Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಿಮ್ಮ ಸಂಗಾತಿಗೆ ಟೈಂ ಕೊಡಿ ಅಂತ ಹೇಳೋದು ಇದೇ ಕಾರಣಕ್ಕೆ!
ಈ ಆಧುನಿಕ ಜಗತ್ತು ಹೇಗಾಗಿದೆ ಅಂದ್ರೆ ಒಂದೇ ಮನೆಯಲ್ಲಿದ್ರು ಕೂಡ ಪರಸ್ಪರ ಒಬ್ಬರನ್ನೊಬ್ಬರ ಮುಖ ನೋಡಿಕೊಳ್ಳೋದು ಅಪರೂಪ ಎಂಬಂತಾಗಿದೆ. ಪತಿ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯೂಸಿ ಹೆಂಡತಿಯ ಜೊತೆಗೆ ಎರಡು ಪ್ರೀತಿಯ ಮಾತನಾಡೋದಕ್ಕೂ ಆತನ ಬಳಿ ಸಮಯವಿಲ್ಲ. ಸಂಬಂಧ ಇದೇ ರೀತಿ ಮುಂದುವರೆದರೆ ಮಹಾ ಅಪಾಯವೇ ಎದುರಾಗಲಿದೆ. ಅಷ್ಡಕ್ಕು ದಾಂಪತ್ಯದಲ್ಲಿ ಒಬ್ಬರಿಗೊಬ್ಬರು ಸಮಯ ಕೊಡದಿದ್ದರೆ ಏನಾಗುತ್ತೆ ಅನ್ನೋದನ್ನು ತಿಳಿಯೋಣ.

ಒಬ್ಬರಿಗೊಬ್ಬರು ಸಮಯನೇ ಕೊಡದಿದ್ದ ಮೇಲೆ ಅವರ ಮನಸ್ಸು ಅರ್ಥ ಮಾಡಿಕೊಳ್ಳಲು ಹೇಗೆ ತಾನೇ? ನಾವು ಎಲ್ಲಾ ಮಾಡುತ್ತಿರುವುದು ಅವರಿಗಾಗಿ ಅಂತೀವಿ, ಆದರೆ ಅವರಿಗೆ ಅವೆಲ್ಲಕ್ಕಿಂತ ನಮ್ಮಿಂದ ಬೇಕಾಗಿರುವುದು ನಮ್ಮ ಸ್ವಲ್ಪ ಸಮಯವಾಗಿರುತ್ತದೆ ಅದನ್ನು ನಾವು ಅರಿಯುವುದೇ ಇಲ್ಲ.
ದಾಂಪತ್ಯದಲ್ಲಿ ಸಮಯ ತುಂಬಾನೇ ಮುಖ್ಯ, ನಾವು ಸಮಯ ಕೊಡದಿದ್ದರೆ ಏನಾಗುತ್ತದೆ ಎಂದು ನೋಡೋಣ ಬನ್ನಿ:
ಬಾಂಧವ್ಯ ಗಟ್ಟಿಯಾಗಿರಲ್ಲ: ನಾವು ಪರಸ್ಪರ ಸಮಯ ಕೊಟ್ಟರೆ ಮಾತ್ರ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ, ಇಲ್ಲದಿದ್ದರೆ ಅವರ ಮನಸ್ಸಿನಲ್ಲಿರುವುದು ನಿಮಗೆ ಅರ್ಥವಾಗಲ್ಲ, ನಿಮ್ಮ ಮನಸ್ಸಿನಲ್ಲಿರುವುದು ಅವರಿಗೆ ಅರ್ಥ ಆಗಲ್ಲ, ಇದರಿಂದ ನಿಮ್ಮಿಬ್ಬರ ನಡುವೆ ಬಾಂಧವ್ಯ ಗಟ್ಟಿಯಾಗಲ್ಲ. ಇದರಿಂದಾಗಿ ಅನೇಕ ತಪ್ಪು ಕಲ್ಪನೆಗಳು ಉಂಟಾಗಬಹುದು.
ಸಂಶಯ ಮೂಡುವುದು: ಸಂಗಾತಿಗೆ ಸಮಯ ಕೊಡದಿದ್ದಾಗ ಖಂಡಿತವಾಗ ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಸಂಶಯ ಮೂಡಿಯೇ ಮೂಡುವುದು. ನೀವು ಯಾವುದೇ ತಪ್ಪು ಮಾಡದಿದ್ದರೂ ಕೆಲಸದ ಕಾರಣಕ್ಕೆ ಬ್ಯುಸಿಯಾಗಿದ್ದು ಅವರಿಗೆ ಸಮಯ ಕೊಡುತ್ತಿಲ್ಲ ಎಂದಾದರೂ ಅವರಿಗೆ ನಿಮ್ಮ ಬಗ್ಗೆ ಸಂಶಯ ಮೂಡುವುದು. ಅದಕ್ಕೆ ಅವರ ತಪ್ಪು ಎಂದು ಹೇಳಲು ಸಾದ್ಯವಿಲ್ಲ, ಏಕೆಂದರೆ ನೀವು ನೀಡುತ್ತಿರುವ ಕೊರತೆಯಿಂದಾಗಿ ಅವರ ಮನಸ್ಸಿನಲ್ಲಿ ಪ್ರೀತಿ ಬಗ್ಗೆ ಒಂದು ಅಭದ್ರತೆ ಮೂಡುವುದು. ಅವರಿಗೆ ನನ್ನ ಈಗ ಇಷ್ಟವಿಲ್ಲವೇ ಅಥವಾ ಬೇರೆಯವರ ಜೊತೆ ಸಂಬಂಧವಿರಬಹುದು? ಈ ಕಾರಣಕ್ಕೆ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿರಬಹುದೇ ಎಂಬ ಸಂಶಯ ಮೂಡಲಾರಂಭಿಸುವುದು. ಈ ರೀತಿ ಭಾವನೆ ಬಾರದಂತೆ ನೋಡಿಕೊಳ್ಳಬೇಕೆಂದರೆ ನಿಮ್ಮ ಸಂಗಾತಿಗೆ ಸಮಯ ಕೊಡಿ.
ಖಿನ್ನತೆ ಕಾಡುವುದು: ನೀವು ಸದಾ ಕೆಲಸ ಅಂತ ಬ್ಯುಸಿಯಾಗಿ ಕುಟುಂಬಕ್ಕೆ ಸಮಯ ಕೊಡದೆ ಹೋದರೆ ಸಂಗಾತಿಗೆ ಒಂಟಿತನ ಕಾಡುವುದು. ಈ ಒಂಟಿತನದಿಂದಲೇ ಅವರಿಗೆ ಖಿನ್ನತೆ ಕಾಡಿ ಆರೋಗ್ಯ ಸಮಸ್ಯೆ ಕಾಡಬಹುದು. ತಮ್ಮ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಳೆದುಕೊಳ್ಳಬಹುದು.
ಅನೈತಿಕ ಸಂಬಂಧ ಉಂಟಾಗಬಹುದು
ಯಾವಾಗ ಪ್ರೀತಿಯ ಕೊರತೆ ಉಂಟಾಗುವುದೋ ಆಗ ಕೆಲವರು ತಮಗೆ ಪ್ರಾಮುಖ್ಯತೆ ನೀಡುತ್ತಿರುವ ವ್ಯಕ್ತಿ ಕಡೆಗೆ ಆಕರ್ಷಿತರಾಗುತ್ತಾರೆ. ತಾವು ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದರು ಪ್ರತಿಕಾರ ಭಾವನೆಯಿಂದ ಕೆಲವರು ಅನೈತಿಕ ಸಂಬಂಧಕ್ಕೆ ಬೀಳುತ್ತಾರೆ.
ನಿಮ್ಮ ಕುಟುಂಬಕ್ಕಾಗಿ ನೀವು ದುಡಿಯುತ್ತಿದ್ದರೆ ಮೊದಲು ಅವರಿಗೆ ಸಮಯ ಕೊಡಿ
ನೀವು ಕಷ್ಟಪಟ್ಟು ದುಡಿಯುತ್ತಿದ್ದೀರಿ ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂಬ ಮಾತನ್ನು ಹೇಳಲೇಬೇಡಿ. ಏಕೆಂದರೆ ನೀವು ದುಡಿಯುತ್ತಿರುವುದೇ ಅವರಿಗೋಸ್ಕರ, ನಿಮ್ಮ ಖುಷಿಗೋಸ್ಕರ ಎಂದ ಮೇಲೆ ನೀವು ಕುಟುಂಬಕ್ಕೆ ಸಮಯ ನೀಡದೇ ಹೋದರೆ ನೀವು ಕಷ್ಟಪಟ್ಟು ದುಡಿದರೂ ನಿಮ್ಮ ಮನಸ್ಸಿಗೆ ಖುಷಿ ಸಿಗುವುದಿಲ್ಲ. ಈ ಮಾತನ್ನು ನೀವೂ ಒಪ್ಪುತ್ತೀರಿ ತಾನೆ?
ನಿಮ್ಮ ಅಭಿಪ್ರಾಯವ ಏನು ಕಮೆಂಟ್ ಮಾಡಿ...



Click it and Unblock the Notifications

