Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯುವ ಮಿಲಿಟರಿ ವೀರನ ಗೆಟಪ್‌ನಲ್ಲಿ ರಣವೀರ್ ಸಿಂಗ್
ಬಾಲಿವುಡ್ ಅಂಗಳದಲ್ಲಿ ಹೊಸಬರು ತಮ್ಮ ಅದ್ಭುತ ಅಭಿನಯಗಳಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಹೊಸ ಹೊಸ ಮುಖಗಳ ನಟನಾ ಸಾಮರ್ಥ್ಯವನ್ನು ಪ್ರೇಕ್ಷಕ ವರ್ಗ ಈಗೀಗ ಮೆಚ್ಚಿಕೊಳ್ಳುತ್ತಿದೆ, ಅಷ್ಟೇ ಅಲ್ಲದೆ, ಅವರ ಬೇಡಿಕೆ ಕೂಡ ಈಗೀಗ ಹೆಚ್ಚಾಗುತ್ತಿದೆ.

ಅಂತೂ ಬಾಲಿವುಡ್ನಲ್ಲಿ ನಿರ್ದೇಶಕರು ನಿರ್ಮಾಪಕರೂ ನಡೆಸುತ್ತಿರುವ ಭಿನ್ನ ಪ್ರಯೋಗಗಳು ಫಲವನ್ನು ನೀಡುತ್ತಿದ್ದು ಸಿನಿಮಾ ಪ್ರಿಯರಿಗ ತೃಪ್ತಿಯನ್ನುಂಟು ಮಾಡುತ್ತಿದೆ. ಅಂತೆಯೇ ಬಾಲಿವುಡ್ನಲ್ಲಿ ರಣವೀರ್ ಸಿಂಗ್ ಕೂಡ ಅಸದಳ ನಟನಾ ಸಾಮರ್ಥ್ಯವನ್ನು ಪಡೆದಿರುವ ನಟ ಎಂದೆನಿಸಿದ್ದು ಜನಮಾನಸಲ್ಲಿ ಬಹುಬೇಗ ಖ್ಯಾತಿಯನ್ನು ಪಡೆದುಕೊಂಡವರು. ಪಾತ್ರಕ್ಕೆ ಜೀವ ತುಂಬುವ ರೀತಿ, ಯಾವ ಪಾತ್ರವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಬಲ್ಲಂತಹ ಜಾಣ್ಮೆ ಈ ನಟನಿಗೆ ದೈವದತ್ತವಾಗಿದೆ.
ಇದಕ್ಕೊಂದು ಸಣ್ಣ ಉದಾಹರಣೆ ಎಂಬಂತೆ ಇತ್ತೀಚೆಗೆ ತಮ್ಮ ಮುಂಬರಲಿರುವ ಬಾಜಿರಾವ್ ಮಸ್ತಾನಿ ಚಿತ್ರದ ಫಸ್ಟ್ ಲುಕ್‌ನಲ್ಲಿ ಸಕತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡ ಈ ತುಂಟ ನಟ ತಾನು ಎಲ್ಲಾ ಪಾತ್ರಕ್ಕೂ ಸೈ ಎನ್ನುವ ರೀತಿಯಲ್ಲಿ ಪ್ರೇಕ್ಷಕರ ಮನಸೊರೆಗೊಂಡರು.
ತಮ್ಮ ಮುಂಬರಲಿರುವ ಚಿತ್ರ ಬಾಜಿರಾವ್ ಮಸ್ತಾನಿಗಾಗಿ ರಣವೀರ್ ಭರ್ಜರಿಯಾಗಿ ತಮ್ಮನ್ನು ತಾವು ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದೆಡೆಯಲ್ಲಿ ಸಲ್ಮಾನ್‌ರ ಪ್ರೇಮ್ ರಥನ್ ಧನ್ ಪಾವೊ ಚಿತ್ರದ ಪೈಪೋಟಿಯ ನಡುವೆಯೂ ರಣವೀರ್ ಬಾಜಿರಾವ್ ಚಿತ್ರದ ಮೇಲೆ ಹೆಚ್ಚಿನ ಆಕಾಂಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಚಿತ್ರದ ಫಸ್ಟ್ ಲುಕ್‌ನಲ್ಲಿ ಮಿಲಿಟರಿ ಸೂಟ್ ಮತ್ತು ಕ್ಯಾಪ್ ಧರಿಸಿ ಕೊಂಚ ಭಿನ್ನವಾಗಿ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದಾರೆ. ಅಲ್ಲದೆ ಅವರ ದಿರಿಸಿನಲ್ಲಿರುವ ಪಾಕೆಟ್‌ಗಳು ಮತ್ತು ಕ್ಯಾಪ್‌ನಲ್ಲಿರುವ ಸ್ಟಾರ್‌ಗಳು ವಿಭಿನ್ನ ನೋಟವನ್ನು ನೀಡಿ ಅವರನ್ನು ಇನ್ನಷ್ಟು ಆಕರ್ಷಕಗೊಳಿಸಿತ್ತು.



Click it and Unblock the Notifications


