Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಪ್ರಥಮನ ಏಕಾದಶಿ: ಸೋಮವಾರ ಎಲ್ಲೆಡೆ ತಪ್ತ ಮುದ್ರಾಧಾರಣೆ

ಬೆಂಗಳೂರಿನಲ್ಲಿ ಶ್ರೀ ಪೇಜಾವರ ಹಿರಿಯ, ಶ್ರೀ ಕಾಣಿಯೂರು, ಶ್ರೀ ಉತ್ತರಾದಿ, ಶ್ರೀ ಪುತ್ತಿಗೆ, ಶ್ರೀ ಸೋದೆ ಮಠಾಧೀಶರು, ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಶೀರೂರು ಮಠಾಧೀಶರು, ತುಮಕೂರಿನಲ್ಲಿ ಶ್ರೀ ಭೀಮನಕಟ್ಟೆ ಶ್ರೀಗಳು, ಬಳ್ಳಾರಿಯಲ್ಲಿ ಶ್ರೀ ಅದಮಾರು ಶ್ರೀಗಳು, ಮೈಸೂರಿನಲ್ಲಿ ಶ್ರೀ ಪಲಿಮಾರು ಮಠಾಧೀಶರು, ಹುಬ್ಬಳ್ಳಿಯಲ್ಲಿ ಶ್ರೀ ಭಂಡಾರಕೇರಿ ಮಠಾಧೀಶರು, ಶ್ರೀ ಪೇಜಾವರ ಕಿರಿಯ ಶ್ರೀಗಳು ಚೆನ್ನೈಯಲ್ಲಿ ಮುದ್ರಾಧಾರಣೆ ನಡೆಸಲಿದ್ದಾರೆ.
ಏನಿದು ಮುದ್ರಾಧಾರಣೆ ಸಂಭ್ರಮ ?: ಸುದರ್ಶನ ಹೋಮವನ್ನು ನಡೆಸಿ ಅದರಲ್ಲಿ ಕಾಯಿಸಿದ ಶಂಖ, ಚಕ್ರ, ಗದ, ಪದ್ಮ ಚಿಹ್ನೆಯನ್ನು ಎದೆ, ಎಡ ಮತ್ತು ಬಲ ತೋಳಿಗೆ ಹಾಕುವುದನ್ನು ತಪ್ತ ಮುದ್ರಾಧಾರಣೆ ಎಂದು ಕರೆಯಲಾಗುತ್ತದೆ. ತಪ್ತ ಅಂದರೆ ಕಾಯಿಸಿದ ವಿವಿಧ ಚಿಹ್ನೆಗಳ ಮುದ್ರೆಗಳನ್ನು ಹಾಕುವುದು. ಈ ಚಿಹ್ನೆಗಳು ವಿಷ್ಣುವಿನ ಆಭರಣ ಸಾಧನಗಳು. ಇದು ವೈಷ್ಣವ ಲಾಂಛನವಾಗಿದ್ದು ಮಠಾಧೀಶರು ಮಾತ್ರ ಹಾಕುತ್ತಾರೆ.
ವಿವಿಧ ಸಂಸ್ಕಾರಗಳಲ್ಲಿ ಮುದ್ರಾಧಾರಣೆಯೂ ಒಂದಾಗಿದ್ದು ಇದನ್ನು ಮಹಿಳೆಯರು, ಪುರುಷರು, ಆಬಾಲವೃದ್ಧರು, ಯಾವುದೇ ಜಾತಿಮತದವರು ಹಾಕಿಕೊಳ್ಳಬಹುದಾಗಿದೆ. ಪ್ರಥಮನ ಏಕಾದಶಿ ಮಾತ್ರವಲ್ಲದೆ ಇತರ ದಿನಗಳಲ್ಲಿಯೂ ಮುದ್ರಾಧಾರಣೆ ನಡೆಯುತ್ತದೆ. ಆದರೆ ಇದಕ್ಕೆ ಅಪವಾದವೆಂಬಂತೆ ಉಪ್ಪಿನಂಗಡಿ ಸಮೀಪದ ಎರ್ಕಿಮಠದಲ್ಲಿ ಮಾತ್ರ ಗೃಹಸ್ಥಾಶ್ರಮಿಗಳು ಮುದ್ರಾಧಾರಣೆ ನಡೆಸಲು ಮಧ್ವಾಚಾರ್ಯರು ಅನುಮತಿ ಕೊಟ್ಟಿದ್ದರು. ಇದು ಇಂದಿಗೂ ನಡೆದು ಬರುತ್ತಿದೆ.



Click it and Unblock the Notifications
