For Quick Alerts
ALLOW NOTIFICATIONS  
For Daily Alerts

ಪುರುಷರ ದೇಹ ನಿರ್ಜಲೀಕರಣಗೊಳ್ಳುವುದನ್ನು ಪಾರುಮಾಡುವುದು ಹೇಗೆ ?

By Arpitha Rao
|

ನಮ್ಮ ದೇಹ ತೇವಾಂಶ ಮತ್ತು ನೀರಿನ ಕೊರತೆಯಿಂದಾಗಿ ನಿರ್ಜಲೀಕರಣಗೊಳ್ಳುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ತೀವ್ರ ಹವಾಮಾನ ವೈಪರಿತ್ಯದಿಂದಾಗಿ ದೇಹದ ತೇವಾಂಶ ಸಂಪೂರ್ಣವಾಗಿ ಕುಂದಿ ಸಮಸ್ಯೆಗಳು ಕಾಣಿಸಿಕೊಳ್ಳಲು ಕಾರಣವಾಗುತ್ತದೆ.

ಮೆಹಂದಿ ಎಲೆಗಳ ಆರೋಗ್ಯಯುತ ಪ್ರಯೋಜನಗಳು

ದೇಹ ತೇವಾಂಶ ಕಳೆದುಕೊಳ್ಳುವುದು ಸೂಕ್ತವಲ್ಲ.ಕಡಿಮೆಯಾಗಿರುವ ನೀರಿನ ಅಂಶವನ್ನು ದೇಹಕ್ಕೆ ಒದಗಿಸಲು ನೀವು ಸಾಕಷ್ಟು ನೀರು ಕುಡಿಯುವುದನ್ನು ರೂಡಿಸಿಕೊಳ್ಳಬೇಕು.ಬೇಸಿಗೆಯಲ್ಲಿ ದೇಹವು ಮೊದಲು ತೆಗೆದುಕೊಳ್ಳುತ್ತಿದುದಕ್ಕಿಂತ ಹೆಚ್ಚು ಪಟ್ಟು ನೀರನ್ನು ಹೀರಿಕೊಳ್ಳುತ್ತದೆ.ಆದ್ದರಿಂದ ಬೇಸಿಗೆಯಲ್ಲಿ ಉಳಿದ ಕಾಲದಲ್ಲಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಪ್ರಮಾಣದ ನೀರನ್ನು ಪ್ರತಿನಿತ್ಯ ಸೇವಿಸಬೇಕು.

ಪ್ರತಿದಿನ ಕುಡಿದ ನೀರು ಆವಿಯ ರೂಪವಾಗಿ ಹೊರಹೋಗುವುದು ನಿಜ.ಜೊತೆಗೆ ಮೂತ್ರ ಮತ್ತು ಬೆವರಿನ ಮೂಲಕ ಹೆಚ್ಚಿನ ನೀರು ಹೊರಹೋಗುತ್ತದೆ.ನೀರಿನ ತೇವಾಂಶದ ಜೊತೆಗೆ ದೇಹದಲ್ಲಿರುವ ಉತ್ತಮ ಉಪ್ಪಿನ ಅಂಶ ಕೂಡ ಹೊರಹೋಗುತ್ತದೆ.ಆದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಲವಣವನ್ನು ಕೂಡ ದೇಹಕ್ಕೆ ಒದಗಿಸಬೇಕು.

ಈ ಆಹಾರಗಳು ನಿಮ್ಮ ರಾತ್ರಿಯೂಟಕ್ಕೆ ಆರೋಗ್ಯದಾಯಕ!

ಉಪ್ಪು,ಸಕ್ಕರೆ ನೀರು :-

ಉಪ್ಪು,ಸಕ್ಕರೆ ನೀರು :-

ಸಾಕಷ್ಟು ವರ್ಷಗಳಿಂದ ಮಾನವನು ದೇಹದ ನಿರ್ಜಲೀಕರಣವನ್ನು ಹೋಗಲಾಡಿಸಲು ಸಕ್ಕರೆ ಮತ್ತು ಉಪ್ಪು ಉತ್ತಮವಾದುದು ಎಂಬುದನ್ನು ಕಂಡುಕೊಂಡಿದ್ದಾನೆ.ಇದನ್ನು ತೆಗೆದುಕೊಳ್ಳಲು ವಿಧಾನವಿದೆ.ಒಂದು ಲೋಟ ನೀರಿಗೆ ಅರ್ಧ ಚಮಚದಷ್ಟು ಉಪ್ಪು ಮತ್ತು ಒಂದು ಚಮಚದಷ್ಟು ಸಕ್ಕರೆಯನ್ನು ಬೆರೆಸಿ.ಚಮಚದ ಮೂಲಕ ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಕಲಕುತ್ತಿರಿ.ನಂತರ ಇದನ್ನು ಕುಡಿಯಲು ಬಳಸಿ.

ಹಣ್ಣಿನ ಜ್ಯೂಸ್ :-

ಹಣ್ಣಿನ ಜ್ಯೂಸ್ :-

ಮಾರುಕಟ್ಟೆಯಲ್ಲಿ ಈಗ ಸಾಕಷ್ಟು ಜ್ಯೂಸ್ ಗಳು ಲಭ್ಯವಿರುತ್ತವೆ.ತಾಜಾ ಹಣ್ಣುಗಳನ್ನು ಮಾರುಕಟ್ಟೆಯಿಂದ ತಂದು ಅದರಿಂದ ಜ್ಯೂಸ್ ಮಾಡಿಕೊಳ್ಳಿ.ಒಂದು ಹಣ್ಣನ್ನು ಉಪಯೋಗಿಸಿ ಜ್ಯೂಸ್ ಮಾಡಿಕೊಳ್ಳಬಹುದು ಅಥವಾ ವಿವಿಧ ರೀತಿಯ ಹಣ್ಣುಗಳನ್ನು ಬೆರೆಸಿ ಜ್ಯೂಸ್ ತಯಾರಿಸಿಕೊಳ್ಳಬಹುದು.ಈ ಜ್ಯೂಸ್ ತಯಾರಿಸುವಾಗ ಒಂದು ಚಮಚ ಸಕ್ಕರೆ ಮತ್ತು ಚಿಟಕಿ ಉಪ್ಪನ್ನು ಬೆರೆಸಿದರೆ ಆರೋಗ್ಯಕ್ಕೂ ಒಳ್ಳೆಯದು ಮತ್ತು ರುಚಿಯೂ ಹೆಚ್ಚು.

ಕೊಡೆ/ಛತ್ರಿ :-

ಕೊಡೆ/ಛತ್ರಿ :-

ನೀರು ಬಿಸಿಲಿಗೆ ಹೊರಗೆ ಹೋಗುವಾಗ ಛತ್ರಿ ತೆಗೆದುಕೊಂಡು ಹೋಗುವುದು ಸೂಕ್ತ,ಇದರಿಂದ ನಿಮ್ಮ ತ್ವಚೆ ಟ್ಯಾನ್ ಆಗುವುದಿಲ್ಲ ಮತ್ತು ನಿಮ್ಮನ್ನು ಸುಸ್ತು ಮಾಡುವುದಿಲ್ಲ.ನೀರು ಸೂರ್ಯನ ವಿಕಿರಣಗಳಿಗೆ ತುಂಬಾ ಹೊತ್ತು ಮೈಯೊಡ್ಡಿದಾಗ ಚರ್ಮ ಕಪ್ಪಾಗುವುದರ ಜೊತೆಗೆ ತೇವಾಂಶ ಕಳೆದುಕೊಳ್ಳುತ್ತದೆ.ಸ್ವಲ್ಪಮಟ್ಟಿಗೆ ವಿಟಮಿನ್ ಡಿ ಅಗತ್ಯವಿದೆಯಾದರೂ ಅತಿಯಾದಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆದ್ದರಿಂದ ಟ್ಯಾನ್ ಆಗುವುದನ್ನು ತಪ್ಪಿಸಲು ಛತ್ರಿಯನ್ನು ಬಳಸುವುದು ಮರೆಯಬೇಡಿ.

ಕುಡಿಯುವ ನೀರು :-

ಕುಡಿಯುವ ನೀರು :-

ನಿರ್ಜಲೀಕರಣವನ್ನು ತಡೆಯಲು ಹೇರಳವಾಗಿ ನೀರು ಕುಡಿಯುವುದನ್ನು ರೂಡಿಸಿಕೊಳ್ಳಿ.ಬೇಸಿಗೆಯಲ್ಲಿ ಕಡಿಮೆ ಎಂದರೆ ಎಂಟು ಲೋಟ ನೀರನ್ನು ಪ್ರತಿದಿನ ಕುಡಿಯಬೇಕು,ಇದರಿಂದ ನಿಮ್ಮ ದೇಹ ತೇವಾಂಶ ಹಿಡಿದಿಟ್ಟುಕೊಳ್ಳಲು ಸಹಾಯಕವಾಗುತ್ತದೆ.

ನಿಂಬು ನೀರು :-

ನಿಂಬು ನೀರು :-

ನಿಂಬೆಹಣ್ಣು ಕೇವಲ ನಿಮ್ಮ ದೇಹದ ನಿರ್ಜಲೀಕರಣ ತಡೆಯುವುದು ಮಾತ್ರವಲ್ಲ , ನಿಮಗೆ ತಾಜಾ ಅನುಭವವನ್ನು ಕೂಡ ನೀಡುತ್ತದೆ.ಬೇಸಿಗೆಯಲ್ಲಿ ಪ್ರತಿದಿನ ಮಧ್ಯಾನ್ಹ ಒಮ್ಮೆ ನಿಂಬುನೀರು/ ನಿಂಬು ಪಾನಕ ಕುಡಿಯುವುದರಿಂದ ದೇಹ ತಾಜಾ ಭಾವನೆ ಹೊಂದುತ್ತದೆ.

English summary

How to treat men with dehydrated body?

Our body gets dehydrated due to lack of water and moisture content. This takes place generally during the summer season when the extreme weather condition dries up everything along with the water content under the skin layers.
Story first published: Friday, May 9, 2014, 14:05 [IST]
X
Desktop Bottom Promotion