Latest Updates
-
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ!
Year Ender 2024: 2024ರಲ್ಲಿ ವಿಚ್ಛೇದನ ಕಾರಣಕ್ಕೆ ಕಟು ವಿಮರ್ಶೆಗೆ ಒಳಗಾದ 6 ಸೆಲೆಬ್ರಿಟಿ ಜೋಡಿಗಳು
ಸೆಲೆಬ್ರಿಟಿಗಳೆಂದರೆ ಸಾಮಾನ್ಯ ಜನರಂತೆ ಅಲ್ಲ, ಅವರಿಗೆ ಒಂದಿಷ್ಟೂ ಅಭಿಮಾನಿಗಳಿರುತ್ತಾರೆ, ಅವರನ್ನೇ ಆದರ್ಶವಾಗಿ ತೆಗೆದುಕೊಂಡು ನಾವು ಅವರಂತೆಯೇ ಇರಬೇಕು ಎಂದು ಬಯಸುವವರೂ ಇರುತ್ತಾರೆ, ಹೀಗೆ ನಮ್ಮ ನೆಚ್ಚಿನ ಸೆಲೆಬ್ರಿಟಿಗಳ ಬದುಕಿನಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ದೂರಾದರು ಎಂಬ ಸುದ್ದಿ ಕೇಳಿದಾಗ ಕೆಲವರಿಗೆ ಅಚ್ಚರಿ ಉಂಟಾದರೆ ಇನ್ನು ಕೆಲವರು ಅವರ ಜೀವನ ಶೈಲಿ ವಿಮರ್ಶೆ ಮಾಡುತ್ತಾರೆ, ಹೀಗೆ 2024ರಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಅಷ್ಟೇ ವಿಮರ್ಶೆಗೆ ಒಳಗಾದ ವಿಚ್ಛೇದನಗಳೆಂದರೆ

ರಹಮಾನ್-ಸೈರಾ ಭಾನು ವಿಚ್ಚೇದನ
ಈ ವರ್ಷದ ಕೊನೆಯಲ್ಲಿ ಕೇಳಿ ಬಂದ ವಿಚ್ಚೇದನವಿದು. ಮಕ್ಕಳು ಮದುವೆ ಪ್ರಾಯಕ್ಕೆ ಬಂದಿದ್ದಾರೆ, ದೊಡ್ಡ ಮಗಳಿಗೆ ಮದುವೆಯಾಗಿದೆ, ಆವಾಗ 29 ವರ್ಷದ ಸುದೀರ್ಘ ದಾಂಪತ್ಯ ವಿಚ್ಚೇದನದ ಮೂಲಕ ಅಂತ್ಯವಾಯ್ತು ಎಂಬ ಸುದ್ದಿ ಬಂದಾಗ ದೊಡ್ಡ ಸದ್ದು ಮಾಡಿತು, ಯೌವನ ಪ್ರಾಯಕ್ಕಿಂತ ವಯಸ್ಸಾದಾಗ ಸಂಗಾತಿ ಬೇಕು ಅನಿಸಲಾರಂಭಿಸುತ್ತದೆ, ಏಕೆಂದರೆ ಈ ವಯಸ್ಸಿನಲ್ಲಿ ಮಕ್ಕಳು ಅವರ ಪಾಡಿಗೆ ಬ್ಯುಸಿಯಾಗಿರುತ್ತಾರೆ, ನಮ್ಮ ಜೊತೆ ಮಾತನಾಡಲು, ನಮ್ಮ ಕಷ್ಟ ಸುಖ ಹಂಚಿಕೊಳ್ಳಲು ನನ್ನ ಸಂಗಾತಿ ಬದುಕಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಸಂಗಾತಿ ತೀರಿ ಹೋದವರು ಬಯಸುತ್ತಿರುತ್ತಾರೆ, ಆದರೆ ರಹಮಾನ್ 57ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆದಿರುವುದು ದೊಡ್ಡ ಸುದ್ದಿಯಾಯ್ತು ಅಲ್ಲದೆ ಇದುವರೆಗೆ ಅವರ ಬಗ್ಗೆ ಯಾವ ಗಾಸಿಪ್ ಕೇಳಿ ಬಂದಿರಲಿಲ್ಲ, ಆದರೆ ವಿಚ್ಛೇದನ ಬಳಿಕ ಅದುವೂ ಕೇಳಬೇಕಾಯ್ತು, ಇಷ್ಟು ವರ್ಷ ಜೊತೆಯಾಗಿ ಬಾಳಿದ ಜೋಡಿ ಬೇರೆಯಾಗಲು ಕಾರಣವೇನು ಎಂಬುವುದು ಬಹಿರಂಗ ಪಡಿಸಿಲ್ಲ.
ಹಾರ್ದಿಕ್ ಪಾಂಡ್ಯ ನತಾಶ ವಿಚ್ಛೇದ
ಈ ವಿಚ್ಛೇದನ ಬಳಿಕ ನತಾಶಾ ವಿರುದ್ಧ ಕಟು ವಿಮರ್ಶೆಗಳು ಕೇಳಿ ಬಂತು, ಈಗಲೂ ವಿಮಿರ್ಶೆ ಮಾಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ವಿಚ್ಛೇದನ ಸಮಯದಲ್ಲಿ ಜೀವನಾಂಶದ ಸುದ್ದಿ ಕೂಡ ಸಕತ್ ಇಂಟೆರೆಸ್ಟಿಂಗ್ ಆಗಿತ್ತು, ಹಾರ್ದಿಕ್ ಪಾಂಡ್ಯ ಮದುವೆಗೆ ಮೊದಲು ಒಂದು ಸಂದರ್ಶನದಲ್ಲಿ ನನ್ನ ಹೆಸರಿನಲ್ಲಿ ಆಸ್ತಿ ಇಲ್ಲ, ಎಲ್ಲಾ ಅಮ್ಮನ ಹೆಸರಿನಲ್ಲಿದೆ ಮುಂದೆ ವಿಚ್ಛೇದನ ಆದರೆ ಹೆಂಡತಿಗೆ ಅರ್ಧ ಕೊಡಬೇಕಾಗಿಲ್ಲ ಅಲ್ವಾ ಎಂದು ತಮಾಷೆಯಾಗಿ ಹೇಳಿದ್ದರು, ಆದರೆ ಅವರ ನಿಜ ಬದುಕಿನಲ್ಲಿಯೂ ವಿಚ್ಛೇದನ ನೋವು ಅನುಭವಿಸಬೇಕಾಯ್ತು, ಪತ್ನಿಗೆ ಎಷ್ಟು ಜೀವನಾಂಶ ಕೊಟ್ಟಿದ್ದಾರೆ ಎಂಬುವುದು ಎಲ್ಲಿಯೂ ಬಂದಿಲ್ಲ, ಹಾರ್ದಿಕ್ ಹೆಸರಿನಲ್ಲಿ ಆಸ್ತಿ ಇಲ್ಲದಿರುವುದು ಈ ಸಂದರ್ಭದಲ್ಲಿ ಪ್ಲಸ್ ಆಯ್ತು ಎಂಬ ಮಾತುಗಳೂ ಕೇಳಿ ಬಂದಿತ್ತು.
ಚಂದನ್ ಶೆಟ್ಟಿ ನಿವೇದಿತಾ ಗೌಡ ವಿಚ್ಛೇದನ
ವಿಚ್ಛೇದನದ ಬಳಿಕ ಫ್ರೆಂಡ್ಸ್ ಆಗಿ ಸುತ್ತಾಡುವುದು, ಡಿನ್ನರ್‌ಗೆ ಹೋಗುವುದು ಇವೆಲ್ಲಾ ಕೆಲ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ನೋಡುತ್ತೇವೆ. ಅದೇ ರೀತಿ ವಿಚ್ಛೇದನದ ಬಳಿಕ ಕೈ ಕೈ ಹಿಡಿದು ಬಂದಿದ್ದರು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ, ಅದಾದ ಬಳಿಕ ಒಟ್ಟಿಗೆ ಮೂವಿಯಲ್ಲಿ ಕೂಡ ಅಭಿನಯಿಸಿದ್ದಾರೆ. ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ಎಂದು ಕರೆಸಿಕೊಂಡಿದ್ದ ಜೋಡಿ ಈ ರೀತಿ ಬೇರೆಯಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.
ಸಾನಿಯಾ ಮಿರ್ಜಾ ವಿಚ್ಛೇದನ
ಸಾನಿಯ ಮಿರ್ಜಾ ವಿಚ್ಛೇದನದ ವದಂತಿಗಳು ಕೆಲ ವರ್ಷಗಳಿಂದ ಹಬ್ಬಿತ್ತು, ಆದರೆ ಜನವರಿ 2024ರಲ್ಲಿ ಅಧಿಕೃತ ಮಾಹಿತಿ ಹೊರಬಿತ್ತು, ಅಷ್ಟು ಮಾತ್ರವಲ್ಲ ಸೋಯೆಬ್ ಮಲ್ಲಿಕ್ ಬೇರೆ ಮದುವೆ ಕೂಡ ಆಗಿದ್ದಾರೆ.
ರಜನಿಕಾಂತ್ ಮಗಳ ವಿಚ್ಛೇದನ
ರಜನಿಕಾಂತ್ ಮಗಳು ಐಶ್ವರ್ಯ ಹಾಗೂ ನಟ ಧನುಷ್ ಕೆಲ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು, ಈ ವರ್ಷ ಅವರಿಗೆ ವಿಚ್ಛೇದನ ಸಿಕ್ಕಿದೆ. ರಜನಿಕಾಂತ್ ಈ ವಿಚ್ಚೇದನ ತಡೆಯಲು ತುಂಬಾ ಪ್ರಯತ್ನಿಸಿದರು,ಆದರೂ ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.
ಯುವರಾಜ್‌ಕುಮಾರ್ ವಿಚ್ಛೇದನೆ ಸುದ್ದಿ
ದೊಡ್ಮನೆಯ ಯುವರಾಜ್‌ಕುಮಾರ್ ಅವರ ವೈವಾಹಿಕ ಬದುಕಿನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವಿಷಯ ಹೊರಬಿದ್ದಿದ್ದು ಮಾತ್ರವಲ್ಲ, ಇತರ ಸೆಲೆಬ್ರಿಟಿಗಳಂತಲ್ಲ ಒಬ್ಬರ ಮೇಲೆ ಮತ್ತೊಬ್ಬರು ಅಪವಾದಗಳ ಕೆಸರು ಎರಚಾಟ ನಡೆಸಿದರು, ಇವರ ವಿಚ್ಛೇದನ ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿದೆ.
ಇದಲ್ಲದೆ ಇಶಾ ಡಿಯೋಲ್,ಊರ್ಮಿಳಾ ಮಾತೋಂಡ್ಕರ್, ಇಶಾ ಕೊಪ್ಪಿಕರ್, ಎ ಆರ್ ರಹಮಾನ್ ಸಹೋದರಿ ಪ್ರಕಾರ ಜಿವಿ ಪ್ರಕಾಶ್ ವಿಚ್ಛೇದನ ಪಡೆದಿದ್ದಾರೆ.



Click it and Unblock the Notifications