Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ತರ್ಕಕ್ಕೆ ಸಿಕ್ಕದ ಟಿವಿ9 ಕಾರ್ಯಕ್ರಮ ಹೀಗೂ ಉಂಠೇ

ಜನಪ್ರಿಯತೆ ಮಂಚೂಣಿಯಲ್ಲಿರುವ ಟಿವಿ9 ಒಳಗೆ ಪ್ರಸಾರವಾಗುವ ರೋಮಾಂಚಕ ಕಾರ್ಯಕ್ರಮಗಳಲ್ಲಿ "ಹೀಗೂ ಉಂಟೆ"ಗೆ ಮೊದಲ ಸ್ಥಾನ. ನಮ್ಮನೆಗಳ ಹೆಂಗಸರು ನಂಬಿಕೆ ಅಪನಂಬಿಕೆಗಳನ್ನು ಸ್ಟೌವ್ ಮೇಲಿಟ್ಟು ಇದನ್ನು ನೋಡುತ್ತಾ ಕುಳಿತರೆ ಮುಗಿಯಿತು ಕೆಲಸ. ಅಡುಗೆ ಮನೆಯಲ್ಲಿ ಹಾಲು ಉಕ್ಕುವುದು ಖಂಡಿತ.
ಉಕ್ಕಿ ಹರಿದ ಹಾಲು ನಮ್ಮ ವೆಬ್ ಸೈಟಿನ ವೆರಾಂಡದವರೆವಿಗೂ ಹರಿದು ಬರುವುದು ವಾಡಿಕೆ. "ಟಿವಿ9ನೊಳಗೆ ಹೇಳಿದರಂತೆ, ಅದರ ಬಗ್ಗೆ ಹೆಚ್ಚಿನ ವಿವರ ಕೊಡಿ, ಅಡ್ರೆಸ್ ಮತ್ತು ಫೋನ್ ನಂಬರುಗಳನ್ನೂ ಕೊಡಿ" ಎಂದು ಕೇಳಿ ಬರುವ ಸಪೋರ್ಟ್ ರಿಕ್ವೆಸ್ಟುಗಳನ್ನು ನಿಭಾಯಿಸುವುದು ನಮಗೆ ಕಷ್ಟವೇ ಆಗುತ್ತದೆ.
ನಿನ್ನೆ ಸೋಮವಾರ ಒಬ್ಬ ಮಹರಾಯ್ ಗಿತ್ತಿ ನಮ್ಮ ಫೋನ್ ನಂಬರ್ ಪತ್ತೆ ಮಾಡಿ ಸೀದಾ ಕೇಳಿಬಿಟ್ಟರು. ಆಕೆಯ ಹೆಸರು ಗಿರಿಜಾ, ತಿಪಟೂರಿನವರಂತೆ. "ನಿಮಗೆ ಗೊತ್ತಿರತ್ತೆ ಕೊಡಿ ಸಾರ್" ಎನ್ನುವುದು ಆಕೆಯ ಆಗ್ರಹ. ಅವರು ಹೇಳುವುದು ಇಷ್ಟು:
"ಈಚೆಗೆ ಟಿವಿ9 ನಲ್ಲಿ ಒಂದು ಪ್ರೊಗ್ರಾಂ ಬಂತಂತೆ. ಶಿಂಷಾಗೆ ಸ್ವಲ್ಪ ದೂರದಲ್ಲಿ ಒಂದು ಹಳ್ಳಿ ಇದೆಯಂತೆ. ಅಲ್ಲಿರುವ ಶ್ರೀಚಕ್ರ ಅಥವಾ ಸೋಮೇಶ್ವರ ಎಂಬ ದೇವಸ್ಥಾನದಲ್ಲಿ ಬಾವಿಯೋ, ಕೆರೆಯೋ ಒಟ್ಟಾರೆ ಒಂದು ನೀರಿನ ಸೆಲೆ ಇದೆಯಂತೆ. ಆ ನೀರಿನಲ್ಲಿ ಚಕ್ರತೀರ್ಥ ಇದೆಯಂತೆ. ಅಲ್ಲಿಗೆ ಹೋಗಿ ಬಂದರೆ ಕಾರ್ಯಸಿದ್ಧಿ ಆಗುತ್ತದಂತೆ."
ಕಳೆದುಹೋದದ್ದು ಏನೇ ಆಗಿರಲಿ. ಓಲೆ, ಉಂಗುರ, ಬೈಕು, ಮಗು, ಎಮ್ಮೆ, ಹಸ ಕರ, ಪಾಸ್ ಪೋರ್ಟು, ಸಾಕುನಾಯಿ, ಗೆಳೆಯ, ಗೆಳತಿ, ನೆಮ್ಮದಿ ವಾಪಸ್ಸು ಸಿಗತ್ತಂತೆ ಅದಕ್ಕಾಗಿ ತಾವುಗಳು ಮಾಡಬೇಕಾದುದು ಇಷ್ಟೆ ಎಂದು ನಾರಾಯಣ ಸ್ವಾಮಿ ಹೇಳಿದಾರಂತೆ:
ಆ ಹಳ್ಳಿಗೆ ಹೋಗಿ ಎರಡು ವೀಳ್ಯದೆಲೆ, ಚೂರು ಅಡಿಕೆಯನ್ನು ನೀರಿನಲ್ಲಿ ತೇಲಿಬಿಟ್ಟರೆ ಸಾಕಂತೆ. ನೀವು ಕಳೆದುಕೊಂಡಿರುವ ಯಾವುದೇ ಅಮೂಲ್ಯ ವಸ್ತು ವಾಪಾಸು ನಿಮ್ಮ ಕೈಸೇರುತ್ತದಂತೆ ಎನ್ನುವುದು ಸಮಾಚಾರ. ಯಾರಿಗಾದರೂ ಶಿಂಷಾ ಬಳಿ ಇರುವ ಪವಾಡ ಸದೃಶ ಚಕ್ರತೀರ್ಥದ ಬಗ್ಗೆ ವಿವರಗಳು ತಿಳಿದಿದ್ದರೆ ನಮಗೂ ತಿಳಿಸಬೇಕಾಗಿ ವಿನಂತಿ.
ನಮ್ಮ ವೆಬ್ ಸೈಟಿನಲ್ಲಿ ಈ ಮಾಹಿತಿಗಳು ಸಿಗುವುದಿಲ್ಲ. ಮಾನ್ಯ ಓದುಗರು ನೇರವಾಗಿ ಟಿವಿ9 ಕಚೇರಿಯನ್ನು ಸಂಪರ್ಕಿಸಬೇಕೆಂದು ([email protected]) ಕೋರಿಕೆ. ಶಿಂಷಾ ಪವಾಡದ ಬಗ್ಗೆ ಗೊತ್ತಿದ್ದರೆ ವಿವರಗಳನ್ನು ಇಮೇಲ್ ಮಾಡಿ. ಸಾರ್ವಜನಿಕ ಹಿತಾಸಕ್ತಿಯಿಂದ ಅದನ್ನು ಪ್ರಕಟಿಸಲಾಗುವುದು.



Click it and Unblock the Notifications
