For Quick Alerts
ALLOW NOTIFICATIONS  
For Daily Alerts

ತೂಕ ಕಳೆದುಕೊಳ್ಳಲು ತಾಳ್ಮೆಯೆಂಬ ಮಂತ್ರ

By Deepak
|

ತೂಕ ಹೆಚ್ಚಳ ಇಂದು ಬಡವ-ಬಲ್ಲಿದ, ಚಿಕ್ಕವ-ದೊಡ್ಡವ, ಪುರುಷ-ಮಹಿಳೆ ಎಂಬ ಬೇಧಭಾವವಿಲ್ಲದೇ ಎಲ್ಲರನ್ನೂ ಆವರಿಸುತ್ತಿದೆ. ಇತ್ತೀಚೆಗೆ ಸವಲತ್ತುಗಳು ಹೆಚ್ಚಾಗಿರುವ ಮೂಲಕ ಕಡಿಮೆಯಾಗಿರುವ ವ್ಯಾಯಮ ಒಂದು ಕಾರಣವಾದರೆ ಅರಿವಿಲ್ಲದೇ ನಮ್ಮ ಆಹಾರದ ಮೂಲಕ ದೇಹ ಪ್ರವೇಶಿಸುವ ಅನಾರೋಗ್ಯಕರ ಪೋಷಕಾಂಶಗಳ ಮಹಾಪೂರ ಇನ್ನೊಂದೆಡೆ. ಇವು ಇಷ್ಟೇ ಸಾಕು ದೇಹದ ತೂಕ ಹೆಚ್ಚಾಗಲು, ಅಲ್ಲದೆ ಒಮ್ಮೆ ಇದು ನಮ್ಮನ್ನು ಆವರಿಸಿಕೊಂಡು ಬಿಟ್ಟರೆ ಅಂತೂ ಹಿಂದಿರುಗಿ ಬರುವುದು ಬಹಳ ಕಷ್ಟ! ಆದರೆ ಅಸಾಧ್ಯವೇನಲ್ಲ...! ಮೈ ತೂಕ ಹೆಚ್ಚಾಗಬೇಕೆ? ಈ ಆಹಾರ ತಿನ್ನಿ

ಇದಕ್ಕೆ ಬೇಕಾಗಿರುವುದು ಕೊಂಚ ತಾಳ್ಮೆ ಹಾಗೂ ಕಟ್ಟು ನಿಟ್ಟಿನ ವ್ಯಾಯಮ ಇದರ ಜೊತೆಗೆ ಆಹಾರ ಸೇವನೆಯಲ್ಲಿ ಮಿತಿ ಮತ್ತು ಸೇವಿಸುವ ಆಹಾರದಲ್ಲಿ ಬದಲಾವಣೆ ಇಷ್ಟೇ. ಮೊದಲೆರಡು ವಿಧಾನಗಳು ನಮ್ಮ ಮಾನಸಿಕ ಸ್ಥೈರ್ಯವನ್ನು ಅವಲಂಬಿಸಿದ್ದರೆ ಮೂರನೆಯದು ನಮ್ಮ ಆಯ್ಕೆಯನ್ನು ಅವಲಂಬಿಸಿದೆ. ಅದರಲ್ಲೂ ತಾಳ್ಮೆಯಿಂದ ತೂಕ ಕಳೆದುಕೊಳ್ಳಬೇಕಾದ ವಿಧಾನಗಳನ್ನು ನೀವು ಅಳವಡಿಸಿಕೊಂಡಲ್ಲಿ ನಿರಾಸೆ ನಿಮ್ಮನ್ನು ಖಂಡಿತ ಕಾಡುವುದಿಲ್ಲ. ಪ್ರಯತ್ನ ಪಟ್ಟಲ್ಲಿ ಒಳ್ಳೆಯ ಫಲ ಖಂಡಿತ ನಿಮ್ಮದಾಗುತ್ತದೆ. ಅದಕ್ಕಾಗಿ ಕೆಲವೊಂದು ಸೂತ್ರಗಳನ್ನು ನೀವು ಅಳವಡಿಸಿಕೊಳ್ಳಬೇಕಾಗುತ್ತದೆ. ಅದೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಓದಿ..

ಸಾಕಷ್ಟು ನಿದ್ದೆ

ಸಾಕಷ್ಟು ನಿದ್ದೆ

ಆರೋಗ್ಯಕರ ತೂಕ ಇಳಿಕೆಯಲ್ಲಿ ನಿದ್ದೆ ಪರಿಣಾಮಕಾರಿಯಾಗಿದೆ. ಚಯಾಪಚಯ ವ್ಯವಸ್ಥೆಯಲ್ಲಿ ಸಮಸ್ಥಿತಿಯಲ್ಲಿಡಲು ಸೂಕ್ತ ನಿದ್ದೆ ಬೇಕೇ ಬೇಕು.

ಸಣ್ಣ ಪ್ರಮಾಣದ ಆಹಾರ

ಸಣ್ಣ ಪ್ರಮಾಣದ ಆಹಾರ

ಒಮ್ಮೆಲೆ ಹೆಚ್ಚು ತಿನ್ನುವ ಬದಲಿಗೆ ಸಣ್ಣ ಪ್ರಮಾಣದಲ್ಲಿ ಸ್ವಲ್ಪ ಸ್ವಲ್ಪವೇ ಸೇವಿಸಿ. ಇದರಿಂದ ಚಯಾಪಚಯ ಕ್ರಿಯೆ ಸುಲಲಿತವಾಗಿ ತೂಕ ಇಳಿಕೆಯ ಶ್ರಮವನ್ನು ಕಡಿಮೆ ಮಾಡಲಿದೆ.

ಆರೋಗ್ಯಕರ ಉಪಹಾರ

ಆರೋಗ್ಯಕರ ಉಪಹಾರ

ಬೆಳಗ್ಗಿನ ಉಪಹಾರವನ್ನು ತ್ಯಜಿಸದೇ ಸೇವಿಸಿ. ದಿನವಿಡೀ ನಿಮ್ಮನ್ನು ಚಟುವಟಿಕೆಯಿಂದ ಇರಿಸಲು ಆರೋಗ್ಯಕರ ಉಪಹಾರ ಅತ್ಯಗತ್ಯ. ತಾಜಾ ಮಿಶ್ರ ಹಣ್ಣುಗಳು, ಪ್ರೋಟೀನ್, ದ್ವಿದಳ ಧಾನ್ಯಗಳನ್ನು ನಿಮ್ಮ ಉಪಹಾರದಲ್ಲಿ ಸೇರಿಸಿಕೊಳ್ಳಿ.

ಸಕ್ಕರೆ ಮಿಶ್ರತ ಪಾನೀಯಗಳು

ಸಕ್ಕರೆ ಮಿಶ್ರತ ಪಾನೀಯಗಳು

ಸೋಡಾ, ಸಕ್ಕರೆ ಇರುವ ಹೆಚ್ಚಿನ ಪಾನೀಯಗಳ ಸೇವನೆಯನ್ನು ಆದಷ್ಟು ವರ್ಜಿಸಿ. ಕೋಕ್‌ನಂತಹ ಪಾನೀಯಗಳು 39 ಶೇಕಡಾದಷ್ಟು ಸಕ್ಕರೆಯನ್ನು ಒಳಗೊಂಡಿರುತ್ತವೆ. ಇಂತಹ ಪಾನೀಯಗಳ ಸೇವನೆ ನಿಮ್ಮಲ್ಲಿ ತೂಕವನ್ನು ಹೆಚ್ಚಿಸುತ್ತದೆ.

ಕಡಿಮೆ ಆಹಾರ ಸೇವನೆ

ಕಡಿಮೆ ಆಹಾರ ಸೇವನೆ

ನಿಮಗೆ ಎಷ್ಟು ಬೇಕೋ ಅಷ್ಟೇ ಪ್ರಮಾಣದ ಆಹಾರ ಸೇವನೆಯನ್ನು ಮಾಡಿ. ಆಹಾರ ನಿಮಗೆ ಶಕ್ತಿ ಪೂರೈಕೆಗೆ ಮಾತ್ರ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಳ್ಳಿ.

ತೂಕ ಕಳೆದುಕೊಳ್ಳಲು ವ್ಯಾಯಮ

ತೂಕ ಕಳೆದುಕೊಳ್ಳಲು ವ್ಯಾಯಮ

ವಾರದೊಳಗೆ ತೂಕ ಕಳೆದುಕೊಳ್ಳುವ ಹಂಬಲ ನಿಮ್ಮಲ್ಲಿ ಇದ್ದರೆ ಕ್ರೀಡೆ ಇದಕ್ಕೆ ಸಹಕಾರಿ. ಜಾಗಿಂಗ್, ವಾಕಿಂಗ್, ಸ್ಟೆಪ್ ಏರೋಬಿಕ್ಸ್, ಈಜುವುದು, ಸೈಕಲ್ ತುಳಿಯುವುದು, ಇಲೆಪ್ಟಿಕಲ್ ಬರ್ನರ್, ನೃತ್ಯ, ಜೂಂಬಾ ಮತ್ತು ಮನೆಯ ಸ್ವಚ್ಛತೆ ಇದರಲ್ಲಿ ಮುಖ್ಯವಾದುದು.

ಆಹಾರ ತ್ಯಜಿಸದಿರಿ

ಆಹಾರ ತ್ಯಜಿಸದಿರಿ

ಊಟವನ್ನು ತ್ಯಜಿಸುವುದು ಚಯಾಪಚಯ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ. ನೀವು ಆಹಾರವನ್ನು ತ್ಯಜಿಸಿದಲ್ಲಿ, ಹಸಿವು ಇನ್ನಷ್ಟು ಅಧಿಕವಾಗುತ್ತದೆ ಮತ್ತು ಇನ್ನಷ್ಟು ಹೆಚ್ಚು ತಿನ್ನುವ ಬಯಕೆ ನಿಮ್ಮಲ್ಲಿ ಉದ್ಭವಗೊಳ್ಳುತ್ತದೆ.

7 ದಿನಗಳ ಆರೋಗ್ಯಕರ ಡಯಟ್ ಯೋಜನೆ

7 ದಿನಗಳ ಆರೋಗ್ಯಕರ ಡಯಟ್ ಯೋಜನೆ

7 ದಿನಗಳಲ್ಲಿ ತೂಕ ಕಳೆದುಕೊಳ್ಳುವ ಯೋಜನೆ ನಿಮ್ಮದಾಗಿದೆ ಎಂದಾದಲ್ಲಿ ಇದಕ್ಕಾಗಿ ಡಯಟ್ ಪ್ಲಾನ್‌ಗಳಿದ್ದು ಅವುಗಳು ನಿಮಗೆ ಸಹಾಯ ಮಾಡಲಿವೆ. ದಿನವೂ ನೀವು ಸೇವಿಸುವುದನ್ನು ಬರೆದಿಟ್ಟುಕೊಳ್ಳಿ ಇದರಿಂದ ನಿಮ್ಮ ಸೇವಿಸುವಿಕೆಯ ಪ್ರಮಾಣದ ಮೇಲೆ ಗಮನ ಹರಿಸಿಕೊಳ್ಳಬಹುದು. ಅಲ್ಲದೆ ಈ ಏಳು ದಿನಗಳ ಡಯಟ್ ಯೋಜನೆಯಲ್ಲಿ ಹಣ್ಣುಗಳು, ತರಕಾರಿಗಳು ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಸೂಪ್‌

ಸೂಪ್‌

ನಿತ್ಯವೂ ಸೂಪ್‌ಗಳನ್ನು ಸೇವಿಸುವುದು ಜೀರ್ಣಕ್ರಿಯೆಯನ್ನು ಸರಾಗೊಳಿಸಿ ಚಯಾಪಚಯ ಕ್ರಿಯೆಗೆ ಸಹಕಾರಿಯಾಗಲಿದೆ ಎಂಬುದಾಗಿ ಸಂಶೋಧನೆಗಳು ಪತ್ತೆಹಚ್ಚಿವೆ ಇದು ಕೂಡ ನಿಮ್ಮ ತೂಕ ಇಳಿಕೆಗೆ ಪರಿಣಾಮಕಾರಿಯಗಬಲ್ಲುದು.

ನೀರು ಸೇವಿಸಿ

ನೀರು ಸೇವಿಸಿ

ಆರೋಗ್ಯಕರ ತೂಕ ಇಳಿಕೆಯಲ್ಲಿ ನೀರು ಪರಿಣಾಮಕಾರಿಯಾದುದು. ನಿಮ್ಮ ಚಯಾಪಚಯ ಕ್ರಿಯೆಗೆ ಇದು ಬಲವನ್ನು ನೀಡುವುದಲ್ಲದೆ, ಹೊಟ್ಟೆಯನ್ನು ಬೇಗನೇ ತುಂಬಿಸುವಲ್ಲಿ ಇದು ಸಹಕಾರಿ. ದಿನವೂ 8 ಲೋಟಗಳಷ್ಟು ನೀರು ಸೇವಿಸಿ.

English summary

Weight loss tips: Go Slim Without Gym in Kannada

Weight loss cannot be achieved in a day or two, and we are all impatient whenever it comes to getting the waist line close to the zero figure mark. We want to lose weight as soon as possible, we want to get thinner right now! But, as we all know, weight loss, especially a healthy one, takes more time than we can imagine.
Story first published: Friday, November 27, 2015, 19:29 [IST]
X
Desktop Bottom Promotion