Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಈಗ ನಡೆದಿರುವುದು ಬರೀ ಪ್ರೀವೆಡ್ಡಿಂಗ್, ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಯಾವಾಗ?
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರೀವೆಡ್ಡಿಂಗ್ ಕಾರ್ಯಕ್ರಮ ಎಷ್ಟು ಗ್ರ್ಯಾಂಡ್ ಆಗಿ ನಡೆಯಿತು ಎಂಬುವುದನ್ನು ಭಾರತ ಮಾತ್ರವಲ್ಲ ಇಡೀ ಜಗತ್ತು ಗಮನಿಸಿದೆ, ವಿಶ್ವದ ರಾಯಲ್ ವೆಡ್ಡಿಂಗ್‌ಗಳಲ್ಲಿ ಇದು ಕೂಡ ಒಂದಾಗಿದೆ.
ಇವರ ಪ್ರೀವೆಡ್ಡಿಂಗ್ ಕಾರ್ಯಕ್ರಮಕ್ಕೆ ವಿದೇಶದಿಂದಲೂ ದೊಡ್ಡ-ದೊಡ್ಡ ಸ್ಟಾರ್‌ಗಳು ಆಗಮಿಸಿದ್ದರು. ರೆಹನಾಗೆ ಪ್ರೀವೆಡ್ಡಿಂಗ್ ಕಾರ್ಯಕ್ರಮಕ್ಕೆ ಕೊಟ್ಟಿದ್ದ ಬರೋಬರಿ 53 ಕೋಟಿಯಂತೆ, ಅಲ್ಲದೆ ಈ ಕಾರ್ಯಕ್ರಮಕ್ಕೆ ಬಾಲಿವುಡ್ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಬಂದು ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದರು, ಅವರಿಗೂ ಕೋಟ್ಯಾಂತರ ರುಪಾಯಿ ನೀಡಲಾಗಿದೆ.

ಈ ಪ್ರೀವೆಡ್ಡಿಂಗ್ ಕಾರ್ಯಕ್ರಮ ನೋಡಿದಾಗ ಸ್ವರ್ಗವೇ ಧರೆಗೆ ಇಳಿದು ಬಂದಂತೆ ಅರೇಂಜ್‌ಮೆಂಟ್ ಮಾಡಲಾಗಿತ್ತು, ದೇಶದ ಆಗರ್ಭ ಶ್ರೀಮಂತನ ಮಗನ ಮದುವೆಯೆಂದರೆ ಕಮ್ಮಿಯೇ, ಅದರಲ್ಲೂ ಮುಖೇಶ್ ಅಂಬಾನಿಯ ಕೊನೆಯ ಮಗ.
ಅಲ್ಲದೆ ಅಂಬಾನಿ ಕುಟುಂಬದವರ ಮುದ್ದಿನ ಕಣ್ಮಣಿ ಅನಂತ್ ಅಂಬಾನಿ, ಕಿರಿಯ ಮಗ ಎಂದರೆ ಸ್ವಲ್ಪ ಪ್ರೀತಿ ಹೆಚ್ಚೇ ಇರುತ್ತದೆ, ಈ ಮುದ್ದಿನ ಮಗನ ಫ್ರೀವೆಡ್ಡಿಂಗ್ ಕಾರ್ಯಕ್ರಮ ಧಾಮ್ ಧೂಮ್ ನಡೆಸಲಾಯ್ತು. ಆದರೆ ಹೆಚ್ಚಿನವರು ಇವರ ಮದುವೆನೇ ಆಯ್ತು ಎಂದು ಯೋಚಿಸುತ್ತಿದ್ದಾರೆ, ಆದರೆ ಅವರಿಬ್ಬರ ಮದುವೆ ಆಗಿಲ್ಲ, ನಡೆದಿರುವುದು ಪ್ರೀವೆಡ್ಡಿಂಗ್ ಕಾರ್ಯಕ್ರಮವಷ್ಟೆ....
ಹೌದು ಮದುವೆ ಇರುವುದು ಜುಲೈನಲ್ಲಿ
ಹೌದು ಅನಂತ್ ಅಮಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಇರುವುದು ಜುಲೈ 12ಕ್ಕೆ, ಪ್ರೀವೆಡ್ಡಿಂಗ್ ಇಷ್ಟೊಂದು ಅದ್ಧೂರಿಯಾಗಿ ಇರುವಾಗ ಇನ್ನು ಮದುವೆ ಹೇಗಿರಬೇಡ. ಅತ್ಯಂತ ಶುಭ ಮುಹೂರ್ತ ನೋಡಿ ಇಬ್ಬರ ಮದುವೆ ಗೊತ್ತು ಮಾಡಿದೆ. ಈ ದಿನ ರವಿಯೋಗವಿದೆ, ಈ ಯೋಗದಲ್ಲಿ ಮದುವೆಯಾದರೆ ಅವರ ಬದುಕು ಚೆನ್ನಾಗಿರುತ್ತದೆ ಎಂಬುವುದು ನಂಬಿಕೆ.
ಅನಂತ್ ಅಂಬಾನಿ ಧಾರ್ಮಕ ನಂಬಿಕೆಗಳನ್ನು ಹೊಂದಿರುವ ವ್ಯಕ್ತಿ
ಅಂಬಾನಿ ಕುಟುಂಬ ಶ್ರೀರಾಮನ ಭಕ್ತ, ನಮ್ಮ ಕುಟುಂಬದ ಏಳಿಗೆ , ಸಂತೋಷಕ್ಕೆ ಶ್ರೀರಾಮನ ಕಾರಣ ಎಂದು ನಂಬಿರುವ ಕುಟುಂಬ, ಅಲ್ಲದೆ ತಮ್ಮ ಪ್ರೀವೆಡ್ಡಿಂಗ್ ಕಾರ್ಯಕ್ರಮದಲ್ಲಿಯೂ ಜೈಶ್ರೀರಾಮ್ ಅಂತ ಜೋರಾಗಿ ಹೇಳಿದ್ದರು, ಇವರು ಹೇಳಿದ್ದನ್ನು ಕೇಳಿ ಶಾರೂಖ್ ಖಾನ್ ಕೂಡ ಜೈ ಶ್ರೀರಾಮ್ ಎಂದಿದ್ದರು, ಅಲ್ಲದೆ ಮುಖೇಶ್ ಅಂಬಾನಿ ಆಹಾರ ಬಡಿಸುವಾಗ ಜೈ ಕೃಷ್ಣ, ಕೈ ಶ್ರೀರಾಮ್ ಹೇಳುತ್ತಿದ್ದರು.
ಭಾರತೀಯ ಸಂಸ್ಕೃತಿಯನ್ನು ಬಿಂಬಿಸಿದ ಪ್ರೀವೆಡ್ಡಿಂಗ್
ಸಾಮಾನ್ಯ ಜನರು ಕೂಡ ಈಗ ವಿದೇಶ ಸಂಸ್ಕೃತಿಗೆ ಮಾರಿ ಹೋಗುತ್ತಿರುವಾಗ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ರೀತಿಯಲ್ಲಿ ಪ್ರೀವೆಡ್ಡಿಂಗ್ ಕಾರ್ಯಕ್ರಮ ಮಾಡಿ ಗಮನ ಸೆಳೆದರು. ಇವರ ಪ್ರೀವೆಡ್ಡಿಂಗ್ ಕಾರ್ಯಕ್ರಮಕ್ಕೆ ಬಂದ ವಿದೇಶಿ ಗೆಸ್ಟ್‌ಗಳು ಕೂಡ ಭಾರತೀಯ ಉಡುಗೆಯಲ್ಲಿ ಮಿಂಚಿದ್ದು ಇನ್ನೂ ವಿಶೇಷ.
ಮದುವೆ ಎಲ್ಲಿ ನಡೆಯಲಿದೆ?
ಮದುವೆ ದಿನಾಂಕ ಗೊತ್ತಾಗಿದೆ, ಆದರೆ ಮದುವೆ ಎಲ್ಲಿ ನಡೆಯಲಿದೆ ಎಂಬುವುದನ್ನು ಕುಟುಂಬ ಇನ್ನೂ ಗುಟ್ಟಾಗಿಯೇ ಇಟ್ಟಿದೆ. ಪ್ರೀವೆಡ್ಡಿಂಗ್‌ಗೆ ಕಳೆದ 6 ತಿಂಗಳಿನಿಂದ ತ ಯಾರಿ ನಡೆದಿತ್ತು, ಆದರೆ ಜಾಮ್‌ನಗರದಲ್ಲಿ ಇಷ್ಟೊಂದು ದೊಡ್ಡ ಕಾರ್ಯಕ್ರಮ ನಡೆಯುತ್ತೆ ಎಂದು ತಿಳಿದಿದ್ದೇ ಇತ್ತೀಚೆಗೆ. ಮದುವೆಗೆ ಕೂಡ ತಯಾರಿ ಆಗಿರುತ್ತದೆ, ಆದರೆ ಎಲ್ಲಿ ನಡೆಯಲಿದೆ ಎಂಬುವುದನ್ನು ಕುಟುಂಬ ಇನ್ನೂ ತಿಳಿಸಿಲ್ಲ.
ಅನಂತ್ ಅಂಬಾನಿ ಈ ಕಾರಣಕ್ಕೆ ಜನ ಹೊಗಳುತ್ತಿದ್ದಾರೆ
ಕುಬೇರನ ಮಗ ಆಗಿರುವ ಅನಂತ್ ಅಂಬಾನಿಗೆ ಏನು ಬೇಕಾದರೂ ಮಾಡಬಹುದು, ತಮ್ಮ ಸಾಮ್ರಾಜ್ಯ ಕಟ್ಟುವುದರ ಜೊತೆಗೆ ಪ್ರಾಣಿಗಳನ್ನು ಕಾಳಜಿ ಮಾಡುತ್ತಿದ್ದಾರೆ, ಅವರು ಪ್ರಾರಂಭಿಸಿರುವ ವಂತಾರದಲ್ಲಿ 1000ಕ್ಕೂ ಅಧಿಕ ಪ್ರಾಣಿಗಳಿಗೆ ಆಹಾರ ನೀಡಿ, ಇರಲು ಉತ್ತಮ ಸ್ಥಳ ನೀಡಿ ಕಾಳಜಿ ಮಾಡುತ್ತಿದ್ದಾರೆ.



Click it and Unblock the Notifications
