Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಪಾಕ್ ಶಾಲೆಗಳಲ್ಲಿ ಹಿಂದೂ ದ್ವೇಷದ ಪಾಠ: ಅಮೆರಿಕ ಸರಕಾರ

ಇಂತಹ ಪ್ರಚೋದನಕಾರಿ ಅಧ್ಯಾಯಗಳು 4ನೆಯ ತರಗತಿಯಿಂದ ಆರಂಭವಾಗಿ 10ನೆಯ ತರಗತಿ ವರೆಗಿನ ಪಠ್ಯ ಪುಸ್ತಕಗಳಲ್ಲಿ ಢಾಳಾಗಿ ಕಂಡುಬರುತ್ತದೆ.
ಅಲ್ಪಸಂಖ್ಯಾತರಿಗೆ ಪೂರ್ಣ ಹಕ್ಕುಗಳನ್ನು ನೀಡಿರುವ ಸುಧಾರಣಾವಾದಿ ದೇಶ ಎಂದು ತನ್ನನ್ನು ಕರೆದುಕೊಳ್ಳುತ್ತಿದ್ದರೂ ಭಾರತದ ಜತೆಗಿನ ಮೂರು ಯುದ್ಧ ಮತ್ತು ಸತತವಾಗಿ ಅಧಿಕಾರಕ್ಕೆ ಬಂದ ದುರ್ಬಲ ಸರಕಾರಗಳು ಕರ್ಮಠ ಮುಸ್ಲಿಂ ಮತಪಂಡಿತರ ಒತ್ತಡಕ್ಕೆ ಮಣಿದು ಸಮಾಜವನ್ನು ಪೂರ್ತಿಯಾಗಿ ಇಸ್ಲಾಮೀಕರಣಗೊಳಿಸಿವೆ ಎಂದು ವರದಿ ಹೇಳಿದೆ.
ಪಾಕಿಸ್ತಾನದ ಸಾಮಾಜಿಕ ಅಧ್ಯಯನ ಪಠ್ಯ ಪುಸ್ತಕಗಳಲ್ಲಿ ಭಾರತ ಮತ್ತು ಬ್ರಿಟನ್ ವಿರುದ್ಧ ದ್ವೇಷ ಹುಟ್ಟಿಸುವ ಸಂಗತಿಗಳೇ ತುಂಬಿವೆ. ಮಕ್ಕಳಿಗೆ ಮತಾಂಧತೆಯನ್ನು ಬೋಧಿಸುತ್ತಿರುವುದರಿಂದ ಪಾಕಿಸ್ತಾನದಲ್ಲಿ ಧಾರ್ಮಿಕ ಉಗ್ರವಾದ ಬೆಳೆಯುತ್ತಾ ಹೋಗುತ್ತಿದೆ ಹಾಗೂ ಧಾರ್ಮಿಕ ಸ್ವಾತಂತ್ರ್ಯ ದುರ್ಬಲವಾಗುತ್ತಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಸ್ಥಿರತೆ ದುರ್ಬಲವಾಗಿ ಜಾಗತಿಕ ಬೆದರಿಕೆಯಾಗಿ ಪರಿಣಮಿಸುತ್ತದೆ ಎಂದು ವರದಿ ಎಚ್ಚರಿಸಿದೆ.
ಹಿಂದೂಗಳು ಮತ್ತು ಮುಸ್ಲಿಮರು ಶತಮಾನಗಳಿಂದ ಸಹಬಾಳ್ವೆ ಮಾಡುತ್ತಾ ಬಂದಿದ್ದಾರೆಂದು ಇತಿಹಾಸ ಹೇಳುತ್ತಿದ್ದರೂ ಪಠ್ಯ ಪುಸ್ತಕಗಳಲ್ಲಿ ಹಿಂದೂಗಳನ್ನು ಉಗ್ರರು ಮತ್ತು ಇಸ್ಲಾಮ್‌ನ ವಿರೋಧಿಗಳು ಎಂಬಂತೆ ಚಿತ್ರಿಸಲಾಗಿದೆ. ಹಿಂದೂ ಸಮಾಜವನ್ನು ಕ್ರೂರ ಮತ್ತು ಅನ್ಯಾಯಗಾರರು ಮತ್ತು ಇಸ್ಲಾಮ್‌ನ ಶಾಂತಿಯ ಮತ್ತು ನ್ಯಾಯದ ಸಂಕೇತ ಎಂದು ಬಣ್ಣಿಸಲಾಗಿದೆ.
ಇಸ್ಲಾಂ ಮೂಲಭೂತವಾದಿಗಳ ಬೆಂಬಲದಿಂದ ಅಧಿಕಾರದಲ್ಲಿದ್ದ ಜಿಯಾ -ಉಲ್- ಹಕ್ ಕಾಲದಲ್ಲೇ ಪಠ್ಯ ಪುಸ್ತಕಗಳ ಇಸ್ಲಾಮೀಕರಣ ಶುರುವಾಗಿತ್ತು. 2006ರಲ್ಲಿ ಸರಕಾರ ಪಠ್ಯ ಪುಸ್ತಕಗಳಲ್ಲಿ ಸುಧಾರಣೆ ಮಾಡಲು ಮುಂದಾದರೂ ತೀವ್ರವಾದಿಗಳ ಒತ್ತಡಕ್ಕೆ ಮಣಿದು ಈ ಪ್ರಯತ್ನವನ್ನು ಕೈಬಿಟ್ಟಿದೆ.



Click it and Unblock the Notifications
