Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಮೇ 21 : ಪ್ರಳಯ, ಕ್ರಿಸ್ತನ ನಿರೀಕ್ಷೆಯಲ್ಲಿ ಅಮೆರಿಕ!

ಮೇ 21, ವಿಶ್ವ ಅಂತ್ಯವಾಗುವ ದಿನ. ಜಗತ್ ಪ್ರಳಯ ಸಂಭವಿಸಿ ವರ್ಷಾನುವರ್ಷಗಳಿಂದ ಕೂಡಿಟ್ಟ ಆಸ್ತಿಪಾಸ್ತಿ, ಬಂಧುಬಳಗವನ್ನು ಕಳೆದುಕೊಳ್ಳುತ್ತೇವೆಂಬ ಭಯ ಅನೇಕರಲ್ಲಿ ಆವರಿಸಿದೆ. ರಕ್ಷಕನಾದ ಕ್ರೈಸ್ತ ಜೀವಜಗತ್ತನ್ನು ಕಾಪಾಡಲೆಂದು ಇಂದು ಅವತರಿಸಿ ಬರಲಿದ್ದಾನೆ ಎಂದು ಕ್ರೈಸ್ತ ಸಮೂಹ ಕಾದು ಕುಳಿತಿದೆ. ಊರತುಂಬೆಲ್ಲ ಇದೆ ಮಾತು. ಹಾಗಾಗತ್ತಂತೆ, ಹೀಗಾಗತ್ತಂತೆ! ಉಳಿದಂತೆ ವ್ಯಾಪಾರ ತನ್ನಷ್ಟಕ್ಕೆ ತಾನು ನಡೆಯುತ್ತಿದೆ.
ಇಗರ್ಜಿಗಳು ಸಾಮೂಹಿಕ ಪ್ರಾರ್ಥನೆಗಳನ್ನು ಏರ್ಪಡಿಸಿವೆ. ಟಿವಿ, ರೇಡಿಯೋಗಳ ಮುಖಾಂತರ ಇಂದಿನ ದಿನದ ಎಚ್ಚರದಿಂದಿರಬೇಕೆಂದು ಸಾರಿಸಾರಿ ಹೇಳಲಾಗುತ್ತಿದೆ. ಬಸ್ ನಿಲ್ದಾಣ, ಮಾಲ್, ಸೇತುವೆ, ಕಟ್ಟಡಗಳು, ಹೋರ್ಡಿಂಗ್, ಪೋಸ್ಟ್ ಕಾರ್ಡ್, ಇಂಟರ್ನೆಟ್, ಮೊಬೈಲ್ ಮುಖಾಂತರ ಕ್ರೈಸ್ತ ಬರುತ್ತಿರುವ ಸಂದೇಶವನ್ನು ರವಾನಿಸಲಾಗುತ್ತಿದೆ. ನಮ್ಮ ಜ್ಯೋತಿಷಿಗಳಂತೆ ಅಲ್ಲಿನ ಬ್ರಹ್ಮಾಂಡ ಜ್ಯೋತಿಷಿಗಳು ತಮಗೆ ತಿಳಿದದ್ದು ಹೇಳುತ್ತಿದ್ದಾರೆ.
ಮೇಲಿಂದ ಮೇಲೆ ಸರ್ವನಾಶ ಮಾಡುವಂಥ ಭೂಕಂಪನಗಳಾಗುತ್ತಿವೆ, ಭೂತಾಪಮಾನ ಜಾಸ್ತಿಯಾಗುತ್ತಿದೆ, ಅಣ್ವಸ್ತ್ರ ಬಳಕೆಯ ಬಗ್ಗೆ ಹೆದರಿಕೆ ತಲೆಯ ಮೇಲೆ ತೂಗುತ್ತಿದೆ, ಭ್ರಷ್ಟಾಚಾರ ವಿಶ್ವವ್ಯಾಪಿಸಿದೆ, ಅಪರಾಧ ಜಾಸ್ತಿಯಾಗುತ್ತಿದೆ, ಆರ್ಥಿಕ ಮುಗ್ಗಟ್ಟು ತನ್ನ ಮುಷ್ಠಿ ಬಿಗಿ ಮಾಡುತ್ತಿದೆ... ಈ ಎಲ್ಲ ಕಾರಣಗಳು ಭೂಮಿಯ ಸರ್ವನಾಶಕ್ಕೆ ನಾಂದಿ ಹಾಡಲಿವೆ ಎಂದು ಅನೇಕರು ನಂಬಿದ್ದಾರೆ.
ಜಗತ್ ಪ್ರಳಯ ಇಂದೇ ಆಗುತ್ತದೆಂದು ನಂಬಿರುವ ಜನತೆಯಲ್ಲಿ ವಿಚಿತ್ರ ಭಯ ವ್ಯಾಪಿಸಿದೆ. ಜಗದ್ ರಕ್ಷಕನಾದ ಭಗವಂತನೆ, ಅವತರಿಸಿ ನಮ್ಮನ್ನು ಕಾಪಾಡು ತಂದೆಯೇ ಎಂದು ಜನರು ಪರಿಪರಿಯಾಗಿ ಪ್ರಾರ್ಥಿಸುತ್ತಿದ್ದಾರೆ. (ಓದಿ : ಪ್ರಾರ್ಥನೆಗೂ ಒಂದು ದಿನ) ಇದೇ ದಿನ ರೈಟ್ ಬ್ರದರ್ಸ್ ತಾವು ನಿರ್ಮಿಸಿದ್ದ ವಿಮಾನ ಎಷ್ಟೇ ಪ್ರಯತ್ನ ಪಟ್ಟರೂ ಹಾರಾಡಿದ್ದಿದಿಲ್ಲವಂತೆ. ಕೆಲಸ ಬೊಗಸಿ ಎಲ್ಲ ಬಿಟ್ಟ ಜನ ಕ್ರೈಸ್ತ ಪರಮಾತ್ಮ ಬರುತ್ತಾನೆಂದು ಕಾದಿದ್ದಾರೆ. ಬರುತ್ತಾನೆಯೆ? ಬಂದರೂ ಪ್ರಳಯವಾಗುವ ಮೊದಲು ಬರುತ್ತಾನೋ, ಆದ ನಂತರ ಬರುತ್ತಾನೋ ಗೊತ್ತಿಲ್ಲ!



Click it and Unblock the Notifications
