Latest Updates
-
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು!
ವಿಚ್ಚೇದನ ಸಿಕ್ಕಿದ್ದಕ್ಕೆ ಪೋಷಕರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕೇರಳದ ವ್ಯಕ್ತಿ!: ಫೋಟೋಗಳು ವೈರಲ್
ಮದುವೆ ಎಂಬುವುದು ಸ್ವರ್ಗ, ಅದೇ ವಿಚ್ಛೇದನ ಎಂಬುವುದು ನರಕ, ಆದರೆ ಕೆಲವರಿಗೆ ಮದುವೆ ನರಕವಾದಾಗ ವಿಚ್ಚೇದನ ಸ್ವರ್ಗವಾಗುತ್ತೆ, ಯಾವಾಗಪ್ಪಾ ಈ ವ್ಯಕ್ತಿಯಿಂದ ಬಿಡುಗಡೆ ಪಡೆಯುತ್ತೇನೆ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದವರಲ್ಲಿ ಬಹುತೇಕರು ಅಂದುಕೊಳ್ಳುತ್ತಿರುತ್ತಾರೆ, ಏಕೆಂದರೆ ಆ ವ್ಯಕ್ತಿಯಿಂದ ಅವರು ಅಷ್ಟೊಂದು ನೋವು ಅನುಭವಿಸಿರುತ್ತಾರೆ.
ಆದರೆ ವಿಚ್ಛೇದನವಾದಾಗ ಅದನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡುವವರು ತುಂಬಾ ಕಡಿಮೆ, ಈ ಹಿಂದೆ ಸೆಲೆಬ್ರಿಟಿಯೊಬ್ಬರು ವಿಚ್ಛೇದನವಾಯ್ತು ಎಂದು ಮಾಡಿಸಿದ ಫೋಟೋಶೂಟ್ ವೈರಲ್ ಆಗಿತ್ತು, ಈಗ ಕೇರಳದ ಸಾಮಾನ್ಯ ಯುವಕನೊಬ್ಬ ವಿವಾಹ ವಿಚ್ಛೇದನ ಪಡೆದ ಬಳಿಕ ಆ ಸಂಭ್ರಮವನ್ನು ತನ್ನ ಪೋಷಕರ ಜೊತೆ ಸೆಲೆಬ್ರೇಟ್ ಮಾಡಿರುವ ಫೋಟೋಗಳು ತುಂಬಾನೇ ಗಮನ ಸೆಳೆದಿದೆ.

ಆತನ ಹೆಸರು ಸಜಿದ್, ಕೇರದಕೊಲ್ಲಂ ಜಿಲ್ಲೆಯವನು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ತನ್ನ ವಿಚ್ಛೇದನ ಸಂಭ್ರಮದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆದ ವ್ಯಕ್ತಿ. ಈತನ ಸೆಲೆಬ್ರೇಷನ್ ಗಮನ ಸೆಳೆದಿದ್ದು ಮಾತ್ರವಲ್ಲ ವೀಕ್ಷಕರು ಈತನ ನಡೆಗೆ ಮೆಚ್ಚುಗೆ ಕೂಡ ಸೂಚಿಸುತ್ತಿದ್ದಾರೆ. ನಮ್ಮ ಬೋಲ್ಡ್ ಸ್ಕೈ ಟೀಂ ಸಜಿದ್‌ನೊಂದಿಗೆ ಸಂಭಾಷಣೆ ನಡೆಸಿದ್ದು ವಿಚ್ಛೇದನ ಕುರಿತು ಅವರು ಏನು ಹೇಳಿದ್ದಾರೆ, ಅವರು ಈ ರೀತಿ ಸೆಲೆಬ್ರೇಟ್ ಮಾಡಲು ಕಾರಣವೇನು ಎಂದು ನೋಡೋಣ ಬನ್ನಿ:
ವಿಚ್ಚೇದನ ಎಂಬುವುದು ವೈಯಕ್ತಿಕವಾದ ವಿಚಾರ ಎಂದ ಸಜದ್
ಕೇರಳದ ತನ್ನಿ ಬೀಚ್‌ನಲ್ಲಿ ತನ್ನ ತಂದೆ ತಾಯಿ ಜೊತೆ ಕೇಕ್ ಕತ್ತರಿಸಿ ತನ್ನ ವಿಚ್ಛೇದನವನ್ನು ಸಂಭ್ರಮಿಸಿದ ಸಜದ್ ಫೋಟೋಗಳು ಇಷ್ಟೊಂದು ವೈರಲ್ ಆಗುತ್ತದೆ ಎಂದು ಸಜದ್ ಕೂಡ ಅಂದುಕೊಂಡಿರಲಿಲ್ಲ. ತನ್ನ ಕಷ್ಟಕಾಲದಲ್ಲಿ ತನ್ನ ಜೊತೆಗೆ ನಿಂತ ಪೋಷಕರೊಂದಿಗೆ ವಿಚ್ಛೇದನ ಪಡೆದ ಬಳಿಕ ಪಾರ್ಟಿ ಮಾಡಲು ಸಜದ್ ಬಯಸುತ್ತಾರೆ. ಅದರಂತೆ ಬೀಚ್‌ನಲ್ಲಿ ಅರೇಂಜ್‌ಮೆಂಟ್ ಮಾಡಿ, ಪೋಷಕರೊಂದಿಗೆ ಕೇಕ್ ಕಟ್ ಮಾಡಿ ಖುಷಿ ಪಡುತ್ತಾರೆ.
ವಿಚ್ಛೇದನ ಎಂಬುವುದು ವೈಯಕ್ತಿಕವಾದ ವಿಚಾರ, ನಾನು ನನ್ನ ಬದುಕನ್ನು ಸಂಭ್ರಮಿಸಿದೆ , ಆದರೆ ಅದುವೇ ಗಮನ ಸೆಳೆಯಿತು, ಈ ಕುರಿತು ಕೆಲವರು ನೆಗೆಟಿವ್ ಕಮೆಂಟ್ ಕೂಡ ಮಾಡಿದ್ದಾರೆ ಎಂದು ಸಜದ್ ಹೇಳುತ್ತಾರೆ. ನಾಯಿ ಬೊಗಳಿತು ಎಂದು ನಾವು ಕಲ್ಲೆಸೆಯುತ್ತಾ ನಿಂತರೆ ನಾವು ತಲುಪಬೇಕಾದ ಕಡೆ ತಲುಪುವುದು ತಡವಾಗುವುದು ಎಂದು ಟೀಕೆ ಮಾಡಿದವರಿಗೆ ಉತ್ತರಿಸಿದ್ದಾರೆ.
ಇದನ್ನು ಖಾಸಗಿ ಕಾರ್ಯಕ್ರಮವಾಗಿಯಷ್ಟೇ ಆಚರಿಸಿದ್ದರು ಸಜದ್, ಆದರೆ ಇಷ್ಟು ಗಮನ ಸೆಳೆಯುತ್ತದೆ ಎಂದು ಭಾವಿಸಿರಲಿಲ್ಲ
ಆ ಸ್ಥಳಕ್ಕೆ ಬರುವವರೆಗೆ ಸ್ನೇಹಿತರಾಗಲು, ಪೋಷಕರಾಗಿಲಿ, ಅಷ್ಟೇ ಏಕೆ ಫೋಟೋಗ್ರಾಫರ್‌ಗಾಗಿ ಆ ಕಾರ್ಯಕ್ರಮವೇನು ಎಂಬುವುದು ಗೊತ್ತಿರಲಿಲ್ಲ, ಅಲ್ಲಿಗೆ ಬಂದಿದ್ದಾಗಲೇ ಗೊತ್ತಾಗಿರುವುದು, ಆದರೆ ಈ ಕಾರ್ಯಕ್ರಮದ ವೈರಲ್ ಆಗಿರುವುದು ಸಜದ್ಗೆ ಅಷ್ಟು ಖುಷಿ ತಂದಿಲ್ಲ.
ವಿಚ್ಛೇದನ ಎಂಬುವುದು ಅಂತ್ಯವಲ್ಲ ಬದುಕಿನ ಆರಂಭ
ವಿಚ್ಛೇದನ ಆದವರು ಖುಷಿ ವ್ಯಕ್ತಪಡಿಸಿದರೆ ಸಮಾಜ ಅವರನ್ನು ಆಶ್ಚರ್ಯದಿಂದ ನೋಡುತ್ತೆ, ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬಾರದು, ಮದುವೆ ಬಗ್ಗೆ ವ್ಯಂಗ್ಯ ಮಾಡಲು ಈ ಕಾರ್ಯಕ್ರಮ ಮಾಡಿಲ್ಲ, ಆದರೆ ವಿಚ್ಛೇದನದಿಂದ ನನ್ನ ಬದುಕಿನ ಖುಷಿ ಅಂತ್ಯವಾಯ್ತು ಎಂದು ಭಾವಿಸಬೇಡಿ, ಜೀವನ ಇನ್ನಷ್ಟೇ ಆರಂಭವಾಗಲಿದೆ ಅದನ್ನು ಸಂಭ್ರಮಿಸೋಣ ಎಂದು ಈ ಕಾರ್ಯಕ್ರಮ ಮಾಡಿರುವುದಾಗಿ ಹೇಳಿದ್ದಾರೆ.
ಮುಂದಿನ ಭವಿಷ್ಯದ ಕನಸು ಸಜದ್‌ನಲ್ಲಿದೆ
ವಿಚ್ಛೇದನ ಆಯ್ತು ಎಂದ ಮಾತ್ರ ಅವರು ಮದುವೆ ಬಗ್ಗೆ ನಂಬಿಕೆ ಕಳೆದುಕೊಂಡಿಲ್ಲ, ಭವಿಷ್ಯದಲ್ಲಿ ಒಂದು ಒಳ್ಳೆಯ ಸಂಗಾತಿ ಸಿಕ್ಕರೆ ಮದುವೆಯಾಗುವುದಾಗಿ ಹೇಳಿದ್ದಾರೆ. ಸಮಾಜ ವಿಚ್ಛೇದನದ ಕುರಿತು ತಮ್ಮ ದೃಷ್ಟಿಕೋನ ಬದಲಾಯಿಸಬೇಕಾಗಿದೆ, ವಿಚ್ಛೇದನ ಅಂದರೆ ಅದು ವೈವಾಹಿಕ ಜೀವನದ ಸೋಲು ಎಂದು ಭಾವಿಸಬಾರದು.
ಹೊಂದಾಣಿಕೆಯಿಲ್ಲದೆ ಇಬ್ಬರು ಒಟ್ಟಿಗೆ ಬದುಕಿದರೆ ಆ ಬದುಕಿಗೆ ಅರ್ಥವಿರಲ್ಲ, ಸಂಬಂಧವನ್ನು ಅರ್ಥ ಮಾಡಿಕೊಳ್ಳುವ ಮೆಚ್ಯೂರಿಟಿ ಇದ್ದರೆ ಮಾತ್ರ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ನೆಗೆಟಿವಿಟಿ ಕಡೆ ಗಮನ ನೀಡುವುದಿಲ್ಲ, ನನ್ನ ಬದುಕಿನಲ್ಲಿ ನಾನು ಖುಷಿಯಾಗಿರುವುದನ್ನು ಬಯಸುತ್ತೇನೆ , ಅದರತ್ತ ಗಮನಹರಿಸುತ್ತೇನೆ ಎಂಬುವುದಾಗಿ ಹೇಳಿದ್ದಾರೆ.
ವಿಚ್ಛೇದನದ ಬಳಿಕ ಕೊರಗುವುದರಲ್ಲಿ ಅರ್ಥವಿಲ್ಲ ಎಂಬ ಮೈಂಡ್‌ಸೆಟ್ ಬೆಳೆಸಿಕೊಳ್ಳಬೇಕು ಎನ್ನುವುದಕ್ಕೆ ಒಳ್ಳೆಯ ಉದಾಹರಣೆಯಾಗಿದ್ದಾರೆ ಸಜದ್
ನಾವಿಲ್ಲಿ ವಿಚ್ಛೇದನ ತುಂಬಾ ಒಳ್ಳೆಯದು ಎಂದು ಹೇಳುತ್ತಿಲ್ಲ, ಆದರೆ ಕೆಲವೊಂದು ದಾಂಪತ್ಯದಲ್ಲಿ ಅನೇಕ ಕಾರಣಗಳಿಂದಾಗಿ ಜೀವನ ಎಂಬುವುದು ನರಕವಾಗಿರುತ್ತದೆ, ಇಬ್ಬರು ಒಟ್ಟಿಗೆ ಸೇರಿ ಬದುಕುವುದೇ ಸಾಧ್ಯವೇ ಇಲ್ಲ ಎಂಬ ಸ್ಥಿತಿ ಇರುತ್ತದೆ ಅಂಥ ಸಂಬಂಧದಲ್ಲಿ ಬದುಕಿದರೆ ಯಾವುದೇ ಖುಷಿಯಿರಲ್ಲ. ಅಂಥವರು ವಿಚ್ಛೇದನ ಪಡೆಯುವ ಮೂಲಕ ತಮಗೆ ಸೂಕ್ತವಾಗುವ ಜೀವನ ಸಂಗಾತಿಯನ್ನು ಕಂಡು ಹಿಡಿದು ಮತ್ತೊಂದು ಸುಂದರ ಬದುಕು ಕಟ್ಟಿಕೊಳ್ಳಬಹುದು.
ಕೆಲವೊಮ್ಮೆ ವಿಚ್ಛೇದನಕ್ಕೆ ಇವರೇ ಸರಿ ಅವರೇ ಸರಿ ಎಂದು ಹೇಳಲು ಸಾಧ್ಯವಿಲ್ಲ, ಅವರವರ ದೃಷ್ಟಿಕೋನದಲ್ಲಿ ಅವರವರು ಸರಿಯಾಗಿರುತ್ತದೆ, ಅಂಥವರು ಬೇರೆ-ಬೇರೆಯಾದ ಮೇಲೆ ತಮ್ಮ ಅಭಿರುಚಿಗೆ ತಕ್ಕಂತೆ ಬದುಕನ್ನು ಕಟ್ಟಿಕೊಳ್ಳಲು ಬಯಸುವುದರಲ್ಲಿ ತಪ್ಪಿಲ್ಲ ಅಲ್ವೇ?



Click it and Unblock the Notifications