Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪುರುಷರಿಗೆ ತುಂಬಾನೇ ಡಿಪೆಂಡ್ ಆಗಿರುವ ಸಂಗಾತಿ ಕಂಡರೆ ಅಲರ್ಜಿಯಂತೆ, ಹೌದಾ?
ಎಲ್ಲದ್ದಕ್ಕೂ ಗಂಡನ ಡಿಪೆಂಡ್ ಆಗಿರುವ ಹೆಂಡತಿಯರು ತುಂಬಾ ಜನ ಇದ್ದಾರೆ. ಒಂದು ಚಿಕ್ಕ ಕೆಲಸವಾಗಲಿ, ನಿರ್ಧಾರವಾಗಲಿ ಸ್ವಂತ ಮಾಡಲ್ಲ, ಎಲ್ಲದಕ್ಕೂ ಗಂಡನ ಮೇಲೆ ಡಿಪೆಂಡ್ ಆಗಿರುವುದು. ಅವರು ಕೂಡ ಏನೂ ಹೇಳದೆ ಎಲ್ಲಾ ಮಾಡಿ ಕೊಡುತ್ತಾರೆ, ಆದರೆ ಅದು ಅವರಿಗೆ ಖುಷಿ ನೀಡುವುದೇ ಎಂದು ನೋಡುವುದಾದರೆ ಖಂಡಿತ ಇಲ್ಲ, ನೀವು ಅವರಿಗೆ ತುಂಬಾ ಡಿಪೆಂಡ್ ಆಗುತ್ತಾ ಹೋದಂತೆ ಅವರಿಗೆ ಒಂಥರಾ ಉಸಿರು ಕಟ್ಟಲಾರಂಭಿಸುತ್ತದೆ.

ಎಲ್ಲದಕ್ಕೂ ತುಂಬಾನೇ ಡಿಪೆಂಡ್ ಆಗಲಾರಂಭಿಸಿದರೆ ಅವರಿಗೆ ನಮ್ಮನ್ನು ಬಿಟ್ಟು ಹೋಗಬೇಕು ಎಂದು ಅನಿಸಲಾರಂಭಿಸಬಹುದು
ಪ್ರತಿಯೊಂದನ್ನು ಅವರೇ ಮಾಡಬೇಕು, ಫ್ರೆಂಡ್ಸ್ ಜೊತೆ ಸುತ್ತಾಡಬಾರದು, ಸದಾ ನನ್ನ ಜೊತೆ ಸುತ್ತಾಡಬೇಕು, ಒಂದು ಡಾಕ್ಯೂಮೆಂಟ್ ಮಾಡುವುದರಿಂದ ಹಿಡಿದು ಮೊಬೈಲ್ ರೀಚಾರ್ಚ್ ಎಲ್ಲಾ ಗಂಡನೇ ಮಾಡಬೇಕು ಎಂದು ಎಲ್ಲದಕ್ಕೂ ಗಂಡನನ್ನೇ ಅವಲಾರಂಭಿಸಿದರೆ ಬರ್ತಾ ಬರ್ತಾ ಅವನನ್ನಲ್ಲಿ ಒಂದು ರೀತಿ ಅಸಮಧಾನ ಕಾಣಬಹುದು, ನೀವು ರೀಚಾರ್ಜ್ ಮಾಡು ಎಂದಾಗ ಇರು ಮಾಡುತ್ತೇನೆ ಎಂದು ಕೋಪದಿಂದ ಹೇಳುವುದು ಅಥವಾ ನೀನೇ ಮಾಡಬಹುದಿತ್ತಲ್ಲ ಎಂದೆಲ್ಲಾ ಕೇಳುತ್ತಿದ್ದಾರೆ ಎಂದಾರೆ ನೀವು ಎಲ್ಲಾದಕ್ಕೂ ಅವರನ್ನು ಅವಲಂಬಿಸಿರುವುವುದು ಅವರಿಗೆ ಉಸಿರು ಕಟ್ಟಿಸುತ್ತಿದೆ ಎಂದು ಸ್ಪಷ್ಟವಾಗಿ ಹೇಳಬಹುದು.
ಎಲ್ಲದಕ್ಕೂ ಡಿಪೆಂಡ್ ಆಗಿರುವ ಹೆಣ್ಣಿಗಿಂತ Independent ಹೆಣ್ಣೆಂದರೆ ಅವನಿಗೆ ಗೌರವ ಹೆಚ್ಚು
ಇಲ್ಲಿ ಗೃಹಿಣಿ, ಉದ್ಯೋಗಿ ಎಂಬರ್ಥದಲ್ಲಿ ಹೇಳುತ್ತಿಲ್ಲ, ನೀವು ಗೃಹಿಣಿಯೇ ಆಗಿರಿ ಅಥವಾ ಉದ್ಯೋಗಿಯೇ ಆಗಿರಿ ಚಿಕ್ಕ- ಪುಟ್ಟ ಕೆಲಸಕ್ಕೆ ಗಂಡನನ್ನೇ ಅವಲಂಬಿಸಬೇಡಿ. ಮನೆ ಕೆಲಸ, ಅಡುಗೆ ಎಲ್ಲವೂ ಮಾಡಬಹುದು ಆದರೆ ಕೆಲವೊಂದು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ ನಿಮ್ಮ ಬ್ಯಾಂಕ್ ವ್ಯವಹಾರ ನೀವೇ ಮಾಡುವುದು, ಚಿಕ್ಕ ಪುಟ್ಟ ಬಿಲ್‌ಗಳನ್ನು ನೀವೇ ಪಾವತಿಸುವುದು (ಅವರ ಕೈಯಿಂದ ಹಣ ಪಡೆದಾದರೂ ಸರಿ, ಆದರೆ ಅದನ್ನು ಪಾವತಿ ನೀವೇ ಮಾಡಿ), ಕೆಲವೊಂದು ಕೆಲಸ ಕಾರ್ಯಗಳಿಗೆ ಓಡಾಡುವುದು ಇವೆಲ್ಲಾ ನೀವೇ ಮಾಡಿ.
ಸವಿರುಚಿಯ ಹಲಸಿನ ಹಣ್ಣಿನ ಪಡ್ಡು ರೆಸಿಪಿ
ಆದರೆ ಎಷ್ಟೋ ಹೆಣ್ಮಕ್ಕಳು ಹಾಗೆ ಮಾಡಲ್ಲ, ಪಕ್ಕದ ಟೈಲರ್ ಅಂಗಡಿಗೆ ಹೋಗಬೇಕೆಂದರೂ ಅಥವಾ ಬ್ಯೂಟಿ ಪಾರ್ಲರ್‌ಗೆ ಹೋಗಿ ಬರಲು ಕೂಡ ಗಂಡನೇ ಡ್ರಾಪ್ ಮಾಡಿ , ಪಿಕ್ ಮಾಡಬೇಕು ಎಂದು ಬಯಸುತ್ತಾರೆ. ಇವರು ಕೂಡ ಸುಮ್ಮನೆ ಜಗಳ ಏಕೆ ಎಂದು ಜೊತೆಗೆ ಬಂದಿರುತ್ತಾರೆ. ಯೋಚಿಸಿ ಅಲ್ಲಿಗೆ ನಿಮ್ಮ ಜೊತೆ ಬಂದು ಹೊರಗಡೆ ಗಂಟೆ ಗಟ್ಟಲೆ ಕಾಯುತ್ತಾ ಕೂರುವುದೆಂದರೆ ಎಂಥವರಿಗೂ ಹಿಂಸೆ ಆಗುವುದು ತಾನೆ? ಹಾಗಾಗಿ ಇಂತ ಕೆಲಸ ಕಾರ್ಯಗಳಿಗೆ ನೀವೇ ಹೋಗಿ ಬರುವುದು ಒಳ್ಳೆಯದು. ಹಾಗಾಗಿ ಗಂಡನಿಗೆ ನನ್ನ ಮೇಲೆ ತುಂಬಾ ಪ್ರೀತಿ, ನನಗೆ ಅವರೆಂದರೆ ಪಂಚ ಪ್ರಾಣ ಅಂತೆಲ್ಲಾ ಓವರ್ ಡಿಪೆಂಡ್ (ತುಂಬಾನೇ ಅವಲಂಬನೆ) ಒಂದೊಳ್ಳೆಯ ಸಂಸಾರಕ್ಕೆ ಒಳ್ಳೆಯದಲ್ಲ.
ನೀವು ಕೂಡ ಸಂಸಾರದ ಜವಾಬ್ದಾರಿಯನ್ನು ಸುಂದರವಾಗಿ ನಿಭಾಯಿಸುತ್ತೀರಿ ಎಂದಾದರೆ ಅವರಿಗೆ ಕೆಲವೊಂದು ಜವಾಬ್ದಾರಿಯನ್ನು ವಹಿಸಿಕೊಡಲು ಧೈರ್ಯ ಬರುತ್ತದೆ, ಅಲ್ಲದೆ ನಿಮ್ಮ ಮೇಲೆ ಗೌರವ ಹೆಚ್ಚಾಗುವುದು.
ನಿಮಗೂ ಒಳ್ಳೆಯದಲ್ಲ
ಯಾರಿಗೆ ಯಾರ ಪರಿಸ್ಥಿತಿ ಹೇಗೆ ಬದಲಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ ಹಾಗಾಗಿ ಹೆಚ್ಚು ಡಿಪೆಂಡ್ ಆಗಲು ಹೋಗಬೇಡಿ, ಇಬ್ಬರು ಜೊತೆ ಸೇರಿ ಸಂಸಾರದ ತೇರು ಎಳೆಯಬೇಕು, ಒಬ್ಬನ ಹೆಗಲ ಮೇಲೆ ಹಾಕಿ ಕೂರಬೇಡಿ, ಇನ್ನು ಎಷ್ಟೋ ಗೃಹಿಣಿಯರಿಗೆ ಆರ್ಥಿಕಆಗಿ ಗಂಡನ ಅವಲಂಬಿಸಿರಬಹುದು, ಆದರೆ ಕೆಲವೊಂದು ಜವಾಬ್ದಾರಿಗಳಿರುತ್ತದೆ ಅಲ್ವಾ ಅದನ್ನು ತೆಗೆದುಕೊಳ್ಳಬೇಕು. ಮನೆ ನಿಭಾಯಿಸುವುದು, ಉಳಿತಾಯ ಎಲ್ಲವನ್ನೂ ಮಾಡಬೇಕು. ಸಾಧ್ಯವಾದರೆ ಚಿಕ್ಕ ವರಮಾನ ಬಂದರೂ ಪರ್ವಾಗಿಲ್ಲ , ಮನೆಯಿಂದ ಹೊರಗಡೆ ಹೋಗಿ ಇಷ್ಟವಿಲ್ಲದಿದ್ದರೂ ಪರ್ವಾಗಿಲ್ಲ ಮನೆಯಲ್ಲಿ ಆದಾಯಕ್ಕೆ ಚಿಕ್ಕ ಪಟ್ಟ ಮಾರ್ಗಗಳನ್ನು ಕಂಡುಕೊಳ್ಳಿ. ಟೈಲರಿಂಗ್, ತರಕಾರಿ ಬೆಳೆಯುವುದು, ಕವರ್ ಮಾಡುವುದು ಹೇಗೆ ಏನೇ ಆದರೂ ಸರಿ ನಿಮ್ಮದೇ ಆದ ಒಂದು ವರಮಾನ ಇರುವುದು ಯಾವತ್ತಿಗೂ ಒಳ್ಳೆಯದು.
ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?



Click it and Unblock the Notifications



