Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಭ್ರಷ್ಟರು ಗುಡ್ಡ ಅಗೆದು ಬೆಟ್ಟದಷ್ಟು ದುಡ್ಡು ಮಾಡಿದರು, ಹೆಗ್ಡೆ ನೀವು ...

ಇನ್ನೂ ಆಶ್ಚರ್ಯಕರ ಸಂಗತಿ ಹೇಳ್ಲಾ. ಈ ಹಣ ನೀಡಿರುವುದು ಸೌತ್ ವೆಸ್ಟ್ ಮೈನಿಂಗ್ ಕಂಪನಿ. ನೀವೂ ಒಂದು ವಿಷ್ಯ ತಿಳಿಕೊಳ್ಳಿ. ಇಡೀ ರಾಜ್ಯದ ಜನತೆಗೆ ಗೊತ್ತಿರುವ ಸಂಗತಿಯೆಂದರೆ ಬಳ್ಳಾರಿ ರೆಡ್ಡಿ ಸೋದರರು ಮುಖ್ಯಮಂತ್ರಿ ಯಡಿಯೂರಪ್ಪಗೆ ತುಂಬಾ ಹತ್ತಿರವಾಗಿದ್ದುಕೊಂಡು ಗಣಿಗಳಿಂದ ಸಾವಿರಾರು ಕೋಟಿ ಬಾಚಿದರು ಎಂಬುದು.
ಈ ಪ್ರಕ್ರಿಯೆಯಲ್ಲಿ ಯಡಿಯೂರಪ್ಪಗೆ ಕೋಟ್ಯಂತರ ರುಪಾಯಿ ಸಂದಾಯವಾಗಿದೆ ಎಂಬುದರಲ್ಲಿ ರಾಜ್ಯದ ಜನತೆಗೆ ಯಾವುದೇ ಅನುಮಾನವಿಲ್ಲ. ಆದರೆ ಅದೇನದು ನಿಮ್ಮ ವರದಿ. ಅದರಲ್ಲೆಲ್ಲೂ ರೆಡ್ಡಿ ಸೋದರರ ಗಣಿ ಋಣ ಸಂದಾಯದ (ಯಡಿಯೂರಪ್ಪಗೆ) ಬಗ್ಗೆ ಪ್ರಸ್ತಾಪವೇ ಇಲ್ಲ. ಯಸ್ ಯಡ್ಡಿಗೆ ರೆಡ್ಡಿಗಳಿಂದ ಎಷ್ಟು ಕೋಟಿ ಸಂದಾಯವಾಗಿದೆ ಎಂದು ಯಾಕೆ ರುಜುವಾತುಪಡಿಸಿಲ್ಲ. ಇದನ್ನು ರಾಜ್ಯದ ಜನತೆ ಮುಂದಿಡಲು ಯಾಕೆ ವಿಫಲರಾದಿರಿ?
ಅದೂ ಚೆಕ್ ಮೂಲಕ ಸಂದಾಯವಾಗಿರುವುದನ್ನು ನೀವು ದೊಡ್ಡದಾಗಿ ಎತ್ತಿಹಿಡಿದಿದ್ದೀರಿ. ಇದನ್ನು ಯಾವುದೇ ಒಬ್ಬ ಸಾಧಾರಣ ಪೊಲೀಸ್ ಅಧಿಕಾರಿಯೂ ಪತ್ತೆ ಹಚ್ಚಬಹುದಿತ್ತು, ನೀವೇ ಬೇಕು ಅಂತೇನಿಲ್ಲ. ಗುರುಗಳೇ, ನಿಮ್ಮ ವರದಿಯ ಬಗ್ಗೆ ನಾವೆಲ್ಲ ಇಟ್ಟುಕೊಂಡಿದ್ದ ನಿರೀಕ್ಷೆಗಳೆಲ್ಲ ಠುಸ್ ಎಂದಿವೆ. ಹಾಡಿದ್ದೇ ಹಾಡೋ...ಎಂಬಂತೆ ಬುಧವಾರದ ಪತ್ರಿಕಾಗೋಷ್ಠಿಯಲ್ಲೂ ಅದೇ ಸೋರಿಕೆ ಮಾಹಿತಿಯನ್ನು ನೀಡಿ, ಕೃತಾರ್ಥರಾಗಿದ್ದೀರಿ.



Click it and Unblock the Notifications
