Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಸುದ್ದಿ ಮತ್ತು ಪ್ರಚಾರದ ಗ್ಲೋಬಲ್ ಸ್ಯಾಂಡ್ವಿಚ್!

ಈ ರಾಜವೈಭೋಗದ ಮದುವೆಗಾಗಿ ಖರ್ಚಾದದ್ದೆಷ್ಟು? ರಾಜಕುಮಾರಿ ಕೇಟ್ ಮಿಡಲ್ ಟನ್ ಶುಭಲಗ್ನದ ಸಮಯದಲ್ಲಿ ತೊಟ್ಟ ಹಂಸಬಣ್ಣದ ಬಟ್ಟೆಯ ಬೆಲೆಯೆಷ್ಟು? ಯಾರ್ಯಾರು ಬಂದಿದ್ದರು, ಎಂತೆಂಥ ಚಿತ್ರವಿಚಿತ್ರ ದಿರಿಸುಗಳನ್ನು ತೊಟ್ಟಿದ್ದರು? ಕೇಟ್ ತನ್ನ ಉಂಗುರದ ಬೆರಳಿಗೆ ತೊಡಿಸಿಕೊಂಡ ಉಂಗುರ ಯಾರದು? ಇತ್ಯಾದಿ ಇತ್ಯಾದಿ... ರಾಜಮನೆತನದ ಮದುವೆಯೆಂದ ಮೇಲೆ ಖರ್ಚು ಮಾಡಲೇಬೇಕಲ್ಲ! ರಾಜರು ಸಿಂಪಲ್ ಆಗಿ ದೇವಸ್ಥಾನಕ್ಕೆ ಹೋಗಿ ಹಾರ ಬದಲಾಯಿಸಿಕೊಂಡರೆ ಸಾಕೆ?
ಸುದ್ದಿ ಅಂದ ಮೇಲೆ ಸುದ್ದಿಯೆ. ಪ್ರಕಟಿಸಲೇಬೇಕು. ರೈತರ ಮೇಲಿನ ಗುಂಡಿನ ದಾಳಿಯೇ ಆಗಲಿ, ಜಪಾನಿಗೆ ಅಪ್ಪಳಿಸಿದ ಸುನಾಮಿಯೇ ಆಗಲಿ, ಬರಾಕ್ ಒಬಾಮಾ ಬಿಡುಗಡೆ ಮಾಡಿದ ಬರ್ತ್ ಸರ್ಟಿಫಿಕೇಟ್ ಆಗಲಿ, ಎನ್ಆರ್ಎನ್ ನಿವೃತ್ತಿಯ ಸುದ್ದಿಯೇ ಆಗಲಿ, ಮಡಿಕೇರಿಯಲ್ಲಾದ ಭೀಕರ ಮರ್ಡರ್ ಆಗಲಿ, ಭದ್ರಾವತಿಯಲ್ಲಿ ಕೋಳಿ ಸಾಗಾಣಿಕೆ ತರಬೇತಿ ಕೇಂದ್ರದ ಉದ್ಘಾಟನೆಯೇ ಆಗಲಿ, ಮೇಯರ್ ಶಾರದಮ್ಮ ಎಸ್ಎಸ್ಎಲ್ ಸಿ ಸುದ್ದಿಯೇ ಆಗಲಿ ... ಎಲ್ಲವೂ ಸುದ್ದಿಯೇ. ಎಲ್ಲಕ್ಕೂ ತನ್ನದಾದ ಸ್ಥಾನ ಇದ್ದೇ ಇದೆ.
ಆದರೆ, ಯಾರು ಯಾವ ರೀತಿ ಮಾಧ್ಯಮಗಳನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ ಎಂಬುದು ಇಲ್ಲಿ ಪ್ರಮುಖವಾಗುತ್ತದೆ. ನೆರೆ ರಾಜ್ಯದ ನಟನೊಬ್ಬ ರಾಜಕೀಯ ಪಕ್ಷ ಕಟ್ಟಿದಾಗ ಇಡೀ ದಿನ ಅವನೊಬ್ಬನ ಸುದ್ದಿಯೇ ಆವರಿಸಿಕೊಂಡಿರುತ್ತದೆ. ನಮ್ಮ ರಾಜ್ಯದಲ್ಲಿ ಏನೇ ಘಟಿಸಿದರೂ ಪ್ರಮುಖವಾಗಿ ಸುದ್ದಿಯಾಗುವುದೇ ಇಲ್ಲ. ವಿಲಿಯಂ ಮತ್ತು ಕೇಟ್ ಮದುವೆಯೇ ಆಗಲಿ. ಶತಮಾನದ ಮದುವೆ ಎಂದು ಬಣ್ಣಿಸಿಕೊಂಡಿರುವ ಈ ಮದುವೆ ಕ್ರಿಶ್ಚಿಯನ್ ಸಮುದಾಯದ ಮದುವೆಯಷ್ಟೆ. ಆದರೆ, ಇದಕ್ಕೆ ಕೊಡುತ್ತಿರುವ ಪ್ರಚಾರ ಮಾತ್ರ ನೋಡಿ ಸ್ವಲ್ಪ ಅಸಹನೆ ಉಂಟಾಗುತ್ತಿದೆ.
ಅಲ್ಲರೀ, ನಮ್ಮ ಹಿಂದೂ ಅಥವಾ ಭಾರತದ ಯಾವುದೇ ಧರ್ಮದವರ ಮದುವೆ ನಡೆದರೆ ಈ ಪರಿಯ ಪ್ರಚಾರ ನೀಡುತ್ತಾರಾ? ಆಫ್ ಕೋರ್ಸ್ ದುಡ್ಡು ಕೊಟ್ಟರೆ ಇದಕ್ಕಿಂತಲೂ ಹೆಚ್ಚು ಪ್ರಚಾರ ಮಾಡಿದರೂ ಮಾಡಬಹುದು. ಮದುವೆಯ ಪ್ರಚಾರ ಮಾಡುವವರೂ ಇವರೆ, ಮದುವೆ ನಂತರ ಡೈವೋರ್ಸ್ ಯಾವಾಗ ಅಂತ ವಿಶ್ಲೇಷಣೆ ಮಾಡುವವರೂ ಇವರೆ! ಸುದ್ದಿಯ ಮೌಲ್ಯವೆಲ್ಲಿ ಹೋಯಿತು? ಒಂದಂತೂ ನಿಜ ಈ ಮದುವೆಯಿಂದಾಗಿ ಹಿಂದೂ ಸಂಸ್ಕೃತಿಯ ಭಾರತದಲ್ಲಿ ಕ್ರೈಸ್ತ ಧರ್ಮ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡಂತಾಯಿತು. ಇತ್ತೀಚೆಗೆ ತಾನೆ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪಾಕಿ ಕ್ರಿಕೆಟಿಗರು ಮೈದಾನದಲ್ಲೇ ನಮಾಜ್ ಮಾಡಿದ್ದರು, ಮಾಡಲು ಅವಕಾಶ ನೀಡಲಾಗಿತ್ತು.
ನಮ್ಮದು ಎಂಥ ಸಮಾಜವೆಂದರೆ, ಯಾವುದೋ ಸಾರ್ವಜನಿಕ ಸ್ಥಳದಲ್ಲಿ ಹೋಮಹವನ ಮಾಡಿದರೆ, ನಮ್ಮವರೇ ತಿರುಗಿಬಿದ್ದಿರುತ್ತಾರೆ. ಎಲ್ಲೋ ತಲೆಮರೆಸಿಕೊಂಡಿದ್ದ ಬುದ್ಧಿಜೀವಿಗಳು ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿಬಿಡುತ್ತಾರೆ. ನಾಲ್ಕಾರು ಗಡ್ಡಧಾರಿಗಳು ಜುಬ್ಬಾ ಪೇಜಾಮಾ ಧರಿಸಿ ರೋಡಿಗೆ ಇಳಿದೇ ಬಿಡುತ್ತಾರೆ. ನಮ್ಮದು ಜಾತ್ಯತೀತ ರಾಷ್ಟ್ರ, ಒಂದು ಧರ್ಮಕ್ಕೆ ಇಷ್ಟ್ಯಾಕೆ ಪ್ರಚಾರ ಕೊಡಬೇಕು ಎಂದು ಬತ್ತಳಿಕೆಯಿಂದ ಮಾತಿನ ಬಾಣ ಎಸೆಯಲು ಶುರುಮಾಡುತ್ತಾರೆ. ಇದ್ಯಾಕೆ ಹೀಗೆ?



Click it and Unblock the Notifications
