನೀಡಲಾಗಿದೆ.

6 Simple Tips To Choose A Mattress

ನಿಮ್ಮ ಹಾಸಿಗೆ ಎಷ್ಟು ಹಳೆಯದು

ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ ಎಂದಾದರೆ ಅದಕ್ಕೆ ಕಾರಣ ನಿಮ್ಮ ಹಾಸಿಗೆಯಾಗೆ ಇರಬಹುದು, ಅದು ಎಷ್ಟು ಹಳೆಯದು ಎನ್ನುವುದಾಗಿರಬಹುದು. ಎಲ್ಲಾ ಹಾಸಿಗೆಗಳು ಒಂದು ನಿಗದಿತ ಸಮಯದ ನಂತರ ಬದಲಾಯಿಸಲೇ ಬೇಕು. ಒಂದು ನಿಗದಿತ ಸಮಯದ ನಂತರ ಹಾಸಿಗೆಗಳು ತಮ್ಮ ಮೊದಲಿನ ಆರಾಮದಾಯಕ ಅನುಭವವನ್ನು ನೀಡುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತದೆ. ಹೀಗಾದ ಸಂದರ್ಭದಲ್ಲಿ ನೀವು ನಿಮ್ಮ ಹಾಸಿಗೆಯನ್ನು ಬದಲಾಯಿಸಬೇಕು

ಮೂರು ’ಎಸ್’ ಗಳು
ಸಾಫ್ಟ್ ನೆಸ್ (ಮೃದುತ್ವ), ಆಧಾರ (ಸಪೋರ್ಟ್), ಮತ್ತು ಸೈಜ್ (ಗಾತ್ರ) ಈ ಮೂರೂ ಹಾಸಿಗೆಯ ಪ್ರಮುಖ ಅಂಶಗಳು. ಕಡಿಮೆ ದರದನ್ನು ಕೊಂಡು ಖರೀದಿಸಿದ ಬಳಿಕ ಗೊಣಗಾಡುತ್ತಾರೆ.

ಖರೀದಿಸುವ ಮುನ್ನ ಪರೀಕ್ಷಿಸಿ
ನೀವು ಇಷ್ಟ ಪಟ್ಟ ಹಾಸಿಗೆಯನ್ನು ಕೊಳ್ಳುವ ಮೊದಲು ಕನಿಷ್ಟ ಪಕ್ಷ ಐದು ನಿಮಿಷ ಮಲಗಿ. ಇದು ಇದರ ಆರಾಮದಾಯಕ ಅನುಭವವನ್ನು ಹಾಗೂ ಇದು ನಿಮ್ಮ ಬೆನ್ನಿಗೆ ನೀಡುವ ಆಧಾರವನ್ನು ತಿಳಿಯಪಡಿಸುತ್ತದೆ. ನಿಮ್ಮ ನಿರ್ಧಾರವನ್ನು ಅಂಗಡಿ ಮಾಲೀಕನ ಕೈಯಲ್ಲಿ ಕೊಡಬೇಡಿ ಅಥವಾ ಬಹಳ ಅವಸರ ಅವಸರವಾಗಿ ನಿರ್ಧರಿಸಬೇಡಿ.

ಎಲ್ಲಾ ಆಯ್ಕೆಗಳನ್ನೂ ನೋಡಿ

ನೀವು ಇಷ್ಟ ಪಟ್ಟ ಹಾಸಿಗೆ ಗಟ್ಟಿಯಾಗಿದೆ, ಈಗಿನ ಮಾದರಿಯಲ್ಲಿದೆ ಹಾಗೂ ತಲೆದಿಂಬು ಜೊತೆಗಿದೆ ಎಂದು ಖಾತ್ರಿ ಪಡಿಸಿಕೊಳ್ಳಿ. ಹಾಸಿಗೆ ಮಾರಾಟದಲ್ಲಿ ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರಿರುವ ಬ್ರಾಂಡ್ ಗಳನ್ನೇ ಆರಿಸಿ. ಸಾಧಾರಣವಾಗಿದೆ ಸಾಕು ಎಂದು ಯಾವತ್ತೂ ಯೋಚಿಸಬೇಡಿ

ಹಾಸಿಗೆಗಾಗಿ ವಿಶೇಷವಾಗಿರುವ ಅಂಗಡಿಯಲ್ಲೇ ಖರೀದಿಸಿ
ಸಾಮಾನ್ಯ ಮಳಿಗೆಗಳಲ್ಲಿ ಹಾಸಿಗೆಯನ್ನು ಎಂದೂ ಖರೀದಿಸಬೇಡಿ. ಹಾಸಿಗೆ ಮಾರಾಟಕ್ಕಾಗಿ ಸೀಮಿತವಾಗಿರುವ ಅಂಗಡಿಗಳಲ್ಲಿನ ಸೇಲ್ಸ್ ಮೆನ್ ಗಳು ನಿಮಗೆ ಸರಿಯಾದ ಆಯ್ಕೆಯನ್ನು ಮಾಡಲು ನೆರವಾಗುತ್ತಾರೆ.

ವಾರಂಟಿಯನ್ನು ನೋಡಿ ಖರೀದಿಸಿ
ಒಂದು ಒಳ್ಳೆಯ ಹಾಸಿಗೆ ಕನಿಷ್ಟ ಪಕ್ಷ ’10’ ವರ್ಷಗಳ ಸಂಪೂರ್ಣ ಬದಲಾವಣೆ (ಫುಲ್ ರಿಪ್ಲೇಸ್ ಮೆಂಟ್) ಅಥವಾ ನಾನ್ ಪ್ರೊರೇಟೆಡ್ ವಾರಂಟಿಯನ್ನು ನೀಡುತ್ತವೆ.

English summary

6 Simple Tips To Choose A Mattress | Tips For Home Improvements

A good night's sleep is very essential for a healthy life. It is not just the number of hours that plays an important role in ensuring a good sleep but also the level of comfort that depends on the mattress that you choose to relax on.
 
X
Desktop Bottom Promotion