Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದಿನ ಕಳೆದಂತೆ ಪತ್ನಿ ನಿಮ್ಮಲ್ಲಿ ಆಸಕ್ತಿ ಕಳೆದು ಕೊಳ್ಳುತ್ತಿದ್ದಾಳಾ? ಹಾಗಾದ್ರೆ ಇದೇ ಕಾರಣ
ಪತಿ-ಪತ್ನಿ ಸಂಬಂಧ ಚೆನ್ನಾಗಿರಬೇಕೆಂದರೆ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬಾಳಬೇಕು. ನಿಮ್ಮವರ ಮೇಲೆ ನಿಮಗೆ ಪ್ರೀತಿ, ನಂಬಿಕೆ ಇರಬೇಕು. ಆದರೆ ಕೆಲವೊಂದು ಸಲ ಇಬ್ಬರಲ್ಲಿ ಒಬ್ಬರು ಪ್ರೀತಿಯ ಮೇಲೆ ಆಸಕ್ತಿಯನ್ನು ಕಳೆದುಕೊಂಡು ಬಿಟ್ಟರೆ ಅಂತಹ ಸಂಬಂಧ ಚೆನ್ನಾಗಿ ಇರೋದಿಲ್ಲ. ಅದ್ರಲ್ಲೂ ಮುಖ್ಯವಾಗಿ ಪತ್ನಿಗೆ ಸಂಬಂಧದಲ್ಲಿ ಆಸಕ್ತಿಯೇ ಹೊರಟು ಹೋಗುತ್ತದೆ. ಅಷ್ಟಕ್ಕು ಪತ್ನಿಯೂ ತನ್ನ ಗಂಡನ ಮೇಲೆ ಆಸಕ್ತಿಯನ್ನು ಕಳೆದುಕೊಳ್ಳೋದಕ್ಕೆ ಕಾರಣ ಏನು ಅನ್ನೋದನ್ನು ತಿಳಿಯೋಣ.
1. ಹೆಂಡತಿಯ ಆಸೆಗಳಿಗೆ ಅಡ್ಡ ಬಂದಾಗ
ಗಂಡ-ಹೆಂಡತಿ ಮದುವೆಯಾಗಿ ಚೆನ್ನಾಗಿ ಇರುತ್ತಾರೆ. ಕೆಲವು ದಿನಗಳ ಕಾಲ ಅವರ ಮಧ್ಯೆ ಪರಸ್ಪರ ಪ್ರೀತಿ, ಕಾಳಜಿ ಇದ್ದೇ ಇರುತ್ತದೆ. ಆದರೆ ಬರುಬರುತ್ತಾ ಗಂಡ ಕೆಲವೊಂದು ವಿಚಾರಗಳಲ್ಲಿ ಹೆಂಡತಿಯ ಮೇಲೆ ನಿಯಂತ್ರಣ ಹೇರುವುದಕ್ಕೆ ಶುರು ಮಾಡುತ್ತಾನೆ. ಸ್ನೇಹಿತರ ಜೊತೆಗೆ ಹೊರಗಡೆ ಹೋಗಬೇಡ, ಮಾರ್ಡನ್ ಬಟ್ಟೆಗಳನ್ನು ಧರಿಸಬೇಡ ಹೀಗೆ ಸಿಕ್ಕಾಪಟ್ಟೆ ನಿರ್ಬಂಧಗಳನ್ನು ಹಾಕುತ್ತಾನೆ. ಇದ್ರಿಂದ ಹೆಂಡತಿಗೆ ಉಸಿರು ಗಟ್ಟಿದಂತಾಗುತ್ತದೆ. ಆಕೆ ತನ್ನ ಸಂಪೂರ್ಣ ಸ್ವಾತಂತ್ರವನ್ನು ಕಳೆದುಕೊಂಡು ಬಿಡುತ್ತಾಳೆ. ಗಂಡನ ಜೊತೆಗೆ ಬದುಕೋದೇ ಬೇಡ ಅನ್ನಿಸುತ್ತದೆ.

2. ಕೆಲಸಕ್ಕೆ ಹೋಗಲು ಅವಕಾಶ ನೀಡದಿದ್ದಾಗ
ಅನೇಕ ಮಹಿಳೆಯರಿಗೆ ಸ್ವಾತಂತ್ರವಾಗಿ ಬದುಕಬೇಕು ಅನ್ನೋ ಆಸೆ ಇರುತ್ತದೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನೋ ಹಂಬಲ ಇರುತ್ತದೆ. ಅಂತಹ ಮಹಿಳೆಯರು ಮದುವೆಯಾದ ಮೇಲೂ ಕೆಲಸಕ್ಕೆ ಹೋಗೋದಕ್ಕೆ ಇಷ್ಟ ಪಡುತ್ತಾರೆ. ಆದರೆ ಹೆಚ್ಚಿನ ಪುರುಷರಿಗೆ ಮದುವೆಯಾದ ಮೇಲೆ ಮಹಿಳೆಯರು ಕೆಲಸಕ್ಕೆ ಹೋಗುವುದು ಒಂಚೂರು ಇಷ್ಟ ಇರೋದಿಲ್ಲ. ಹೀಗಾದಾಗ ಮಹಿಳೆಯರ ಮನಸ್ಸು ಮುರಿಯುತ್ತದೆ. ಗಂಡನ ಜೊತೆಗೆ ಬದುಕೋದಕ್ಕೆ ಅವರಿಗೆ ಇಷ್ಟ ಆಗೋದಿಲ್ಲ.
3. ಗಂಡನಿಗೆ ಲೈಂಗಿಕ ಸಂಪರ್ಕದಲ್ಲಿ ಆಸಕ್ತಿ ಇಲ್ಲದಿದ್ದಾಗ
ದಾಂಪತ್ಯ ಜೀವನದಲ್ಲಿ ಪ್ರೀತಿ ಎಷ್ಟು ಮುಖ್ಯವೋ ಲೈಂಗಿಕ ಸಂಪರ್ಕ ಕೂಡ ಅಷ್ಟೇ ಮುಖ್ಯವಾಗುತ್ತದೆ. ಇಬ್ಬರಲ್ಲಿ ಒಬ್ಬರಿಗೆ ಲೈಂಗಿಕ ಸಂಪರ್ಕದ ಬಗ್ಗೆ ಆಸಕ್ತಿ ಇರದೇ ಹೋದರೆ ಅಂತಹ ಸಂಬಂಧ ಚೆನ್ನಾಗಿ ಇರೋದಕ್ಕೆ ಸಾಧ್ಯವೇ ಇಲ್ಲ. ಹೆಚ್ಚಿನ ಸಂಬಂರ್ಧದಲ್ಲಿ ಪುರುಷರು ಲೈಂಗಿಕ ಆಸಕ್ತಿಯನ್ನು ತೋರುವುದಿಲ್ಲ. ಇದರಿಂದ ಪತ್ನಿ ನಿರಾಶೆಗೊಳ್ಳುವ ಸಾಧ್ಯತೆಯಿದೆ. ಪುರುಷರಿಗೆ ಆರೋಗ್ಯ ಸಮಸ್ಯೆ ಇದ್ದಾಗಲೂ ಹೀಗಾಗುತ್ತದೆ. ಆದರೆ ಪತ್ನಿ ತನಗೆ ಬೇಕಾದುದ್ದು ಗಂಡನ ಬಳಿ ಸಿಗದೇ ಹೋದಾಗ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾಳೆ.
4. ಆರ್ಥಿಕ ಸಮಸ್ಯೆ ಎದುರಾದಾಗ
ಸಂಸಾರದ ಹೊಣೆಯನ್ನು ಗಂಡನೊಬ್ಬನೇ ಹೊತ್ತುಕೊಂಡಿದ್ದಾಗ ಸುಖವಾಗಿ ಸಂಸಾರ ಸಾಗಿಸುವುದು ಆತನಿಂದ ಕಷ್ಟ ಆಗುತ್ತದೆ. ಯಾಕಂದ್ರೆ ಒಬ್ಬನ ದುಡಿಮೆಯಿಂದ ಮನೆಯ ಎಲ್ಲಾ ಖರ್ಚು- ವೆಚ್ಚಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಇದರ ಮಧ್ಯೆ ಉಳಿತಾಯ ಮಾಡೋದು ತುಂಬಾನೇ ಕಷ್ಟ ಆಗುತ್ತದೆ. ಇನ್ನೂ ಮಹಿಳೆಯರು ಅಂದ ಮೇಲೆ ಅವರಿಗೆ ಸಿಕ್ಕಾಪಟ್ಟೆ ಆಸೆಗಳು ಇರುತ್ತದೆ. ಆದರೆ ಗಂಡನ ದುಡಿಮೆಯಿಂದ ಆ ಆಸೆಗಳನ್ನು ಪೂರೈಸೋದು ಕಷ್ಟ ಆಗುತ್ತದೆ. ಇಂತಹ ಸಂದರ್ಭದಲ್ಲಿ ಹೆಂಡತಿಯು ಗಂಡನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾಳೆ.
5. ರೊಮ್ಯಾನ್ಸ್ ಗೆ ಪ್ರಾಧಾನ್ಯತೆ ಇಲ್ಲದಿದ್ದಾಗ
ಸಂಸಾರ ಎಂದ ಮೇಲೆ ಅಲ್ಲಿ ಪ್ರೀತಿ, ಕಾಳಜಿ, ಮಮತೆ, ವಾತ್ಸಲ್ಯ ಎಲ್ಲವೂ ಇರಲೇಬೇಕು. ಜಗಳ ಆದಾಗ ಹೆಂಡತಿಯನ್ನು ಸಮಾಧಾನ ಪಡಿಸಬೇಕು. ಇಷ್ಟೇ ಅಲ್ಲ, ಇದರ ಹೊರತಾಗಿ ದಾಂಪತ್ಯದಲ್ಲಿ ರೊಮ್ಯಾನ್ಸ ಕೂಡ ತುಂಬಾನೇ ಮುಖ್ಯವಾಗುತ್ತದೆ. ತನ್ನ ಪತಿ ಕೂಡ ಎಲ್ಲರಂತೆ ರೊಮ್ಯಾಂಟಿಕ್ ಆಗಿರುವ ಪತಿಯನ್ನು ಇಷ್ಟ ಪಡುತ್ತಾರೆ. ಯಾವಾಗ ಗಂಡ ರೊಮ್ಯಾಂಟಿಕ್ ಆಗಿ ಇರೋದಿಲ್ಲವೋ ಹೆಚ್ಚಿನ ಮಹಿಳೆಯರಿಗೆ ಗಂಡನ ಮೇಲೆ ಆಸಕ್ತಿ ಹೊರಟು ಹೋಗುತ್ತದೆ.
6. ಪತ್ನಿಗೆ ಸಮಯ ಕೊಡದಿದ್ದಾಗ
ಹೆಚ್ಚಿನ ಪುರುಷರು ಇಡೀ ದಿನ ಕೆಲಸದಲ್ಲಿ ಬ್ಯೂಸಿಯಾಗಿರುತ್ತಾರೆ. ಮನೆಗೆ ಬಂದ ಮೇಲೂ ಪತ್ನಿಯ ಜೊತೆಗೆ ಅವರು ಸಮಯ ಕಳೆಯೋದಿಲ್ಲ. ಬದಲಾಗಿ ಆಗಲೂ ಲ್ಯಾಪ್ ಟಾಪ್ ಮುಂದೆ ಕೂತಿರುತ್ತಾರೆ. ಇನ್ನೂ ವೀಕೆಂಡ್ ನಲ್ಲಾದರೂ ತನ್ನ ಪತಿ ನನ್ನ ಜೊತೆ ಸಮಯ ಕಳೆಯುತ್ತಾನೆ ಅಂತ ನಿರೀಕ್ಷಿಸುವ ಪತ್ನಿಗೆ ಮತ್ತೆ ಬೇಸರವಾಗುತ್ತದೆ. ಯಾಕಂದ್ರೆ ಆ ದಿನಗಳಲ್ಲಿ ಗಂಡ ಬ್ಯೂಸಿಯಾಗಿರುತ್ತಾನೆ. ಇದರಿಂದ ಹೆಂಡತಿಯು ಗಂಡನಲ್ಲಿ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ.
ಪತಿಯು ತನ್ನ ಪತ್ನಿಯ ಬಗ್ಗೆ ಕಾಳಜಿ ವಹಿಸೋದು ತುಂಬಾನೇ ಮುಖ್ಯವಾಗುತ್ತದೆ. ಆಕೆಯ ಬೇಕು ಬೇಡಗಳ ಬಗ್ಗೆ ವಿಚಾರಿಸುತ್ತೀರಿ. ಇಲ್ಲವಾದರೆ ಆಕೆ ನಿಮ್ಮಿಂದ ದೂರಾಗುವ ಸಾಧ್ಯತೆಗಳು ಹೆಚ್ಚಿದೆ.



Click it and Unblock the Notifications

