Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಕಾರ್ಕಳ: ಗಂಡನಿಗೆ ಸ್ಲೋ ಪಾಯಿಸನ್ ನೀಡಿ ಸಾಯಿಸಿದ ಪತ್ನಿ, ಕೇರಳದ ಘಟನೆಯನ್ನು ನೆನಪಿಸುತ್ತೆ ಈ ಪ್ರಕರಣ
ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗಲ್ಲಾ? ಸಹ ಧರ್ಮಿಣಿಯಾಗಿ ಬಂದ ಪತ್ನಿಯೇ ಪತಿಗೆ ಸ್ಲೋ ಪಾಯಿಸನ್ ನೀಡಿ ಕೊಂದಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಬಾಲಕೃಷ್ಣ ಎಂಬ ವ್ಯಕ್ತಿ ಹೆಂಡತಿಯ ಕೃತ್ಯಕ್ಕೆ ಬಲಿಯಾಗಿರುವ ನತದೃಷ್ಟ. ಫೋಟೋ, ರೀಲ್ಸ್‌ನಲ್ಲಿ ಗಂಡನ ಜೊತೆ ನಗುನಗುತ್ತ ಪೋಸ್ ನಾವು ಸೂಪರ್ ಜೋಡಿ ಎಂದು ಬಿಂಬಿಸುತ್ತಿದ್ದ ಆಕೆ ಪ್ರಿಯತಮನ ಜೊತೆ ಸೇರಿ ಮಾಡಿದ್ದು ಮಾತ್ರ ಬೆಚ್ಚಿ ಬೀಳಿಸುವ ಖತರ್ನಾಕ್ ಪ್ಲ್ಯಾನ್. ಉಡುಪಿಯ ಉದ್ಯಮಿ ಬಾಸ್ಕರ್ ಶೆಟ್ಟಿ ಕೊಲೆ ಬಳಿಕ ಉಡುಪಿ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದ ಕೊಲೆ ಪ್ರಕರಣ ಇದಾಗಿದೆ.

ಗಂಡನನ್ನು ಯಾರಿಗೂ ಒಂದಿಷ್ಟೂ ಸಂಶಯ ಬಾರದಂತೆ ಮುಗಿಸಲು ಪ್ರಯತ್ನ ಮಾಡಿದ್ದಳು
ಈ ಘಟನೆ ನಡೆದಿರುವುದು ಕಾರ್ಕಳದ ಅಜೆಕಾರು ಎಂಬ ಊರಲ್ಲಿ. ಈಕೆ ಗಂಡನಿಗೆ ಸ್ಲೋ ಪಾಯಿಸನ್ ಹಾಕುತ್ತಾ ಬಂದಿದ್ದಳು, ತನ್ನ ಗಂಡ ಇಲ್ಲವಾದರೆ ಪ್ರಿಯತಮನ ಜೊತೆ ಬಾಳಬಹುದು ಎಂದು ಆತ ಸೇವಿಸುವ ಆಹಾರಕ್ಕೆ ಸ್ವಲ್ಪ-ಸ್ವಲ್ಪ ವಿಷ ಬೆರೆಸುತ್ತಿದ್ದಳು. ಆತ ಹೆಂಡತಿ ಪ್ರೀತಿಯಿಂದ ಬಡಿಸುತ್ತಿರುವ ಅಡುಗೆಯನ್ನು ಖುಷಿಯಿಂದ ಸವಿಯುತ್ತಿದ್ದ, ಅವನು ಪ್ರತಿ ಬಾರಿ ಆಹಾರ ಸೇವಿಸುವಾಗ ಅವಳ ವಿಕೃತ ಮನಸ್ಸು ನಗುತ್ತಿರುತ್ತದೆ ಎಂಬುವುದು ಗೊತ್ತಿಲ್ಲದ ಬಡಪಾಯಿ ತಿನ್ನುತ್ತಿದ್ದ. ಮನೆ ಅಡುಗೆಯನ್ನು ಲ್ಯಾಬ್‌ಗೆ ಕಳುಹಿಸಿ ಪರೀಕ್ಷೆ ಮಾಡಿ ತಿನ್ನೋಕ್ಕಾಗುತ್ತಾ, ನಮ್ಮವರ ಮೇಲಿನ ನಂಬಿಕೆಯಿಂದ ಆಹಾರ ಸೇವಿಸುತ್ತೇವೆ, ಅದರಂತೆ ಆತ ಕೂಡ ಆಹಾರ ಸೇವಿಸಿದ್ದಾನೆ.
ಸ್ವಲ್ಪ ದಿನದಲ್ಲಿಯೇ ಆರೋಗ್ಯ ಕೈ ಕೊಟ್ಟಿದೆ
ಸ್ಲೋ ಪಾಯಿಸನ್ ವರ್ಕ್ ಆಗುತ್ತಿದ್ದಂತೆ ಆತನಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂತು. ಜ್ವರ, ವಾಂತಿ ಕಾಣಿಸಲಾರಂಭಿಸಿತು, ಈತ ರಕ್ತ ವಾಂತಿ ಮಾಡುತ್ತಿದ್ದ.ಈತನಿಗೆ ಹುಷಾರಿಲ್ಲದ ವಿಷಯ ಮನೆಯವರಿಗೆ ಗೊತ್ತಾಯ್ತು, ಆದರೆ ಎಲ್ಲರಿಗೆ ಆತನಿಗೆ ಏನು ಸಮಸ್ಯೆಯಾಗಿದೆ ಎಂಬ ಚಿಂತೆಯಾಗಿತ್ತು ಹೊರತು ಈ ರೀತಿಯ ಕುತಂತ್ರವಾಗಿರಬಹುದು ಎಂದು ಅಂದುಕೊಂಡಿರಲಿಲ್ಲ, ಇಲ್ಲದಿದ್ದರೆ ಆಗಲೇ ಎಚ್ಚೆತ್ತುಕೊಂಡು ಆತನ ರಕ್ಷಣೆ ಮಾಡುತ್ತಿದ್ದರು.
ಆಸ್ಪತ್ರೆಯಿಂದ ಆಸ್ಪತ್ರೆ ಅಂತ ಬದಲಾಯಿಸಿದರೂ ಪ್ರಯೋಜನವಾಗಲಿಲ್ಲ
ಮೊದಲಿಗೆ ಆತನನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದರು, ಅಲ್ಲಿಂದ ಮನೀಪಾಲ್, ನಂತರ ಬೆಂಗಳೂರಿನ ನಿಮ್ಯಾನ್ಸ್, ನಂತರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಅಂತ ಕೊಂಡೊಯ್ಯಲಾಯ್ತು, ಈತನ ಆರೋಗ್ಯ ಸಮಸ್ಯೆಗೆ ಕಾರಣ ತಿಳಿಯಲಿಲ್ಲ, ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 20ಕ್ಕೆ ನಿಧನವಾದೆ.
ಎಲ್ಲರೂ ಸಹಜ ಸಾವು ಎಂದು ಭಾವಿಸಿದ್ದರು ಆದರೆ ಆಕೆಯ ತಮ್ಮನಿಗೇ ಅಕ್ಕಳ ಮೇಲೆ ಸಂಶಯ ಮೂಡಿತು
ಗಂಡ ತೀರಿ ಹೋದ ಮೇಲೆ ಆಕೆಯಲ್ಲಿ ಅಂಥ ದುಃಖ ಕಂಡಿರದಕ್ಕೋ ಅಥವಾ ಆಕೆಯ ನಡತೆ ಸ್ವಲ್ಪ ಸಂಶಯ ತರುವಂತೆ ಇದ್ದಿದ್ದಕ್ಕೋ ತಮ್ಮನಿಗೆ ಅಕ್ಕನ ಮೇಲೆ ಅನುಮಾನ ಉಂಟಾಗುತ್ತೆ, ಈ ಬಗ್ಗೆ ಮೃತ ಬಾಲಕೃಷ್ಣರ ಅಣ್ಣ ರಮಕೃಷ್ಣರ ಬಳಿ ಹೇಳಿಕೊಳ್ಳುತ್ತಾರೆ, ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದಾಗ ಸತ್ಯ ಹೊರ ಬಂದಿದೆ.
ಪ್ರಿಯತಮನ ಜೊತೆ ಸೇರಿ ಪತಿಯ ಕೊಲೆ ಮಾಡಿದಳು
ಅಕ್ಟೋಬರ್ 20ಕ್ಕೆ ಮಧ್ಯರಾತ್ರಿ ಆಕೆಯ ಪ್ರಿಯತಮ ದಿಲೀಪ್ ಆಕೆಯ ಮನೆಗೆ ಹೋಗುತ್ತಾನೆ, ಅಲ್ಲಿದ್ದ ಬೆಡ್‌ಶೀಟ್ ಅನ್ನು ಬಾಲಕೃಷ್ಣರ ಮುಖಕ್ಕೆ ಒತ್ತಿ ಉಸಿರುಕಟ್ಟಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. 20 ದಿನದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಯಾರಿಗೂ ಒಂದುಷ್ಟು ಸಂಶಯ ಬರಲ್ಲ, ಆದರೆ ಸತ್ಯ ಹೊರ ಬಂದೇ ಬರುತ್ತೆ ಎಂಬುವುದು ಎಷ್ಟೋ ಪ್ರಕರಣಗಳಲ್ಲಿ ನೋಡಿದ್ದೇವೆ.
ಕೇರಳದಲ್ಲಿಯೂ ಇಂಥ ಘಟನೆ ನಡೆದಿತ್ತು
ಅವರಿಬ್ಬರು ಪ್ರೇಮಿಗಳು, ಅವನು ಅವಳನ್ನು ತುಂಬಾ ಇಷ್ಟಪಡುತ್ತಿದ್ದ,ಆಕೆಗೆ ಬೇರೆ ಕಡೆಯಿಂದ ಮದುವೆ ಪ್ರಸ್ತಾಪ ಬಂದಾಗ ಅವಳಿಗೆ ಆ ಸಂಬಂಧ ಇಷ್ಟವಾಗುತ್ತೆ, ಆದರೆ ಜ್ಯೋತಿಷ್ಯರು ಮೊದಲ ಗಂಡ ಸಾಯುತ್ತಾನೆ ಎಂದು ಹೇಳಿದ್ದರಂತೆ ಹಾಗಾಗಿ ಈಕೆ ತನ್ನ ಪ್ರಿಯತಮನ ಯಾರಿಗೂ ಗೊತ್ತಾಗದಂತೆ ಮದುವೆಯಾಗುತ್ತಾಳೆ. ನಂತರ ಅವನ ಜೊತೆ ಸುತ್ತಾಡುವಾಗ ಜ್ಯೂಸ್‌ಗೆ ಯಾವುದೋ ವಿಷ ಬೆರೆಸುತ್ತಾಳೆ, ಅವಳ ಮನೆಗೆ ಹೋಗುವಾಗ ಯಾವುದೋ ಲೇಹ್ಯಾ ಅಂತ ಕೂಡ ಕೊಡುತ್ತಿದ್ದಳು , ಪಾಪಾ ಆ ಹುಡುಗನೂ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಆಸ್ಪತ್ರೆ ಸೇರುತ್ತಾನೆ, ಆದರೂ ಅವನಿಗೆ ಅವಳ ಮೇಲೆ ಒಂದಿಷ್ಟೂ ಸಂಶಯವಿರಲಿಲ್ಲ. ಕೊನೆಗೆ ಆ ಹುಡುಗ ಸತ್ತು ಹೋಗುತ್ತಾನೆ, ಆತನ ಮನೆಯವರಿಗೆ ಸಂಶಯ ಬರುತ್ತೆ, ವಿಚಾರಣೆ ಮಾಡಿದಾಗ ಸತ್ಯ ಹೊರಬರುತ್ತೆ, ಆಕೆಯ ಹೆಸರು ಗ್ರೀಷ್ಮಾ.. ನೋಡಿದರೆ ಮುದ್ದಾದ ಹುಡುಗಿ ಆದರೆ ಅವಳೊಳಗೆ ಅಂಥದ್ದೊಂದು ರಾಕ್ಷಸಿ ಇದ್ದಳು. ಈ ಕೇಸ್ ಕೂಡ ತುಂಬಾ ಜೋರಾಗಿ ಸದ್ದು ಮಾಡಿತ್ತು.



Click it and Unblock the Notifications











