Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ವೆಟ್ ಶರ್ಟ್‌ನಲ್ಲಿ ಮಿಂಚಿದ ಫ್ಯಾಷನ್ ಬೆಡಗಿ ಸೋನಂ
ಬಿ ಟೌನ್‌ನಲ್ಲಿ ಫ್ಯಾಷನ್ ಎಂಬುದು ಪ್ರಮುಖ ಅಂಶವಾಗಿದ್ದು ತಾರೆಯರು ಬಣ್ಣದ ಲೋಕದಲ್ಲಿ ಗುರುತಿಸುವಂತೆ ಇರುವುದೇ ತಮ್ಮ ಸ್ಟೈಲ್‌ಗಳಿಂದಾಗಿದೆ. ಹೊಸಬರೇ ಇರಲಿ ಹಳಬರೇ ಇರಲಿ ಸಿನಿತಾರೆಯರು ಫ್ಯಾಷನ್ ಪ್ರಿಯರಾಗಿರುತ್ತಾರೆ. ಫ್ಯಾಷನ್ ವಿಷಯದಲ್ಲಿ ಬಾಲಿವುಡ್‌ನ ಚೆಲುವೆಯರಿಗೆ ಪೈಪೋಟಿ ಇದ್ದೇ ಇರುತ್ತದೆ.

ಬಾಲಿವುಡ್‌ನಲ್ಲಿ ಫ್ಯಾಷನ್ ಎಂದರೆ ಸೋನಂ ಕಪೂರ್ ಎಂಬುವಷ್ಟರ ಮಟ್ಟಿಗೆ ಕಪೂರ್ ಕುಡಿ ಪ್ರಚಲಿತದಲ್ಲಿದ್ದಾರೆ. ಫ್ಯಾಷನ್ ವಿಚಾರಕ್ಕೆ ಬಂದಾಗ ಸೋನಂ ಎಲ್ಲಿಯೂ ತಪ್ಪುವುದೇ ಇಲ್ಲ. ಸ್ವತಃ ಆಕೆಯ ಸಹೋದರಿಯೇ ಫ್ಯಾಷನ್ ವಿನ್ಯಾಸಗಾರ್ತಿಯಾಗಿರುವುದರಿಂದ ಫ್ಯಾಷನ್ ಜ್ಞಾನ ಸೋನಂಗೆ ಅಗಾಧವಾಗಿದೆ. ಹೆಚ್ಚಿನ ಚಿತ್ರಗಳಿಗೆ ಸ್ವತಃ ಆಕೆಯೇ ವಿನ್ಯಾಸಗಾರ್ತಿಯಾಗಿ ಇದ್ದಿದ್ದೂ ಇದೆ.
ಇಂದು ಸೋನಂ ಮನಸೂರೆಗೊಂಡಿರುವುದು ತಮ್ಮ ಚಳಿಗಾಲದ ಉಡುಗೆಯ ಮೂಲಕ. ಸಹೀನ್ ಮನ್ನಾನ್ ಸೀ ಸ್ವೆಟ್ ಶರ್ಟ್‌ನಲ್ಲಿ ಸೋನಂ ಹುಚ್ಚೆಬ್ಬಿಸುವಂತೆ ಕಂಡುಬಂದಿದ್ದಾರೆ. ರೌಂಡ್ ಆಕಾರವುಳ್ಳ ಈ ಸ್ವೆಟ್ ಶರ್ಟ್ ಎಡಭಾಗದಲ್ಲಿ ಹೊಳೆಯುವ ನಕ್ಷತ್ರ ಡಿಸೈನ್‌ಗಳನ್ನು ಪಡೆದುಕೊಂಡಿದೆ.
ಇನ್ನು ಸ್ವೆಟ್ ಶರ್ಟ್‌ಗೆ ಜೊತೆಗಾಗಿ ಸೋನಂ ಬಿಳಿ ಶರ್ಟ್ ಅನ್ನು ಧರಿಸಿದ್ದು, ಕಪ್ಪು ಲೆಗ್ಗಿನ್ಸ್ ಮತ್ತು ಕಪ್ಪು ಬೂಟ್‌ಗಳನ್ನು ಧರಿಸಿಕೊಂಡಿದ್ದಾರೆ. ಸೋನಂನ ಸ್ವೆಟ್ ಶರ್ಟ್ ಧರಿಸಿಕೊಂಡಿರುವ ರೀತಿ ನಿಮಗೂ ಇಷ್ಟವಾಯಿತೇ? ನೀವೂ ಇದೇ ಬಗೆಯಲ್ಲಿ ಉಡುಗೆ ಧರಿಸಿ ನಿಮ್ಮ ಗೆಳೆಯನನ್ನು ಮೆಚ್ಚಿಸುವ ಯೋಜನೆಯಲ್ಲಿದ್ದೀರಾ?
Read in english - WinterFashion: Gorgeous Sonam Kapoor In A Handsome Shahin Mannan Sea Sweatshirt



Click it and Unblock the Notifications

