Latest Updates
-
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ!
ಲವ್ ಪ್ರಪೋಸ್ ಹುಡುಗ ಮೊದಲು ಮಾಡಲಿ ಎಂದು ಹುಡುಗಿಯರು ಕಾಯುವುದು ಇದೇ ಕಾರಣಕ್ಕೆ
ರಾಮಾಯಣದಲ್ಲಿ ರಾವಣನ ತಂಗಿ ಶೂರ್ಪನಖಿ ರಾಮನ ಎದುರು ತನ್ನ ಪ್ರೇಮ ನಿವೇದನೆ ಮಾಡಿಕೊಂಡು ಬಳಿಕ ಆಕೆ ಕತೆ ಏನಾಯ್ತು ಎನ್ನುವುದು ಪುರಾಣವೇ ಹೇಳುತ್ತದೆ. ಪ್ರೇಮ ನಿವೇದನೆ ಎಂದಾಕ್ಷಣ ಅದೇಕೋ ಗೊತ್ತಿಲ್ಲ ಯುವತಿಯರು ಎರಡು ಹೆಜ್ಜೆ ಹಿಂದೆ ಸರಿದುಬಿಡುತ್ತಾರೆ.
ಪ್ರೀತಿಸಿ ಮದುವೆಯಾದವರನ್ನು ನೀವು ಕೇಳಿದರೆ ಅಲ್ಲಿ ಬಹುತೇಕ ಯುವಕರೇ ಪ್ರೇಮ ನಿವೇದನೆ ಮಾಡಿಕೊಂಡು ಮದುವೆಯಾದವರು ಇರುತ್ತಾರೆ. ಯಾಕೆ ಹೀಗೆ ಆಗುತ್ತದೆ..? ಹೆಣ್ಣು ಮಕ್ಕಳೇಕೆ ಪ್ರೇಮ ನಿವೇದನೆಯ ವಿಚಾರದಲ್ಲಿ ಧೈರ್ಯ ತೋರುವುದಿಲ್ಲ. ತಾನು ಪ್ರೀತಿಸುತ್ತಿರುವವನ ಮೇಲೆ ಬೆಟ್ಟದಷ್ಟು ವ್ಯಾಮೋಹವಿದ್ದರೂ ಅದನ್ನು ತಾನಾಗಿಯೇ ಮೊದಲು ಹೇಳಿಕೊಳ್ಳದೇ ಆತನೇ ಹೇಳಲಿ ಎಂದು ಆಕೆ ಕಾಯುವುದೇಕೆ..?

ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಪ್ರೀತಿಸುತ್ತಿರುವವರು ತುಂಬಾ ಜನರು ಕಾಣಸಿಗಬಹುದು. ಅವರಲ್ಲಿ ಯಾರೂ ಯುವತಿಯು ಮೊದಲು ಪ್ರೇಮ ನಿವೇದನೆ ಮಾಡಿದವರು ಇರುವುದೇ ಇಲ್ಲ. ಇದ್ದರೂ ಅದು ಬೆರಳೆಣಿಕೆಯಷ್ಟು ಮಾತ್ರ. ಪ್ರೇಮ ಸಂಬಂಧದಲ್ಲಿ ಯುವತಿಯರು ಮೊದಲು ತಮ್ಮ ಪ್ರೇಮವನ್ನು ವ್ಯಕ್ತಪಡಿಸಿದರೆ ಅದು ತಪ್ಪಾ..? ಸಮಾಜದ ಎಲ್ಲಾ ಕ್ಷೇತ್ರದಲ್ಲಿಯೂ ಯುವಕರನ್ನು ಹಿಂದಿಕ್ಕಿ ಮುಂದೆ ಸಾಗುತ್ತಿರುವ ಹೆಣ್ಮಕ್ಕಳು ಪ್ರಪೋಸ್ ಅನ್ನೋ ವಿಚಾರಕ್ಕೆ ಬಂದಾಗ ಹಿಂದೆ ಸರಿಯುವುದು ಏಕೆ ಎಂಬುದನ್ನು ತಿಳಿದುಕೊಳ್ಳೋಣ
ಚಾರಿತ್ರ್ಯವಧೆಯಾಗಬಹುದೆಂಬ ಭಯ : ಭಾರತೀಯ ಸಮಾಜ ಎಷ್ಟೇ ಮುಂದುವರಿದಿದ್ದರೂ ಸಹ ಮಹಿಳೆ ತಗ್ಗಿ ಬಗ್ಗಿಯೇ ನಡೆಯಬೇಕು ಎಂಬ ಸಂಸ್ಕಾರವನ್ನು ಬಹುತೇಕ ಎಲ್ಲಾ ಕುಟುಂಬಗಳು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಕಲಿಸುತ್ತದೆ. ಯಾವುದನ್ನು ಕೇಳಿ ಪಡೆಯುವ ಧೈರ್ಯ ಇವರಿಗೆ ಇರುವುದೇ ಇಲ್ಲ. ಪ್ರೀತಿ ಮಾಡುವುದೇ ಅಪರಾಧ ಎಂದು ಪರಿಗಣಿಸುವ ಈ ಸಮಾಜ ಇನ್ನೂ ತಾನೇ ಹೋಗಿ ಒಂದು ಯುವಕನನ್ನು ಇಷ್ಟಪಡುತ್ತಿದ್ದೇನೆ ಎಂದು ಹೇಳಿಕೊಂಡರೆ ಅಲ್ಲಿ ತನ್ನನ್ನು ಚಾರಿತ್ರ್ಯ ಹೀನಳು ಎಂದು ಕರೆಯುವುದೋ ಎಂಬ ಭಯದಲ್ಲಿ ಹೆಣ್ಣು ಎಷ್ಟೇ ಪ್ರೀತಿಯಿದ್ದರೂ ಅದನ್ನು ವ್ಯಕ್ತಪಡಿಸುವುದಿಲ್ಲ.
ತಿರಸ್ಕಾರದ ಆತಂಕ : ಹೆಣ್ಣುಮಕ್ಕಳಲ್ಲಿ ಒಂದಷ್ಟು ಸ್ವಾಭಿಮಾನ ಇರುತ್ತದೆ. ಯಾವುದೇ ಹೆಣ್ಣುಮಕ್ಕಳು ತಿರಸ್ಕಾರವನ್ನು ಸಹಿಸಲಾರರು. ಅದರಲ್ಲೂ ತಾನಿಷ್ಟಪಡುತ್ತಿರುವ ಗಂಡಿನಿಂದ ಸುತಾರಾಂ ಅವರು ತಿರಸ್ಕಾರದ ಮಾತುಗಳನ್ನು ಕೇಳಲು ಇಷ್ಟಪಡುವುದಿಲ್ಲ. ಒಂದು ವೇಳೆ ನಾನು ಪ್ರೇಮ ನಿವೇದನೆ ಮಾಡಿ ಬಳಿಕ ತಾನು ಪ್ರೀತಿಸುತ್ತಿರುವ ಹುಡುಗ ಎಲ್ಲಿ ಆ ಪ್ರೀತಿಯನ್ನು ನಿರಾಕರಿಸಿಬಿಟ್ಟರೆ ಎಂಬ ಭಯದಲ್ಲಿ ಪ್ರೇಮ ನಿವೇದನೆಯ ಸಹವಾಸಕ್ಕೆ ಹೋಗುವುದಿಲ್ಲ.
ಪ್ರೀತಿಸುವುದಕ್ಕೆ ಪ್ರೀತಿಸಿಕೊಳ್ಳುವುದು ಇವರಿಗಿಷ್ಟ : ನಾವೇ ಪ್ರೀತಿಸಿ, ನಾವೇ ಪ್ರೇಮ ನಿವೇದನೆ ಮಾಡುವಂತಹ ಪ್ರೀತಿಯನ್ನು ಹೆಣ್ಣು ಮಕ್ಕಳು ಇಷ್ಟಪಡುವುದಿಲ್ಲ. ತಾನಿಷ್ಟ ಪಟ್ಟವನು ತನ್ನ ಹಿಂದೆ ಬೀಳಬೇಕು. ಆತ ಪದೇ ಪದೇ ತನ್ನನ್ನು ಪ್ರೀತಿಸು ಎನ್ನಬೇಕು. ಸಾಕಷ್ಟು ಸಮಯ ತೆಗೆದುಕೊಂಡು ಆತನ ತಾಳ್ಮೆ ಪರೀಕ್ಷೆ ಮಾಡಿ ಬಳಿಕ ಒಪ್ಪಿಕೊಳ್ಳಬೇಕೆಂಬ ಆಸೆ ಎಲ್ಲಾ ಹೆಣ್ಣು ಮಕ್ಕಳಿಗೆ ಇರುತ್ತದೆ. ಮಹಿಳೆಯರು ಎಂದಿಗೂ ಪ್ರೀತಿಸಿಕೊಳ್ಳುವುದನ್ನು ಇಷ್ಟಪಡುತ್ತಾರೆ. ಹೀಗಾಗಿ ಈ ಪ್ರೇಮ ನಿವೇದನೆಯ ಉಸಾಬರಿಯನ್ನು ಯುವಕರಿಗೆ ಮೀಸಲಿಡುತ್ತಾರೆ.
ಎಲ್ಲಾ ತನ್ನ ಮೇಲೆ ಬರಬಹುದೆಂಬ ಭಯ : ಸಾಮಾನ್ಯವಾಗಿ ಪ್ರೀತಿಸುತ್ತಿರುವವರ ನಡುವೆ ಕಲಹ ಏರ್ಪಟ್ಟಾಗ ಮೊದಲು ಪ್ರೇಮ ನಿವೇದನೆ ಮಾಡಿದ್ದು ನೀನೇ ಎಂದು ಯುವತಿಯರು ಸುಲಭವಾಗಿ ಹೇಳಿ ಬಿಡುತ್ತಾರೆ. ಆದರೆ ತಾವೇ ಪ್ರಪೋಸ್ ಮಾಡಿದ ಸಂಬಂಧಗಳಲ್ಲಿ ಎನೋ ಹೆಚ್ಚು ಕಡಿಮೆ ಆದಾಗ ಯುವಕ ಎಲ್ಲಿ ತನ್ನ ಮೇಲೆ ಬೊಟ್ಟು ಮಾಡಿಬಿಡಬಹುದೇನೋ ಎಂಬ ಭಯ ಯುವತಿಯರನ್ನು ಕಾಡುತ್ತಿರುತ್ತದೆ.
ಘನತೆ ಪ್ರಶ್ನೆ : ಯುವತಿ ತಾನೇ ಯುವಕನೊಬ್ಬನ ಬಳಿ ತೆರಳಿ ಪ್ರಪೋಸ್ ಮಾಡುತ್ತಾಳೆ ಎಂದರೆ ಈ ಸಮಾಜ ತನ್ನ ಘನತೆಗೆ ಗೌರವ ನೀಡಬಹುದೇ..? ತನ್ನನ್ನು ಈ ಸಮಾಜ ಗಂಡುಬೀರಿ ಎಂದು ಪರಿಗಣಿಸಬಹುದೇ..? ಎಂಬೆಲ್ಲ ದ್ವಂದ್ವಗಳಲ್ಲಿ ಯುವತಿ ಸಿಲುಕಿಕೊಂಡು ಬಿಡುತ್ತಾಳೆ. ಹೀಗಾಗಿ ಪ್ರೀತಿಯನ್ನು ಗುಟ್ಟಾಗಿ ಇಟ್ಟುಕೊಳ್ಳುವುದೇ ಲೇಸು ಎಂಬ ನಿರ್ಧಾರಕ್ಕೆ ಬಂದುಬಿಡುತ್ತಾಳೆ .
ಪ್ರೇಮ ನಿವೇದನೆಯ ಆ ಸವಿ ಕ್ಷಣಗಳನ್ನು ನೋಡುವ ಕಾತುರ : ಒಬ್ಬ ಯುವಕ ತಾನು ಪ್ರೀತಿಸುತ್ತಿರುವವಳಿಗೆ ಪ್ರೇಮ ನಿವೇದನೆ ಮಾಡುವಾಗ ಆತ ಕನಸಿನ ಲೋಕವನ್ನೇ ಕಟ್ಟುತ್ತಾನೆ. ಆಕೆಗೆ ಇಷ್ಟವಾಗುವ ಎಲ್ಲಾ ಕೆಲಸಗಳನ್ನೂ ಮಾಡುತ್ತಾನೆ. ಈ ಕ್ಷಣವನ್ನು ಆನಂದಿಸಲು ಯುವತಿಯರು ಇಚ್ಛಿಸುತ್ತಾರೆ . ಹೀಗಾಗಿ ನಾನೇ ಪ್ರೀತಿ ಹೇಳಿಕೊಂಡರೆ ಎಲ್ಲಿ ಈ ಕ್ಷಣಗಳನ್ನು ಅನುಭವಿಸುವುದನ್ನು ನಾನು ಕಳೆದುಕೊಂಡು ಬಿಡಬಹುದು ಎಂದು ಮಹಿಳೆಯರು ಸುಮ್ಮನೇ ಇರುತ್ತಾರೆ.
ಹೆಣ್ಣು ಮಾಯೆ ಎನ್ನುತ್ತಾರೆ. ಆಕೆಯನ್ನು ಅರ್ಥಮಾಡಿಕೊಳ್ಳುವುದು ಎಂದರೆ ಸುಲಭವಲ್ಲ. ಆಕೆ ಹೋರಾಡಲೂಬಲ್ಲಳು, ತ್ಯಾಗ ಮಾಡಲು ಹಿಂಜರಿಯದೇ ಇರುವವಳು. ಹೀಗಾಗಿ ಆಕೆ ತಾನಾಗಿಯೇ ಪ್ರೀತಿಯನ್ನು ಹೇಳಿಕೊಳ್ಳುವ ಸಾಹಸ ಮಾಡುವುದಿಲ್ಲ.ಇದೇ ಕಾರಣಕ್ಕೆ ಇಂದಿಗೂ ಸಮಾಜದಲ್ಲಿ ಪ್ರೇಮ ನಿವೇದನೆ ಎಂದಾಕ್ಷಣ ಯುವಕರೇ ನೆನಪಾಗುತ್ತಾರೆ ಹೊರತು ಯುವತಿಯರಲ್ಲ. ಏನಂತೀರಿ..?



Click it and Unblock the Notifications











