Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ರಾಜಮನೆತನದ ವಿವಾಹ ಆಹ್ವಾನ ಪತ್ರಿಕಾ

ವಿಲಿಯಂ ಮತ್ತು ಕೇಟ್ ಇಬ್ಬರ ವಯಸ್ಸೂ 29. ಮದುವೆ ಆಗುತ್ತಿರುವ ದಿನಾಂಕವೂ 29. ಅದೊಂದು ವಿಶೇಷ. ವಧೂ ವರರ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು ಎಂಬ ಚರ್ಚೆಗಳನ್ನು ಚರ್ಚುಗಳಿಗೆ ಬಿಟ್ಟು ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ಮದುವೆಗೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಹುಡುಗ ಹುಡುಗಿಯ ನಡುವಿನ ವರ್ಗ ಭೇದಕ್ಕೂ ಈ ಮಂಗಳಕಾರ್ಯ ಮಂಗಳವನ್ನೇ ಹಾಡಿದೆ. ವಿಲಿಯಂ ರಾಜಕುಮಾರ ಆಗರ್ಭ ಶ್ರೀಮಂತ. ವಧು ಮಧ್ಯ ಇಂಗ್ಲೆಂಡಿನಿಂದ ಬಂದ ಮಧ್ಯಮ ವರ್ಗದ ಹುಡುಗಿ.
ಈ ವೈವಾಹಿಕ ಸಂಬಂಧಗಳ ವಿಶಿಷ್ಟತೆ ಇಂದೇನೂ ಹೊಸತಲ್ಲ. ವಿಲಿಯಂನ ಅಪ್ಪ ಕೂಡ ಇದೇ ದಾರಿ ಹಿಡಿದಿದ್ದ. ಬಡವರ ಮನೆ ಹುಡುಗಿ ಡಯಾನಾಳನ್ನು ವರಿಸಿ ಮದುವೆ ಆಗಿದ್ದ. ಪ್ರೀತಿ ಪ್ರೇಮ ಪ್ರಣಯದಲ್ಲಿ ಬಡತನ ಸಿರಿತನ ಜಗಳಕ್ಕೆ ಜಾಗ ಇಲ್ಲ ಎಂದು ಆತ ತೋರಿಸಿದ್ದ. ಮುದ್ದಾದ ಎರಡು ಮಕ್ಕಳೂ ಜನಿಸಿದವು. ಚಾರ್ಲ್ಸ್ ಈಗ ವಿಧುರ.
ದೇವಾನುದೇವತೆಗಳ ಮನೆಯಂಗಳದಲ್ಲಿ ಮಂಗಳ ಕಾರ್ಯ ನಡೆಯುತ್ತಿದ್ದರೆ ದಾನವರು ಬೆಂಕಿ ಉಂಡೆಗಳನ್ನು ಎರಚುವುದರ ಮೂಲಕ ವಿಘ್ನ ಉಂಟುಮಾಡುವುದನ್ನು ನಾವು ಭಾರತೀಯ ಪೌರಾಣಿಕ ಚಲನಚಿತ್ರಗಳಲ್ಲಿ ಅಥವಾ ಕಾರ್ಟೂನುಗಳಲ್ಲಿ ನೋಡಿರುತ್ತೀವಿ. ಈ ಮದುವೆಗೂ ಕೂಡ ಅಡ್ಡಿ ಆತಂಕ ಉಂಟುಮಾಡಲು ಬ್ರಿಟನ್ನಿನ ಮುಸ್ಲಿಂ ಬಾಂಧವರು ಮುಂದಾಗಿದ್ದಾರೆ. ಮದುವೆ ವೇಳೆ ಕಪ್ಪು ಬಾವುಟ ಪ್ರದರ್ಶನಕ್ಕೆ ಅವಕಾಶ ಕೊಡುವಂತೆ ಪೊಲೀಸ್ ಕಮಿಷನರ್ಗೆ ಅಪ್ಲಿಕೇಷನ್ ಹಾಕಿಕೊಂಡಿದ್ದಾರೆ.
ಸ್ಕಾಟ್ ಲ್ಯಾಂಡ್ ಪೊಲೀಸರು ಅವಕಾಶ ಕೊಡುವುದಿಲ್ಲ. ಆಕಸ್ಮಾತ್ ಅವಕಾಶ ಕೊಟ್ಟರೆ ತಾವೂ ಕೂಡ ಪ್ರತಿಭಟನಾ ಪ್ರದರ್ಶನದಲ್ಲಿ ತೊಡಗುವುದಾಗಿ ಬ್ರಿಟನ್ನಿನ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ. ಇದೇ ವೇಳೆ ವಿವಾಹ ಕಾರ್ಯಕ್ರಮದ ವೇಳೆ ಬಂದೋಬಸ್ತಿಗಾಗಿ 5,000 ಪೊಲೀಸರನ್ನು ನಿಯೋಜಿಸಲಾಗಿದೆ. ದಿಬ್ಬಣ ಸಾಗಿಬರುವ ದಾರಿಯುದ್ದಕ್ಕೂ ಅವಘಡ ಸಂಭವಿಸುವ ಯಾವುದೇ ಕುತಂತ್ರವನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಪೊಲೀಸರು ಕಣ್ಣಲ್ಲಿ ಕಣ್ಣಿಟ್ಟು ತಪಾಸಣೆ ಮಾಡುತ್ತಿದ್ದಾರೆ. ಅಂದ ಹಾಗೆ, ಈ ರಾಯಲ್ ವೆಡ್ಡಿಂಗಿಗೆ ಎಷ್ಟು ಖರ್ಚಾಗುತ್ತದೆಂದು ಯಾರಾದರೂ ಲೆಕ್ಕ ಹಾಕಿ ವಿವರ ನಮಗೆ ನೀಡುತ್ತೀರಾ?



Click it and Unblock the Notifications
