For Quick Alerts
ALLOW NOTIFICATIONS  
For Daily Alerts

ಏನೇ ಹೇಳಿ, ಉಪಹಾರ ಶಿಸ್ತಿನ ಸಿಪಾಯಿಯಂತೆ ಇರಲಿ!

By Deepu
|

ನಮ್ಮ ದಿನದ ಆಹಾರಗಳಲ್ಲಿ ಬೆಳಗಿನ ಉಪಹಾರವೇ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ರಾತ್ರಿಯ ನಿದ್ದೆಯ ಅವಧಿಯಲ್ಲಿ ಶರೀರ ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಹಲವು ಕಾರ್ಯಗಳು ನಡೆದು ದೇಹದ ಶಕ್ತಿ ಕಳೆದುಕೊಂಡಿರುತ್ತದೆ. ಒಂದು ರೀತಿಯಲ್ಲಿ ಅಷ್ಟು ಹೊತ್ತಿಗಾಗಿ ಉಪವಾಸವಿದ್ದಂತೆ. ಆದ್ದರಿಂದಲೇ ಈ ಉಪವಾಸದ ಅವಧಿಯ ಬಳಿಕ ಸೇವಿಸುವ ಆಹಾರಕ್ಕೆ break-fast, ಅಂದರೆ ಉಪವಾಸವನ್ನು ಮುರಿಯುವುದು ಎಂಬ ಅನ್ವರ್ಥನಾಮವಿದೆ. ಈ ಉಪಾಹಾರ ಉತ್ತಮ ಪೌಷ್ಟಿಕ, ಪ್ರೋಟೀನುಯುಕ್ತವಾಗಿರುವುದು ಅಗತ್ಯ.

ಇಂದಿನ ಧಾವಂತದ ದಿನಗಳಲ್ಲಿ ಬೆಳಿಗ್ಗೆ ಬೇಗನೇ ಆಫೀಸ್ ಸೇರುವ ಅವಸರ ಒಂದು ಕಡೆಯಾದರೆ, ಮುಂಜಾನೆ ಎದ್ದು, ಬೆಳಗಿನ ಉಪಹಾರ ರೆಡಿ ಮಾಡಿಕೊಳ್ಳುವಷ್ಟರಲ್ಲಿ ಸಮಯ ಮೀರಿರುತ್ತದೆ, ಇವೆಲ್ಲದರ ಜಂಜಾಟವೇ ಬೇಡ ಎಂದು, ಸಿದ್ಧ ಆಹಾರದ ಕಡೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. (ಉದಾಹರಣೆಗೆ, ಮನೆಯಲ್ಲಿ ತಂದಿರಿಸಿಕೊಂಡಿರುವ ಬ್ರೆಡ್ + ಜಾಮ್, ಬೇಕರಿಯ ಸಿಹಿ ತಿನಿಸುಗಳು, ಅಥವಾ, ಸಿದ್ಧ ಹಣ್ಣಿನ ರಸಗಳು, ಇತ್ಯಾದಿ) ಇನ್ನೂ ಕೆಲವರು, ದಾರಿಯಲ್ಲಿ ಎಲ್ಲಿ, ಏನು ಸಿಕ್ಕಿತೋ ಅದನ್ನು ಗಡಿಬಿಡಿಯಲ್ಲಿ ತಿನ್ನುತ್ತಾ, ಅರ್ಧಂಬರ್ಧ ಬಿಡುತ್ತಾ, ತಂಪುಪಾನೀಯವನ್ನೋ, ದುಬಾರಿ ಬೆಲೆಯ ಕಾಫಿ ಅಥವಾ ಇನ್ನಾವುದೋ ಪೇಯವನ್ನು ಗುಟುಕರಿಸುತ್ತಾ ಸಾರ್ಥಕತೆಯನ್ನು ಅನುಭವಿಸುವುದನ್ನು ನೋಡಬಹುದು.

ಆದರೆ ಇವೆಲ್ಲಾ ಆರೋಗ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಬಹುದು, ಥಟ್ಟನೇ ಅಲ್ಲದಿದ್ದರೂ ನಿಧಾನವಾಗಿ ಇದರ ಪ್ರಕೋಪ ದೇಹದ ಮೇಲೆ ಆಗಿರುವುದನ್ನು ಕಾಣಬಹುದು. ಚಿಂತಿಸದಿರಿ, ಇನ್ನೂ ಕಾಲ ಮಿಂಚಿಲ್ಲ, ನಿಮ್ಮ ಉಪಾಹಾರದ ಕುರಿತಾಗಿ ಕಾಳಜಿಯನ್ನು ವಹಿಸಿ, ಆರೋಗ್ಯದ ಹಿತದೃಷ್ಟಿಯಿಂದ ಇದು ತುಂಬಾ ಮುಖ್ಯ. ಬನ್ನಿ ಬೆಳಗ್ಗೆ ಉಪಾಹಾರಕ್ಕೆ ಯಾವ ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ...

ಬ್ರೆಡ್ + ಜಾಮ್

ಬ್ರೆಡ್ + ಜಾಮ್

ನೀವು ಚಿಕ್ಕ ಹುಡುಗರಾಗಿದ್ದಾಗಿನಿಂದಲೂ ಬ್ರೆಡ್ ಜಾಮ್ ನಿಮ್ಮ ಮೆಚ್ಚಿನ ತಿಂಡಿಯಲ್ಲವೇ? ಆದರೆ ಇದು ಬೆಳಗ್ಗೆ ಉಪಾಹಾರವಾಗಿ ಸೇವಿಸಲು ಒಳ್ಳೆಯದಲ್ಲ. ಜಾಮ್ ಬದಲಿಗೆ ಮೊಟ್ಟೆಯ ಜೊತೆಗೆ ಬ್ರೆಡ್ ಸೇವಿಸಿ ಅಥವಾ ಬೆಳಗ್ಗೆ ಕೇವಲ ಮೊಟ್ಟೆಯನ್ನು ಮಾತ್ರ ಉಪಾಹಾರವಾಗಿ ಸೇವಿಸಿ.

ಸಂಸ್ಕರಿಸಿದ ಮಾಂಸ

ಸಂಸ್ಕರಿಸಿದ ಮಾಂಸ

ಬೆಳಗ್ಗೆ ಹೊತ್ತು ಸಂಸ್ಕರಿಸಿದ ಮಾಂಸವನ್ನು ಸೇವಿಸುವುದು ಒಳ್ಳೆಯದಲ್ಲ. ಸರಿಯಾಗಿ ಹೇಳಬೇಕು ಎಂದರೆ ಇದನ್ನು ದಿನದ ಯಾವ ಹೊತ್ತಿನಲ್ಲೂ ಸಹ ಸೇವಿಸುವುದು ಒಳ್ಳೆಯದಲ್ಲ. ಇವುಗಳಲ್ಲಿ ನೈಟ್ರೇಟ್‌ಗಳು ಇರುತ್ತವೆ, ಇವು ಕೆಲವೊಂದು ಬಗೆಯ ಕ್ಯಾನ್ಸರ್‌ಗಳನ್ನು ಹುಟ್ಟು ಹಾಕುತ್ತವೆ. ಹಾಗಾಗಿ ಇದರಿಂದ ದೂರವಿರಿ.

ಡೋನಟ್ಸ್

ಡೋನಟ್ಸ್

ಡೋನಟ್ಸ್ ಮತ್ತು ಪೇಸ್ಟ್ರೀಗಳು ಅಥವಾ ರೀಫೈನ್ ಮಾಡಲಾದ ಹಿಟ್ಟು ಮತ್ತು ಸಕ್ಕರೆಯಿಂದ ಮಾಡಿದ ಯಾವುದೇ ಆಹಾರ ಪದಾರ್ಥಗಳನ್ನು ಬೆಳಗಿನ ಉಪಾಹಾರವಾಗಿ ಸೇವಿಸುವುದು ಒಳ್ಳೆಯದಲ್ಲ. ಅದರ ಬದಲಿಗೆ ಯಾವುದಾದರು ಆರೋಗ್ಯಕರವಾದ ಆಯ್ಕೆಯನ್ನು ಹುಡುಕಿಕೊಳ್ಳಿ.

ಬರ್ಗರ್

ಬರ್ಗರ್

ಬರ್ಗರ್ ಅನ್ನು ಬೆಳಗ್ಗೆ ಸೇವಿಸುವುದು ಒಳ್ಳೆಯದಲ್ಲ. ನಾವು ಬೆಳಗ್ಗೆ ಹೊತ್ತು ಕೆಲಸಕ್ಕೆ, ಶಾಲೆ-ಕಾಲೇಜುಗಳಿಗೆ ಹೋಗುವ ಆತುರದಲ್ಲಿರುತ್ತೇವೆ. ಇದರಲ್ಲಿರುವ ಪ್ರಿಸರ್ವೇಟಿವ್‌ಗಳು ಮತ್ತು ಆಡಿಟಿವ್‌ಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

ಸಕ್ಕರೆ ಇರುವ ಹಣ್ಣಿನ ರಸಗಳು

ಸಕ್ಕರೆ ಇರುವ ಹಣ್ಣಿನ ರಸಗಳು

ಹಣ್ಣಿನ ರಸಗಳನ್ನು ಬೆಳಗ್ಗೆ ಸೇವಿಸುವುದು ಒಳ್ಳೆಯದು, ಆದರೆ ಅವುಗಳಿಗೆ ಸಕ್ಕರೆಯನ್ನು ಬೆರೆಸಿಕೊಂಡು ಸೇವಿಸುವುದು ಒಳ್ಳೆಯದಲ್ಲ. ಸಕ್ಕರೆ ಅಂಶವಿರುವ ರಸಗಳು ಸಹ ಒಳ್ಳೆಯವಲ್ಲ. ಅವು ನಿಮ್ಮ ಉಪಾಹಾರಕ್ಕೆ ಹೇಳಿ ಮಾಡಿಸಿದುವಲ್ಲ. ಅದರ ಬದಲಿಗೆ ತರಕಾರಿ ರಸವನ್ನು ಸೇವಿಸಿ. ಬೆಳಗ್ಗೆ ಹೊತ್ತು ನಿಮಗೆ ಪೋಷಕಾಂಶಗಳು ಮತ್ತು ಚೈತನ್ಯವನ್ನು ತುಂಬುವ ಆಹಾರ ಅಗತ್ಯವಿರುತ್ತದೆಯೋ ಹೊರತು, ಸಕ್ಕರೆ ಅಂಶವಿರುವ ಆಹಾರ ಪದಾರ್ಥಗಳಲ್ಲ!.

ಧಾನ್ಯದ ಪದಾರ್ಥಗಳು

ಧಾನ್ಯದ ಪದಾರ್ಥಗಳು

ನಾವು ಬೆಳಗ್ಗೆ ಸೇವಿಸುವ ಹಲವಾರು ಆಹಾರ ಪದಾರ್ಥಗಳು ಧಾನ್ಯದ ಪದಾರ್ಥಗಳಾಗಿವೆ. ಇವುಗಳಲ್ಲಿ ಗ್ಲುಟೆನ್ ಎಂಬ ಅಂಶವಿರುತ್ತದೆ. ಇವುಗಳಲ್ಲಿ ಕೆಲವೊಂದರಲ್ಲಿ ಸಕ್ಕರೆ ಅಂಶ ಸಹ ಇರುತ್ತದೆ. ಹಾಗಾಗಿ ಬೆಳಗ್ಗೆ ಹೊತ್ತು ಇದನ್ನು ಸೇವಿಸಲು ಕಡಿಮೆ ಪ್ರಾಶಸ್ತ್ಯ ನೀಡಿ.

ಸಿಹಿತಿಂಡಿ

ಸಿಹಿತಿಂಡಿ

ಒಂದು ವೇಳೆ ನೀವು ಸಕ್ಕರೆ ಪ್ರಿಯರಾಗಿದ್ದರು ಸಹ ಬೆಳಗ್ಗೆ ಹೊತ್ತು ಸಿಹಿತಿಂಡಿ/ ಡೆಸರ್ಟ್ಸ್ ಸೇವಿಸಲು ಹೋಗಬೇಡಿ. ಇವುಗಳಲ್ಲಿ ಕಾರ್ಬೊಹೈಡ್ರೇಟ್ ಅಧಿಕ ಪ್ರಮಾಣದಲ್ಲಿರುತ್ತವೆ. ಇವುನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚು ಮಾಡುತ್ತವೆ.

English summary

Foods Not To Eat In The Morning

You can start your day with a healthy food. That will energise your entire day. But there are also some foods not to eat in the morning. What are they? Now, let us discuss what not to eat as breakfast
Story first published: Monday, February 1, 2016, 20:58 [IST]
X
Desktop Bottom Promotion