For Quick Alerts
ALLOW NOTIFICATIONS  
For Daily Alerts

ಇನ್ಮುಂದೆ ಹಳೆಯ ಹಲ್ಲುಜ್ಜುವ ಬ್ರಷ್‌ನ್ನು ಮೂಲೆಗೆ ಹಾಕಬೇಡಿ..

By Arshad
|

ಸಾಮಾನ್ಯವಾಗಿ ಒಂದು ತಿಂಗಳಿಗೆ ಒಂದು ಹಲ್ಲುಜ್ಜುವ ಬ್ರಷ್ ಬದಲಾಯಿಸುವಂತೆ ದಂತವೈದ್ಯರು ಸಲಹೆ ನೀಡುತ್ತಾರೆ. ಏಕೆಂದರೆ ಅಷ್ಟೊಂದು ಬಿರಿಸೂ ಅಲ್ಲದ, ಮೃದುವೂ ಅಲ್ಲದ ಇದರ ಬಿರುಗೂದಲುಗಳು ತಿಂಗಳ ಬಳಕೆಯ ಬಳಿಕ ಕೊಂಚ ಬಾಗಿ ಹಲ್ಲುಗಳ ಸಂದುಗಳ ಕೊಳೆಯನ್ನು ತೆಗೆಯಲು ಅಸಮರ್ಥವಾಗುತ್ತವೆ. ಆದರೆ ಕೊಂಚ ಬಾಗಿದ ಈ ಬಿರುಗೂದಲುಗಳು ಸೌಂದರ್ಯದ ಕಾಳಜಿಗೆ ಹೇಳಿ ಮಾಡಿಸಿದಂತಿದೆ.

ತಲೆಗೂದಲನ್ನು ಒಪ್ಪಗೊಳಿಸಲು, ಮುಂಗುರಳನ್ನು ಹೊಂಚ ಉಬ್ಬಿದಂತೆ ಕಾಣಲು, ಕೂದಲಿಗೆ ಬಣ್ಣ ಹಚ್ಚಲು ಮುಂತಾದ ಕಾರ್ಯಗಳಲ್ಲಿ ಈ ಬ್ರಷ್ ಸುಲಭವಾಗಿ ಬಳಕೆಯಾಗುತ್ತದೆ. ಉಗುರುಗಳ ಕಾಳಜಿ ಮತ್ತು ಸ್ವಚ್ಛಗೊಳಿಸುವಿಕೆಗೂ ಈ ಬ್ರಷ್ ಅನ್ನೇ ಬಳಸಬಹುದು. ಹುಬ್ಬುಗಳನ್ನು ತೀಡಬಹುದು ಹಾಗೂ ಈ ಕೂದಲು ಗಾಢಗೊಳ್ಳಲು ಉಪಯುಕ್ತ ತೈಲಗಳನ್ನು ಹಚ್ಚಲೂ ಬಳಸಬಹುದು.

ಅಷ್ಟೇ ಅಲ್ಲ, ನಿಮ್ಮ ನೆಚ್ಚಿನ ಆಭರಣಗಳನ್ನು ಸ್ವಚ್ಛಗೊಳಿಸಲು, ಸೌಂದರ್ಯ ಸಲಕರಣೆಗಳ ಸಂದುಗಳಲ್ಲಿ ಸಿಲುಕಿರುವ ಧೂಳು ಮತ್ತಿತರ ಕಣಗಳನ್ನು ನಿವಾರಿಸಲು ಮೊದಲಾದ ಕಡೆಗಳಲ್ಲಿ ಇದನ್ನು ಬಳಸಬಹುದು. ಬನ್ನಿ ಇಂತಹ ಇನ್ನೂ ಹಲವು ಉಪಯುಕ್ತ ಬಳಕೆಗಳ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಅರಿಯೋಣ..

ಕೆಲವು ಭಾಗದ ಕೂದಲಿಗೆ ಮಾತ್ರ ಬಣ್ಣ ಹಚ್ಚಿಕೊಳ್ಳಲು (Hair Highlights)

ಕೆಲವು ಭಾಗದ ಕೂದಲಿಗೆ ಮಾತ್ರ ಬಣ್ಣ ಹಚ್ಚಿಕೊಳ್ಳಲು (Hair Highlights)

ತಮ್ಮ ಕೇಶಶೃಂಗಾರದಲ್ಲಿ ವಿವಿಧ್ಯತೆ ನೀಡಲು ಕೂದಲ ಕೆಲವು ಭಾಗಕ್ಕೆ ಮಾತ್ರವೇ ಬೇರೊಂದು ಬಣ್ಣ ನೀಡುವ, ಕೆಲವು ಕೂದಲಿಗೆ ಮಾತ್ರ ಬಣ್ಣ ಹಾಕಿ ಇದನ್ನು ಪಕ್ಕದ ಕಪ್ಪು ಕೂದಲಿನೊಂದಿಗೆ ಬೆರೆಸಿ ಇಳಿಬಿಡುವ,ಜಡೆಯ ಮೂರು ಎಳೆಗಳಲ್ಲಿ ಒಂದೆಳೆ ಮಾತ್ರ ಬೇರೆ ಬಣ್ಣವಿರುವ ವಿನ್ಯಾಸಗಳು ಇಂದು ಜನಪ್ರಿಯವಾಗುತ್ತಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೆಲವು ಭಾಗದ ಕೂದಲಿಗೆ ಮಾತ್ರ ಬಣ್ಣ ಹಚ್ಚಿಕೊಳ್ಳಲು (Hair Highlights)

ಕೆಲವು ಭಾಗದ ಕೂದಲಿಗೆ ಮಾತ್ರ ಬಣ್ಣ ಹಚ್ಚಿಕೊಳ್ಳಲು (Hair Highlights)

ಇದಕ್ಕಾಗಿ ಯಾವ ಕೂದಲಿಗೆ ಬಣ್ಣ ಹಚ್ಚಿಕೊಳ್ಳಬೇಕೋ ಅದನ್ನು ಪ್ರತ್ಯೇಕಿಸಿ ಹಳೆಯ ಟೂಥ್ ಬ್ರಷ್ ನಿಂದ ಬಣ್ಣ ಬಳಿದು ಒಣಗಿಸಿದರೆ ಸಾಕು. ಯಾವುದೇ ಹೆಚ್ಚಿನ ವೆಚ್ಚವಿಲ್ಲದೇ ಮನೆಯಲ್ಲಿಯೇ ವೃತ್ತಿಪರ ವಿನ್ಯಾಸವನ್ನು ಪಡೆಯಬಹುದು. ಅಲ್ಲದೇ ಇಷ್ಟವಾಗದಿದ್ದರೆ ತೊಳೆದು ಇನ್ನೊಂದು ಬಣ್ಣವನ್ನು ಹಚ್ಚಿ ಪ್ರಯತ್ನಿಸಬಹುದು.

ಉಗುರುಗಳ ಸಂದುಗಳಲ್ಲಿ ಸಿಲುಕಿಕೊಂಡಿದ್ದ ಕೊಳೆ ತೆಗೆಯಲು

ಉಗುರುಗಳ ಸಂದುಗಳಲ್ಲಿ ಸಿಲುಕಿಕೊಂಡಿದ್ದ ಕೊಳೆ ತೆಗೆಯಲು

ನಮ್ಮ ಉಗುರುಗಳ ತುದಿಯ ಅಡಿಯಲ್ಲಿರುವ ಸಂದಿಯಲ್ಲಿ ಅತಿ ಸೂಕ್ಷ್ಮವಾದ ಕೊಳೆ ತುಂಬಿಕೊಳ್ಳುತ್ತಾ ಇರುತ್ತದೆ. ಇದನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಕೊಂಚ ಬಲವಂತ ಮಾಡಿದರೂ ಸೂಕ್ಷ್ಮವಾದ ಈ ಭಾಗ ಬಿರುಕುಬಿಟ್ಟು ಅಪಾರವಾದ ಉರಿ ಪ್ರಾರಂಭವಾಗುತ್ತದೆ ಮತ್ತು ಬೆರಳುಗಳಿಂದ ಯಾವುದೇ ವಸ್ತುವಿನ ಮೇಲೆ ಕೊಂಚ ಒತ್ತಡ ನೀಡಿದರೂ ನೋವು ತಾಳಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉಗುರುಗಳ ಸಂದುಗಳಲ್ಲಿ ಸಿಲುಕಿಕೊಂಡಿದ್ದ ಕೊಳೆ ತೆಗೆಯಲು

ಉಗುರುಗಳ ಸಂದುಗಳಲ್ಲಿ ಸಿಲುಕಿಕೊಂಡಿದ್ದ ಕೊಳೆ ತೆಗೆಯಲು

ಇದಕ್ಕೆ ಹೆದರಿ ಹೆಚ್ಚಿನವರು ಈ ಭಾಗವನ್ನು ಸ್ವಚ್ಛಗೊಳಿಸಲು ಹೋಗುವುದೇ ಇಲ್ಲ. ಆದರೆ ಈ ಕಷ್ಟವನ್ನು ಹಳೆಯ ಬ್ರಷ್ ನಿವಾರಿಸುತ್ತದೆ. ಇದರ ಬಿರುಗೂದಲುಗಳು ನಯವಾಗಿ, ನೋವಿಲ್ಲದಂತೆ ಈ ಕೊಳೆಯನ್ನು ತೆಗೆಯಲು ಸಮರ್ಥವಾಗಿವೆ. ಹೆಚ್ಚಿನ ಒತ್ತಡ ಬೀಳದಂತೆ ಜಾಗ್ರತೆ ವಹಿಸಿದರೆ ಸಾಕು, ಅಷ್ಟೇ.

ಉಬ್ಬಿದ ಕೂದಲ ವಿನ್ಯಾಸ ಪಡೆಯಲು

ಉಬ್ಬಿದ ಕೂದಲ ವಿನ್ಯಾಸ ಪಡೆಯಲು

ಯುವಜನತೆಯ ನೆಚ್ಚಿನ ವಿನ್ಯಾಸವಾದ ಹಣೆಯ ಮೇಲೆ ಕೂದಲು ಉಬ್ಬಿರುವ ವಿನ್ಯಾಸವನ್ನು ಈಗ ಟೂಥ್ ಬ್ರಷ್ ಬಳಸಿ ಸುಲಭವಾಗಿ ಮನೆಯಲ್ಲಿಯೇ ಅಲಂಕರಿಸಿಕೊಳ್ಳಬಹುದು. ಇದಕ್ಕಾಗಿ ಮುಂಭಾಗದ ಕೂದಲನ್ನು ಟೂಥ್ ಬ್ರಷ್ ಬಳಸಿ ಮೇಲಕ್ಕೆತ್ತಿ ಹಿಂದಕ್ಕೆ ಬಾಗಿಸಿ. ಇದು ಒಂದು ಚಿಕ್ಕ ಅಲೆಯ ರೂಪ ಪಡೆಯಬೇಕು. ಇದೇ ರೀತಿ ಅಕ್ಕಪಕ್ಕದ ಭಾಗವನ್ನೂ ವಿನ್ಯಾಸಗೊಳಿಸಿ. ಬಳಿಕ ಹಿಂದಿನ ಇತರ ಕೂದಲ ಜೊತೆ ಮಿಳಿತವಾಗುವಂತೆ ಮಾಡಿ ಪಿನ್ ಮೂಲಕ ದೃಢಗೊಳಿಸಿ. ಇದು ಸುಂದರವಾದ ರೂಪವನ್ನು ನೀಡುತ್ತದೆ.

ದಟ್ಟವಾದ ಹುಬ್ಬಿಗಾಗಿ

ದಟ್ಟವಾದ ಹುಬ್ಬಿಗಾಗಿ

ಹುಬ್ಬಿನ ಕೂದಲು ದಟ್ಟವಾಗಲು ಕೊಂಚ ಮಸಾಜ್ ಅಗತ್ಯ. ಆದರೆ ಇದು ಸೂಕ್ಷ್ಮಪ್ರದೇಶವಾದ ಕಾರಣ ಒತ್ತಡ ಸಲ್ಲದು. ಬದಲಿಗೆ ಹಳೆಯ ಟೂಥ್ ಬ್ರಷ್ ಅನ್ನು ಹರಳೆಣ್ಣೆಯಲ್ಲಿ ಮುಳುಗಿಸಿ ನಡುವಿನಿಂದ ಹಣೆಯವರೆಗೆ ಬರುವಂತೆ ಒಮ್ಮುಖವಾಗಿ ಬಾಚಿ. ಹೆಚ್ಚು ಒತ್ತಡ ನೀಡಬಾರದು. ಇದರಿಂದ ಹುಬ್ಬಿನ ಕೆಳಗಿನ ಚರ್ಮದಲ್ಲಿ ಉತ್ತಮವಾದ ರಕ್ತಪರಿಚಲನೆಗೊಂಡು ಎಣ್ಣೆಯನ್ನು ಹೀರಿ ಕೂದಲ ಬುಡಕ್ಕೆ ಪೋಷಣೆ ನೀಡಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಕೆಲವೇ ದಿನಗಳಲ್ಲಿ ಹುಬ್ಬಿನ ಕೂದಲುಗಳು ದಟ್ಟವಾಗುತ್ತವೆ.

ಕೂದಲಿಗೆ ಬಣ್ಣ ಹಚ್ಚಿಕೊಳ್ಳಲು

ಕೂದಲಿಗೆ ಬಣ್ಣ ಹಚ್ಚಿಕೊಳ್ಳಲು

ಕೂದಲ ಬಣ್ಣದ ಜೊತೆಗೇ ಬಣ್ಣ ಹಚ್ಚಿಕೊಳ್ಳಲು ಒಂದು ಬ್ರಷ್ ಅನ್ನೂ ಕೊಟ್ಟಿರುತ್ತಾರೆ. ಆದರೆ ಇದರ ಕೂದಲುಗಳೂ ನಟ್ಟನೇರವಾಗಿದ್ದು ಬಣ್ಣ ಹಚ್ಚಿಕೊಳ್ಳಲು ಅತ್ಯಂತ ಸೂಕ್ತ ಎನಿಸುವುದಿಲ್ಲ. ಬದಲಿಗೆ ಕೊಂಚವೇ ಬಾಗಿರುವ ಕೂದಲುಗಳ ಹಳೆಯ ಬ್ರಷ್ ಹೆಚ್ಚು ಸೂಕ್ತವಾಗಿದೆ. ಈ ಕೂದಲುಗಳು ಚಿಕ್ಕದಾಗಿರುವ ಕಾರಣ ಗಿಡ್ಡವಾದ ಕೂದಲಿಗೆ ಬಣ್ಣ ಹಚ್ಚಿಕೊಳ್ಳಲೂ ಸೂಕ್ತವಾಗಿದೆ.

ಕೂದಲಿಗೆ ಬಣ್ಣ ಹಚ್ಚಿಕೊಳ್ಳಲು

ಕೂದಲಿಗೆ ಬಣ್ಣ ಹಚ್ಚಿಕೊಳ್ಳಲು

ಅಲ್ಲದೇ ಕೂದಲು ಬೆಳೆದಾಗ ಹಿಂದಿನ ಬಾರಿ ಡೈ ಮಾಡಿಕೊಂಡಿದ್ದ ಭಾಗವೂ ಬೆಳೆದು ಕೆಳಗಿನ ಭಾಗ ಬಿಳಿಯದಾಗಿದ್ದು ಮೇಲಿನ ಭಾಗ ಕಪ್ಪು ಬಣ್ಣಕ್ಕಿರುತ್ತದೆ. ಇದು ಇರಿಸು ಮುರಿಸು ತರಿಸುತ್ತದೆ. ಈ ಭಾಗಕ್ಕೆ ಸಮರ್ಥವಾಗಿ ಬಣ್ಣ ಹಚ್ಚಲು ಹಳೆಯ ಟೂಥ್ ಬ್ರಷ್ ನಿಂದ ತುಂಬಾ ಸುಲಭ.

English summary

Beauty Uses Of An Old Tooth Brush

There are many uses of tooth brush for beauty. You can colour your hair, make highlights, clean nails ans much more. Read on to know ... ಹಳೆಯ ಹಲ್ಲುಜ್ಜುವ ಬ್ರಷ್‌ನಲ್ಲೂ ಅನೇಕ ರೀತಿಯ ಸೌಂದರ್ಯಕಾರಿ ಪ್ರಯೋಜನಗಳಿವೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ...
X
Desktop Bottom Promotion