Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಪತಿ ಹಾಲಿಗೆ ನೀರು ಬೆರೆಸುತ್ತಾನೆ ಎಂದು ವಿಚ್ಛೇದನಕ್ಕೆ ಮುಂದಾದ ಪತ್ನಿ..!
ಮದುವೆ ಅನ್ನೋದು ಏಳೇಳು ಜನ್ಮದ ಬಂಧ ಎನ್ನಲಾಗುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮದುವೆ, ವಿಚ್ಛೇದನ ಹೆಚ್ಚಾಗುತ್ತಿದೆ. ಸಣ್ಣ ಪುಟ್ಟ ವಿಚಾರಕ್ಕೂ ಈಗ ವಿಚ್ಛೇದನ ಪಡೆಯವುದು ನಡೆಯುತ್ತಲೇ ಇದೆ. ಪತ್ನಿ ಹೆಚ್ಚು ಮೊಬೈಲ್ ಬಳಸುತ್ತಾಳೆ ಎಂದು ವಿಚ್ಚೇದನ ಪಡೆಯುವುದು, ಗಂಡ ತಡವಾಗಿ ಮನೆಗೆ ಬರುತ್ತಾನೆ ಎಂದು ವಿಚ್ಛೇದನ ಪಡೆಯುವುದು, ಪತ್ನಿ ಕೋಳಿ ಸಾರು ಮಾಡಲಿಲ್ಲ ಎಂದು ವಿಚ್ಛೇದನ ಪಡೆದ ಚಿತ್ರ ವಿಚಿತ್ರ ಪ್ರಸಂಗಗಳ ಕೇಳಿದ್ದೇವೆ.
ಆಧುನಿಕ ಯುಗದಲ್ಲಿ ಇದು ಸಾಮಾನ್ಯ ಎನ್ನುವಂತಾಗಿದೆ. ಹಿಂದೆಲ್ಲಾ ವಿಚ್ಛೇದನ ಪ್ರಸಂಗಗಳು ಬೆರಳೆಣಿಕೆಯಷ್ಟು ಮಾತ್ರ ನಡೆಯುತ್ತಿದ್ದವು. ಎಂತಹ ಸಮಸ್ಯೆ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತಿದ್ದರು. ಇಂದು ಕೋರ್ಟ್ ಮೂಲಕವೇ ಚಿಕ್ಕ ಪುಟ್ಟ ವಿಚಾರಳು ವಿಚಾರಣೆ ನಡೆಯುತ್ತವೆ, ಅದರಲ್ಲಿ ಕೆಲವೇ ಕೆಲವು ರಾಜಿಯಾದರೆ ಬಹುಪಾಲು ಕೇಸ್‌ಗಳು ವಿಚ್ಛೇದನದಲ್ಲಿ ಅಂತ್ಯವಾಗುತ್ತವೆ.

ಇಲ್ಲೊಂದು ವಿಚಿತ್ರ ಹಾಗೂ ಕ್ಷುಲ್ಲಕ ಘಟನೆ ಸಹ ಹೀಗೆ ವಿಚ್ಛೇದನಕ್ಕೆ ಕಾರಣವಾಗಿದೆ. ಪತಿ ಹಾಲಿಗೆ ಹೆಚ್ಚು ನೀರು ಬೆರೆಸುತ್ತಾನೆ ಎಂದು ಪತ್ನಿ ವಿಚ್ಛೇದನ ಪಡೆಯಲು ಮುಂದಾಗಿರುವ ಘಟನೆ ವರದಿಯಾಗಿದೆ. ಈ ಸುದ್ದಿ ಅಚ್ಚರಿ ಎನಿಸಬಹುದು. ಆದರೆ ಆಕೆ ಇದೇ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ.
ರಾಜಸ್ಥಾನದ ರಾಜ್‌ಖೇರಾದ ಯುವಕನಾದ ಪತಿ ಎರಡು ವರ್ಷಗಳ ಹಿಂದೆ ಆಗ್ರಾದ ರಾಜ್‌ಪುರ ಚುಂಗಿ ಮೂಲದ ಯುವತಿಯನ್ನು ವಿವಾಹವಾಗಿದ್ದ. ಹಾಲು ಮಾರುವ ಮೂಲಕ ಜೀವನ ಸಾಗಿಸುತ್ತಿದ್ದ ಪತಿ, ಅದರ ಪ್ರಮಾಣ ಮತ್ತು ಲಾಭವನ್ನು ಹೆಚ್ಚಿಸಲು ನಗರದಲ್ಲಿ ಮಾರಾಟ ಮಾಡುವ ಮೊದಲು ಹಾಲಿನ ಕ್ಯಾನ್‌ಗೆ ನೀರು ಮಿಶ್ರಣ ಮಾಡುತ್ತಿದ್ದ ಎಂಬುದು ಪತ್ನಿಯ ಆರೋಪವಾಗಿದೆ. ಈ ಅಭ್ಯಾಸವು ದಂಪತಿ ನಡುವೆ ನಿತ್ಯ ಗಲಾಟೆಗೆ ಕಾರಣವಾಗಿತ್ತು, ಇದರ ಪರಿಣಾಮವಾಗಿ ಹೆಂಡತಿ ತನ್ನ ಗಂಡನ ಮನೆಯನ್ನು ತೊರೆದು ತನ್ನ ತಾಯಿಯ ಮನೆ ಸೇರಿದ್ದಳು.
ಗಂಡ ಹಾಲಿಗೆ ನೀರು ಬೆರೆಸಿ ಅದನ್ನು ಮಾರಾಟ ಮಾಡುವುದು ಪತ್ನಿಗೆ ಇಷ್ಟವಿರಲಿಲ್ಲವಂತೆ. ನಿತ್ಯ ಇದೇ ವಿಚಾರಕ್ಕೆ ಆಕೆ ಗಲಾಟೆ ಮಾಡುತ್ತಿದ್ದಳು. ಕಲಬೆರೆಕೆ ಹಾಲಿನ ಮೂಲಕ ಗಳಿಸಿದ ಆದಾಯದಿಂದ ಜೀವನ ನಡೆಸಬೇಡಿ ಎಂದು ಗಂಡನಿಗೆ ಬುದ್ದಿ ಹೇಳುತ್ತಿದ್ದಳಂತೆ.
ಆದರೆ ಪತಿಯ ಕಾರ್ಯ ನಿತ್ಯ ಮುಂದುವರೆದಿತ್ತು. ಗಂಡನನ್ನು ತಡೆಯಲು ಮುಂದಾದಾಗ ನಿತ್ಯ ಜಗಳವಾಗುತ್ತಿತ್ತಂತೆ. ಇದರಿಂದ ಬೇಸತ್ತ ಆಕೆ ನೇರವಾಗಿ ಪೊಲೀಸ್ ಠಾಣೆಗೆ ತಲುಪಿದ್ದಳು, ಅಲ್ಲಿಯೂ ಬಗೆಹರಿಯದಾಗ ಈಗ ವಿಚ್ಛೇದನ ಪಡೆಯಲು ಮುಂದಾಗಿದ್ದಾಳೆ ಎಂದು ತಿಳಿದುಬಂದಿದೆ.
ಆಪ್ತಸಮಾಲೋಚನೆ ವೇಳೆ ಪತಿ, ತನ್ನ ವ್ಯಾಪಾರದಲ್ಲಿ ನಷ್ಟವಾಗುವುದನ್ನು ತಪ್ಪಿಸಲು ಹಾಲಿನಲ್ಲಿ ನೀರು ಬೆರೆಸಿ ನೀಡುವುದಾಗಿ ವಿವರಿಸಿದ್ದಾನೆ. ಆದರೆ ಆಕೆ ಪತಿ ಬೇರೆ ಉದ್ಯೋಗ ಹುಡುಕಲಿ ಅಥವಾ ಹಾಲಿಗೆ ನೀರು ಬೆರೆಸಿ ಮಾರಾಟ ಮಾಡುವುದನ್ನು ನಿಲ್ಲಿಸುವವರೆಗೂ ಮನೆಗೆ ವಾಪಾಸು ಬರುವುದಿಲ್ಲ ಎಂದು ಹಠ ಹಿಡಿದಿದ್ದಾಳಂತೆ.
ಇತ್ತ ಹಾಲಿನ ಪ್ರಮಾಣ ಹಚ್ಚಿಸಲು ಬರೀ ನೀರು ಮಾತ್ರವಲ್ಲ, ಅದಕ್ಕೆ ಮಾರ್ಜಕ, ಯೂರಿಯಾ ಸಹ ಬೆರೆಸುತ್ತಾರೆ ಎಂಬುದು ಪತ್ನಿಯ ಗಮನದಲ್ಲಿತ್ತಂತೆ. ಆದರೆ ಪತಿ ಈ ರೀತಿ ಮಾಡಿಲ್ಲ ಬರೀ ನೀರನ್ನೇ ಬೆರೆಸುತ್ತಾರೆ. ಆದರೂ ಇದರಿಂದ ಬೇರೆಯವರಿಗೆ ನಷ್ಟವಾಗುತ್ತದೆ ಎಂಬುದು ಆಕೆಯ ಕಾಳಜಿಯಂತೆ. ಅಲ್ಲದೆ ಪತಿ ಹಾಲು ನೀಡಿ ಬಂದ ಬಳಿಕ ಮನೆಯವರು ಹಾಲಿಗೆ ನೀರು ಬೆರೆಸಿರುವುದು ತಿಳಿದರೆ ಬೈಯ್ಯುತ್ತಾರೆ, ಶಾಪ ಹಾಕುತ್ತಾರೆ ಎಂಬುದು ಆಕೆಯ ಕಳಕಳಿಯಾಗಿತ್ತಂತೆ.
ಆದ್ರೆ ಈ ಜಗಳ ಅವರೇ ಕುಳಿತು ಬಗೆಹರಿಸಿಕೊಳ್ಳಬಹುದಿತ್ತು, ಆದರೆ ನ್ಯಾಯಾಲಯದ ವರೆಗೆ ತೆಗೆದುಕೊಂಡು ಹೋಗಿದ್ದು ಮಾತ್ರವಲ್ಲ ವಿಚ್ಛೇದನಕ್ಕೆ ಮುಂದಾಗಿದ್ದು ವಿಪರ್ಯಾಸ.



Click it and Unblock the Notifications
