For Quick Alerts
ALLOW NOTIFICATIONS  
For Daily Alerts

ಮೇಕಪ್ ತುಂಬಾ ಹೊತ್ತು ಕಾಪಾಡಿಕೊಳ್ಳಲು ಸೂಕ್ತ ಸಲಹೆಗಳು

By Super
|

ಮೇಕಪ್ ಎಂಬುದು ಒಬ್ಬ ವ್ಯಕ್ತಿಯ ಅವಿಭಾಜ್ಯ ಅಂಗವಾದಾಗ, ಅದನ್ನು ಇಡೀ ದಿನ ಉಳಿಸಿಕೊಳ್ಳುವ ಇಚ್ಛೆ ಯಾರಿಗೆ ತಾನೆ ಇರುವುದಿಲ್ಲ. ಎಷ್ಟು ಬಾರಿ ನೀವು ಬೆಳಿಗೆಯೇ ಮೇಕಪ್ ಜೊತೆಗೆ ಮನೆಯಿಂದ ಹೊರ ಬರುವುದಿಲ್ಲ, ಅದೇ ಮೇಕಪ್ ಮಧ್ಯಾಹ್ನದ ಹೊತ್ತಿಗೆ ಮಂಕಾಗಿ ಹೋಗಿರುವುದಿಲ್ಲ?

ನಿಮ್ಮ ಮುಖದ ಅಂದ ಹೆಚ್ಚಿಸಲು ಮೇಕಪ್ ಮಾಡಿಕೊಳ್ಳುವುದು ಸೂಕ್ತ. ಆದರೆ ನಿಮ್ಮ ಬಿಡುವಿಲ್ಲದ ಸಮಯದಲ್ಲಿ ಮೇಕಪ್ ಕಡೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಈ ರೀತಿಯಾದಾಗ ಹೇಗೆ ನೀವು ಮೇಕಪ್ ಅನ್ನು ತುಂಬಾ ಹೊತ್ತು ಫ್ರೆಶ್ ಆಗಿ ಇರಿಸಿಕೊಳ್ಳಬಹುದು ಎಂಬುದರ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ.

ಇಡೀ ದಿನ ಮೇಕಪ್ ಉಳಿಸಿಕೊಳ್ಳುವ ಬಗೆ ಹೇಗೆ?

ಪದರಪದರವಾಗಿರಲಿ

ಪದರಪದರವಾಗಿರಲಿ

ನೀವು ಮೇಕಪ್ ಹಚ್ಚುವ ಮೊದಲು ನಿಮ್ಮ ಚರ್ಮ ಸ್ವಚ್ಛ ಮತ್ತು ಆರೋಗ್ಯಯುತವಾಗಿರಬೇಕು.ಮೈಕ್ರೋ ಬೀಡ್ ಸ್ಕ್ರಬ್ ಮೂಲಕ ನಿಮ್ಮ ಮುಖವನ್ನು ಪದರ ಪದರವಾಗಿ ಸಂಪೂರ್ಣವಾಗಿ ಸ್ವಚ್ಛಗೊಳಿಸಿ.

ಮ್ಯಾಟಿಫೈ ಮತ್ತು ಮಾಶ್ಚರೈಸರ್

ಮ್ಯಾಟಿಫೈ ಮತ್ತು ಮಾಶ್ಚರೈಸರ್

ನಿಮ್ಮ ಮುಖಕ್ಕೆ ಮಶ್ಚರೈಸರ್ ಬಳಸಿ ತೇವಾಂಶ ಕಾಪಾಡಿ ಇದರಿಂದ ಮುಖ ಒಣಗಿದಂತೆ ಕಾಣುವುದಿಲ್ಲ. ಹಾಗೆಯೇ ಮೇಕಪ್ ಸ್ಟಾರ್ಟ್ ಮಾಡುವಾಗ ಆಯಿಲ್ ಫ್ರೀ ಇರುವ ಮ್ಯಾಟಿಫೈ ಮತ್ತು ಮಾಶ್ಚರೈಸರ್ ಅನ್ನು ಆಯ್ಕೆ ಮಾಡಿಕೊಳ್ಳಿ.

ಪ್ರೈಮರ್

ಪ್ರೈಮರ್

ಪ್ರೈಮರ್ ಉಪಯೋಗಿಸುವುದರಿಂದ ನಿಮ್ಮ ಮುಖದಲ್ಲಿ ಪದರವಾಗದಂತೆ ತಡೆಯಬಹುದು ಮತ್ತು ಮೇಕಪ್ ತುಂಬಾ ಹೊತ್ತು ಇರಲು ಇದು ಸಹಾಯಕವಾಗುತ್ತದೆ. ಸಿಲಿಕಾನ್ ಅಧಿಕವಾಗಿರದ ಹೈಡ್ರೇಟ್ ಆಗಿರುವ ಪ್ರೈಮರ್ ಬಳಸಿ.

ಫೌಂಡೆಶನ್

ಫೌಂಡೆಶನ್

ಮೀಡಿಯಂ ಕವರೇಜ್ ಕೊಡುವ ಫೌಂಡೆಶನ್ ಬಳಸಿ. ನಿಮ್ಮ ಮುಖದಲ್ಲಿ ಯಾವುದೇ ರೀತಿಯ ಕಲೆ ಅಥವಾ ಪಿಗ್ಮೆಂಟೇಶನ್ ಇದ್ದರೆ ಅದನ್ನು ಮೊದಲು ಕಾನ್ಸೀಲ್ ನಿಂದ ಮೊದಲು ಕವರ್ ಮಾಡಿ. ಕಾನ್ಸೇಲರ್ ಅನ್ನು ಕಪ್ಪು ಕಲೆಗಳನ್ನು ಹೋಗಲಾಡಿಸಲು ಬಳಸಿ. ಮತ್ತು ಇದು ಮುಖದ ಇತರ ಭಾಗಗಳಿಗೆ ಹರಡದಂತೆ ನೋಡಿಕೊಳ್ಳಿ. ಮೀಡಿಯಂ ಕವರೇಜ್ ಇರುವ ಫೌಂಡೆಶನ್ ಶೀರ್ ಅಥವಾ ಕ್ರೀಂ ಗಳಿಗಿಂತ ಹೆಚ್ಚು ಸಮಯ ಉಳಿದುಕೊಳ್ಳುತ್ತದೆ. ಆದರೆ ನಿಮ್ಮ ಮುಖದಲ್ಲಿ ಯಾವುದೇ ಕಳೆಗಲಿಲ್ಲದಿದ್ದಲ್ಲಿ ಅಧಿಕ ಮೇಕಪ್ ನ ಅವಶ್ಯಕತೆ ಇರದಿದ್ದ ಪಕ್ಷದಲ್ಲಿ ಶೀರ್ ಫೌಂಡೆಶನ್ ಅಥವಾ ಕ್ರೀಂ ಬಳಕೆಯನ್ನು ಮಾಡಬಹುದು.

ಪೌಡರ್

ಪೌಡರ್

ಮುಖದಲ್ಲಿ ಎಣ್ಣೆ ಅಂಶ ಕಾಣದಂತೆ ತಡೆಗಟ್ಟಲು ಪೌಡರ್ ಸರಿಯಾದ ಮಾರ್ಗ. ಅರೆಪಾರದರ್ಶಕ ಪೌಡರಿಗಿಂತ ಮ್ಯಾಟಿಫೈಯಿಂಗ್ ಪೌಡರ್ ಉತ್ತಮ. ಕಣ್ಣಿನ ಕೆಳಭಾಗದಲ್ಲಿ ಹಚ್ಚಲು ಪಫ್ ಅನ್ನು ಬಳಸಿ ಉಳಿದ ಭಾಗಗಳಲ್ಲಿ ದಿನಪೂರ್ತಿ ಉಳಿಯುವಂತೆ ಬ್ರಷ್ ನ ಮೂಲಕ ಫೌಂಡೆಶನ್ ಪೌಡರ್ ಬಳಸಿ.

ಕ್ರೀಂ ಫಾರ್ಮುಲಾ ಮತ್ತು ಕೆನ್ನೆಗೆ ಪೌಡರ್

ಕ್ರೀಂ ಫಾರ್ಮುಲಾ ಮತ್ತು ಕೆನ್ನೆಗೆ ಪೌಡರ್

ಕೆನ್ನೆಗೆ ಕ್ರೀಂ ಹಚ್ಚಿ ನಂತರ ಲೈಟ್ ಆಗಿ ಪೌಡರ್ ನ ಶೇಡ್ ಕೊಡಿ.

ವಾಟರ್ ಪ್ರೂಫ್ ಐ ಲೈನರ್ ಮತ್ತು ಕ್ರೀಂ ಐ ಶಾಡೋಸ್

ವಾಟರ್ ಪ್ರೂಫ್ ಐ ಲೈನರ್ ಮತ್ತು ಕ್ರೀಂ ಐ ಶಾಡೋಸ್

ವಾಟರ್ ಪ್ರೂಫ್ ಇರುವ ಐ ಲೈನರ್ ಗಳನ್ನು ಕಣ್ಣಿಗೆ ಉಪಯೋಗಿಸಿ. ಕಣ್ಣಿನ ಮೇಕಪ್ ಗೆ ಸರಿಯಾಗಿ ಕ್ರೀಂ ಐ ಶಾಡೋಸ್ ಬಳಸಿ.ಐ ಲೈನರ್ ನಲ್ಲಿ ಸಾಕಷ್ಟು ಆಯ್ಕೆಗಳು ನಿಮಗೆ ದೊರೆಯುತ್ತವೆ ಮತ್ತು ಅವುಗಳ ಬೆಲೆಯೂ ಕೂಡ ಕಡಿಮೆ.

ಮಾಶ್ಚರೈಸರ್ ಲಿಪ್ ಫಾರ್ಮುಲಾ

ಮಾಶ್ಚರೈಸರ್ ಲಿಪ್ ಫಾರ್ಮುಲಾ

ನಾವು ಸಾಕಷ್ಟು ಬಾರಿ ಲಿಪ್ ಬಣ್ಣ ಬೇಗನೆ ಅಳಿಸಿಹೋಗಿ ಒಣಗಿದಂತೆ ಕಾಣುವುದನ್ನು ಗಮನಿಸಿರುತ್ತೇವೆ. ಆದ್ದರಿಂದ ಮೊದಲು ಲಿಪ್ ಲೈನರ್ ಬಳಸಿ ನಂತರ ಲಿಪ್ ಸ್ಟೈನ್ ಮತ್ತು ಲಿಪ್ ಸ್ಟಿಕ್ ಬಳಸುವುದು ಸೂಕ್ತ.

ಕೊನೆಯ ಸಲಹೆ

ಕೊನೆಯ ಸಲಹೆ

ಹೊರಗೆ ಹೋಗುವಾಗ ನಿಮ್ಮ ಜೊತೆ ಟಿಶ್ಯೂ ಮತ್ತು ಪೌಡರ್ ತೆಗೆದುಕೊಂಡು ಹೋಗಿ ಮತ್ತು ತ್ವಚೆ ಎಣ್ಣೆಯುತವಾಗದಿರುವಂತೆ ನೋಡಿಕೊಳ್ಳಿ. ಹಾಗೆಯೇ ನೀವು ಒರೆಸಿಕೊಳ್ಳುವಾಗ ಮೃದುವಾಗಿ ಟಿಶ್ಯೂ ಬಳಸಿ.

English summary

9 tips for long-lasting make-up

It’s great to have your facial features defined with some stunning make-up. It’s not quite ideal when it washes out or fades away in no time, while you are out dealing with a hectic day. We tell you how you can ensure your make-up lasts longer, saving yourself from looking worn out just within a few hours.
X
Desktop Bottom Promotion