Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಹುಮುಖಿ ಪ್ರತಿಭೆಯ ಪ್ರಬುದ್ಧ ತಾರೆ-ತಿಸ್ಕಾ ಚೋಪ್ರಾ
ಬಾಲಿವುಡ್ನಲ್ಲಿ ಹೊಸ ಮುಖಗಳು ಅಂದಚೆಂದವಾಗಿ ತಮ್ಮ ಸಿನಿ ಜೀವನದ ಆರಂಭವನ್ನು ಮಾಡಿಕೊಳ್ಳುತ್ತಿದ್ದಾರೆ. ವಿಭಿನ್ನ ಸ್ಟೈಲ್, ಪೋಸಿಂಗ್ ಹೀಗೆ ಅವರುಗಳ ಸಿನಿ ಪ್ರವೇಶ ಭಿನ್ನವಾಗಿರುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ ತಿಸ್ಕಾ ಚೋಪ್ರಾ. ಹೌದು, ತಾರೆ ಜಮೀನ್ ಪರ್, 'ರಹಸ್ಯ', ಮುಂತಾದ ಸಿನಿಮಾಗಳಲ್ಲಿ ಗಂಭೀರ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ತಿಸ್ಕಾ ಚೋಪ್ರಾ ತಾನು ಎಲ್ಲಾ ಪಾತ್ರಗಳಿಗೂ ಸೈ ಎನ್ನುವ ರೀತಿಯಲ್ಲಿ ಅಭಿನಯಿಸಿದ್ದಾರೆ

ಮೂಲತಃ ಹಿಮಾಚಲ ಪ್ರದೇಶದವರಾದ ತಿಸ್ಕಾ ಬೆಳೆದದ್ದೆಲ್ಲಾ ದೆಹಲಿಯಲ್ಲಿ. ನೋಯ್ಡಾದ ಅಪೀಜೆ ಶಾಲೆಯಲ್ಲಿ ಪದವಿಯನ್ನು ಮುಗಿಸಿ, ಇಂಗ್ಲೀಷ್ ಸಾಹಿತ್ಯವನ್ನು ಹಿಂದೂ ಕಾಲೇಜಿನಲ್ಲಿ ತಿಸ್ಕಾ ಪೂರ್ಣಗೊಳಿಸಿದ್ದಾರೆ. ಅಮೆಚೂರ್ ಥಿಯೇಟರ್ನಲ್ಲಿ ತಿಸ್ಕಾ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದು ಕಾಲೇಜು ಸಮಾರಂಭಗಳಲ್ಲಿ ಸ್ಥಳೀಯ ರಂಗಮಂದಿರಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ವಿದ್ಯಾಭ್ಯಾಸವನ್ನು ಮುಗಿಸಿದ ನಂತರ, ಮುಂಬೈಗೆ ತೆರಳಿ ಫಿರೋಜ್ ಅಬ್ಬಾಸ್ ಖಾನ್ ಮತ್ತು ನಾಸಿರುದ್ದೀನ್ ಶಾ ಅವರಲ್ಲಿ ನಟನಾ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಹೆಸರಾಂತ ನಾಟಕ ಡಿನ್ನರ್ ವಿದ್ ಫ್ರೆಂಡ್ಸ್ನ ತಮ್ಮ ನಟನೆಗಾಗಿ ಹೆಸರುವಾಸಿಯಾಗಿದ್ದಾರೆ ಕೂಡ. ಮುರಿದ ವಿವಾಹದ ದುಃಖತಪ್ತ ಪಾತ್ರ ದಿಯಾದಲ್ಲಿ ಇವರ ನಟನೆ ಅಮೋಘವಾಗಿತ್ತು.
ಫ್ರಮ್ ಮೈ ಕಿಚನ್ ಟು ಯುವರ್ಸ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಿಸ್ಕಾ ಚೋಪ್ರಾ ಮಿಂಚಿದ್ದಾರೆ. ಮಸ್ಟರ್ಡ್ ಬಣ್ಣದ ಪ್ಲೇನ್ ಟಾಪ್ ಮತ್ತು ಎಮರಾಲ್ಡ್ ಹಸಿರು ನೆರಿಗೆಯ ಸ್ಕರ್ಟ್ ಅನ್ನು ತಿಸ್ಕಾ ಧರಿಸಿದ್ದರು. ಕಾಲಿನ ಮಣಿಗಂಟಿನವರೆಗೆ ಸ್ಕರ್ಟ್ ಇದ್ದು ಇವರು ಧರಿಸಿರುವ ಸ್ಟ್ರಾಪಿ ಸ್ಯಾಂಡಲ್ ಕೂಡ ಕಮಾಲನ್ನು ಉಂಟುಮಾಡಿದೆ. ತಮ್ಮ ನೈಸರ್ಗಿಕ ಗುಂಗುರು ಕೂದಲನ್ನು ತಿಸ್ಕಾ ಇಳಿಬಿಟ್ಟಿದ್ದು ಸರಳ ಮೇಕಪ್ ನೋಟವನ್ನು ತಿಸ್ಕಾ ಮಾಡಿಕೊಂಡಿದ್ದಾರೆ. ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
Read in english - Celeb Sighting: Tisca Chopra At The Launch Of "From My Kitchen To Yours"



Click it and Unblock the Notifications