For Quick Alerts
ALLOW NOTIFICATIONS  
For Daily Alerts

ಹದಿಹರೆಯದಲ್ಲಿ ಕಾಡುವ ಬಿಳಿಕೂದಲಿನ ಸಮಸ್ಯೆಗೆ ಕಾರಣಗಳೇನು?

By Super
|

ಸಾಮಾನ್ಯವಾಗಿ ಕೂದಲು ನೆರೆಯಲು ಕೂದಲಿಗೆ ಕಪ್ಪು ಬಣ್ಣ ನೀಡುವ ಮೆಲನಿನ್ ಎಂಬ ವರ್ಣದ್ರವ್ಯ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗದಿರುವುದು ಕಾರಣವಾಗಿದೆ. ವಯೋಸಹಜವಾದ ಬದಲಾವಣೆಯಿಂದ ಮೆಲನಿನ್ ಉತ್ಪತ್ತಿ ಕಡಿಮೆಯಾಗುತ್ತಾ ಹೋಗಿ ಕೂದಲು ಬಿಳಿಬಣ್ಣದಲ್ಲಿ ಬೆಳೆಯತೊಡಗುತ್ತವೆ. ಇದಕ್ಕೆ ಕಾರಣಗಳನ್ನು ತಿಳಿದುಕೊಂಡರೆ ಸೂಕ್ತ ಆರೈಕೆ ಕೈಗೊಂಡು ಕೂದಲು ನೆರೆಯುವುದನ್ನು ಸಾಕಷ್ಟು ಮಟ್ಟಿಗೆ ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ತಂಡ ಹಲವು ಮಹತ್ವದ ಮಾಹಿತಿಗಳನ್ನು ನೀಡುತ್ತಿದೆ.

ಆಧುನಿಕ ಸಿದ್ಧ ಆಹಾರಗಳು

ಆಧುನಿಕ ಸಿದ್ಧ ಆಹಾರಗಳು

ಹೊರಗೆ ಹೋದಾಗ ಮಾರುಕಟ್ಟೆಯನ್ನು ಆವರಿಸಿರುವ ಫಾಸ್ಟ್ ಫುಡ್ ಎಂಬ ವಿಷವಸ್ತುಗಳನ್ನು ಅಮೋಘವಾದ ಆಹಾರವೆಂಬಂತೆ ಸೇವಿಸುವ ನಮಗೆ ರುಚಿಯ ಜೊತೆಗೇ ಇವುಗಳನ್ನು ಹೆಚ್ಚು ಕಾಲ ಕೆಡದಂತೆ ಸಂರಕ್ಷಿಸಿರುವ ರಾಸಾಯನಿಕಗಳು ನಮ್ಮ ದೇಹ ಸೇರುತ್ತವೆ. ಈ ವಿಷವಸ್ತುಗಳು ಹೊರಹೋಗುವ ಮುನ್ನ ಕೂದಲ ಸಹಿತ ಬೇರೆ ಅಂಗಗಳಿಗೆ ಸಾಕಷ್ಟು ಹಾನಿಯುಂಟುಮಾಡಿಯೇ ಹೋಗುತ್ತವೆ.

ಎಲೆಕ್ಟ್ರಿಕ್ ಡ್ರೈಯರ್ ಮತ್ತು ಕೂದಲನ್ನು ಗುಂಗುರುಗೊಳಿಸುವ ಸಾಧನಗಳು

ಎಲೆಕ್ಟ್ರಿಕ್ ಡ್ರೈಯರ್ ಮತ್ತು ಕೂದಲನ್ನು ಗುಂಗುರುಗೊಳಿಸುವ ಸಾಧನಗಳು

ಈ ಸಾಧನಗಳು ಕೂದಲು ನೈಸರ್ಗಿಕವಾಗಿ ಒಣಗಲು ಬಿಡದೇ ಕೂಡಲೇ ಒಣಗುವಂತೆ ಮಾಡುತ್ತವೆ. ಪರಿಣಾಮವಾಗಿ ಕೂದಲು ನಿಧಾನವಾಗಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಮೆಲನಿನ್ ವರ್ಣದ್ರವ್ಯವೂ ಇದರಿಂದ ಪ್ರಭಾವಿತವಾಗಿ ಉತ್ಪಾದನೆ ನಿಲ್ಲಿಸುತ್ತದೆ. ಶೀಘ್ರವೇ ಈ ಕೂದಲು ನೆರೆಯತೊಡಗುತ್ತದೆ.

ತಲೆಯಲ್ಲಿ ಕೂದಲ ಬುಡವನ್ನು ಸಾಕಷ್ಟು ಸ್ವಚ್ಛವಾಗಿರಿಸಿಕೊಳ್ಳದಿರುವುದು

ತಲೆಯಲ್ಲಿ ಕೂದಲ ಬುಡವನ್ನು ಸಾಕಷ್ಟು ಸ್ವಚ್ಛವಾಗಿರಿಸಿಕೊಳ್ಳದಿರುವುದು

ಕೂದಲಿಗೆ ಬೇಕಾದ ಎಲ್ಲಾ ಪೋಷಣೆ ಕೂದಲ ಬುಡದಿಂದ ರವಾನೆಯಾಗುತ್ತದೆ. ಪ್ರತಿ ಬುಡದಲ್ಲಿಯೂ ಚರ್ಮದಲ್ಲಿ ಬಿರುಕಿದ್ದು ಕೆಲವು ರಸಗಳು ಮತ್ತು ಬೆವರು ಹೊರಬರಲು ಅಗತ್ಯವಾಗಿದೆ. ಒಂದು ವೇಳೆ ಸ್ವಚ್ಛತೆ ಮತ್ತು ಅಗತ್ಯವಾದ ಆರೈಕೆಯನ್ನು ನೀಡದೇ ಇದ್ದರೆ ಕೊಳೆ, ಧೂಳು ಮತ್ತು ಸತ್ತ ಜೀವಕೋಶಗಳಿಂದ ಚರ್ಮ ಘಾಸಿಗೊಂಡು ಕೂದಲ ಬೆಳವಣಿಗೆ ಮತ್ತು ವರ್ಣದ್ರವ್ಯದ ಕೊರತೆಯುಂಟಾಗುತ್ತದೆ. ಇದರಿಂದ ಕೂದಲು ಉದುರುವುದು ಹಾಗೂ ಇರುವ ಕೂದಲು ಬೇಗನೇ ಬೆಳ್ಳಗಾಗುವುದು ಕಂಡುಬರುತ್ತದೆ. ಆದ್ದರಿಂದ ಸೂಕ್ತ ಮಾರ್ಜಕಗಳ ನೆರವಿನಿಂದ ಕೂದಲ ಬುಡವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯವಾಗಿದೆ.

ಕೂದಲ ಬಣ್ಣ

ಕೂದಲ ಬಣ್ಣ

ಕೂದಲಿಗೆ ಬಣ್ಣ ಹಚ್ಚುವುದರಿಂದ ಕೂದಲು ಹೊಳಪು ಪಡೆದರೂ ನಿಧಾನವಾಗಿ ಕೂದಲ ಅರೋಗ್ಯವನ್ನು ಕ್ಷೀಣಿಸುತ್ತಾ ಬರುತ್ತದೆ. ಅಲ್ಲದೇ ಮೆಲನಿನ್ ವರ್ಣದ್ರವ್ಯವನ್ನೂ ಕುಂದಿಸುತ್ತದೆ. ಪರಿಣಾಮವಾಗಿ ಹೆಚ್ಚು ಹೆಚ್ಚು ಬಳಸುತ್ತಿದ್ದಂತೆ ಕೂದಲು ಬಿಳಿಯಾಗುವುದೂ ಹೆಚ್ಚುತ್ತಾ ಹೋಗುತ್ತದೆ.

ಗಡಸು ನೀರಿನಿಂದ ಕೂದಲನ್ನು ತೊಳೆಯುವುದು

ಗಡಸು ನೀರಿನಿಂದ ಕೂದಲನ್ನು ತೊಳೆಯುವುದು

ಗಡಸು ನೀರಿನಲ್ಲಿರುವ ವಿವಿಧ ರಾಸಾಯನಿಕಗಳು ಆಮ್ಲಜನಕಗೊಡನೆ ಉತ್ಕರ್ಷಿಸುವ ಗುಣ ಹೊಂದಿವೆ. ಇವುಗಳ ಸತತ ಬಳಕೆಯಿಂದ ಕೂದಲು ಒಣಗಿ ಹೊಳಪನ್ನು ಕಳೆದುಕೊಳ್ಳುತ್ತದೆ. ಮೆಲನಿನ್ ಉತ್ಪಾದನೆ ಕುಂಠಿತಗೊಂಡು ಬೇಗನೇ ಬಿಳಿಯ ಕೂದಲು ಆವರಿಸುತ್ತದೆ.

ಹಾರ್ಮೋನುಗಳಲ್ಲಿ ಏರುಪೇರು

ಹಾರ್ಮೋನುಗಳಲ್ಲಿ ಏರುಪೇರು

ಒಂದು ವೇಳೆ ಯಾವುದೋ ಕಾರಣಗಳಿಂದ ಹಾರ್ಮೋನುಗಳಲ್ಲಿ ಏರುಪೇರು ಉಂಟಾದರೆ ಚರ್ಮ ಮತ್ತು ಕೂದಲು ಹೆಚ್ಚಿನ ಬಾಧೆಗೊಳಗಾಗುತ್ತವೆ. ಉದಾಹರಣೆಗೆ ಗರ್ಭಾವಸ್ಥೆಯಲ್ಲಿ, ಥೈರಾಯ್ಡ್ ಕಾಯಿಲೆ, ಯಾವುದೋ ಔಷಧದ ಅಡ್ಡಪರಿಣಾಮಗಳು ಮೊದಲಾದವು ಶೀಘ್ರವಾಗಿ ಕೂದಲು ನೆರೆಯಲು ಸಹಕರಿಸುತ್ತವೆ.

ಫೋಲಿಕ್ ಆಮ್ಲದ ಕೊರತೆ

ಫೋಲಿಕ್ ಆಮ್ಲದ ಕೊರತೆ

ಹೊಸ ಕೂದಲು ಹುಟ್ಟಲು ಮತ್ತು ಬೆಳೆಯಲು ಫೋಲಿಕ್ ಆಮ್ಲ ಅತ್ಯಗತ್ಯವಾಗಿದೆ. ಈ ಪೋಷಕಾಂಶದ ಕೊರತೆಯಿಂದ ಕೂದಲ ಬೆಳವಣಿಗೆಗೆ ಅಡ್ಡಿಯಾಗುವುದು ಮಾತ್ರವಲ್ಲ ಕೂದಲು ತನ್ನ ಬಣ್ಣವನ್ನೂ ಕಳೆದುಕೊಳ್ಳುತ್ತಾ ಬರುತ್ತದೆ. ಶತಾವರಿ (asparagus), ಬಸಲೆ ಸೊಪ್ಪು, ಪಾಲಕ್, ಬ್ರೋಕೋಲಿ, ಲಿಂಬೆ, ಕಿತ್ತಳೆ, ಪೊಪ್ಪಾಯಿ ಹಣ್ಣು, ಸ್ಟ್ರಾಬೆರಿ, ರಾಸ್ಪ್ ಬೆರಿ, ಬೀನ್ಸ್, ಶೇಂಗಾ, ಹೂಕೋಸು, ವಿವಿಧ ಒಣಫಲಗಳು, ಬೀಟ್ ರೂಟ್, ಕ್ಯಾರೆಟ್ ಮೊದಲಾದವುಗಳಲ್ಲಿ ಫೋಲಿಕ್ ಆಮ್ಲ ಹೇರಳವಾಗಿದೆ.

English summary

Causes Of Grey Hair At Young Age

Greying of hair is a natural process. If your hair turns grey at a young age, it is called premature greying and needs medical attention. There are many grey hair reasons. Some of them are related to lifestyle. Today, Boldsky shares with you grey hair reasons and causes of grey hair at an early age.
X
Desktop Bottom Promotion