Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಅಪ್ಪನ ಆಸೆಗೆ ತಣ್ಣೀರೆರೆಚಿದ ಮಗ..! ಬಬಿತಾಜಿ ಜೊತೆ ಟಪ್ಪು ಎಂಗೇಜ್‌ಮೆಂಟ್..!?
ನೀವು ಹಿಂದಿ ಸೀರಿಯಲ್ ನೋಡುವ ಅಭ್ಯಾಸ ಇಟ್ಟುಕೊಂಡಿದ್ದರೆ ಇಲ್ಲೊಂದು ಅಚ್ಚರಿಯ ಘಟನೆ ಬಗ್ಗೆ ನಾವಿಂದು ಹೇಳುತ್ತೇವೆ. ಅದ್ರಲ್ಲೂ ಅತೀಹೆಚ್ಚು ಎಪಿಸೋಡ್ ಮಾಡಿ ದಾಖಲೆ ಬರೆದಿರುವ 'ತಾರಕ್ ಮೆಹ್ತಾ ಕಾ ಉಲ್ಟಾ ಚೆಸ್ಮಾ' ಸೀರಿಯಲ್ ನೀವು ನೋಡಿರಬಹುದು. ಸೀರಿಯಲ್ ನೋಡದಿದ್ದರೂ ಅದರಲ್ಲಿ ಬರುವ ಯಾವುದಾದರು ಒಂದು ಪಾತ್ರವನ್ನಾದರೂ ನೀವು ನೋಡಿರುತ್ತೀರಿ. ಅಷ್ಟೊಂದು ಫೇಮಸ್ ಈ ಸೀರಿಯಲ್.
ಬರೋಬ್ಬರಿ 4 ಸಾವಿರಕ್ಕೂ ಅಧಿಕ ಸಂಚಿಕೆ ಮುಗಿಸಿರುವ ಈ ಸೀರಿಯಲ್ ದಶಕಗಳಿಂದ ರಂಜಿಸುತ್ತಾ ಬಂದಿದೆ. ಆದರೆ ಈಗ ವಿಶೇಷ ಕಾರಣಕ್ಕೆ ಸುದ್ದಿಯಾಗುತ್ತಿದೆ. ಅದೇನೆಂದರೆ ಈ ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಇಬ್ಬರು ಎಂಗೇಜ್‌ಮೆಂಟ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅರೆ ಅದ್ರಲ್ಲೇನು ವಿಶೇಷ ಎಂದು ನೀವು ಅಂದುಕೊಳ್ಳಬಹುದು. ಆದ್ರೆ ಅಲ್ಲೇ ಒಂದು ವಿಚಿತ್ರ, ವಿಭಿನ್ನ ಕಾರಣವಿದೆ.

ಈ ಸೀರಿಯಲ್‌ನ ಮುಖ್ಯ ಪಾತ್ರಗಳಲ್ಲಿ ಒಂದಾಗಿದ್ದ ಬಬಿತಾ ಜಿ ಪಾತ್ರ ಮಾಡುತ್ತಿದ್ದ ಮುನ್ಮುನ್ ದತ್ತಾ ಹಾಗೂ ಟಪ್ಪು ಪಾತ್ರ ಮಾಡುತ್ತಿದ್ದ ರಾಜ್ ಅನಾದ್ಕತ್ ಎಂಗೇಜ್‌ಮೆಂಟ್ ಆಗಿದೆ ಎಂದು ಸುದ್ದಿ ಹರಿದಾಡಿದೆ. ಆದ್ರೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡರೆ ಏನು ಸಮಸ್ಯೆ ಎಂದು ನಿಮಗೂ ಅನಿಸಬಹುದು. ಆದ್ರೆ ಇಲ್ಲೇ ಇರೋದು ಕುತೂಹಲಕಾರಿ ಸಂಗತಿ.
ಅಸಲಿಗೆ ಧಾರಾವಾಹಿಯಲ್ಲಿ ಈ ಬಬಿತಾ ಜಿ ಪಾತ್ರ ಮಾಡುತ್ತಿರುವ ಮುನ್ಮುನ್ ಸುಂದರ ಯುವತಿ. ಈಕೆಗೆ ಧಾರಾವಾಹಿಯಲ್ಲಿ ಲೈನ್ ಹೊಡೆಯುವುದು ಈ ಟಪ್ಪುವಿನ ತಂದೆ ಜೇಟಾಲಾಲ್. ಈಗ ನಿಮಗೆ ಈ ಅಚ್ಚರಿಗೆ ಕಾರಣ ತಿಳಿದಿರಬಹುದು. ಟಪ್ಪು ಅಲಿಯಾಸ್ ರಾಜ್ ಅನಾದ್ಕತ್ ತಂದೆಯ ಪಾತ್ರದಲ್ಲಿ ಜೇಟಾಲಾಲ್ ಆಗಿ ದಿಲೀಪ್ ಜೋಶಿ ಮಿಂಚಿದ್ದಾರೆ. ಸೀರಿಯಲ್‌ನಲ್ಲಿ ಜೇಟಾಲಾಲ್‌ನ ಮಗ ಈ ಟಪ್ಪು ಆಗಿದ್ದಾನೆ. ಆದ್ರೆ ಜೇಟಾಲಾಲ್ ಪಕ್ಕದ ಮನೆಯಲ್ಲಿರುವ ಬಬಿತಾ ಕಂಡರೆ ಎಲ್ಲಿಲ್ಲದ ಪ್ರೀತಿ.
ಬಬಿತಾ ಹಾಗೂ ಜೇಟಾಲಾಲ್ ನಡುವಿನ ಕೆಮಿಸ್ಟ್ರೀಯಿಂದಲೇ ಈ ಸೀರಿಯಲ್ ಇಷ್ಟು ದಿನ ಸದ್ದು ಮಾಡಿದೆ. ಇಬ್ಬರ ನಡುವೆ ಒಂದಿಷ್ಟು ಸೀನ್‌ಗಳು ಪ್ರತಿ ಸಂಚಿಕೆಯಲ್ಲೂ ನಾವು ನೋಡಬಹುದು. ಬಬಿತಾ ಹಾಗೂ ಜೇಟಾಲಾಲ್ ಕಾಮಿಡಿ ಇಡೀ ಸೀರಿಯಲ್‌ನ ಜೀವಾಳವಾಗಿದೆ. ಹೀಗಿರುವಾಗ ಮಗನ ಪಾತ್ರ ಮಾಡರುವ ಟಪ್ಪು ಈಗ ಬಬಿತಾಜಿ ಜೊತೆ ಎಂಗೇಟ್‌ಮೆಂಟ್ ಆಗಿರುವುದು ನೆಟ್ಟಿಗರನ್ನು ಮತ್ತಷ್ಟು ಕುತೂಹಲಕ್ಕೆ ತಳ್ಳಿದೆ.
ಈ ನಿಶ್ಚಿತಾರ್ಥವು ಕೆಲವೇ ದಿನಗಳ ಹಿಂದೆ ನಡೆಯಿತು. ವಡೋದರಾ (ಗುಜರಾತ್) ನಲ್ಲಿ ಇಬ್ಬರು ಉಂಗುರಗಳನ್ನು ಬದಲಾಯಿಸಿಕೊಂಡರು. ಮುನ್ಮುನ್ ಮತ್ತು ರಾಜ್ ಅವರ ಕುಟುಂಬಗಳು ಅವರ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು" ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇಬ್ಬರು ಈ ಸೀರಿಯಲ್ ಸಮಯದಲ್ಲಿ ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿ ಸಹ ಹರಿದಾಡುತ್ತಿದೆ. ಈಗ ನೋಡಿದರೆ ತಂದೆ ಇಷ್ಟಪಟ್ಟಿದ್ದ ಹುಡುಗಿಯನ್ನು ಪುತ್ರ ಮದುವೆಯಾಗುತ್ತಿದ್ದಾನೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
ಆದರೆ ಈ ಸುದ್ದಿಯನ್ನು ಖುದ್ದು ಮುನ್ಮುನ್ ದತ್ತಾ ಅಲ್ಲಗೆಳೆದಿದ್ದಾರೆ. ಇದು ಸುಳ್ಳು ಸುದ್ದಿ, ಈ ರೀತಿ ಯಾವ ಕಾರ್ಯಕ್ರಮ ನಡೆದಿಲ್ಲ. ಊಹಾಪೋಹವಷ್ಟೇ ಎಂದು ತಳ್ಳಿಹಾಕಿದ್ದಾರೆ.
ಯಾರು ಈ ಮುನ್ಮುನ್ ದತ್ತಾ?
ಮುನ್ಮುನ್ ದತ್ತಾ ಟಿವಿ ಧಾರಾವಾಹಿಗಳಿಗೂ ಮುನ್ನ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮನೀಶಾ ಕೊಯಿರಾಲಾ, ಪೂಜಾ ಭಟ್, ಡಿನೋ ಮೋರಿಯಾ ಮತ್ತು ಗುಲ್ಶನ್ ಗ್ರೋವರ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಮುನ್ಮುನ್ 2006 ರಲ್ಲಿ ಬಿಡುಗಡೆಯಾದ ಹಾಲಿಡೇ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ಜೊತೆ ಟಿವಿ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾಳೆ. ಆದಾಗ್ಯೂ, ಅವರು ತಾರಕ್ ಮೆಹ್ತಾ ಕಾರ್ಯಕ್ರಮದಿಂದ ಖ್ಯಾತಿಯನ್ನು ಪಡೆದರು.
ಕಾರು ಸಂಗ್ರಹಣೆ
ಮುನ್ಮುನ್ ದತ್ತಾ ಕಾರುಗಳ ಉತ್ತಮ ಸಂಗ್ರಹವನ್ನು ಹೊಂದಿದ್ದಾರೆ. ನಟಿಯ ಬಳಿ ಸುಮಾರು 17 ಲಕ್ಷ ರೂಪಾಯಿ ಮೌಲ್ಯದ ಇನ್ನೋವಾ ಕ್ರಿಸ್ಟಾ ಮತ್ತು 10 ಲಕ್ಷ ರೂಪಾಯಿ ಮೌಲ್ಯದ ಸ್ವಿಫ್ಟ್ ಡಿಜೈರ್ ಕಾರುಗಳಿವೆ.
ಆದಾಯ ಮತ್ತು ಆಸ್ತಿ
ಮುನ್ಮುನ್ ದತ್ತಾ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಆಕೆ ತನ್ನ ಬ್ಲಾಗ್ ಮೂಲಕ ವಾರ್ಷಿಕ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಾಳೆ. ಮುನ್ಮುನ್ ಸುಮಾರು 30 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಮುನ್ಮುನ್ ಒಂದು ದಿನದ ಶೂಟಿಂಗ್‌ಗೆ ಸುಮಾರು 35 ರಿಂದ 50 ಸಾವಿರ ರೂ. ಸಂಭಾವನೆ ಪಡೆಯುತ್ತಾರೆ.



Click it and Unblock the Notifications
