Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಮೋಸ ಮಾಡಿದ ಹುಡುಗಿಗಾಗಿ ಹುಚ್ಚನಾದ, ದೇವತೆಯಂಥ ಹೆಣ್ಮಗಳಿಂದ ಬದಲಾಯ್ತು ಅವನ ಬದುಕು
ನೀವು ಸೋಷಿಯಲ್ ಮೀಡಿಯಾ ಗಮನಿಸುವವರು ಆಗಿದ್ದರೆ ಇತ್ತೀಚೆಗೆ ಒಂದು ಜೋಡಿಯ ಫೋಟೋ ಗಮನ ಸೆಳೆದಿರಬಹುದು, ಒಬ್ಬ ಭಿಕ್ಷುಕ ಹ್ಯಾಂಡ್ಸಮ್ ಅಗಿ ಬದಲಾದ ಫೋಟೋ, ಆ ಹುಡುಗಿ ಮಾತ್ರ ಎರಡು ಫೋಟೋದಲ್ಲಿ ಇದ್ದಾಳೆ, ಅವರಿಬ್ಬರು ಪ್ರೇಮಿಗಳು.
ಅವರ ಪ್ರೀತಿ ಅದರಲ್ಲಿಯೂ ಆಕೆಯ ಪ್ರೀತಿಯನ್ನು ಸೋಷಿಯಲ್ ಮೀಡಿಯಾ ಕೊಂಡಾಡುತ್ತಿದೆ. ಇಂಥ ಹೆಣ್ಣು ಬದುಕಿಗೆ ಬಂದರೆ ಆ ಗಂಡು ಬದುಕಿನಲ್ಲಿ ಗಂಡಿನ ಯಶಸ್ವಿಯಾಗುತ್ತಾನೆ ಎನ್ನುತ್ತಿದ್ದಾರೆ ನೆಟ್ಟಿಗರು.

ಈ ಹಿಂದೆ ಪ್ರೀತಿಸಿದ ಹೆಣ್ಣಿನಿಂದಲೇ ಮೋಸ ಹೋದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಬದುಕಿನಲ್ಲಿ ಹೇಗೆ ಸೋತರು, ಅಂಥ ಸಂದರ್ಭದಲ್ಲಿ ಬಂದ ಅವರ ಈಗೀನ ಪತ್ನಿ ಅವರ ಬದುಕನನ್ನು ಹೇಗೆ ಬದಲಾಯಿಸಿದರು ಎಂದು ಹೇಳಿದ್ದೆವು. ದಿನೇಶ್ ಕಾರ್ತಿಕ್ ಬದುಕು ಮಾತ್ರ ಪ್ರೀತಿಯಲ್ಲಿ ಮೋಸ ಮಾಡಿದವಳಿಗಾಗಿ ಕೊರಗಬೇಡಿ, ದೇವತೆಯಂಥವಳು ಬಂದೇ ಬರ್ತಾಳೆ ಎನ್ನುವುದಕ್ಕೆ ದಿನೇಶ್ ಕಾರ್ತಿಕ್ ಬದುಕು ಒಂದು ದೊಡ್ಡ ಉದಾಹರಣೆ.
ಈಗ ಅಂಥದ್ದೇ ದೇವತೆಯ ಸ್ಟೋರಿ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ. ಬಿಟ್ಟು ಹೋಗುವವಳ ಬಗ್ಗೆ ಚಿಂತೆ ಬಿಡಿ, ಎಲ್ಲಾ ಹೆಣ್ಮಕ್ಕಳು ಒಂದೇ ರೀತಿ ಅಲ್ವೇ ಅಲ್ಲ, ಹಾಗಾಗಿ ನಿಮ್ಮ ಬದುಕಿನಲ್ಲಿ ಬಂದ ಒಬ್ಬಳನ್ನು ನೋಡಿ ಎಲ್ಲರನ್ನೂ ಜಡ್ಜ್ ಮಾಡಲೇಬೇಡಿ.
ಒಂದು ಫೋಟೋವನ್ನು 2019ರಲ್ಲಿ ಕ್ಲಿಕ್ಕಿಸಿದ್ದು, ಆತ ರೈಲ್ವೆ ಫ್ಲಾಟ್‌ಫಾರಂನಲ್ಲಿ ವಾಸವಿದ್ದ, ಆ ಹುಚ್ಚನಿಗೆ ಸದಾ ತನ್ನ ಬಿಟ್ಟು ಹೋದ ಪ್ರೇಮಿಯದ್ದೇ ಚಿಂತೆ ಎಲ್ಲರ ಬಳಿಯೂ ಆಕೆಯ ಬಗ್ಗೆ ವಿಚಾರಿಸುತ್ತಿದ್ದ, ಈ ಹುಚ್ಚನ ಮಾತು ಯಾರೂ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ, ಆದರೆ ಈತ ಯಾರಿಗೂ ಏನೂ ಉಪದ್ರವ ಮಾಡುತ್ತಿರಲಿಲ್ಲ.
ಒಂದು ದಿನ ಆ ಚಿತ್ರದಲ್ಲಿ ಕಾಣುವ ಯುವತಿ ರೈಲು ಹತ್ತಲು ಬಂದಾಗ ರೈಲ್ ಮಿಸ್ ಆಗುತ್ತೆ, ಅದು ಕೊನೆಯ ಟ್ರೈನ್‌ಯಾಗಿರುತ್ತೆ. ಹುಡುಗಿಯೊಬ್ಬಳು ಒಂಟಿಯಾಗಿ ನಿಂತಿದ್ದನ್ನು ನೋಡಿ ಪಡ್ಡೆ ಹುಡುಗರು ಆಕೆಯ ಬಳಿ ಬರ್ತಾರೆ, ಇದನ್ನು ಗಮನಿಸಿದ ಆ ಹುಚ್ಚ ಅವರನ್ನು ಓಡಿಸುತ್ತಾನೆ, ಆಕೆಗೆ ಹುಚ್ಚನಾದರು ಆತ ಮಾಡಿದ ಕಾರ್ಯ ಇಷ್ಟವಾಗುತ್ತೆ.
ನಂತರ ಆತನನ್ನು ತನ್ನ ಜೊತೆ ಕರೆದೊಯ್ದು ಆತನ ವೇಷ ಭೂಷಣ ಎಲ್ಲಾ ಬದಲಾಯಿಸುತ್ತಾಳೆ, ಆತನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಈಕೆಯ ಪ್ರೀತಿ ಆತನನ್ನೂ ಬದಲಾಯಿಸುತ್ತೆ. ಆತನ ಸಂಪೂರ್ಣ ಬದಲಾಗಿದ್ದಾನೆ. ಈಗ ಯಶಸ್ವಿಯಾಗಿ ಉದ್ಯಮಿಯಾಗಿ ಆಕೆಯ ಜೊತೆ ಖುಷಿಯಾಗಿದ್ದಾನೆ.
ಆತ ಒಳ್ಳೆಯ ಕುಟುಂಬದ್ಲಿ ಜನಿಸಿದ್ದ, ಆದರೆ ಹುಚ್ಚನಾದ ಮೇಲೆ ಮನೆಯಿಂದ ಹೊರಬಿದ್ದಿದ್ದ, ಈಗ ಆತನ ಮನೆಯವರೂ ಆತನ ಸಂಪರ್ಕಕ್ಕೆ ಬಂದರು, ಅವರದ್ದು ಸಿರಿವಂತ ಕುಟುಂಬವಾಗಿತ್ತು, ಈಗ ಆತನ ಬದುಕು ಮೊದಲಿನಂತಾಗಿದೆ, ನಿಜವಾಗಿಯೂ ಪ್ರೀತಿಸುವ ಹುಡುಗಿ ಸಿಕ್ಕಿದ್ದಾಳೆ, ಜೀವನದಲ್ಲಿ ಯಶಸ್ಸು ಸಿಕ್ಕಿದೆ, ತುಂಬಾ ಒಳ್ಳೆಯ ಜೀವನ ನಡೆಸುತ್ತಿದ್ದಾನೆ. ಹೀಗಾಗಿಯೇ ಒಂದು ಒಳ್ಳೆಯ ಕಾರಣಕ್ಕೆ ಇವರ ರೀಲ್ ವೈರಲ್ ಆಗಿದೆ.
ಮೋಸ ಮಾಡುವವರನ್ನು ಮರೆತು ಮುಂದೆ ನಡೆಯಬೇಕು
ಹೆಣ್ಣಾಗಲಿ-ಗಂಡಾಗಲಿ ತಾನು ತುಂಬಾ ಪ್ರೀತಿಸಿದ್ದ, ಅಷ್ಟೊಂದು ನಂಬಿದ್ದ ವ್ಯಕ್ತಿ ಮೋಸ ಮಾಡಿದಾಗ ಕುಗ್ಗಿ ಹೋಗುವುದು ಸಹಜ, ಆದರೆ ಅವರಿಗೆ ನಿಮ್ಮ ಜೊತೆ ಇರುವ ಯೋಗ್ಯತೆಯಿಲ್ಲ, ಅಂಥವರಿಗಾಗಿ ನನ್ನ ಬದುಕು ಏಕೆ ವ್ಯರ್ಥ ಮಾಡಬೇಕು ಎಂದು ಒಂದು ಕ್ಷಣ ಯೋಚಿಸಿದರೆ ಸಾಕು ನಮ್ಮನ್ನು ಸೋಲಿಸಲು, ಕುಗ್ಗಿಸಲೂ ಯಾರಿಂದಲೂ ಸಾಧ್ಯವಿಲ್ಲ.
ಪ್ರೀತಿಯಲ್ಲಿ ಒಮ್ಮೆ ಕಹಿ ಅನುಭವವಾದಾಗ ಎಲ್ಲರು ಹೀಗೆ ಎಂದು ಭಾವಿಸಲೂ ಬೇಡಿ, ಎಲ್ಲರೂ ಒಂದೇ ರೀತಿ ಇರಲ್ಲ ಅದಕ್ಕೆ ಈ ವ್ಯಕ್ತಿ, ದಿನೇಶ್ ಕಾರ್ತಿಕ್ ಅಂಥವರೇ ಉದಾಹರಣೆ.



Click it and Unblock the Notifications
